ದೀಪಿಕಾ ಪಡುಕೋಣೆ ಎಷ್ಟು ಚೆನ್ನಾಗಿ ಕೊಂಕಣಿ ಮಾತಾಡ್ತಾರೆ ನೋಡಿ! ಕುಂದಾಪ್ರ ಕೊಂಕಣಿಯಂತೆ ಇದು..

By Bhavani Bhat  |  First Published Nov 11, 2024, 10:23 AM IST

ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ತಮ್ಮ ಮಾತೃಭಾಷೆ ಕೊಂಕಣಿಯಲ್ಲಿ ಸುಲಲಿತವಾಗಿ ಮಾತನಾಡುವ ವೀಡಿಯೊ ವೈರಲ್ ಆಗಿದೆ. ಮಗುವಿನ ಜನನದ ನಂತರ ಬ್ರೇಕ್‌ನಲ್ಲಿರುವ ದೀಪಿಕಾ, ತಮ್ಮ ಹುಟ್ಟೂರು ಉಡುಪಿ ಸಮೀಪದ ಕುಂದಾಪುರದ ಪಡುಕೋಣೆಯ ಕೊಂಕಣಿಯಲ್ಲಿ ಮಾತನಾಡಿ ಅಭಿಮಾನಿಗಳ ಮನಗೆದ್ದಿದ್ದಾರೆ. ಇದು ಅವರ ಫ್ಯಾನ್ಸ್‌ಗಳಿಗೆ ಸಂತಸ ತಂದಿದೆ.


ಬಾಲಿವುಡ್ ಸೂಪರ್‌ಸ್ಟಾರ್ ದೀಪಿಕಾ ಪಡುಕೋಣೆ ಹೆಸರಿನ ಜೊತೆ ಇರುವ ಪಡುಕೋಣೆ ನಮ್ಮ ಉಡುಪಿ ಸಮೀಪದ ಕುಂದಾಪುರದ ಪಡುಕೋಣೆ. ಇಲ್ಲಿ ಕೊಂಕಣಿ ಮಾತನಾಡುವ ಗೌಡ ಸಾರಸ್ವತರೇ ಅಧಿಕ. ಬಾಲಿವುಡ್‌ನಲ್ಲಿ ಇಷ್ಟೆಲ್ಲ ಕಮಾಲ್ ಮಾಡಿದ್ರೂ ಪಂಜಾಬಿ ಹುಡುಗನನ್ನು ಮದುವೆ ಆದರೂ ದೀಪಿಕಾ ತನ್ನ ಮಾತೃಭಾಷೆ ಮರೆತಿಲ್ಲ ಅನ್ನೋದು ಅವರ ಅಭಿಮಾನಿಗಳಿಗೆ ಸಖತ್ ಥ್ರಿಲ್ ತಂದಿದೆ. ದೀಪಿಕಾ ಪಡುಕೋಣೆ ಅಂದಾಕ್ಷಣ ಭಾರತೀಯರು ಬಿಡಿ, ವಿದೇಶಿಯರೂ ಕಣ್ಣರಳಿಸ್ತಾರೆ. ಅಂಥಾ ನಟನೆ ಆಕೆಯದ್ದು. ದೀಪಿಕಾ ಅವರ ಮೊದಲ ಸಿನಿಮಾ, ಅವರು ಎಂಟರ್‌ಟೇನ್‌ಮೆಂಟ್ ಇಂಡಸ್ಟ್ರಿಗೆ ಕಾಲಿಡಲು ಕಾರಣವಾದ ಸಿನಿಮಾ ಕನ್ನಡದ್ದೇ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಿನಿಮಾವೊಂದರ ಮೂಲಕ ಅವರು ಎಂಟರ್‌ಟೇನ್‌ಮೆಂಟ್ ಇಂಡಸ್ಟ್ರಿಗೆ ಬಲಗಾಲಿಟ್ಟು ಎಂಟ್ರಿಕೊಡ್ತಾರೆ. ಅದೇನ್ ಲಕ್ಕೋ, ಈಕೆಯ ಪರ್ಸನಾಲಿಟಿಯೇ ಆ ಥರ ಇತ್ತೋ ಗೊತ್ತಿಲ್ಲ. ಆಮೇಲೆ ಸಾಲು ಸಾಲು ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿತು.

