Oo Antava: ಪುಷ್ಪಾ-2ನಲ್ಲೂ ಸೊಂಟ ಬಳುಕಿಸಲಿದ್ದಾರೆಯೇ ಸಮಂತಾ? ನಟಿ ಹೇಳಿದ್ದೇನು?

By Suvarna News  |  First Published Apr 12, 2023, 2:55 PM IST

ಪುಷ್ಪ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಊಂ ಆಂಟಾವಾ ನೃತ್ಯಕ್ಕೆ ಸೊಂಟ ಬಳುಕಿಸಿದ್ದ ಸಮಂತಾ ಪುಷ್ಪಾ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ? ನಟಿ ಹೇಳಿದ್ದೇನು?
 


ಅಲ್ಲು ಅರ್ಜುನ್ (Allu Arjun) ಅಭಿನಯದ ಪುಷ್ಪ ಸಿನಿಮಾ ದೇಶದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಹಲವು ದಾಖಲೆಗಳನ್ನು ಹಿಂದಿಕ್ಕಿತ್ತು. ಈಗ ಪುಷ್ಪ-2 ತೆರೆ ಮೇಲೆ ಬರಲು ಸಜ್ಜಾಗಿ ನಿಂತಿದೆ. ಮೊದಲ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ (Rashmika Mandanna) ಕಾಣಿಸಿಕೊಂಡಿದ್ದರೆ,  Pushpa 2ದಲ್ಲಿ   ಸಾಯಿ ಪಲ್ಲವಿ ಸಾಥ್ ನೀಡ್ತಿದ್ದಾರೆ ಎನ್ನಲಾಗಿದೆ. ಇವರು ಬುಡಕಟ್ಟು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಇದೆ.  ರಶ್ಮಿಕಾ ಮಂದಣ್ಣನವರೇ ಇದರಲ್ಲಿಯೂ ನಾಯಕಿ ಎಂದೂ ಹೇಳಲಾಗುತ್ತಿದೆ.  ಬಾಲಿವುಡ್ (Bollywood) ಅಂಗಳದಲ್ಲೂ ಭಾರೀ ಸದ್ದು ಮಾಡಿದ್ದ ಪುಷ್ಪ ಸಿನಿಮಾದಂತೆಯೇ ಪುಷ್ಪ 2 ಕೂಡ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿದೆ.  ಪುಷ್ಪ 2 ಸಿನಿಮಾವನ್ನು ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ (release) ಮಾಡಲು ಚಿತ್ರತಂಡ ನಿರ್ಧರಿಸಿದೆ. ಏಕಾಕಾಲದಲ್ಲಿ ದೇಶ-ವಿದೇಶಗಳಲ್ಲಿ ಪುಷ್ಪ 2 ಚಿತ್ರ ರಿಲೀಸ್ ಆಗಲಿದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.

ಸಿನಿಮಾ ಮೇಕರ್ಸ್ ಎಲ್ಲಾ ಭಾಷೆಗಳ ಥಿಯೇಟ್ರಿಕಲ್ ರೈಟ್ಸ್ (Theatric rights) ಡೀಲ್​ಗಾಗಿ ಒಂದು ಸಾವಿರ  ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬೇಡಿಕೆ ಇಟ್ಟಿದ್ದಾರೆ ಎಂದು Siasat.com ವರದಿಯಲ್ಲಿ ಉಲ್ಲೇಖ ಮಾಡಿದೆ. ಇದು ನಿಜವೇ ಆಗಿದ್ದರೆ, ಪುಷ್ಪ 2 ಸಿನಿಮಾ ಬಿಡುಗಡೆಗೂ  ಮುನ್ನವೇ ಭರ್ಜರಿ ಹಣವನ್ನು ಕೊಳ್ಳೆ ಹೊಡೆದ ಸಿನಿಮಾ ಆಗಲಿದೆ.  ಪುಷ್ಪ 2 ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡುತ್ತಿದ್ದು, ಈ ಡಿಸೆಂಬರ್​ನಲ್ಲಿ ರಿಲೀಸ್​  ಆಗುವ ಸಾಧ್ಯತೆ ಇದೆ.

