ಹೋಟೆಲ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ನಟಿ Urfi Jadav ವಿಡಿಯೋ ವೈರಲ್!

Suvarna News   | Asianet News
Published : Jan 31, 2022, 01:46 PM IST
ಹೋಟೆಲ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ನಟಿ Urfi Jadav ವಿಡಿಯೋ ವೈರಲ್!

ಸಾರಾಂಶ

ರಾಖಿ ಸಾವಂತ್ ಬಿಟ್ಟರೆ, ನೆಕ್ಸ್ಟ್ ನೀನೇ ದೊಡ್ಡ ಡ್ರಾಮಾ ಕ್ವೀನ್ ಎಂದು ಉರ್ಫಿ ಕಾಲೆಳೆದ ನೆಟ್ಟಿಗರು. 

ಹಿಂದಿ ಬಿಗ್ ಬಾಸ್ ಓಟಿಟಿ (Bigg Boss OTT) ಸೀಸನ್ 1ನಲ್ಲಿ ಕಾಣಿಸಿಕೊಂಡ ನಂತರ ಕಿರುತೆರೆ ನಟಿ ಉರ್ಫಿ ಜಾದವ್ (Urfi Jadav) ಹಣೆ ಬರಹ ಬದಲಾಗಿದೆ. ಡ್ಯಾಮೇಜಿಂಗ್ ಹೇಳಿಕೆ ಅಥವಾ ವಿಚಿತ್ರವಾಗಿರುವ ಉಡುಪುಗಳನ್ನು ಧರಿಸಿ ಟ್ರೆಂಡ್ ಅಗುವ ಉರ್ಫಿ ಇದೀಗ ಹೊಸ ಡ್ರಾಮಾ ಶುರು ಮಾಡಿಕೊಂಡಿದ್ದಾರೆ. ಸದಾ ಕ್ಯಾಮೆರಾ ನನ್ನನ್ನೇ ನೋಡಬೇಕು, ನಾನೇ ಹೆಡ್‌ಲೈನ್ ಆಗಬೇಕು ಎಂದು ಉರ್ಫಿ ರಾಖಿ ಸಾವಂತ್ (Raki Sawant) ಆಗಿ ಬದಲಾಗುತ್ತಿದ್ದಾಳೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಉರ್ಫಿ ಏನ್ ಮಾಡಿದ್ದಾರೆ ಗೊತ್ತಾ?

ಸೈಲೆಂಟ್ ಆಗಿರುವ ಉರ್ಫಿ ಕ್ಯಾಮೆರಾ ಎದುರು ಬರುತ್ತಿದ್ದಂತೆ, ಹಾಟ್ ಪೋಸ್‌ ಕೊಡುತ್ತಾರೆ. ಹಾಗೆಯೇ ಬೇಡದ ವಿಚಾರಗಳ ಬಗ್ಗೆ ಕಾಮೆಂಟ್ ಮಾಡಿ ಕಾಂಟ್ರೋವರ್ಸಿ ಮಾಡಿಕೊಳ್ಳುತ್ತಾರೆ. ಇದೀಗ ತಮ್ಮ ಸ್ನೇಹಿತನೊಂದಿಗೆ ಹೋಟೆಲ್‌ನಲ್ಲಿ ಕಾಣಿಸಿಕೊಂಡಿರುವ ಉರ್ಫಿ ಕ್ಯಾಮೆರಾದವರು ನನ್ನನ್ನು ನೋಡಿತ್ತಿದ್ದಾರೆ, ಎಂದು ಚೆಕ್ ಮಾಡಿಕೊಂಡು ಆ ನಂತರ ದೊಡ್ಡ ಡ್ರಾಮಾ ಕ್ರಿಯೇಟ್ ಮಾಡಿದ್ದಾರೆ. 