ನೋಡ ನೋಡ್ತಿದ್ದ ಹಾಗೆ ಬಾಲಿವುಡ್‌ನ ಟಾಪ್ ಹೀರೋಯಿನ್ ಆಗಿಯೇ ಬಿಟ್ಟರು. ಯಾವಾಗ ಬಾಲಿವುಡ್‌ನ ಹಿಟ್ ಸಿನಿಮಾಗಳ ಹೀರೋಯಿನ್ ಆಗಿ ಗುರುತಿಸಿಕೊಂಡರೋ ಬೆಂಗಳೂರು ನಂಟು ಕಡಿಮೆ ಆಯ್ತು. ಈಗ ಅಂತೂ ಪಂಜಾಬಿ ಹುಡುಗ ರಣವೀರ್ ಸಿಂಗ್ ಅವರ ಪತ್ನಿಯಾಗಿದ್ದಾರೆ. ಅಷ್ಟೇ ಅಲ್ಲ ಮುದ್ದಾದ ಮಗುವಿನ ತಾಯಿಯಾಗಿದ್ದಾರೆ. ಸೋ ಎಲ್ಲರೂ ಈಕೆಯ ಬಗ್ಗೆ ಬೇರೆಯದೇ ಮಾತಾಡಲು ಶುರು ಮಾಡಿದ್ದಾರೆ.

Tap to resize

Latest Videos

undefined

ಪುಷ್ಪ-2ನಲ್ಲಿ ಕನ್ನಡತಿ ಶ್ರೀಲೀಲಾ‌ ಕಮಾಲ್... ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿದ ಡ್ಯಾನ್ಸಿಂಗ್ ಕ್ವೀನ್!

ದೀಪಿಕಾ ಪಡುಕೋಣೆ ಮುಂಬೈಗೆ ಹೋಗಿದ್ದೇ ಅಲ್ಲಿಯವರೇ ಆಗಿ ಹೋದರು. ಪಂಜಾಬ್ ಹುಡುಗನನ್ನು ಮದುವೆಯಾಗಿ ಆತನ ಮಗುವಿಗೆ ತಾಯಿಯಾದದ್ದೇ ಮಗುವಿಗೆ ಹಿಂದಿ ಮೂಲದ ಹೆಸರನ್ನೇ ಇಟ್ಟರು. ಸೋ, ಆಯ್ತಲ್ಲಾ ಇನ್ನೇನು ಕನ್ನಡ, ಮಾತೃಭಾಷೆ, ಹುಟ್ಟೂರು ಇವೆಲ್ಲ ಮರೆತೇಬಿಟ್ಟರು ಎಂದುಕೊಳ್ಳುವಾಗಲೇ ದೀಪಿಕಾ ಅಚ್ಚ ಕೊಂಕಣಿಯಲ್ಲೇ ಮಾತನಾಡಿ ಅಚ್ಚರಿ ಹುಟ್ಟಿಸಿದ್ದಾರೆ. ಹಾಗೆ ನೋಡಿದರೆ ದೀಪಿಕಾ ಜನರ ಈ ಬಗೆಯ ಮನೋಭಾವವನ್ನು ಆಗಾಗ ಸುಳ್ಳು ಮಾಡುತ್ತಲೇ ಇರುತ್ತಾರೆ. ಈ ಹಿಂದೆ ದೀಪಿಕಾ ಪಡುಕೋಣೆ ಅವರು ಕನ್ನಡದಲ್ಲಿ ಮಾತನಾಡಿದ ವೀಡಿಯೋ ವೈರಲ್ ಆಗಿತ್ತು. ದೀಪಿಕಾ ಪಡುಕೋಣೆ ಅವರು ಈ ಹಿಂದೆ ಖಿನ್ನತೆಗೆ ಒಳಗಾಗಿದ್ದರು. ಅದನ್ನು ಓಪನ್ ಆಗಿ ಹೇಳಿಕೊಂಡಿದ್ದರು. ಈ ವಿಚಾರಕ್ಕೆ ಅವರು ಇಷ್ಟ ಆಗುತ್ತಾರೆ. ಅವರು ಅಭಿಮಾನಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಖಿನ್ನತೆಗೆ ಒಳಗಾದಾಗ ಈ ಬಗ್ಗೆ ಅವರು ಹೇಳಿಕೊಂಡಿದ್ದರು. ಜೊತೆಗೆ ಕನ್ನಡದಲ್ಲೇ ಮಾತನಾಡಿದ್ದರು.

