ನಿಮ್ಮ ಹೆಸರು ಉಳಿಸುವ ಕೆಲಸ ಮಾಡ್ತೇನೆ... ಸುದೀಪ್‌ ಸಿಲ್ಕಿ ಹೇರ್‌ ಮೇಲೆ ಪ್ರೀತಿ ತೋರಿಸಿ ಅಪ್ಪನಿಗೆ ಸಾನ್ವಿ ಬರ್ತ್‌ ಡೇ ವಿಶ್‌

By Roopa Hegde  |  First Published Sep 2, 2024, 10:18 AM IST

ಅಭಿನಯ ಚಕ್ರವರ್ತಿ ಸುದೀಪ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ್ದಾರೆ. ಮಗಳು ಸಾನ್ವಿ ಸುದೀಪ್ ಅವರು ತಮ್ಮ ತಂದೆಗೆ ಸಾಮಾಜಿಕ ಮಾಧ್ಯಮದ ಮೂಲಕ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.


ಸ್ಯಾಂಡಲ್ವುಡ್ ಕಿಚ್ಚ ಸುದೀಪ್ (Sandalwood Kitcha Sudeep) ಗೆ ಇಂದು ಹುಟ್ಟುಹಬ್ಬದ ಸಂಭ್ರಮ (Birthday Celebration). ಸುದೀಪ್ ಅಭಿಮಾನಿಗಳಲ್ಲಿ ವಿಶೇಷ ಸಡಗರ. ರಾತ್ರಿಪೂರ್ತಿ ಸುದೀಪ್ ಹುಟ್ಟುಹಬ್ಬವನ್ನು ಅವರು ಆಚರಿಸಿದ್ದಾರೆ. ಈ ಮಧ್ಯೆ ಅಭಿನಯ ಚಕ್ರವರ್ತಿ (Abhinaya Chakraborty) ಯ ಮನೆಯಲ್ಲೂ ಬರ್ತ್ ಡೇ ಸಡಗರ ಡಬಲ್ ಆಗಿದೆ. ಅಭಿಮಾನಿಗಳ ಆರಾಧ್ಯ ದೈವ ಸುದೀಪ್  ಮುದ್ದಾದ, ಒಬ್ಬಳೇ ಮಗಳು ಸಾನ್ವಿ ಸುದೀಪ್ (Sanvi Sudeep) ಅಪ್ಪನಿಗೆ ವಿಶೇಷವಾಗಿ ಬರ್ತ್ ಡೇ ವಿಶ್ ಮಾಡಿದ್ದಾರೆ. ರಾತ್ರಿ ಸೆಲೆಬ್ರೇಷನ್ ನಲ್ಲಿದ್ದ ಸಾನ್ವಿ ಸುದೀಪ್, ಇನ್ಸ್ಟಾಗ್ರಾಮ್ ನಲ್ಲಿ ಅಪ್ಪನ ಜೊತೆ ಕಳೆದ ವಿಡಿಯೋ ಒಂದನ್ನು ಹಂಚಿಕೊಂಡು, ಹುಟ್ಟುಹಬ್ಬದ ಶುಭಕೋರಿದ್ದಾರೆ. 

ವಿಡಿಯೋದಲ್ಲಿ, ನಿಮ್ಮ ಸಿಲ್ಕಿ ಹೇರ್ (Silky Hair) ನನಗೆ ಕೊಡಿ ಎಂಬ ಶೀರ್ಷಿಕೆಯನ್ನು ನೀವು ನೋಡ್ಬಹುದು. ಅಪ್ಪ ಹಾಗೂ ಮಗಳ ಮುದ್ದಾದ ಕೆಲ ವಿಡಿಯೋ ತುಣುಕುಗಳನ್ನು ಇಲ್ಲಿ ಕೊಲಾಜ್ ಮಾಡಲಾಗಿದೆ. ವಿಡಿಯೋ ಜೊತೆ ಅಪ್ಪನ ಮೇಲೆ ತಮಗಿರುವ ಪ್ರೀತಿ ಮತ್ತು ಅಭಿಮಾನವನ್ನು ಅಕ್ಷರದಲ್ಲಿ ಪೊಣಿಸುವ ಪ್ರಯತ್ನವನ್ನು ಸಾನ್ವಿ ಸುದೀಪ್ ಮಾಡಿದ್ದಾರೆ.

