ಇದು ಬಾಲಿವುಡ್ ಹೊಸ ನಟನೊಬ್ಬನ ಹೊಸ ನಾಚಿಕೆ ಸ್ಟೋರಿ. ಹೇಳಹೊರಟರೆ ಒಬ್ಬೊಬ್ಬರದೂ ಒಂದೊಂದು ಸ್ಟೋರಿ. ಮೊದಲನೇ ಚಿತ್ರದಲ್ಲಿ ಇಂಟಿಮೇಟ್ ದೃಶ್ಯಗಳಿಗೆ ಹೀಗೆಲ್ಲಾ ಯೋಚಿಸುವ, ಮುಜುಗರ ಪಟ್ಟುಕೊಳ್ಳುವ ಹೊಸ ನಟನಟಿಯರು..
ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಹೊಸ ಕಥೆಗಳು ಕೇಳಲು ಸಿಗುತ್ತಲೇ ಇರುತ್ತವೆ. ಹೊಸಬರ ಸ್ಟೋರಿಗಳಂತೂ ಹೇಗಿರುತ್ತವೆ ಎಂದರೆ ಅದು ತಿಳಿದ ಮೇಲೆ ಕೆಲವೊಮ್ಮ ನಗಬೇಕೋ ಮೌನವಾಗಿರಬೇಕೋ ಎಂದು ನಿರ್ಧರಿಸಲೂ ಕಷ್ಟವಾಗುತ್ತದೆ. 2019ರಲ್ಲಿ ರಣವೀರ್ ಸಿಂಗ್ ಹಾಗು ಆಲಿಯಾ ಭಟ್ ನಟನೆಯ 'ಗಲ್ಲಿ ಬಾಯ್' ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಸಿದ್ಧಾಂತ್ ಚತುರ್ವೇದಿ (Siddhant Chaturvedi) ಹೊಸ ಕಥೆಯೊಂದನ್ನು ಹೇಳಿದ್ದಾರೆ. ಗಲ್ಲಿ ಬಾಯ್ ಚಿತ್ರದ ಬಳಿಕ ಅವರು 'ಗೆಹ್ರೈಯಾನ್' ಚಿತ್ರದಲ್ಲಿ ನಟಿಸಿದ್ದು, ಅದಕ್ಕೆ ಸಂಬಂಧಪಟ್ಟ ಕಥೆಯೊಂದನ್ನು ಹಂಚಿಕೊಂಡಿದ್ದಾರೆ ನೋಡಿ!
ನಟ ಸಿದ್ಧಾಂತ್ ಚತುರ್ವೇದಿ ಹೇಳಿಕೊಂಡಂತೆ, 'ಗೆಹ್ರೈಯಾನ್' ಚಿತ್ರದಲ್ಲಿ ಇರುವುದು ಟ್ರೈಯಾಂಗಲ್ ಲವ್ ಸ್ಟೋರಿ. ಅಲ್ಲಿ ನಟ ಸಿದ್ಧಾಂತ್ ಅವರು ನಟಿ ದೀಪಿಕಾ ಪಡುಕೋಣೆ (Deepika Padukone) ಹಾಗೂ ಅನನ್ಯಾ ಜತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಸಿದ್ಧಾಂತ್ ಈ ಬಗ್ಗೆ 'ನನಗೆ ಈ ಚಿತ್ರದ ಕಥೆಯನ್ನು ನಿರ್ದೇಶಕರು ಹೇಳಿದಾಗ, ಈ ಚಿತ್ರದಲ್ಲಿ ತುಂಬಾ ಇಂಟಿಮೇಟ್ ಸೀನ್‌ಗಳು ಇವೆ ಎಂದಿದ್ದರು. ಕಿಸ್, ಬೆಡ್‌ರೂಂ ದೃಶ್ಯಗಳು ಇವೆ ಎಂಬ ವಿಷಯ ನನಗೆ ತುಂಬಾ ಮುಜುಗರ ಉಂಟು ಮಾಡಿದವು. ಆದರೆ, ಬಂದ ಅವಕಾಶವೇ ಅದು, ಬಿಡುವಂತೆಯೂ ಇಲ್ಲ.
ಶಂಕರ್ ನಾಗ್ ಕಂಡ್ರೆ ಡಾ ರಾಜ್‌ಕುಮಾರ್‌ಗೆ ಆಗ್ತಾ ಇರ್ಲಿಲ್ಲ ಅನ್ನೋದು ಶುದ್ಧ ಸುಳ್ಳು, ಇಲ್ಲಿ ನೋಡಿ!