Urfi Javed: ನಾನು ಜಾವೇದ್​ ಅಖ್ತರ್​ ಮೊಮ್ಮಗಳಲ್ಲ ಎಂದ ಕಿರುತೆರೆ ನಟಿ

ತನಗಿಂತ ಮೂರು ಗಾತ್ರ ದೊಡ್ಡದಿರುವ ಪುಲ್‌ಓವರ್ (Pullover) ಧರಿಸಿ ಮೊಬೈಲ್ ನೋಡಿಕೊಂಡು ಅಳುತ್ತಿರುವಂತೆ  ನಟಿಸಿದ್ದಾರೆ. ಎದುರಿಗಿದ್ದ ಸ್ನೇಹಿತನಿಗೆ ತಮ್ಮ ಮೊಬೈಲ್‌ನಲ್ಲಿ ಏನೋ ತೋರಿಸುತ್ತಿದ್ದಾರೆ. ಉರ್ಫಿ ನಿಜವಾಗಲೂ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೋ, ಇಲ್ವೋ ಗೊತ್ತಿಲ್ಲ. ಆದರೆ ಮುಖ ಮಾತ್ರ ಟೊಮ್ಯಾಟೋ ರೀತಿ ಕೆಂಪಗೆ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಉರ್ಫಿ ವ್ಯಕ್ತಿತ್ವದ ಬಗ್ಗೆ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ. ಈ ವಿಡಿಯೋ ನೋಡಿದವರು ಇದು ಪಕ್ಕಾ ಡ್ರಾಮಾ. ಫೇಕ್‌ (Fake Drama) ಎನ್ನುತ್ತಿದ್ದಾರೆ. ಇನ್ನೂ ಕೆಲವರು ಉರ್ಫಿ ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್‌ಗೆ ಹೋಗಬೇಕು ಅಂತ ರಾಖಿ ಸಾವಂತ್ ರೀತಿ ಡ್ರಾಮಾ ಮಾಡಲು ಶುರು ಮಾಡಿದ್ದಾಳೆ. ಸ್ನೇಹಿತ ಎದುರಿಗೆ ಕುಳಿತಿದ್ದರೂ, ಕ್ಯಾಮೆರಾ ಕಡೆ ಮುಖ ಮಾಡಿದ್ದಾಳೆ ಎನ್ನುತ್ತಿದ್ದಾರೆ. 

ಕೆಲವು ದಿನಗಳ ಹಿಂದೆ ಉರ್ಫಿ ಹಂಚಿಕೊಂಡಿದ್ದ ವಿಡಿಯೋ ನೋಡಿ ಲೋ ಬಜೆಟ್ ಸಮಂತಾ (Samantha Ruth Prabhu) ಎಂದು ಕಾಲೆಳೆದಿದ್ದರು ನೆಟ್ಟಿಗರು. ಪುಷ್ಪಾ (Pushpa) ಸಿನಿಮಾದ ಫೇಮಸ್‌ ಸಾಂಗ್‌ 'ಊ ಅಂತವ' ಗೆ ಡ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋವನ್ನು ಉರ್ಫಿ ಸೋಶಿಯಲ್‌ ಮೀಡಿಯಾದಲ್ಲಿ (Social Media) ಶೇರ್‌ ಮಾಡಿಕೊಂಡಿದ್ದರು. ಸಮಂತಾ ಅಭಿನಯದ ಊ ಅಂತಾವಾ ಊಊ ಅಂತಾವಾ ಸಿಕ್ಕಾಪಟ್ಟೆ ಹಿಟ್ ಆಗಿದ್ದು, ಯೂಟ್ಯೂಬ್‌ನ (Youtube) ಟಾಪ್ 10 ಟ್ರೆಂಡಿಂಗ್‌ನಲ್ಲಿತ್ತು. ನಟಿಯ ಸಖತ್‌ ಸೆಕ್ಸಿ ಸ್ಟೆಪ್ಸ್‌ ಹಾಡಿನ ಹೈಲೈಟ್ ಆಗಿದೆ ಮತ್ತು ಅಲ್ಲು ಅರ್ಜುನ್ (Allu Arjun) ಜೊತೆಗಿನ ಅವರ ಡ್ಯಾನ್ಸ್‌ ಸಖತ್‌ ವೈರಲ್‌ ಆಗಿದೆ. ಅಂತೆಯೇ, ಉರ್ಫಿ ಜಾವೇದ್ ಅವರು
ಸಣ್ಣ ಬ್ಲೌಸ್‌ ಮತ್ತು ಮರೂನ್ ಸೀರೆ ಧರಿಸಿ ಈ ಟ್ರ್ಯಾಕ್‌ಗೆ ನೃತ್ಯ ಮಾಡಿದ್ದಾರೆ.'ಎಕ್ಸ್‌ಪ್ರೆಶನ್‌ ತುಂಬಾ ಕಳಪೆಯಾಗಿವೆ,' ಎಂದಿದ್ದರು ನೆಟ್ಟಿಗರು.