Tap to resize

Latest Videos

Happy Birthday Kichcha Sudeep: ಎಷ್ಟೇ ದೊಡ್ಡ ನಟನಾದರೂ ಸಿನಿಮಾ ಮಾಡುತ್ತಿರಲೇಬೇಕು!

 ಸೋಶಿಯಲ್ ಮೀಡಿಯಾ (Social Media) ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಜೊತೆ ದೊಡ್ಡ ಪೋಸ್ಟ್ ಹಾಕಿರುವ ಅವರು, ಜನ್ಮದಿನದ ಶುಭಾಶಯಗಳು ಅಪ್ಪಾ ಎನ್ನುತ್ತಲೇ ತಮ್ಮ ಪೋಸ್ಟ್ ಶುರು ಮಾಡಿದ್ದಾರೆ. ಅಪ್ಪನ ಮೇಲೆ ಅಪಾರ ಪ್ರೀತಿ, ವಿಶ್ವಾಸ, ಗೌರವವನ್ನು ಹೊಂದಿರುವ ಸಾನ್ವಿ ಸುದೀಪ್, ನನ್ನ ಜೀವನದಲ್ಲಿ ನಗಿಸುವ ಕೆಲವೇ ಜನರಲ್ಲಿ ನೀವು ಒಬ್ಬರಾಗಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ. ಕರೋಕೆ ಪಾರ್ಟಿ ಬಗ್ಗೆ ಬರೆದಿರುವ ಸಾನ್ವಿ, ನಿಮ್ಮ ಜೊತೆ ಕರೋಕೆ ಪಾರ್ಟಿಯನ್ನು ಎಂಜಾಯ್ ಮಾಡ್ತೇನೆ. ಅಮ್ಮ ಬಂದು ಸೌಂಡ್ ಕಡಿಮೆ ಮಾಡು ಎನ್ನುವವರೆಗೂ ಪಾರ್ಟಿ ನಡೆಯುತ್ತದೆ ಎನ್ನುತ್ತ ನಗುವ ಎಮೋಜಿ ಹಾಕಿದ್ದಾರೆ.

ಸುದೀಪ್ ಕೆಲಸವನ್ನು ಗೌರವಿಸುವ ಸಾನ್ವಿ, ನಿಮ್ಮ ಎಲ್ಲಾ ಶ್ರಮದಿಂದ ನನಗೆ ಮಾರ್ಗವೊಂದು ಸಿಕ್ಕಿದೆ, ಅದಕ್ಕೆ ಧನ್ಯವಾದಗಳು ಎಂದಿದ್ದಾರೆ.  ಬಹುಭಾಷಾ ನಟ ಸುದೀಪ್ ಎಲ್ಲರಿಗೂ ಮಾದರಿ. ಅವರ ಮಾತು, ನಡತೆಯನ್ನು ಅಭಿಮಾನಿಗಳು ಫಾಲೋ ಮಾಡಲು ಬಯಸ್ತಾರೆ. ಇನ್ನು ಅವರ ಮಗಳನ್ನು ಕೇಳ್ಬೇಕಾ?. ಸಾನ್ವಿ ಕೂಡ ಅಪ್ಪನ ಹಾದಿಯಲ್ಲಿ ನಡೆಯಲು ಬಯಸ್ತಾರೆ. ಹಾಗಾಗಿಯೇ, ನೀವು ಗಳಿಸಿದ ಹೆಸರಿಗೆ ಒಂದಲ್ಲ ಒಂದು ದಿನ ನಾನು ನ್ಯಾಯ ಕೊಡಬಲ್ಲೆ ಎಂದು ಆಶಿಸುತ್ತೇನೆ ಎನ್ನುತ್ತ ಅಪ್ಪನಿಗೆ ಮಗಳು ಭರವಸೆ ನೀಡಿದ್ದಾರೆ. 

