Armaan Malik ಇಬ್ಬರ ಪತ್ನಿಯರೂ ಗರ್ಭಿಣಿ, ಕಾಲೆಳೆಯುತ್ತಲೇ ಇದ್ದಾರೆ ನೆಟ್ಟಿಗರು!

By Suvarna News  |  First Published Mar 2, 2023, 9:03 AM IST

ಗಾಯಕ ಮತ್ತು ಯೂಟ್ಯೂಬರ್​ ಇಬ್ಬರ ಹೆಸರೂ ಅರ್ಮಾನ್​ ಮಲಿಕ್ ಇರುವ ಕಾರಣ, ಇಬ್ಬರ ನಡುವೆ ವಾಗ್ಯುದ್ಧ ಶುರುವಾಗಿದೆ. ಅಸಲಿಗೆ ಏನಿದು ಗಲಾಟೆ?
 


ಜಗತ್ತಿನಲ್ಲಿ ಒಂದೇ ಹೆಸರಿನವರು (same name) ಬೇಕಾದಷ್ಟು ಜನರು ಇರುತ್ತಾರೆ. ಅಷ್ಟೇ ಏಕೆ ಅಕ್ಕ ಪಕ್ಕದ ಮನೆಯಲ್ಲಿಯೇ ಒಂದೇ ರೀತಿ ಹೆಸರಿನವರು ಸಿಗುತ್ತಾರೆ. ಆದರೆ ಸೆಲೆಬ್ರಿಟಿಗಳಾದರೆ ಮಾತ್ರ ಬಹಳ ಕಷ್ಟವಾಗಿಬಿಡುತ್ತದೆ. ಅದಕ್ಕಾಗಿಯೇ ಒಂದೇ ಹೆಸರಿನವರು ತಮ್ಮ ಸರ್‌ನೇಮ್‌ಅನ್ನು ಜೊತೆಯಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ಆದರೆ ಸರ್‌ ನೇಮ್‌ ಕೂಡ ಒಂದೇ ತೆರನಾಗಿದ್ದರೆ ಮಾತ್ರ ಭಾರಿ ಫಜೀತಿ. ಇದೀಗ ಬಾಲಿವುಡ್‌ (Bollywood)ಗಾಯಕ ಮತ್ತು ಖ್ಯಾತ ಯೂಟ್ಯೂಬರ್‍ ನಡುವೆ ಒಂದೇ ಹೆಸರಿಗಾಗಿ ಜಟಾಪಟಿ ನಡೆದಿದೆ. ವಾಸ್ತವವಾಗಿ, ಇದು ಖ್ಯಾತ ಗಾಯಕ ಅರ್ಮಾನ್ ಮಲಿಕ್ (Armaan Mallik) ಮತ್ತು ಖ್ಯಾತ ಯೂಟ್ಯೂಬರ್​ ಅರ್ಮಾನ್​ ಮಲಿಕ್ ನಡುವಿನ ಜಟಾಪಟಿಯಾಗಿದೆ. ಗಾಯಕ ಅರ್ಮಾನ್​ ಅವರ ನಿಜವಾದ ಹೆಸರು ಅರ್ಮಾನ್​  ಮಲಿಕ್​. ಆದರೆ ಅವರಿಗೆ ತೊಂದರೆಯಾಗಿರುವುದು ಯೂಟ್ಯೂಬರ್​ರಿಂದ. ಅಸಲಿಗೆ ಈ ಯೂಟ್ಯೂಬರ್​ ಹೆಸರು ಸಂದೀಪ್. ಆದರೆ ಅವರು ತಮ್ಮ ಹೆಸರನ್ನು ಅರ್ಮಾನ್​ ಮಲಿಕ್​ ಎಂದು ಬದಲಾಯಿಸಿಕೊಂಡಿದ್ದಾರೆ. ಇಲ್ಲಿಂದಲೇ ಇಬ್ಬರ ನಡುವೆ ಸಮರ ಶುರುವಾಗಿದೆ.  ಯೂಟ್ಯೂಬರ್ ಸಂದೀಪ್​ (Sandeep)ಅವರು ಹೆಸರು ಬದಲಾಯಿಸಿ  ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗಾಯಕ ಅರ್ಮಾನ್ ಮಲಿಕ್ ಹೇಳಿದ್ದಾರೆ. ಈ ಕುರಿತು ಟ್ವೀಟ್​ ಕೂಡ ಮಾಡಿ ವಾಗ್ವಾದಕ್ಕೆ ಇಳಿದಿದ್ದಾರೆ.