ನಿರ್ಮಾಪಕ ಕರಣ್ ಜೋಹರ್ ಅವರು 'ಈ (Gehraiyaan) ಚಿತ್ರದಲ್ಲಿ ಸೆಕ್ಸ್ ದೃಶ್ಯಗಳು ಹಾಗು ಕಿಸ್ಸಿಂಗ್ ಸೀನ್‌ಗಳು ಇವೆ. ಆದರೆ, ಅವರು ಒಂದು ಹಂತವನ್ನು ದಾಟಿ ಮುಂದಕ್ಕೆ ಹೋಗುವುದಿಲ್ಲ. ನೀನೊಬ್ಬ ಒಳ್ಳೆಯ ನಟ ಎಂದರೆ, ನಟನಾಗಬೇಕು ಎಂದರೆ ಇಂಥವುಗಳನ್ನು ನೀನು ನಿನ್ನ ಕೆರಿಯರ್‌ನಲ್ಲಿ ಎದುರಿಸಲೇಬೇಕು. ನಟನಾಗಿ ನೀನು ಕ್ಯಾಮೆರಾ ಮುಂದೆ ನಟಿಸುವುದಷ್ಟೇ. ಅದರಲ್ಲಿ ಸಮಸ್ಯೆ ಏನಿದೆ? ಯೋಚಿಸಿ ಯೋಚಿಸಿ ಟೈಮ್ ವೇಸ್ಟ್ ಮಾಡೋದಕ್ಕೆ ಅದರಲ್ಲಿ ಅಂಥದ್ದೇನಿದೆ?' ಎಂದು ಕೇಳಿದರು.
ಆದರೆ, ನಾನು ತುಂಬಾ ಮುಜುಗರದ ಸ್ವಭಾವದವನು. ಈ ಬಗ್ಗೆ ನನ್ನ ತಂದೆಯ ಬಳಿ ಮಾತನಾಡಿದೆ. ನೀನು ನಟ ಆಗುವುದಕ್ಕೂ ಮೊದಲು ಒಬ್ಬ ಪುರುಷ. ಸುಂದರ ಮಹಿಳೆ ದೀಪಿಕಾ ಜೊತೆ ನೀನು ನಟಿಸಬೇಕು. ಅದರಲ್ಲಿ ಯೋಚಿಸುವಂಥದ್ದು ಏನಿದೆ? ಪಾತ್ರಕ್ಕೆ ಏನು ಬೇಕೋ ಅದನ್ನು ನೀನು ಕೊಡಬೇಕು. ಒಬ್ಬ ನಟ-ನಟಿ ಎಂದಮೇಲೆ ಕ್ಯಾಮೆರಾ ಮುಂದೆ ನಟಿಸಬೇಕು. ಅಲ್ಲಿ ಕಥೆಗೆ ತಕ್ಕಂತೆ, ದೃಶ್ಯಕ್ಕೆ ತಕ್ಕಂತೆ, ನಟಿಸಬೇಕು ಅಷ್ಟೇ. ಅದನ್ನು ರಿಯಲ್ ಎಂದುಕೊಂಡು ನಾಚಿಕೆ ಪಡುವುದು ಯಾಕೆ?' ಎಂದು ಹೇಳಿ ನನಗೆ ಧೈರ್ಯಪಟ್ಟು ಮಾಡಲು ಹೇಳಿದರು.
ಆ್ಯಂಕರ್ ಅನುಶ್ರೀ ಬಗ್ಗೆ ಹೇಳೋದೇನೂ ಇಲ್ಲ, ರಾಜ್ ಬಿ ಶೆಟ್ಟಿ ಮಾತಿಗೆ ಏನಂತೀರಾ ನೋಡಿ; ಇದೆಂಥಾ ಮಾತುಕತೆ..!
ನನಗೆ ಇದ್ದ ಇನ್ನೊಂದು ಸಮಸ್ಯೆ ಎಂದರೆ, ನಟಿ ದೀಪಿಕಾ ಅವರು ನನ್ನ ಸ್ನೇಹಿತ ರಣವೀರ್ ಸಿಂಗ್ ಪತ್ನಿ. ಅವರ ಜೊತೆ ನಾನು ಕಿಸ್ ದೃಶ್ಯಗಳಲ್ಲಿ ಪಾಲ್ಗೊಳ್ಳಬೇಕು. ಅದನ್ನು ಸಿನಿಮಾ ಬಿಡುಗಡೆ ಬಳಿಕ ರಣವೀರ್ ನೋಡಿದರೆ, ನಾನು ಅವರನ್ನು ಎದುರಿಸುವುದು, ಮಾತನಾಡಿಸುವುದು ಹೇಗೆ? ಅಷ್ಟಕ್ಕೂ ದೀಪಿಕಾ ಕೂಡ ಪರಿಚಯ ಇರುವವರೇ. ಇದೆಲ್ಲವನ್ನೂ ಯೋಚಿಸಿ ಯೋಚಿಸಿ ನಾನು ತುಂಬಾ ಒದ್ದಾಡಿಬಿಟ್ಟೆ. ಕೊನೆಗೆ, ಕರಣ್, ಅಪ್ಪಾಜಿ ಅವರೆಲ್ಲರ ಒತ್ತಾಯದ ಮೇರೆಗೆ ಒಪ್ಪಿಕೊಂಡು ಆ ಸಿನಿಮಾದಲ್ಲಿ ನಟಿಸಿದೆ.
