ಮಾಧುರಿ ದೀಕ್ಷಿತ್ ಮದುವೆ ಸುದ್ದಿ ಕೇಳಿ ಬಾತ್‌ರೂಮ್‌ನಲ್ಲಿ ಗಳಗಳನೇ ಅತ್ತಿದ್ರು ಕನ್ನಡ ನಟಿಯ ತಂದೆ 

Published : Dec 25, 2024, 06:46 PM IST
ಮಾಧುರಿ ದೀಕ್ಷಿತ್ ಮದುವೆ ಸುದ್ದಿ ಕೇಳಿ ಬಾತ್‌ರೂಮ್‌ನಲ್ಲಿ ಗಳಗಳನೇ ಅತ್ತಿದ್ರು ಕನ್ನಡ ನಟಿಯ ತಂದೆ 

ಸಾರಾಂಶ

ಮಾಧುರಿ ದೀಕ್ಷಿತ್ ಮದುವೆ ಸುದ್ದಿ ಕೇಳಿ ತಂದೆ ಕಣ್ಣೀರು ಹಾಕಿದ್ದ ಘಟನೆಯನ್ನು ನಟಿ ಬಹಿರಂಗಪಡಿಸಿದ್ದಾರೆ. ಮಾಧುರಿ ದೊಡ್ಡ ಅಭಿಮಾನಿ ಎಂದಿರುವ ನಟಿ, ಮದುವೆ ಸುದ್ದಿ ಕೇಳಿ ತಂದೆ ಬಾತ್‌ರೂಮ್‌ನಲ್ಲಿ ಗಳಗಳನೇ ಅತ್ತಿದ್ದರು ಎಂದು ಹೇಳಿದ್ದಾರೆ.

ಮುಂಬೈ: ಧಕ್ ಧಕ್ ಗರ್ಲ್ ಮಾಧುರಿ ದೀಕ್ಷಿತ್ ಯಾರಿಗೆ ಇಷ್ಟ ಇಲ್ಲ ಹೇಳಿ. 60ರ ಸನೀಹದಲ್ಲಿದ್ದರೂ ಮಾಧುರಿ ದೀಕ್ಷಿತ್, 20ರ ಯುವತಿಯೂ ನಾಚುವಂತಹ ಆಕರ್ಷಕ ಸೌಂದರ್ಯವನ್ನು ಹೊಂದಿದ್ದಾರೆ. ಸಿನಿಮಾದ ಉತ್ತುಂಗದಲ್ಲಿರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಮಾಧುರಿ ದೀಕ್ಷಿತ್, ಗಂಡನ ಜೊತೆ ವಿದೇಶಕ್ಕೆ ತೆರಳಿದ್ದರು. ಮಾಧುರಿ ದೀಕ್ಷಿತ್ ಮದುವೆಯೂ ಆಪ್ತರ ಸಮ್ಮುಖದಲ್ಲಿಯೇ ನಡೆದಿತ್ತು. ಹಾಗಾಗಿ ಮದುವೆ ಬಳಿಕ ಈ ಸುದ್ದಿ ಬಹಿರಂಗವಾಗಿತ್ತು. ಕನಸಿನ ಕನ್ಯೆ, ಎಷ್ಟೋ ಯುವಕರ ಹೃದಯ ಕದ್ದ ಚೆಲುವೆ ಮಾಧುರಿ ದೀಕ್ಷಿತ್ ಮದುವೆ ಸುದ್ದಿ ಕೇಳಿ ಎಲ್ಲರೂ ಶಾಕ್ ಆಗಿದ್ದರು.  ಶಾಕ್ ಆದವರ ಪೈಕಿ ಖ್ಯಾತ ನಟಿಯ ತಂದೆಯೂ ಸಹ ಒಬ್ಬರು. 