Tap to resize

Latest Videos

ಇದರ ನಡುವೆಯೇ ಪುಷ್ಪಾ ಚಿತ್ರದಲ್ಲಿ ಭಾರಿ ಸದ್ದು ಮಾಡಿದ್ದು, ಊಂ ಆಂಟಾವಾ (Oo Antava) ಹಾಡು. ಈ ಹಾಡಿಗೆ ನಟಿ ಸಮಂತಾ ರುತ್​ ಪ್ರಭು ಸೊಂಟ ಬಳುಕಿಸಿದ್ದರು. ಈ ಹಾಡು ಎಲ್ಲೆಡೆ ದೊಡ್ಡ ಹವಾ ಸೃಷ್ಟಿ ಮಾಡಿತ್ತು. ಈಗ ಪುಷ್ಪಾ-2 ನಲ್ಲಿಯೂ ಸಮಂತಾ ನೃತ್ಯದ ಮೋಡಿ ಮಾಡಲಿದ್ದಾರೆಯೇ ಎಂಬ ಪ್ರಶ್ನೆ ಅವರ ಅಭಿಮಾನಿಗಳದ್ದು. ತಮ್ಮ ಶಾಕುಂತಲಂ ಚಿತ್ರದ ಪ್ರಚಾರಗಳಲ್ಲಿ ನಿರತರಾಗಿರುವ ಸಮಂತಾ ರುತ್ ಪ್ರಭು ಅವರನ್ನು  ಸಂದರ್ಶನ ಒಂದರಲ್ಲಿ ಈ ಪ್ರಶ್ನೆಯನ್ನು ಕೇಳಲಾಯಿತು. ಪುಷ್ಪಾ ಸೀಕ್ವಲ್​ನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದೀರಾ, ಇದು ಜಾಗತಿಕವಾಗಿ  ಪ್ರೇಕ್ಷಕರಿಗೆ ಇಷ್ಟವಾಗಿದೆ ಎಂದು ಸಂದರ್ಶಕರು ನಟಿಗೆ ಹೇಳಿದಾಗ, ಸಮಂತಾ ಅಡ್ಡಿಪಡಿಸಿದರು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು.

Pushpa 2: ಬಿಡುಗಡೆಗೂ ಮುನ್ನವೇ ಸಾವಿರ ಕೋಟಿ ರೂ. ಬಾಚಿದ ಚಿತ್ರ

ಪುಷ್ಪ: ದಿ ರೈಸ್ ಚಿತ್ರದ ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆದರೆ  ನಾನು ಯಾವುದೇ  ಕಾರಣಕ್ಕೂ ಪುಷ್ಪಾ 2: ದಿ ರೂಲ್ ಸೀಕ್ವೆಲ್‌ನ ಭಾಗವಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಪುಷ್ಪ ಸೀಕ್ವಲ್​ ಕೂಡ ಭರ್ಜರಿ ಯಶಸ್ಸು ಕಾಣಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ನಾನು ಮಾತ್ರ ಇದರ ಭಾಗವಾಗಿಲ್ಲ ಎಂದಿದ್ದಾರೆ.  ಈ ಚಿತ್ರವನ್ನು ನೋಡಲು ನಾನೂ  ಉತ್ಸುಕಳಾಗಿದ್ದೇನೆ ಎಂದಿದ್ದಾರೆ.

ನಾನು ಯಾವುದನ್ನೂ ಮರೆಯಲ್ಲ; ನಾಗ್ ಚೈತನ್ಯ ಜೊತೆಗಿನ ವಿಚ್ಛೇದನ ಬಗ್ಗೆ ಸಮಂತಾ ರಿಯಾಕ್ಷನ್

ಮೂಲತಃ ತೆಲುಗಿನಲ್ಲಿ ಚಿತ್ರೀಕರಣಗೊಂಡಿದ್ದ ಪುಷ್ಪ ಮೊದಲ ಭಾಗವನ್ನು ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಇದು ಅಲ್ಲು ಅರ್ಜುನ್ ಅವರ ಮೊದಲ ಚಿತ್ರವಾಗಿದ್ದು ಏಕಕಾಲದಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಸದ್ಯ ಸಮಂತಾ ಶಾಕುಂತಲಾ ಚಿತ್ರದ ಪ್ರಚಾರದಲ್ಲಿದ್ದಾರೆ. ಕೊನೆಯದಾಗಿ ಯಶೋದಾ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದ ಸಮಂತಾ ಇದೀಗ ಶಾಕುಂತಲಂ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಿದ್ದಾರೆ. ವಿಶಿಷ್ಟ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಗುಣಶೇಖರ್ (Gunashekhar) ಅವರ ನಿರ್ದೇಶನದಲ್ಲಿ ಶಾಕುಂತಲಂ ಚಿತ್ರ ಮೂಡಿಬಂದಿದೆ. ಶಕುಂತಲಾ ಮತ್ತು ದುಶ್ಯಂತನ ನಡುವಿನ ಪ್ರೇಮಕಥೆಯನ್ನು ಹೊಂದಿದೆ.ಈ ಚಿತ್ರದ ಪ್ರಚಾರವನ್ನು ಸಮಂತಾ ಆರಂಭಿಸಿದ್ದಾರೆ. 

click me!