ವಿಶ್ವ ಯೋಗದ ದಿನದ ಪ್ರಯುಕ್ತ ನಟಿ ದೀಪಿಕಾ ಪಡುಕೋಣೆ ಯೋಗಾಸನ ಮಾಡಿದ್ದು, ಅದು ಯಾವ ಭಂಗಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಕಮೆಂಟಿಗರಿಂದ ಥಹರೇವಾರಿ ಪ್ರತಿಕ್ರಿಯೆ ಬಂದಿದೆ.
ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಹಿಂದಿ ಚಿತ್ರಗಳ ಜತೆಗೆ ಸೌತ್ ಸಿನಿಮಾ ಇಂಡಸ್ಟ್ರಿಯತ್ತಲೂ ದೃಷ್ಟಿ ಹಾಯಿಸಿದ್ದಾರೆ. ಹೃತಿಕ್ ಜತೆ ಫೈಟರ್ ಮತ್ತು ಪ್ರಭಾಸ್ ಜತೆಗೆ ಇನ್ನೂ ಶೀರ್ಷಿಕೆ ಅಂತಿಮವಾಗದ ಪ್ರಾಜೆಕ್ಟ್ ಕೆ ಚಿತ್ರದ ಕೆಲಸಗಳಲ್ಲಿ ದೀಪಿಕಾ ಪಡುಕೋಣೆ ಬಿಜಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಾರೆ. ಈ ನಡುವೆ ಯೋಗ ದಿನದ ಪ್ರಯುಕ್ತ ಯೋಗ ಭಂಗಿಯ ಫೋಟೋ ಹಂಚಿಕೊಂಡಿದ್ದಾರೆ. ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ವಿಶ್ವಾದ್ಯಂತ ಆಚರಿಸಲಾಯಿತು. ಫಿಟ್ನೆಸ್ಗೆ ಮತ್ತೊಂದು ಹೆಸರೇ ಚಿತ್ರ ತಾರೆಯರು. ಅದರಲ್ಲಿಯೂ ನಟಿಯರು ವಯಸ್ಸಾಗುವುದನ್ನು ತಡೆಗಟ್ಟಲು ಯೋಗ, ಧ್ಯಾನದ ಮೊರೆ ಹೋಗುವುದು ಸಾಮಾನ್ಯ.ಅವರಲ್ಲಿ ಒಬ್ಬರು ದೀಪಿಕಾ ಪಡುಕೋಣೆ. ಹಲವರು ಸಿನಿಮಾ ಸೆಲೆಬ್ರಿಟಿಗಳು ಯೋಗ ಪೋಸ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಆಸನ ಯಾವುದೆಂದು ಗೆಸ್ ಮಾಡುವಿರಾ ಎಂದು ನೆಟ್ಟಿಗರನ್ನು ಅವರು ಪ್ರಶ್ನಿಸಿದ್ದಾರೆ!
ನಟಿ ಹೀಗೆ ಹೇಳಿದ್ದೇ ತಡ, ನೆಟ್ಟಿಗರಿಂದ ಕಮೆಂಟ್ಗಳ (Comments) ಸುರಿಮಳೆಯಾಗುತ್ತಿದೆ. ಈ ಪೋಸ್ ನೋಡಿ ಒಳ್ಳೆಯದಕ್ಕಿಂತ ಕೆಟ್ಟ ಕಾಮೆಂಟ್ ಮಾಡುತ್ತಿರುವವರೇ ಹೆಚ್ಚು. ನಟಿಯ ಈ ಫೋಟೋದ ಕಮೆಂಟ್ ಸೆಕ್ಷನ್‌ನಲ್ಲಿ ಚಿತ್ರ ವಿಚಿತ್ರ ಬರಹಗಳಿಂದ ತುಂಬಿ ಹೋಗಿದ್ದು, ಹಲವು ಮುಜುಗರಕ್ಕೀಡು ಮಾಡುವಂತಿದೆ.ಈ ಆಸನ ಯಾವುದಿರಬಹುದು ಎಂದು ನೀವು ಊಹಿಸಬಲ್ಲಿರೇ ಎಂದು ಕ್ಯಾಪ್ಷನ್ ಹಾಕಿರುವ ದೀಪಿಕಾಗೆ ಬಾಲಿವುಡ್‌ನ ಕೆಲ ಸ್ಟಾರ್ ಕಲಾವಿದರೂ ಕಮೆಂಟ್ ಮಾಡಿದ್ದಾರೆ. ಅದರಲ್ಲಿ ಗಮನ ಸೆಳೆದಿರುವುದು ನಟಿ ಆಲಿಯಾ ಭಟ್ ಕಮೆಂಟ್. ಅವರು ಈ ಯೋಗದ ಭಂಗಿಗೆ ಪಪ್ಪಿ ಪೋಸ್ ಎಂದಿದ್ದಾರೆ. ಅಸಲಿಗೆ ಇದು ಈ ಆಸನದ ಹೆಸರೇ ಆಗಿದೆ. ಆಲಿಯಾ ಸರಿಯಾಗಿ ಹೇಳಿದ್ದರೂ, ಇದಕ್ಕೆ ಕಮೆಂಟಿಗರು ಬೇರೆಯದ್ದೇ ಅರ್ಥ ಕಲ್ಪಿಸಿದ್ದಾರೆ. ಆಲಿಯಾ ಅವರ ಈ ಕಮೆಂಟ್ಗೆ ನೂರಾರು ಹಾಸ್ಯಭರಿತ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದು ನಾಯಿಯ ಪೋಸ್, ನನಗೆ ತುಂಬಾ ಇಷ್ಟ, ಆಲಿಯಾಗೂ ಇಷ್ಟ ಎನಿಸುತ್ತೆ ಎಂದು ಕೆಲವರು ನಟಿಯ ಕಾಲೆಳೆದಿದ್ದಾರೆ.