ಇದೀಗ ದೀಪಿಕಾ ಪಡುಕೋಣೆ ಅವರಿಗೆ ಹೆಣ್ಣು ಮಗು ಜನಿಸಿದೆ. ಮಗುವಿನ ಪಾದದ ಫೋಟೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರ ಫ್ಯಾನ್ಸ್ ದೀಪಿಕಾ ಪಡುಕೋಣೆ ಅವರು ಹೊಸ ಸಿನಿಮಾ ಘೋಷಣೆ ಮಾಡಲಿ ಎಂದು ಕಾಯುತ್ತಿದ್ದಾರೆ. ಅವರು ಮಗು ಜನಿಸಿದ ಹಿನ್ನೆಲೆಯಲ್ಲಿ ಒಂದು ವರ್ಷ ಬ್ರೇಕ್ ಪಡೆದಿದ್ದಾರೆ. ಹೊಸ ಸಿನಿಮಾಗೆ ಇನ್ನೂ ಸಮಯ ಬೇಕಿದೆ. ಈ ಟೈಮಲ್ಲಿ ಅವರ ಕೊಂಕಣಿಯಲ್ಲಿ ಮಾತನಾಡಿರೋ ವೀಡಿಯೋ ವೈರಲ್ ಆಗಿದೆ. ಬಹಳ ಸುಲಲಿತವಾಗಿ ಅವರು ಕೊಂಕಣಿಯಲ್ಲಿ ಮಾತನಾಡಿದ್ದಾರೆ.

ನನಗಿಂತ ಜ್ಯೋತಿಕಾ ಸಂಭಾವನೆ ಮೂರು ಪಟ್ಟು ಹೆಚ್ಚಿತ್ತು; ನನ್ನನ್ನು ಸೂಪರ್ ಸ್ಟಾರ್ ಮಾಡಿದ್ದು ಪತ್ನಿ ಎಂದ ಸೂರ್ಯ!

ಕೊಂಕಣಿ ಭಾಷೆ ಒಂದೂರಿಂದ ಒಂದೂರಿಗೆ ವ್ಯತ್ಯಾಸವಾಗುತ್ತೆ. ದೀಪಿಕಾ ಅವರದ್ದು ಕುಂದಾಪುರ ಭಾಗದ ಪಡುಕೋಣೆಯ ಕೊಂಕಣಿ. ಇದು ಅವರ ಮಾತೃಭಾಷೆ. ಇದರಲ್ಲಿ ಅವರು ಮಾತನಾಡಿರುವ ರೀತಿ ಎಲ್ಲರಿಗೂ ಇಷ್ಟವಾಗಿದೆ. ದೀಪಿಕಾ ಮಾತೃಭಾಷೆ, ತನ್ನೂರನ್ನು ಮರೆತಿಲ್ಲ ಅಂತ ಅವರ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.

 

click me!