ಅಮ್ಮ ಆಗ್ತಿರೋ ಗುಡ್​ನ್ಯೂಸ್​ ಕೊಟ್ಟ ದೀಪಿಕಾ ಪಡುಕೋಣೆಯಿಂದ ಇದೆಂಥ ಹೇಳಿಕೆ? ಬಾಲಿವುಡ್​ನಲ್ಲಿ ಹಲ್​ಚಲ್​!

By Suchethana D  |  First Published Jul 5, 2024, 12:06 PM IST

ಬರುವ ಸೆಪ್ಟೆಂಬರ್​ನಲ್ಲಿ ಮಗುವನ್ನು ಬರಮಾಡಿಕೊಳ್ಳುವ ಖುಷಿಯಲ್ಲಿ ನಟಿ ದೀಪಿಕಾ ಪಡುಕೋಣೆ ಇದ್ದಾರೆ. ಇದರ ನಡುವೆಯೇ ಇವರ ಹೇಳಿಕೆಯೊಂದು ವೈರಲ್​ ಆಗಿದ್ದು ಫ್ಯಾನ್ಸ್​ ಶಾಕ್​ ಆಗಿದ್ದಾರೆ. ಏನದು?
 


ಪಠಾಣ್​, ಜವಾನ್​ ಬೆಡಗಿ ದೀಪಿಕಾ ಪಡುಕೋಣೆ ಅಮ್ಮ ಆಗುವ ಖುಷಿಯಲ್ಲಿದ್ದಾರೆ. ಬರುವ ಸೆಪ್ಟೆಂಬರ್​ನಲ್ಲಿ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ. ಇವರಿಗೆ ಗಂಡು ಮಗು ಆಗಲಿದೆ ಎಂದು ಜ್ಯೋತಿಷಿಗಳು ಇದಾಗಲೇ ಹೇಳಿಯಾಗಿದೆ. ಗರ್ಭಿಣಿಯಾಗಿರುವ ವಿಷಯ ತಿಳಿದ ಬಳಿಕವೂ ತಾವು ನಟಿಸುತ್ತಿದ್ದ ಎಲ್ಲಾ ಚಿತ್ರಗಳ ಶೂಟಿಂಗ್​ಗಳನ್ನೂ ಮುಗಿಸಿ ಭೇಷ್​ ಅನ್ನಿಸಿಕೊಂಡಿರೋ ದೀಪಿಕಾರ ಹಳೆಯ ವಿಡಿಯೋ ಒಂದು ವೈರಲ್​ ಆಗಿದ್ದು, ಅದೀಗ ಬಾಲಿವುಡ್​​ನ ಹಲ್​ಚಲ್​ ಸೃಷ್ಟಿಸಿದೆ, ಅಭಿಮಾನಿಗಳು ಶಾಕ್​ ಆಗಿದ್ದಾರೆ. 

ಅಷ್ಟಕ್ಕೂ ಕೆಲ ವರ್ಷಗಳ ಹಿಂದೆ ದೀಪಿಕಾ ಪಡುಕೋಣೆ ನೀಡಿದ್ದ ಸಂದರ್ಶನದಲ್ಲಿ ಅವರು, ತಾವು ಮದುವೆಯಾಗಿ, ಮಗುವಾದ ಮೇಲೆ ಚಿತ್ರರಂಗ ತೊರೆಯುವುದಾಗಿ ಹೇಳಿಕೆ ನೀಡಿದ್ದರು. ಅಂದಹಾಗೆ ರಣವೀರ್​ ಸಿಂಗ್​ ಮತ್ತು ದೀಪಿಕಾ, 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿದ್ದದಾರೆ. ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ಬಗ್ಗೆ ಮಾತನಾಡಿರಲಿಲ್ಲ. ದೀಪಿಕಾ ಅವರ ಕೈಯಲ್ಲಿ ಭರ್ಜರಿ ಆಫರ್​ ಇರುವ ಕಾರಣ, ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಅವರು ತಮ್ಮ ಕರಿಯರ್ ಮೇಲೆ ಫೋಕಸ್ ಮಾಡಿದ್ದರು.ನಟಿ ದೀಪಿಕಾ ಅವರು ಪ್ರೆಗ್ನೆನ್ಸಿ ಮುಂದೂಡಿದರೂ ಕೂಡಾ ಕೆಲವೊಂದು ಪ್ರಮುಖ ಪ್ರಾಜೆಕ್ಟ್ ಮಾಡಿ ಸೈ ಎನಿಸಿಕೊಂಡರು.  ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಮದುವೆಯಾದ ಮೇಲೆ ಚಿತ್ರರಂಗ ತೊರೆಯಲಿಲ್ಲ. ಆದರೆ ಮಗುವಾದ ಮೇಲೆ ಚಿತ್ರರಂಗ ತೊರೆಯುವುದಾಗಿ ಅವರು ಈ ಹಿಂದೆ ನೀಡಿದ್ದ ಹೇಳಿಕೆ ಈಗ ವೈರಲ್​ ಆಗುತ್ತಿದೆ.   

