
ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ (Deepika Padukone) ಅಮ್ಮನಾದ್ಮೇಲೆ ಸಾಕಷ್ಟು ಬದಲಾಗಿದ್ದಾರೆ, ಸಿನಿಮಾ ಒಪ್ಪಿಕೊಳ್ಳುವ ಮೊದಲು ಒಂದಿಷ್ಟು ರೂಲ್ಸ್ ಹಾಕಿದ್ದಾರೆ ಅಂದೆಲ್ಲ ಸುದ್ದಿ ಆಗಿತ್ತು. ದೀಪಿಕಾ ದಿನದಲ್ಲಿ 8 ಗಂಟೆ ಮಾತ್ರ ಕೆಲ್ಸ ಮಾಡ್ತೇನೆ ಎಂದಿದ್ರು. ಇದೇ ಕಾರಣಕ್ಕೆ ದೀಪಿಕಾ ಪಡುಕೋಣೆಯನ್ನು ದಕ್ಷಿಣ ಭಾರತದ ಎರಡು ಸಿನಿಮಾಗಳಿಂದ ಕೈಬಿಡಲಾಗಿದೆ. ಸಂದೀಪ್ ವಂಗಾ ರೆಡ್ಡಿ ಅವರ ಸ್ಪಿರಿಟ್ ಮತ್ತು ಪ್ರಭಾಸ್ ಅವರ ಕಲ್ಕಿ 2898 AD ಸಿನಿಮಾ ದೀಪಿಕಾ ಕೈ ಬಿಟ್ಟು ಹೋಗಿದೆ. ಎಂಟು ಗಂಟೆ ಮಾತ್ರ ಕೆಲ್ಸ ಮಾಡ್ತೇನೆ ಎಂದಿದ್ದ ದೀಪಿಕಾ ಈಗ ತಮ್ಮ ಈ ಹೇಳಿಕೆ ಬಗ್ಗೆ ಮೌನ ಮುರಿದಿದ್ದಾರೆ. ಕೆಲ್ಸಕ್ಕೆ ಸಮಯ ನಿಗದಿಪಡಿಸಲು ಕಾರಣ ಏನು ಅನ್ನೋದನ್ನು ದೀಪಿಕಾ ಬಿಚ್ಚಿಟ್ಟಿದ್ದಾರೆ.
ದೀಪಿಕಾ ಪಡುಕೋಣೆ ಈ ಕೆಲ್ಸದ ಪಾಳಿ ವಿಷ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅನೇಕರು ಅವರನ್ನು ವೃತ್ತಿಪರರಲ್ಲ ಎಂದಿದ್ದರು. ಟ್ರೋಲ್ ಆಗಿದ್ದ ದೀಪಿಕಾ ಅನೇಕ ದಿನಗಳ ನಂತ್ರ ಈ ಬಗ್ಗೆ ಮಾತನಾಡಿದ್ದಾರೆ. ಸಿಎನ್ಬಿಸಿ ಟಿವಿ18 ಜೊತೆ ಮಾತನಾಡಿದ ದೀಪಿಕಾ ಪಡುಕೋಣೆ, ಬಾಲಿವುಡ್ನಲ್ಲಿ ಪ್ರಚಲಿತದಲ್ಲಿರುವ ಡಬಲ್ ಸ್ಟಾಂಡರ್ಡ್ ಆಲೋಚನೆಯನ್ನು ಟೀಕಿಸಿದ್ದಾರೆ. ಒಬ್ಬ ಮಹಿಳೆಯಾಗಿ ಅದು ಒತ್ತಡದಂತೆ ಭಾಸವಾಗಿದ್ದರೆ, ಹಾಗೆಯೇ ಇರಲಿ. ಭಾರತೀಯ ಚಲನಚಿತ್ರೋದ್ಯಮದಲ್ಲಿ ಅನೇಕ ಸೂಪರ್ಸ್ಟಾರ್ಗಳು, ಪುರುಷ ಸೂಪರ್ಸ್ಟಾರ್ಗಳು ವರ್ಷಗಳಿಂದ ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಅದು ಎಂದಿಗೂ ಸುದ್ದಿಯಾಗಿಲ್ಲ. ನಾನು ಯಾರ ಹೆಸರನ್ನೂ ಈಗ ಹೇಳೋದಿಲ್ಲ. ಆದ್ರೆ ಇದು ಸತ್ಯ. ಅನೇಕ ಪುರುಷ ನಟರು ಸೋಮವಾರದಿಂದ ಶುಕ್ರವಾರದವರೆಗೆ 8 ಗಂಟೆ ಮಾತ್ರ ಕೆಲಸ ಮಾಡ್ತಾರೆ. ವೀಕೆಂಡ್ ನಲ್ಲಿ ರಜೆ ಪಡೀತಾರೆ. ಇಂಡಿಯಾ ಫಿಲ್ಮ್ ಇಂಡಸ್ಟ್ರಿಯನ್ನು ಇಂಡಸ್ಟ್ರಿ ಅಂತ ಕರೆಯಲಾಗುತ್ತೆ. ಆದ್ರೆ ಅಲ್ಲಿ ಎಂದೂ ಆ ರೀತಿ ಕೆಲ್ಸವಾಗಿಲ್ಲ. ಇದು ತುಂಬಾ ಅಸ್ತವ್ಯಸ್ತವಾಗಿರುವ ಉದ್ಯಮ. ಇದನ್ನು ಸರಿದಾರಿಗೆ ತರುವ ಸಮಯ ಬಂದಿದೆ ಅಂತ ದೀಪಿಕಾ ಪಡುಕೋಣೆ ಹೇಳಿದ್ದಾರೆ. ಮಾತು ಮುಂದುವರೆಸಿದ ದೀಪಿಕಾ, ಇಂಡಸ್ಟ್ರಿಯಲ್ಲಿ ಈಗಾಗಲೇ ಅಮ್ಮನಾಗಿರುವ ಅನೇಕರು ಎಂಟು ಗಂಟೆ ಕೆಲ್ಸ ಮಾಡ್ತಾರೆ. ನನ್ನ ವಿಷ್ಯ ಮಾತ್ರ ಯಾಕೆ ವಿವಾದವಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಕರ್ವಾ ಚೌತ್ ದಿನ ಹಾರ್ದಿಕ್ ಪಾಂಡ್ಯ ಜೊತೆ ಕಾಣಿಸಿಕೊಂಡ ಹೊಸ ಗರ್ಲ್ ಫ್ರೆಂಡ್ ಯಾರು?
ಹಲವು ಹಂತಗಳಲ್ಲಿ ದೀಪಿಕಾ ಇಂಥ ಸಮಸ್ಯೆಗಳನ್ನು ಎದುರಿಸಿದ್ದಾರಂತೆ. ಕೆಲ್ಸಕ್ಕೆ ಹಣ ಪಡೆಯುವ ಸಮಯದಲ್ಲೂ ನನಗೆ ಸಿಕ್ಕಿದ್ದನ್ನು ನಿಭಾಯಿಸಿದ್ದೇನೆ ಆದ್ರೆ ನನ್ನ ಹೋರಾಟವನ್ನು ನಾನು ಸದ್ದಿಲ್ಲದೆ ಮಾಡ್ತೆನೆ. ಕೆಲವೊಮ್ಮೆ ಅದು ಎಲ್ಲರಿಗೂ ತಿಳಿಯುತ್ತದೆ. ಘನತೆಯಿಂದ ಹಾಗೂ ಸದ್ದಿಲ್ಲದೆ ಹೋರಾಟ ಮಾಡುವುದು ನನ್ನ ಶೈಲಿ ಎಂದು ದೀಪಿಕಾ ಹೇಳಿದ್ದಾರೆ.
ಓಜಿ ಸಿನಿಮಾ ಪ್ರಿಯರಿಗೆ ಬ್ಯಾಡ್ ನ್ಯೂಸ್.. ಪವನ್ ಕಲ್ಯಾಣ್ ಮುಂದಿನ ಚಿತ್ರ ಇದೇ!
ದೀಪಿಕಾ ಪಡುಕೋಣೆ ಅಮ್ಮನಾದ್ಮೇಲೆ ಕೆಲ್ಸಕ್ಕೆ ಬ್ರೇಕ್ ಪಡೆದಿದ್ದರು. ನಂತ್ರ ಅವರಿಗೆ ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಸಿನಿಮಾಕ್ಕೆ ಆಫರ್ ಬಂದಿತ್ತು. ಆದ್ರೆ ಸಿನಿಮಾಕ್ಕೆ ದೀಪಿಕಾ ಆಯ್ಕೆ ಆಗ್ಲಿಲ್ಲ. ಅವರು ಎಂಟು ಗಂಟೆ ಕೆಲ್ಸದ ಡಿಮ್ಯಾಂಡ್ ಇಟ್ಟಿದ್ರಿಂದ ಸಿನಿಮಾ ಕೈತಪ್ಪಿ ಹೋಯ್ತು ಎನ್ನುವ ಸುದ್ದಿ ಬಹಿರಂಗವಾಗಿತ್ತು. ಎರಡು ಸಿನಿಮಾ ಕೈ ತಪ್ಪಿದ್ರೂ ದೀಪಿಕಾ ಕೈನಲ್ಲಿ ಮತ್ತೆರಡು ದೊಡ್ಡ ಸಿನಿಮಾಗಳಿವೆ. ದೀಪಿಕಾ, ಕಿಂಗ್ ಸಿನಿಮಾ ಹಾಗೂ ಅರ್ಜುನ್-ಅಟ್ಲೀ ಅವರ ಹೆಸರಿಡದ ಸಿನಿಮಾದ ಭಾಗವಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.