ಮಾಧುರಿ ದೀಕ್ಷಿತ್ ಮದುವೆ ವಿಷಯ ತಿಳಿದು ನನ್ನ ತಂದೆ ಬಾತ್‌ರೂಮ್‌ಗೆ ಕಣ್ಣೀರು ಹಾಕಿದ್ದರು. ಹೊರಗೆ ಬಂದಾಗ ಅವರ ಕಣ್ಣಿನ ಅಂಚಿನಲ್ಲಿ ನೀರು ಇತ್ತು ಎಂದು ನಟಿ ಹೇಳಿದ್ದರು. ಈ ವಿಷಯ ಹೇಳುವಾಗ ಮಾಧುರಿ ದೀಕ್ಷಿತ್ ಸಲ ಅಲ್ಲಿಯೇ ಇದ್ದಿದ್ದರು. ಸದ್ಯ ಈ ಹಳೆ ಸಂದರ್ಶನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮಾಧುರಿ ದೀಕ್ಷಿತ್ ಮದುವೆ ಸುದ್ದಿ ಕೇಳಿ ಕಣ್ಣೀರು ಹಾಕಿದ್ದು ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ. ತಾಯಿಯಾಗಿರುವ ಸಂತಸದಲ್ಲಿರುವ  ದೀಪಿಕಾ ಪಡುಕೋಣೆ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡು ತಾಯ್ತನವನ್ನು ಆನಂದಿಸುತ್ತಿದ್ದಾರೆ. ಬಾಲಿವುಡ್‌ಗೂ ತೆರಳುವ ಮುನ್ನ ದೀಪಿಕಾ ಪಡುಕೋಣೆ, ಕನ್ನಡದ ಐಶ್ವರ್ಯಾ ಚಿತ್ರದಲ್ಲಿ ನಟ ಉಪೇಂದ್ರ ಅವರಿಗೆ ಜೊತೆಯಾಗಿ ನಟಿಸಿದ್ದರು. ಓಂ ಶಾಂತಿ ಓಂ ಸಿನಿಮಾದಲ್ಲಿ ಶಾರೂಖ್ ಖಾನ್ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದ ದೀಪಿಕಾ ಪಡುಕೋಣೆ ಹಿಂದಿರುಗಿಯೇ ನೋಡಿಲ್ಲ. 

ಇದನ್ನೂ ಓದಿ: ಬ್ಯಾಕ್‌ ಟು ಬ್ಯಾಕ್ ಫ್ಲಾಪ್ ಕೊಟ್ರೂ 900 ಕೋಟಿಯ ಸಿನಿಮಾ ತಿರಸ್ಕರಿಸಿದ ನಟಿ; ಆದ್ರೂ ಬೇಸರವಿಲ್ಲ ಅಂತೆ!

ವೈರಲ್ ವಿಡಿಯೋದಲ್ಲಿ ವೇದಿಕೆ ಮೇಲೆ ಮಾಧುರಿ ದೀಕ್ಷಿತ್ ಮತ್ತು ದೀಪಿಕಾ ಪಡುಕೋಣೆ ಕುಳಿತಿರುತ್ತಾರೆ.  ಮಾಧುರಿ ದೀಕ್ಷಿತ್ ಅವರನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಂದರ್ಭದಲ್ಲಿ ದೀಪಿಕಾ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ನಿಮ್ಮ ಮದುವೆ ಸುದ್ದಿ ಪತ್ರಿಕೆಯಲ್ಲಿ ಬಂದಾಗ, ನನ್ನ ತಂದೆ ಪ್ರಕಾಶ್ ಪಡುಕೋಣೆ ಶಾಕ್ ಆಗಿದ್ದರು.  ಬಾತ್‌ರೂಮ್‌ಗೆ ಹೋಗಿ ಕಣ್ಣೀರು ಹಾಕಿದ್ದರು. ಹೊರಗೆ ಬಂದಾಗ ಅವರ ಕಣ್ಣುಗಳು ಒದ್ದೆಯಾಗಿದ್ದವು. ಇಂದಿಗೂ ಮನೆಯಲ್ಲಿ ಈ ವಿಷಯವನ್ನಿಟ್ಟುಕೊಂಡು ತಂದೆಯವರನ್ನು ತಮಾಷೆ ಮಾಡುತ್ತಿರುತ್ತೇವೆ ಎಂದು ದೀಪಿಕಾ ಹೇಳಿದ್ದರು. 

ಇಂದು ಈ ಕಾರ್ಯಕ್ರಮಕ್ಕೂ ಬರುವ ಮನ್ನ, ಕಣ್ಣೀರು ಹಾಕಿರುವ ವಿಷಯವನ್ನು ವೇದಿಕೆಯಲ್ಲಿ ರಿವೀಲ್ ಮಾಡೋದಾಗಿ ಹೇಳಿ ಬಂದಿದ್ದೇನೆ ಎಂದು ಹೇಳುತ್ತಾ ದೀಪಿಕಾ ನಕ್ಕರು. ನಮ್ಮ ತಂದೆ ಪ್ರಕಾಶ್ ಪಡುಕೋಣೆ ನಿಮ್ಮ ದೊಡ್ಡ ಅಭಿಮಾನಿ. ನಾನು ಸಹ ನಿಮ್ಮ ಅಭಿಮಾನಿ ಎಂದು ದೀಪಿಕಾ ಪಡುಕೋಣೆ ಹೇಳಿದ್ದರು.

ಇದನ್ನೂ ಓದಿ: ಅದು ಕ್ರಿಸ್ಮಸ್ ಕತ್ತಲ ರಾತ್ರಿ, ಇಬ್ಬರು ಅಪರಿಚಿತರ ಭೇಟಿ; ಮುಂದೆ ಎಲ್ಲವೂ ಸಸ್ಪೆನ್ಸ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!