ಇಷ್ಟೇ ಅಲ್ಲ, ಪೋಸ್ಟ್ ಮುಂದುವರೆಸಿದ ಅವರು, ನಾನು ನಿಮ್ಮನ್ನು ದೊಡ್ಡ ಪರದೆಯ ಮೇಲೆ ನೋಡಿದಾಗಲೆಲ್ಲಾ ಕಣ್ಣೀರು ಹಾಕುತ್ತೇನೆ ಎನ್ನುವ ಮೂಲಕ ಅಪ್ಪನ ಮೇಲಿರುವ ಅಭಿಮಾನವನ್ನು ಬಿಚ್ಚಿಟ್ಟಿದ್ದಾರೆ. ನಾವಿಬ್ಬರೂ ವಯಸ್ಕರಾಗಿದ್ದರೂ, ನಾನು ಯಾವಾಗಲೂ ನಿಮ್ಮ ಚಿಕ್ಕ ಹುಡುಗಿಯಾಗಿರುತ್ತೇನೆ ಎಂದು ಭಾವುಕರಾದ ಸಾನ್ವಿ ಸುದೀಪ್, ನನಗೆ ನೆನಪಿರುವಾಗಿನಿಂದ ನಾನು ಪ್ರತಿ ವರ್ಷ ಹೇಳುವಂತೆ, ನಾನು ಯಾವಾಗಲೂ ನಿಮ್ಮ ದೊಡ್ಡ ಅಭಿಮಾನಿಯಾಗಿರುತ್ತೇನೆ. ಅದನ್ನು ಎಂದಿಗೂ ಬದಲಾಯಿಸುವುದಿಲ್ಲ ಎಂದಿದ್ದಾನೆ.  ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಅಪ್ಪನಿಗೆ ಸ್ಪೇಷಲ್ ಆಗಿ ಹುಟ್ಟುಹಬ್ಬದ ಶುಭಕೋರಿದ್ದಾರೆ ಸಾನ್ವಿ ಸುದೀಪ್. ಅಲ್ಲದೆ ನಿಮ್ಮ ಸಿಲ್ಕ್ ಕೂದಲನ್ನು ನನಗೆ ಕೊಡಿ ಪ್ಲೀಸ್ ಎಂದಿದ್ದಾರೆ ಸಾನ್ವಿ.

ತರುಣ್- ಸೋನಲ್ ಚರ್ಚ್ ವೆಡ್ಡಿಂಗ್ ಫೋಟೋ ವೈರಲ್; ಮಂಗಳೂರಿಗೆ ಕಾಲಿಡುತ್ತಿದ್ದಂತೆ ಹೇರ್‌ಸ್ಟೈಲ್‌ ಬದಲಾಯಿಸಿದ ನಿರ್ದೇಶಕ!

ಸಾನ್ವಿ ಪೋಸ್ಟ್ ಗೆ ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ. ನೆಚ್ಚಿನ ಬಹುಭಾಷಾ ನಟನಿಗೆ ಅಭಿಮಾನಿಗಳು ಹುಟ್ಟುಹಬ್ಬದ ಶುಭಕೋರಿದ್ದಾರೆ. ಅಲ್ಲದೆ ಅಪ್ಪ – ಮಗಳು ಸದಾ ಖುಷಿಯಾಗಿರಿ ಎಂದು ಹಾರೈಸಿದ್ದಾರೆ. ಅಭಿಮಾನಿಗಳ ಆರಾಧ್ಯ ಕಿಚ್ಚ ಸುದೀಪ್ ಮಗಳ ವಿಡಿಯೋ ಅಭಿಮಾನಿಗಳಿಗೆ ಇಷ್ಟವಾಗಿದೆ. ಮಗಳ ಜೊತೆ ಸ್ನ್ಯಾಪ್ ವಿಡಿಯೋಕ್ಕೆ ಫೋಸ್ ಕೊಟ್ಟು, ಸುದೀಪ್ ತಮಾಷೆಯಾಗಿರೋದನ್ನು ನೋಡಿದ ಅಭಿಮಾನಿಗಳು ಸೂಪರ್ ಕ್ಯೂಟ್ (Super Cute) ಅಂತ ಕಮೆಂಟ್ ಹಾಕಿದ್ದಾರೆ. 

click me!