ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್‌ಗೆ ಇಳಿದ ಬಿಗ್ ಬಾಸ್ ಸುಂದರಿ, ಸ್ಪರ್ಧಿ ವಿಡಿಯೋಗೆ ಭರ್ಜರಿ ಕಮೆಂಟ್!

By Chethan Kumar  |  First Published Jul 4, 2024, 7:03 PM IST

ಬಿಗ್ ಬಾಸ್ ಒಟಿಟಿ 3 ಸ್ಪರ್ಧಿ ಪೌಲೊಮಿ ದಾಸ್ ಎಲಿಮಿನೇಟ್ ಆಗಿದ್ದಾರೆ. ಇದರ ನಡುವೆ ಪೌಲೊಮಿ ದಾಸ್ ಬಿಕಿನಿ ವಿಡಿಯೋಗಳು ವೈರಲ್ ಆಗಿದೆ.


ಮುಂಬೈ(ಜು.04) ಬಿಗ್‌ಬಾಸ್ ಒಟಿಟಿ 3ನೇ ಅವೃತ್ತಿಯಲ್ಲಿ ಮಿಂಚುತ್ತಿರುವ ಪೌಲೊಮಿ ದಾಸ್ ಇದೀಗ ಬಿಕಿನಿ ವಿಡಿಯೋದಿಂದ ಭಾರಿ ಸದ್ದು ಮಾಡಿದ್ದಾರೆ. ಹಿಂದಿ ಬಿಗ್‌ಬಾಸ್ ಒಟಿಟಿ 3ರಲ್ಲಿ ಪೌಲೊಮಿ ತಮ್ಮ ಬೆಂಕಿ ಬ್ಯೂಟಿ ಹಾಗೂ ಹಾಟ್ ಅವತಾರಗಳಿಂದ ಸುದ್ದಿಯಾಗಿದ್ದಾರೆ. ಇದೀಗ ಬಿಕಿನಿ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಪೌಲೊಮಿ ದಾಸ್ ಎಲಿಮಿನೇಶನ್ ಬೆನ್ನಲ್ಲೇ ಇದೀಗ ಪೌಲೊಮಿ ದಾಸ್ ವಿಡಿಯೋ ವೈರಲ್ ಆಗಿದೆ.

ಬಿಗ್ ಬಾಸ್ 3 ಸ್ಪರ್ಧಿಗಳ  ಪೈಕಿ ಪೌಲೊಮಿ ದಾಸ್ ಈಗಾಗಲೇ ಜನಪ್ರಿಯರಾಗಿದ್ದಾರೆ. ಇತರ ಸ್ಪರ್ಧಿಗಳ ಜೊತೆಗಿನ ಸ್ನೇಹ, ಪ್ರೀತಿ, ಜಗಳ, ಕಿತ್ತಾಟಗಳಲ್ಲೂ ಪೌಲೊಮಿ ದಾಸ್ ಹೆಸರು ಮುಂಚೂಣಿಯಲ್ಲಿದೆ. ಬಂಗಾಳ ಮೂಲದ ಸುಂದರಿ ಪೌಲೊಮಿ ದೊಡ್ಡ ಮನೆಯೊಳಗೆ ಆಟದ ಮೂಲಕವೂ ಗಮನಸೆಳೆದಿದ್ದಾರೆ.

Tap to resize

Latest Videos

ಬಿಕಿನಿ ಧರಿಸಿ ಕುಟುಂಬಸ್ಥರಿಂದ ದೂರವಾದೆ ಎಂದ ಮುಸ್ಲಿಂ ನಟಿ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಬಿಕಿನಿ ವಿಡಿಯೋವನ್ನು ಖುದ್ದು ಪೌಲೊಮಿ ಹಂಚಿಕೊಂಡಿದ್ದರು. ಬಿಗ್ ಬಾಸ್ ಒಟಿಟಿ 3 ವೇದಿಕೆಗೆ ಆಗಮಿಸುವ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿತ್ತು.  ನೀಲಿ ಬಣ್ಣದ ಬಿಕಿನಿಯಲ್ಲಿ ಕಂಗೊಳಿಸಿರುವ ಪೌಲೊಮಿ, ಕನ್ನಡಿ ಮುಂದ ಖುದ್ದು ದೃಶ್ಯ ಚಿತ್ರೀಕರಿಸಿದ್ದಾರೆ.

 

 

ಬಿಗ್ ಬಾಸ್ ಸ್ಪರ್ಧೆಗೆ ಆಗಮಿಸುವ ಮುನ್ನ ಶೇರ್ ಮಾಡಿದ್ದ ವಿಡಿಯೋ ಇದೀಗ ಹರಿದಾಡುತ್ತಿದೆ. ಪೌಲೊಮಿ ದಾಸ್ ಹೆಸರು ಎಲಿಮಿನೇಶನ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಪೌಲೊಮಿ ದಾಸ್ ಜೊತೆ ಶಿವಾನಿ ಕುಮಾರಿ, ನೈಯಿಝಿ, ಚಂದ್ರಿಕಾ ದೀಕ್ಷಿತ್, ಮುನೀಶ್ ಕಟ್ವಾನಿ, ವಿಶಾಲ್ ಪಾಂಡೆ ಕೂಡ ನಾಮಿನೇಟ್ ಆಗಿದ್ದರು. ಈ ಪೈಕಿ ಶಿವಾನಿ ಅತೀ ಹೆಚ್ಚು ವೋಟ್ ಪಡೆದಿರುವ ಕಾರಣ ಸೇಫ್ ಆದರೆ, ಪೌಲೊಮಿ ದಾಸ್ ಹಾಗೂ ಮುನೀಶ್ ಡೇಂಜರ್ ಜೋನ್‌ನಲಿದ್ದರು. ಇದರಲ್ಲಿ ಪೌಲೊಮಿ ಈಗಾಗಲೇ ಎಲಿಮನೇಟ್ ಆಗಿದ್ದಾರೆ. 

ನಿನಗೆ ಮುಚ್ಚಿಕೊಳ್ಳಲೂ ಬರಲ್ಲ, ತೋರಿಸಲೂ ಬರಲ್ಲ ಬಾಲಿವುಡ್ ನಟಿಗೆ ಕಮೆಂಟ್‌ ಮಾಡಿದ ಅಭಿಮಾನಿ

ಪೌಲೊಮಿ ಎಲಿಮಿನೇಶನ್ ಬಿಗ್ ಬಾಸ್ ಒಟಿಟಿ 3 ಆಟದಲ್ಲಿ ಮಹತ್ತರ ಬದಲಾವಣೆ ತರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 12 ದಿನಗಳ ಕಾಲ ಪೌಲೊಮಿ ದಾಸ್ ಬಿಸ್ ಮನೆಯಲ್ಲಿದ್ದರೂ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದೇ ವೇಳೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಇಷ್ಟೇ ಅಲ್ಲ ತಮ್ಮ ಸಂದೇಶದಲ್ಲಿ ಕೆಲವರ ಬಂಡವಾಳ ಬಯಲು ಮಾಡುವುದಾಗಿ ಸೂಚನೆ ನೀಡಿದ್ದಾರೆ.

click me!