ಸಿನಿಮಾ ಬಿಡುಗಡೆಯಾದಾಗ, ನಾನು ನನ್ನ ಪೋಷಕರ ಒಟ್ಟಿಗೇ ಹೋಗಿದ್ದರೂ ಅವರ ಪಕ್ಕದಲ್ಲಿ ನಾನು ಕುಳಿತುಕೊಳ್ಳಲೇ ಇಲ್ಲ. ನಾನೊಂದು ಮೂಲೆಯಲ್ಲಿ ಕುಳಿತು ತಲೆ ಬಗ್ಗಿಸಿಕೊಂಡು ಚಿತ್ರ ನೋಡುತ್ತಿದ್ದೆ, ಸಿನಿಮಾ ಮುಗಿದ ಬಳಿಕ ಪೋಷಕರು ನನ್ನ ಅಭಿನಯಕ್ಕೆ ಮೆಚ್ಚುಗೆ ಸೂಚಿಸಿದರು. ಆದರೆ, ಅದರಲ್ಲಿನ ಇಂಟಿಮೇಟ್ ಸೀನ್‌ಗಳ ಬಗ್ಗೆಯೇ ಮಾತನಾಡಿದರು. ಅದು ನನಗೆ ಸ್ವಲ್ಪ ಮುಜುಗರ ಉಂಟು ಮಾಡಿತ್ತು. ಆದರೆ, ನನ್ನ ಮಾಮ ಮಾತ್ರ ನನ್ನನ್ನು ಏನೋ ಒಂಥರಾ ನೋಡಿ, 'ಅಗತ್ಯಕ್ಕಿಂತಲೂ ಅತಿಯಾಗಿಯೇ ದೃಶ್ಯಗಳು ಇದ್ದವು, ನೀನೂ ಕೂಡ ಅತಿಯಾಗಿಯೇ ನಟಿಸಿರುವೆ ಎಂದುಬಿಟ್ಟರು' ಎಂದಿದ್ದಾರೆ.
ಪ್ಯಾನ್ ಇಂಡಿಯಾ ಟ್ರೆಂಡ್ ಭೂತಪ್ರೇತವೇ? ಇದಕ್ಕೆ ಬೈದರೆ ಸಮಸ್ಯೆ ಪರಿಹಾರ ಆಗುವುದೇ? ಯೆಸ್ or ನೋ..?!
ಒಟ್ಟಿನಲ್ಲಿ, ಇದು ಬಾಲಿವುಡ್ ಹೊಸ ನಟನೊಬ್ಬನ ಹೊಸ ನಾಚಿಕೆ ಸ್ಟೋರಿ. ಹೇಳಹೊರಟರೆ ಒಬ್ಬೊಬ್ಬರದೂ ಒಂದೊಂದು ಸ್ಟೋರಿ. ಮೊದಲನೇ ಚಿತ್ರದಲ್ಲಿ ಇಂಟಿಮೇಟ್ ದೃಶ್ಯಗಳಿಗೆ ಹೀಗೆಲ್ಲಾ ಯೋಚಿಸುವ, ಮುಜುಗರ ಪಟ್ಟುಕೊಳ್ಳುವ ಹೊಸ ನಟನಟಿಯರು, ಎರಡನೇ ಸಿನಿಮಾದ ಶೂಟಿಂಗ್ ಹೊತ್ತಿಗೆ ಅದನ್ನೇ ಬಯಸಿ ಬಯಸಿ ಮಾಡುತ್ತಾರೆ ಎಂಬುದು ಸೀಕ್ರೆಟ್ ಏನಲ್ಲ. ಏಕೆಂದರೆ, ಇವೆಲ್ಲಾ ಈಗಾಗಲೇ ಸಾಕಷ್ಟು ಕೇಳೀರುವ ಕಥೆಗಳು, ಹೊಸದೇನಿದೆ ಅದರಲ್ಲಿ?