ಯೂಟ್ಯೂಬರ್​ ಸಂದೀಪ್​  ಅಲಿಯಾಸ್​  ಅರ್ಮಾನ್​ ಮಲಿಕ್​ ವಿರುದ್ಧ  ಕೆಲವೊಂದು ಸುದ್ದಿಗಳು ದಿನನಿತ್ಯವೂ ಪತ್ರಿಕೆಗಳಲ್ಲಿ ಬರುತ್ತಿರುವ ಕಾರಣ, ಗಾಯಕ ಅರ್ಮಾನ್ ಮಲಿಕ್​ ಅವರಿಗೆ ಇದು ಸಹಿಸಲು ಆಗುತ್ತಿಲ್ಲ. ಎಲ್ಲಿಯೂ ಸಿಟ್ಟು ತೋರಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಅವರು ಟ್ವಿಟರ್​ ಮೂಲಕ ಮಾಧ್ಯಮದವರ ವಿರುದ್ಧ ಕಿಡಿ ಕಾರಿದ್ದಾರೆ.  ಮಾಧ್ಯಮದಲ್ಲಿ ಅವರನ್ನು ಅರ್ಮಾನ್ ಮಲಿಕ್ ಎಂದು ಕರೆಯುವುದನ್ನು ನಿಲ್ಲಿಸಿ. ಅವರ ನಿಜವಾದ ಹೆಸರು ಸಂದೀಪ್. ಅವರ ಜೊತೆಗೆ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ. ಬೆಳಗ್ಗೆ ಎದ್ದ ತಕ್ಷಣ ಅವರ ಲೇಖನಗಳನ್ನು ಓದಿ ಅಸಹ್ಯವೆನಿಸುತ್ತದೆ ಎಂದು ಟ್ವಿಟರ್​ನಲ್ಲಿ (Twitter) ಹೇಳಿದ್ದಾರೆ. 

Anikha Surendran: 'ಬ್ರಾ' ಬಗ್ಗೆ ಪಾಠ ಮಾಡಿದ್ದ ನಟಿಯಿಂದ ಈಗ ಲಿಪ್​ಲಾಕ್​ ಅನುಭವ

Tap to resize

Latest Videos

ಇದಕ್ಕೆ ಯೂಟ್ಯೂಬರ್​ ಅರ್ಮಾನ್​ ಅವರ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ.  ಗಾಯಕನನ್ನು ಕೆಣಕುತ್ತಾ, ಅವರು, ಜಗತ್ತಿನಲ್ಲಿ ಒಂದೇ ಹೆಸರಿನೊಂದಿಗೆ ಲಕ್ಷಾಂತರ ಜನರು ಇರುತ್ತಾರೆ. ಅದಕ್ಕೆ ನಿಮ್ಮ ಹೆಸರೇನು ಮೇಲಿನಿಂದ ಇಳಿದು ಬಂದಿರುವುದಲ್ಲ, ಯಾರು ಬೇಕಾದರೂ ಏನಾದರೂ ಹೆಸರು ಇಟ್ಟುಕೊಳ್ಳಬಹುದು ಎಂದಿದ್ದಾರೆ. ಯೂಟ್ಯೂಬರ್ ಅರ್ಮಾನ್ ಮಲಿಕ್ ಕೂಡ  ಉತ್ತರ ನೀಡಿದ್ದು, ನಾನು ಯಾರ ಹೆಸರನ್ನೂ ನಕಲು ಮಾಡಿಲ್ಲ. ಜಗತ್ತಿನಲ್ಲಿ ಒಂದೇ ಹೆಸರಿನ ಅನೇಕ ಜನರಿರಬಹುದು. ಹೆಸರಿನ ಮೇಲೆ ಯಾರಿಗೂ ಪೇಟೆಂಟ್ ಇಲ್ಲ ಎಂದಿದ್ದಾರೆ. ನೀವು ಪ್ರಸಿದ್ಧ ಕುಟುಂಬಕ್ಕೆ ಸೇರಿದವರಾಗಿರುವುದರಿಂದ ನೀವು ಪ್ರಸಿದ್ಧರಾಗಿದ್ದೀರಿ, ಆದರೆ ನಾನು ಯೂಟ್ಯೂಬರ್​ ಆಗಿ ಸ್ವಂತ ಬಲದ ಮೇಲೆ ಹೆಸರು ಮಾಡಿರುವವನು. ಅದನ್ನು ಕೇಳಲು ನೀವು ಯಾರು ಎಂದಿದ್ದಾರೆ.
 
