ಪ್ರಭಾಸ್ 'ಪ್ರಾಜೆಕ್ಟ್ ಕೆ' ಸಿನಿಮಾದಿಂದ ದೀಪಿಕಾ ಪಡುಕೋಣೆ ಲುಕ್ ಔಟ್: ಹೇಗಿದೆ?

By Shruthi Krishna  |  First Published Jul 18, 2023, 12:23 PM IST

ಪ್ರಭಾಸ್ ನಟನೆಯ ಪ್ರಾಜೆಕ್ಟ್ ಕೆ ಸಿನಿಮಾದಿಂದ ದೀಪಿಕಾ ಪಡುಕೋಣೆ ಲುಕ್ ರಿಲೀಸ್ ಆಗಿದೆ. ಗಂಭೀರ ನೋಟದ ದೀಪಿಕಾ ಮೊದಲ ನೋಟ ಅಭಿಮಾನಿಗಳ್ಲಲಿ ಕುತೂಹಲ ಹೆಚ್ಚಿಸಿದೆ. 


ಟಾಲಿವುಡ್ ಸ್ಟಾರ್ ಪ್ರಭಾಸ್ ಆದಿಪುರುಷ್ ಸೋಲಿನ ಬಳಿಕ ಮತ್ತೆ ಸಿನಿಮಾ ಶೂಟಿಂಗ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಲಾರ್ ಮತ್ತು ಪ್ರಾಜೆಕ್ಟ್ ಕೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಲಾರ್ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ ಜೊತೆಗೆ ಪ್ರಾಜೆಕ್ಟ್ ಕೆ ಶೂಟಿಂಗ್ ಕೂಡ  ನಡೆಯುತ್ತಿದೆ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ನಟನೆಯ ಎಲ್ಲಾ ಸಿನಿಮಾಗಳು ನೆಲಕಚ್ಚಿವೆ. ಹಾಗಾಗಿ ದೊಡ್ಡ ಸಕ್ಸಸ್‌ಗಾಗಿ ಪ್ರಭಾಸ್ ಕಾಯುತ್ತಿದ್ದಾರೆ. ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ಸಿನಿಮಾಗಳು ಸೋಲು ಕಂಡಿವೆ. 

ಹಾಗಾಗಿ ಪ್ರಭಾಸ್ ನಟನೆಯ ಸಲಾರ್ ಮತ್ತು ಪ್ರಾಜೆಕ್ಟ್ ಕೆ ಸಿನಿಮಾದ ಮೇಲೆ ನಿರೀಕ್ಷೆ ಜಾಸ್ತಿಯಾಗಿದೆ. ಇದೀಗ ಪ್ರಾಜೆಕ್ಟ್ ಕೆ ಸಿನಿಮಾದಿಂದ ದೀಪಿಕಾ ಪಡುಕೋಣೆ ಲುಕ್ ರಿವೀಲ್ ಮಾಡಲಾಗಿದೆ. ಗಂಭೀರ ನೋಟ ಬೀರುತ್ತಿರುವ ದೀಪಿಕಾ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಮೊದಲ ಬಾರಿಗೆ ದೀಪಿಕಾ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ. ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

Tap to resize

Latest Videos

ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅನೇಕ ವರ್ಷಗಳ ಬಳಿಕ ಸೌತ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಸೌತ್ ಸಿನಿಮಾಗಳ ಹವಾ ಜೋರಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೌತ್ ಸಿನಿಮಾಗಳು ಸದ್ದು ಮಾಡುತ್ತಿವೆ. ಈ ಸಮಯದಲ್ಲಿ ದೀಪಿಕಾ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುತ್ತಿದ್ದು ಸಾಕಷ್ಟು ನಿರೀಕ್ಷೆ ಕೂಡ ಇಟ್ಟುಕೊಂಡಿದ್ದಾರೆ. ಅಂದಹಾಗೆ ಪ್ರಾಜೆಕ್ಟ್ ಕೆ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಪ್ರಾಜೆಕ್ಟ್ ಕೆ ಎಂದರು, ಸಿನಿಮಾದ ಟೈಟಲ್ ಏನು ಎನ್ನುವ ಪ್ರಶ್ನೆಗೆ ಉತ್ತರ ಜುಲೈ 21ಕ್ಕೆ ಸಿಗಲಿದೆ.

ಪ್ರಭಾಸ್ 'ಪ್ರಾಜೆಕ್ಟ್‌ K' ಸಿನಿಮಾದಲ್ಲಿ ಕಮಲ್ ಹಾಸನ್: ಕಮಾಲ್ ಮಾಡುತ್ತಾ ಅಮಿತಾಭ್​-ಕಮಲ್ ಜೋಡಿ

‘ಪ್ರಾಜೆಕ್ಟ್​ ಕೆ’ ದೊಡ್ಡ ಬಜೆಟ್​ನಲ್ಲಿ ತಯಾರಾಗುತ್ತಿದೆ. ಈ ಚಿತ್ರಕ್ಕೆ ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ದೀಪಿಕಾ, ಪ್ರಭಾಸ್ ಜೊತೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾಣಿ ಸೇರಿದಂತೆ ಅನೇಕ ಪ್ರಮುಖ ಕಲಾವಿದರು ನಟಿಸುತ್ತಿದ್ದಾರೆ. ವೈಜಯಂತಿ ಮೂವೀಸ್​ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.

Project K: 600 ಕೋಟಿ ಬಜೆಟ್, ಪ್ರಭಾಸ್, ಅಮಿತಾಭ್, ಕಮಲ್, ದೀಪಿಕಾ ಪಡೆದ ಸಂಭಾವನೆ ಎಷ್ಟು?

ಪಠಾಣ್ ಸಕ್ಸಸ್‌ನಲ್ಲಿರುವ ದೀಪಿಕಾ ಸದ್ಯ ಶಾರುಖ್ ಜೊತೆ ಜವಾನ್ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ದೀಪಿಕಾ ಲುಕ್ ಕೂಡ ರಿವೀಲ್ ಆಗಿದೆ. ಇದರ ಜೊತೆಗೆ ಪ್ರಾಜೆಕ್ಟ್ ಕೆ ಸಿನಿಮಾ ಕೂಡ ಭಾರಿ ನಿರೀಕ್ಷೆ ಮೂಡಿಸಿದೆ. ಪ್ರಾಜೆಕ್ಟ್ ಕೆ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ದೀಪಿಕಾ. 
 

click me!