Tap to resize

Latest Videos

ಹೆಣ್ಣು ಮಗು ಬೇಕೋ ಗಂಡೊ ಎಂದು ಕೇಳಿದ ಪ್ರಶ್ನೆಗೆ ಲಡ್ಡು-ಪೇಡಾ ಉದಾಹರಣೆ ಕೊಟ್ಟ ರಣವೀರ್ ಸಿಂಗ್!

ಅಷ್ಟಕ್ಕೂ ಈ ಮಾತನ್ನು ದೀಪಿಕಾ  ಅವರು ರಣವೀರ್ ಸಿಂಗ್ ಜೊತೆ ಡೇಟಿಂಗ್ ಮಾಡುವಾಗ ಹೇಳಿದ್ದರು. ಸಾಂಸಾರಿಕ ಜೀವನದ ಸಂತೋಷಕ್ಕಾಗಿ ಮದುವೆಯಾಗಿ ಮಗುವಾದ ಮೇಲೆ ಚಿತ್ರರಂಗ ತೊರೆಯುತ್ತೇನೆ ಎಂದು ಹೇಳಿದ್ದರು. ಅವರು ಇದಾಗಲೇ ತಮ್ಮ ಕೈಯಲ್ಲಿ ಇರುವ ಎಲ್ಲಾ ಚಿತ್ರಗಳ ಶೂಟಿಂಗ್​ ಮುಗಿಸಿದ್ದು, ಸದ್ಯ ಯಾವುದೇ ಪ್ರಾಜೆಕ್ಟ್​ಗಳಿಗೆ ಸಹಿ ಹಾಕಿಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಗುವಾದ ಮೇಲೆ ದೀಪಿಕಾ ಚಿತ್ರರಂಗ ತೊರೆಯಲಿದ್ದಾರೆಯೇ ಎನ್ನುವ ಅನುಮಾನ ಬಂದಿದೆ. ಇದರಿಂದ ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್​ ಕೂಡ ತಲ್ಲಣಗೊಂಡಿದೆ.

ಅಷ್ಟಕ್ಕೂ ಬಾಲಿವುಡ್​ನಲ್ಲಿ ಇದಾಗಲೇ ಹಲವು ನಾಯಕಿಯರು ಅಮ್ಮನಾದ ಮೇಲೂ ನಾಯಕಿಯಾಗಿಯೇ ಮುಂದುವರೆದಿದ್ದಾರೆ. ಇತ್ತೀಚಿನ ಉದಾಹರಣೆ ನೀಡುವುದಾದರೆ ಆಲಿಯಾ ಭಟ್​. ಅವರು ಅಮ್ಮನಾದರೂ ಇಂದಿಗೂ ಅದೇ ವರ್ಚಸ್ಸು ಉಳಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ದೀಪಿಕಾ ನೀಡಿರುವ ಹೇಳಿಕೆ ಇದಾಗಿದ್ದರಿಂದ ಇದೀಗ ಅವರು ಯಾವ ರೀತಿಯಲ್ಲಿ ಮನಸ್ಸು ಬದಲಾಯಿಸುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಹೇಳಿಕೆ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಇತ್ತೀಚೆಗಷ್ಟೇ  ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ನಟಿ ನಟಿಸಿದ್ದು, ಬಾಕ್ಸ್​​ಆಫೀಸ್​ನಲ್ಲಿ ಇದು ಹಿಟ್ ಆಗಿದೆ.  ಹಾಗೆ ನೋಡಿದರೆ ದೀಪಿಕಾ ಅವರಿಗೆ ಮಕ್ಕಳ ಮೇಲೆ ತುಂಬಾ ಪ್ರೀತಿ. ಈ ಹಿಂದೆ ಸಂದರ್ಶನವೊಂದರಲ್ಲಿ  ‘ನಾನು ಮಕ್ಕಳನ್ನು ಪ್ರೀತಿಸುತ್ತೇನೆ ಮತ್ತು ಅನೇಕ ಮಕ್ಕಳನ್ನು ಹೊಂದಲು ಬಯಸುತ್ತೇನೆ’ ಎಂದು ಹೇಳಿದ್ದರು. ಇವೆಲ್ಲಾ ನೋಡಿದರೆ, ದೀಪಿಕಾ ಚಿತ್ರರಂಗ ತೊರೆಯುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. 

ಹೈ ಹೀಲ್ಸ್​, ಟೈಟ್​ ಡ್ರೆಸ್​ ಧರಿಸಿ ಬಂದ ಗರ್ಭಿಣಿ ದೀಪಿಕಾ! ಮತ್ತೊಂದು ಜೋಕರ್​ ಹುಟ್ಟಿಸ್ಬೇಡಮ್ಮಾ ಅಂದ ಫ್ಯಾನ್ಸ್​...

click me!