ಸೆಟ್ಟಲ್ಲೇ ರಣವೀರ್ ತೊಡೆಯೇರಿ ಲವ್ ಶುರು ಹಚ್ಕೊಂಡಿದ್ದ ದೀಪಿಕಾ- ಗುಟ್ಟು ಈಗ ಬಯಲು!
ನಟಿ ದೀಪಿಕಾಗೆ ನೆಗೆಟಿವ್ ಕಮೆಂಟ್ ಬರುವುದು, ಆಕೆ ಟ್ರೋಲ್ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ವಿಚಾರಕ್ಕೆ ನೆಟ್ಟಿಗರು ಇವರ ಕಾಲೆಳೆದಿದ್ದರು. ಇದೀಗ ಯೋಗ ಭಂಗಿಯ ಫೋಟೋಗೂ ಪಾಸಿಟಿವ್‌ಕ್ಕಿಂತ ನೆಗೆಟಿವ್ ಆಗಿಯೇ ದೀಪಿಕಾ ಅವರನ್ನು ನೆಟ್ಟಿಗರು ಮತ್ತೆ ಟ್ರೋಲ್ (Troll) ಮಾಡಿದ್ದಾರೆ. ಅದೇ ರೀತಿ ಯೋಗದ ಬಗ್ಗೆ ಅರಿವಿರುವವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ಕಷ್ಟದ ಆಸನ ಎಂದೂ ಹಲವರು ಹೇಳಿದ್ದಾರೆ.
12 ಲಕ್ಷಕ್ಕೂ ಅಧಿಕ ಜನರು ಇದನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ದೀಪಿಕಾ, ತಮ್ಮ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಅಂದಹಾಗೆ ದೀಪಿಕಾ ಮಾಡಿರುವ ಈ ಆಸನದ ಹೆಸರು ಏನು ಗೊತ್ತಾ? ಈ ಯೋಗ ಭಂಗಿಯ ಹೆಸರು ಉತ್ತನ ಶಿಶು ಆಸನ (Uttana Shishosana) ಇದಕ್ಕೆ ಪಪ್ಪಿ ಪೋಸ್ ಎಂದೂ ಕರೆಯುತ್ತಾರೆ. ನಟಿಯ ಫೋಟೋಕ್ಕೆ ಕೆಲವರು ಇದು ಪಪ್ಪಿ ಪೋಸ್ ಎಂದರೆ, ಇನ್ನು ಕೆಲವರು ಗೋವಾ ಟ್ರಿಪ್‌ಗೆ ಹೋಗುವಾಗ ಅಪ್ಪನ ಒಪ್ಪಿಗೆ ಪಡೆಯಲು ಈ ರೀತಿ ಮಾಡಿದ್ದಿದೆ ಎಂದಿದ್ದಾರೆ, ಇದು ಡಾಗಿ ಪೋಸ್ ಎಂದೂ ಕಮೆಂಟ್ ಮಾಡಿದ್ದಾರೆ. ‘ಮಂಚದ ಕೆಳಗೆ ಚಪ್ಪಲಿ ಕಳೆದುಹೋದಾಗ ಮಾಡುವ ಆಸನ’ ಎಂದು ಆರ್ಜೆ ಅಭಿನವ್ ಅವರು ಕಮೆಂಟ್ ಮಾಡಿದ್ದಾರೆ.
ರಣಬೀರ್, ದೀಪಿಕಾ ಮತ್ತೆ ಜೊತೆಯಾಗಿ ನಟಿಸ್ತಾರಾ? 'ಯೇ ಜವಾನಿ ಹೈ ದಿವಾನಿ' ಪಾರ್ಟ್ 2 ತೆರೆಗೆ?
ಸದ್ಯ ಪಠಾಣ್ ಯಶಸ್ಸಿನ ಗುಂಗಿನಲ್ಲಿರುವ ನಟಿ ದೀಪಿಕಾ ಕೈಯಲ್ಲಿ ಹಲವು ಇಂಟರೆಸ್ಟಿಂಗ್ ಸಿನಿಮಾಗಳು ಇವೆ. ಪ್ರಭಾಸ್ (Prabhas) ಜೊತೆ ಅವರು ‘ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ‘ಪಠಾಣ್’ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಫೈಟರ್’ ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ.