
ಮುಂಬೈ: ಸಿನಿಮಾ ಉದ್ಯಮದಲ್ಲಿ ಕಲಾವಿದರ ಜನಪ್ರಿಯತೆಯಲ್ಲಿ ಏರಿಳಿತ ಉಂಟಾಗುತ್ತಿರುತ್ತದೆ. ಕೆಲವು ಸಿನಿಮಾ ಸೂಪರ್ ಹಿಟ್ ಆದ್ರೆ, ಒಂದಿಷ್ಟು ಮಕಾಡೆ ಮಲಗಿ ಬಿಡುಗಡೆಯಾದ ಎರಡನೇ ದಿನವೇ ಥಿಯೇಟರ್‌ನಿಂದ ಹೊರ ಬಂದಿರುತ್ತವೆ. ಜನಪ್ರಿಯತೆ ಹೆಚ್ಚಾದಾಗ ಅಧಿಕ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಸೋತಾಗ ಕೈಯಲ್ಲಿರುವ ಅವಕಾಶಗಳು ಕಳೆದುಕೊಳ್ಳುವಂತಾಗುತ್ತದೆ. ಇನ್ನು ಕೆಲವು ಪ್ರಕರಣಗಳಲ್ಲಿ ಸ್ಟಾರ್ ಕಲಾವಿದರು ತಿರಸ್ಕರಿಸಿದ ಸಿನಿಮಗಳು ಬೇರೆಯವರ ಪಾಲಾಗಿ ಬಾಕ್ಸ್ ಆಫಿಸ್‌ನಲ್ಲಿ ಸದ್ದು ಮಾಡುವ ಮೂಲಕ ಹಲವು ದಾಖಲೆಗಳನ್ನು ಬರೆದಿರುತ್ತವೆ.
ಇದೀಗ ನಟಿಯೊಬ್ಬರು ತಾವು ತಿರಸ್ಕರಿಸಿದ ಸಿನಿಮಾ 900 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ಆದ್ರೆ ಆ ಸಿನಿಮಾ ರಿಜೆಕ್ಟ್ ಮಾಡಿದ್ದಕ್ಕೆ ಯಾವುದೇ ವಿಷಾದವನ್ನು ವ್ಯಕ್ತಪಡಿಸಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ. ಸದ್ಯ ರಾಜಕೀಯ ನಾಯಕರೊಬ್ಬರನ್ನು ಮದುವೆಯಾಗಿರುವ ನಟಿ ಖಾಸಗಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. 900 ಕೋಟಿ ಸಿನಿಮಾ ರಿಜೆಕ್ಟ್ ಮಾಡಿದ ಆ ನಟಿ ಯಾರು ಎಂಬುದರ ಮಾಹಿತಿ ಈ ಲೇಖನದಲ್ಲಿದೆ.
ಬಾಲಿವುಡ್ ಕ್ಯೂಟ್ ಆಂಡ್ ಬಬ್ಲಿ ಗರ್ಲ್ ಅಂತಾನೇ ಕರೆಸಿಕೊಳ್ಳುವ ನಟಿ ಪರಿಣಿತಿ ಚೋಪ್ರಾ ತಾವು 900 ಕೋಟಿ ಗಳಿಸಿರುವ ಸೂಪರ್ ಹಿಟ್ ಸಿನಿಮಾ ರಿಜೆಕ್ಟ್ ಮಾಡಿಕೊಂಡಿರುವ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 2011ರಲ್ಲಿ ಲೇಡಿಸ್ ವರ್ಸಸ್ ರಿಕ್ಕಿ ಬಹಲ್ ಸಿನಿಮಾ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಪರಿಣಿತಿ ಚೋಪ್ರಾ, ಅದೇ ವರ್ಷ ಇಶಕಜಾದೇ ಸಿನಿಮಾದಲ್ಲಿ ನಟಿಸಿದರು. ನಂತರ 2013ರಲ್ಲಿ ಬಿಡುಗಡೆಯಾದ 'ಶುದ್ಧ ದೇಶಿ ರೊಮ್ಯಾನ್ಸ್' ಚಿತ್ರ ಪರಿಣಿತಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ನಂತರ ಬಂದ ಹಸಿ ತೋ ಫಸೀ ಸಹ ಪರಿಣಿತಿ ಚೋಪ್ರಾ ಅವರ ಕೈ ಹಿಡಿಯಿತು.
ಇದನ್ನೂ ಓದಿ: ‘ಪೀಲಿಂಗ್ಸ್’ ಹಾಡಿನ ಆ ಸ್ಟೆಪ್ ಇರಿಸು ಮುರಿಸು ಆಯ್ತೆಂದ ಶ್ರೀವಲ್ಲಿ: ಈಗ್ಯಾಕೆ ಬಂತು ಈ ಮಾತು?
ದಾವತ್ -ಎ -ಇಶ್ಕ್, ಕಿಲ್ ದಿಲ್, ಮೇರಿ ಪ್ಯಾರಿ ಬಿಂದು ಮತ್ತು ನಮಸ್ತೆ ಇಂಗ್ಲೆಂಡ್ ಸೇರಿದಂತೆ ಪರಿಣಿತಿ ಚೋಪ್ರಾ ನಟನೆಯ ಸಿನಿಮಾಗಳು ಸೋಲಲು ಆರಂಭಿಸಿದವು. ಈ ಸಮಯದಲ್ಲಿ ಬಂದ ರಣ್‌ಬೀರ್ ಕಪೂರ್ ಜೊತೆಗಿನ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ್ದರು. ಪರಿಣಿತಿ ಚೋಪ್ರಾ ತಿರಸ್ಕರಿಸಿದ ಈ ಪಾತ್ರ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರ ಪಾಲಾಗಿತ್ತು. ಬಾಕ್ಸ್ ಆಫಿಸ್‌ನಲ್ಲಿ 900 ಕೋಟಿ ಗಳಿಸಿದ ಅನಿಮಲ್ ಚಿತ್ರದ ಆಫರ್ ಮೊದಲು ಪರಿಣಿತಿ ಅವರಿಗೆ ಹೋಗಿತ್ತು. ಈ ವಿಷಯವನ್ನು ಪರಿಣಿತಿ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಪರಿಣಿತಿ ಚೋಪ್ರಾ ನಟನೆಯ 'ಚಮ್ಕಿಲಾ' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಿತ್ತು. ಈ ಚಿತ್ರದ ಪಾತ್ರಕ್ಕಾಗಿ ಪರಿಣಿತಿ ತೂಕ ಹೆಚ್ಚಿಸಿಕೊಂಡಿದ್ದರು. ಪರಿಣಿತಿ ನಟನೆಗೆ ವಿಶ್ಲೇಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.
ಇದನ್ನೂ ಓದಿ: 17 ವರ್ಷ, 450 ಸಿನಿಮಾ: ಈ ನಟಿಯ ಸಂಭಾವನೆ ಯಾವ ಸೂಪರ್ ಸ್ಟಾರ್‌ಗೂ ಕಡಿಮೆ ಇರಲಿಲ್ಲ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.