ನನ್ನ ಮೇಲೆ ಗ್ಯಾಂಗ್‌ ರೇಪ್ ಯತ್ನ ನಡೆದಿತ್ತು: ಕೇರಳ ನಟಿ ಚರ್ಮಿಳಾ ಗಂಭೀರ ಆರೋಪ

By Kannadaprabha News  |  First Published Sep 2, 2024, 8:05 AM IST

ಮಲಯಾಳಂ ಚಿತ್ರರಂಗದಲ್ಲಿ ರೇಪ್, ಸಲಿಂಗಕಾಮದ ಬಳಿಕ ಇದೀಗ ಗ್ಯಾಂಗ್‌ರೇಪ್ ಯತ್ನದ ಸ್ಪೋಟಕ ಆರೋಪ ಕೇಳಿಬಂದಿದೆ. 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟಿ ಚರ್ಮಿಳಾ, 1997ರಲ್ಲಿ ತಮ್ಮ ಮೇಲೆ ಗ್ಯಾಂಗ್‌ರೇಪ್‌ ಯತ್ನ ನಡೆದಿತ್ತು ಎಂಬ ಗಂಭೀರ ಆರೋಪ ಮಾಡಿದ್ದಾರೆ.


ಚೆನ್ನೈ/ಕೊಚ್ಚಿ (ಸೆ.02): ಮಲಯಾಳಂ ಚಿತ್ರರಂಗದಲ್ಲಿ ರೇಪ್, ಸಲಿಂಗಕಾಮದ ಬಳಿಕ ಇದೀಗ ಗ್ಯಾಂಗ್‌ರೇಪ್ ಯತ್ನದ ಸ್ಪೋಟಕ ಆರೋಪ ಕೇಳಿಬಂದಿದೆ. 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟಿ ಚರ್ಮಿಳಾ, 1997ರಲ್ಲಿ ತಮ್ಮ ಮೇಲೆ ಗ್ಯಾಂಗ್‌ರೇಪ್‌ ಯತ್ನ ನಡೆದಿತ್ತು ಎಂಬ ಗಂಭೀರ ಆರೋಪ ಮಾಡಿದ್ದಾರೆ. ನಿರ್ಮಾಪಕ ಎಂ.ಪಿ.ಮೋಹನನ್ ಮತ್ತು ಅವರ ಚೇಲಾಗಳು ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು. ಅದೇ ರೀತಿ ನಿರ್ದೇಶಕ ಹರಿಹರನ್ ಅವರು 'ಹೊಂದಾಣಿಕೆಗೆ ಸಿದ್ಧ ಇದ್ದೀಯಾ?' ಎಂದು ನನ್ನನ್ನು ಕೇಳಿದ್ದರು ಎಂದು ಚರ್ಮಿಳಾ ಆರೋಪಿಸಿದ್ದಾರೆ. 

ಭಾನುವಾರ ಇಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಚರ್ಮಿಳಾ, 1997ರಲ್ಲಿ 'ಅರ್ಜುನನ್‌ ಪಿಳ್ಳೆಯುಂ ಅಂಜುಮಕ್ಕಳುಂ' ಚಿತ್ರೀಕರಣದ ವೇಳೆ ನಿರ್ಮಾಪಕ ಎಂ.ಪಿ. ಮೋಹನನ್, ಪ್ರೊಡಕ್ಷನ್ ಮ್ಯಾನೇಜರ್ ಷಣ್ಮುಖನ್ ಮತ್ತು ಅವರ ಸ್ನೇಹಿತರು ನಾನಿದ್ದ ಹೋಟೆಲ್ ರೂಂಗೆ ಬಂದರು. ಅಲ್ಲಿ ಅವರು ಮೇಲೆ ನನ್ನ ಗ್ಯಾಂಗ್‌ರೇಪ್‌ಗೆ ಯತ್ನಿಸಿದಾಗ ನಾನು ಅದ್ದೇಗೋ ಹೊರಬಂದು ಆಟೋ ಹತ್ತಿ ಪರಾರಿ ಆದೆ. ಆದರೆ ನನ್ನ ಆಪ್ತನ ಮೇಲೆ ಹಲ್ಲೆ ನಡೆಸಿದರು ಹಾಗೂ ಚಿತ್ರದ ಕೆಲವು ಇತರ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರ ಎಸಗಿದರು' ಎಂದು ವಿವರಿಸಿದರು. 

Tap to resize

Latest Videos

ಇನ್ನು ನಿರ್ದೇಶಕ ಹರಿಹರನ್ ಅವರು 'ಪರಿಣಯಂ' ಚಿತ್ರಕ್ಕೆ ನನಗೆ ಆಫರ್ ನೀಡಿ 'ಹೊಂದಾಣಿಕೆ'ಗೆ (ಲೈಂಗಿಕತೆಗೆ ಸೌಮ್ಯಕ್ತಿ) ಸಿದ್ಧಳೇ' ಎಂದು ಕೇಳಿದರು. ನನ್ನ ಸ್ನೇಹಿತ, ನಟ ವಿಷ್ಣುಗೆ 'ಚರ್ಮಿಳಾ ಅಡ್ಡಸ್ಟ್‌ಮೆಂಟ್‌ಗೆ ರೆಡೀನಾ?' ಎಂದು ಪ್ರಶ್ನಿಸಿದರು. ನಾನು 'ಸಿದ್ಧಳಿಲ್ಲ' ಎಂದೆ. ಕೂಡಲೇ ನನ್ನನ್ನು ಹಾಗೂ ವಿಷ್ಣುವನ್ನು ಚಿತ್ರತಂಡದಿಂದ ಹೊರಹಾಕಿದರು' ಎಂದರು. ಈ ನಡುವೆ ನಟ ವಿಷ್ಣು ಪ್ರತಿಕ್ರಿಯಿಸಿ, 'ಚರ್ಮಿಳಾಗೆ ವಿಷ್ಣು ಅಡ್ಡಸ್ಟ್ ಮಾಡಿಕೋ ಎಂದಿದ್ದು ನಿಜ' ಎಂದಿದ್ದಾರೆ.

ಕೋವಿಡ್‌ ವೇಳೆ ಕಾನೂನುಬಾಹಿರ ಕೆಲಸ ಮಾಡಿಲ್ಲ, ಇದು ದರೋಡೆಕೋರರ ಸರ್ಕಾರ: ಸಂಸದ ಸುಧಾಕರ್‌

ಕನ್ನಡ ಸಿನಿಮಾದಲ್ಲೂ ನಟಿಸಿರುವ ಚರ್ಮಿಳಾ: ಬಹುಭಾಷಾ ನಟಿ ಚರ್ಮಿಳಾ ಕನ್ನಡದಲ್ಲೂ ನಟಿಸಿದ್ದಾರೆ. 2010ರಲ್ಲಿ ಬಂದ 'ಚಂದುಳ್ಳಿ ಚೆಲುವೆ' ಎಂಬ ಚಿತ್ರದಲ್ಲಿ ಈಕೆ ನಟಿಸಿದ್ದರು. ಶಾಮ್ ಅವರು ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದರು.

click me!