Casting Couch: ಫ್ಯಾಷನ್ ಡ್ರೆಸ್ ಚೆಲುವೆಗೂ ಕಾಸ್ಟಿಂಗ್ ಕೌಚ್ ಕಿರಿಕಿರಿ

    ಡ್ರೆಸ್ ಮೂಲಕವೇ ಸುದ್ದಿಯಾಗಲು ಸಿಕ್ಕಾಪಟ್ಟೆ ಇಷ್ಟ ಪಡುವ ಉರ್ಫಿ ಲೇಟೆಸ್ಟ್ ಸೀರೆಯ (Saree Look) ಲುಕ್ ಕೂಡ ವೈರಲ್ ಆಗಿತ್ತು. ಬಿಳಿ ಬಣ್ಣದ ಸೀರೆಗೆ ಪಿಂಕ್ ಬ್ಲೌಸ್ ಧರಿಸಿದ್ದರು. ಕೆಲವರಿಗೆ ಇದು ಬ್ಲೌಸಾ ಅಥವಾ ಟಿ-ಶರ್ಟ್‌ನ ಕಟ್ ಮಾಡಿ ಧರಿಸಿರುವುದಾ ಎಂದು ಡೌಟ್ ಆಗಿದೆ. 

    ಸಖತ್ ಹಾಟ್‌ ಆಗಿ ಕಾಣಿಸುವ ಉರ್ಫಿ ಕಾಸ್ಟಿಂಗ್ ಕೌಚ್‌ (Casting couch) ಬಗ್ಗೆ ಕೂಡ ಮಾತನಾಡಿದ್ದರು. ಉದ್ಯಮದಲ್ಲಿರುವ ಪುರುಷರು ತುಂಬಾ ಶಕ್ತಿಶಾಲಿ ಎಂದು ಉರ್ಫಿ ಹೇಳಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆ ಮಾತ್ರವಲ್ಲ, ಸಂದರ್ಶನದಲ್ಲಿ ನಟಿ ನಿರಾಕರಣೆಗಳು, ಟ್ರೋಲ್‌ಗಳು (Trolls) ಮತ್ತು ಇನ್ನೂ ಹೆಚ್ಚಿನವುಗಳ ಬಗ್ಗೆ ಮಾತನಾಡಿದ್ದಾರೆ. ತನ್ನ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿ, ಪ್ರತಿಯೊಬ್ಬ ಹುಡುಗಿಯಂತೆ ನಾನು ಕೂಡ ಕಾಸ್ಟಿಂಗ್ ಕೌಚ್ ಅನ್ನು ಅನುಭವಿಸಿದ್ದೇನೆ. ಒಮ್ಮೆ ಒಬ್ಬರು ನನ್ನನ್ನು ಬಲವಂತಪಡಿಸಿದಾಗ ಅದು ಸಂಭವಿಸಿತು. ಆದರೆ ನಾನು ಹೊರಬಂದೆ, ಹಾಗಾಗಿ ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ ಎಂದಿದ್ದಾರೆ.

    'ನಾನು ಮುಸ್ಲಿಂ (Muslim girl) ಹುಡುಗಿ. ನಾನು ಸ್ವೀಕರಿಸುವ ಹೆಚ್ಚಿನ ದ್ವೇಷದ ಕಾಮೆಂಟ್‌ಗಳು ಮುಸ್ಲಿಂ ಜನರಿಂದ. ನಾನು ಇಸ್ಲಾಮಿನ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದ್ದೇನೆ, ಎಂದು ಅವರು ಹೇಳುತ್ತಾರೆ. ಅವರು ನನ್ನನ್ನು ದ್ವೇಷಿಸುತ್ತಾರೆ. ಏಕೆಂದರೆ ಮುಸ್ಲಿಂ ಪುರುಷರು ತಮ್ಮ ಮಹಿಳೆಯರು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಬೇಕೆಂದು ಬಯಸುತ್ತಾರೆ. ಅವರು ಸಮುದಾಯದ ಎಲ್ಲಾ ಮಹಿಳೆಯರನ್ನು ನಿಯಂತ್ರಿಸಲು ಬಯಸುತ್ತಾರೆ. ಈ ಕಾರಣದಿಂದ ನಾನು ಇಸ್ಲಾಂ (Islam) ಧರ್ಮವನ್ನು ನಂಬುವುದಿಲ್ಲ. ಅವರು ನನ್ನನ್ನು ಟ್ರೋಲ್ ಮಾಡಲು ಕಾರಣವೆಂದರೆ, ಅವರ ಧರ್ಮದ ಪ್ರಕಾರ ಅವರು ನಿರೀಕ್ಷಿಸುವ ರೀತಿಯಲ್ಲಿ ನಾನು ನಡೆದುಕೊಳ್ಳುವುದಿಲ್ಲ,' ಎಂದು ಉರ್ಫಿ ಜಾವೇದ್ ಇಂಡಿಯಾ ಟುಡೇ.ಇನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದjg.  ಇದೇ ಸಂದರ್ಶನದಲ್ಲಿ ತಮ್ಮ ಮದುವೆ ಬಗ್ಗೆಯೂ ಮಾತನಾಡಿದ್ದಾರೆ.

     

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    Read more Articles on
    click me!

    Recommended Stories

    ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
    ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್