ಅಸಲಿಗೆ ಗಾಯಕ ಅರ್ಮಾನ್​ ಮಲಿಕ್​ ಅವರಿಗೆ ಈ ಯೂಟ್ಯೂಬರ್​ ಮೇಲೆ ಕೋಪ ಬರಲು ಕಾರಣವೂ ಇದೆ. ಯೂಟ್ಯೂಬರ್​ ಅರ್ಮಾನ್​ ಮೂಲತಃ ಹಿಂದೂ ವ್ಯಕ್ತಿ. ಹೆಸರು ಸಂದೀಪ್​ ಎಂದು. ಆದರೆ ಮೊದಲ ಹೆಂಡತಿ ಇರುವಾಗಲೇ ಇನ್ನೊಂದು ಮದುವೆಯಾದರು. ಹಿಂದೂ ಸಂಪ್ರದಾಯದಲ್ಲಿ ಎರಡು ಮದುವೆಗೆ ಅವಕಾಶ ಇಲ್ಲದ ಕಾರಣ, ಇಸ್ಲಾಂಗೆ ಮತಾಂತರಗೊಂಡರು. ಈಗ ಅವರು ಕಾನೂನುಬದ್ಧವಾಗಿ  ಎರಡು ಪತ್ನಿಯನ್ನು (two wives) ಪಡೆದಂತಾಗಿದೆ. ಮೊದಲ ಪತ್ನಿಯಿಂದ ಒಂದು ಗಂಡು ಮಗುವನ್ನು ಹೊಂದಿರುವ ಅವರು, ಈಗ ಇಬ್ಬರೂ ಪತ್ನಿಯರನ್ನು ಒಟ್ಟಿಗೇ ಗರ್ಭಿಣಿ ಮಾಡಿದ್ದಾರೆ. ಇದರ ಬಗ್ಗೆ ಮಾಧ್ಯಮಗಳಲ್ಲಿ ರೋಚಕ ಸುದ್ದಿ ಬರುತ್ತಿರುವ ಕಾರಣ, ಇದನ್ನು ಗಾಯಕ ಅರ್ಮಾನ್​ ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಗಾಯಕ ಅರ್ಮಾನ್ ಮಲಿಕ್ ಅವರ ಇಬ್ಬರು ಪತ್ನಿಯರೂ  ಆಕ್ರೋಶಗೊಂಡಿದ್ದಾರೆ.  ಪಾಯಲ್ ಮತ್ತು ಕೃತಿಕಾ ಇಬ್ಬರೂ  ಆಕ್ರೋಶಗೊಂಡಿದ್ದು,  ನನ್ನ ಗಂಡನಿಗೆ ಬಾಲ್ಯದಿಂದಲೂ ಇರುವ ಹೆಸರು ಇದು. ಈಗ ನೀವು ಅದನ್ನು ತೆಗೆದುಕೊಳ್ಳಲು ಆಗುವುದಿಲ್ಲ ಎಂದಿದ್ದಾರೆ.

Urfi Javed ವಸ್ತುಗಳೆಲ್ಲಾ ಡ್ರೈವರ್​ ಕೈಯಲ್ಲಿ! ನೋವು ತೋಡಿಕೊಂಡ ನಟಿ...
 
ಅಂದಹಾಗೆ ಯೂಟ್ಯೂಬರ್​ ಅರ್ಮಾನ್ ಮಲಿಕ್ ಈ ಹಿಂದೆ ಟಿಕ್‌ಟಾಕ್‌ನಲ್ಲಿ ವೀಡಿಯೊಗಳನ್ನು ಮಾಡುತ್ತಿದ್ದರು ಎಂದು ದಯವಿಟ್ಟು ಹೇಳಿ. ಆದರೆ ಈ ಆ್ಯಪ್ ಬ್ಯಾನ್ ಆದ ಬಳಿಕ ಅವರು Instagram ನಲ್ಲಿ ಫೇಮಸ್ ಆದರು.

click me!