ಹಸಿಬಿಸಿ ದೃಶ್ಯ ಮುಗಿಸಿದ ಮೇಲಾದ್ರೂ ಮಗಳು ನೆನಪಾದ್ಲಾ ಎಂದು ರಣಬೀರ್‌ ಕಪೂರ್‌ ಕಾಲೆಳೆದ ನೆಟ್ಟಿಗರು

By Suvarna News  |  First Published Dec 1, 2023, 2:46 PM IST

ರಣಬೀರ್‌ ಕಪೂರ್‌ ಅಭಿನಯದ ಅನಿಮಲ್‌ ಚಿತ್ರ ಇಂದು ಬಿಡುಗಡೆಯಾಗಿದ್ದು, ಇದೀಗ ಚಿತ್ರದಿಂದ ದೂರ ಉಳಿದು, ಮಗಳ ಜೊತೆ ಇರಲು ಬಯಸಿದ್ದಾರಂತೆ ನಟ. ಫ್ಯಾನ್ಸ್‌ ಹೇಳಿದ್ದೇನು?
 


 ನಟ ರಣಬೀರ್‌ ಕಪೂರ್‌ (Ranbir Kapoor)  ಮತ್ತು ರಶ್ಮಿಕಾ ಮಂದಣ್ಣ ಅವರ ಅನಿಮಲ್‌ ಚಿತ್ರ ಇಂದು ಬಿಡುಗಡೆಯಾಗಿದ್ದು,  ಸಕತ್‌ ಸದ್ದು ಮಾಡುತ್ತಿದೆ.  ಇದರ ಟ್ರೇಲರ್​ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದಾಗಲೇ ಭಾರಿ ಸುದ್ದಿಯಾಗಿತ್ತು. ಇದಕ್ಕೆ ಕಾರಣ,   ಅನಿಮಲ್​ (Animal) ಚಿತ್ರ ಬಿಡುಗಡೆಗೂ ಮುನ್ನವೇ ಜವಾನ್​ ಮತ್ತು ಬ್ರಹ್ಮಾಸ್ತ್ರದ ದಾಖಲೆಗಳನ್ನು ಮುರಿದು ಹಾಕಿದೆ. ಉತ್ತರ ಅಮೆರಿಕದಲ್ಲಿ 888 ಪರದೆಗಳಲ್ಲಿ ರಿಲೀಸ್ ಆಗುತ್ತಿದ್ದು, ಇಲ್ಲಿಯ ಸ್ಕ್ರೀನಿಂಗ್​ಗೆ ಸಂಬಂಧಿಸಿದಂತೆ ಅನಿಮಲ್​ ದಾಖಲೆ ಬರೆದಿದೆ.  ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹಾಗೂ ರಶ್ಮಿಕಾ ತೆಲುಗಿನಲ್ಲಿ ಫೆಮಿಲಿಯರ್ ಆಗಿರುವುದರಿಂದ ತೆಲುಗಿನಲ್ಲಿ ತಮಿಳಿಗಿಂತ ಅಧಿಕ ಟಿಕೆಟ್ ಸೇಲ್ ಆಗಿದೆ. ಹಿಂದಿಯಲ್ಲಿಯೂ ಒಳ್ಳೆಯ ರೀತಿಯಲ್ಲಿ ಟಿಕೆಟ್​ ಮಾರಾಟವಾಗಿದೆ.  ಪ್ಯಾನ್ ಇಂಡಿಯಾ ಸಿನಿಮಾವನ್ನು ಕಬೀರ್ ಸಿಂಗ್ ಹಾಗೂ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ  ಅನಿಲ್ ಕಪೂರ್, ಬಾಬಿ ಡಿಯೋಲ್,  ತೃಪ್ತಿ ದಿಮ್ರಿಯೂ ನಟಿಸಿದ್ದಾರೆ.  ಭೂಷಣ್ ಕುಮಾರ್ ಹಾಗೂ ಕೃಷ್ಣ ಕುಮಾರ್ ಅವರ ಟಿ ಸಿರೀಸ್ ಈ ಸಿನಿಮಾವನ್ನು ನಿರ್ಮಿಸಿದೆ.  ಸಿನಿಮಾ ಹಿಂದಿ, ತಮಿಳು, ಕನ್ನಡ, ಮಲಯಾಳದಲ್ಲಿ ರಿಲೀಸ್ ಆಗಿದೆ.

ಇದರ ಬೆನ್ನಲ್ಲೇ, ನಟ ರಣಬೀರ್‌ ಕಪೂರ್‌ ಸದ್ಯ ಎಲ್ಲಾ ಚಿತ್ರಗಳನ್ನು ಸ್ಟಾಪ್‌ ಮಾಡಿ ಮಗಳು ರಾಹಾಗಾಗಿ ಸಮಯ ಮೀಸಲು ಇಡಲು ಬಯಸುತ್ತಿದ್ದಾರಂತೆ!.   ಮಗಳು ರಾಹಾ ಕಪೂರ್‌ಗಾಗಿ ಸಮಯ ಮೀಸಲು ಇಡಲು ಬಯಸುತ್ತಿದ್ದೇನೆ. ಅದಕ್ಕಾಗಿ ವೃತ್ತಿಜೀವನದಲ್ಲಿ  ವಿರಾಮ ತೆಗೆದುಕೊಳ್ಳಲು ಬಯಸುತ್ತಿದ್ದೇನೆ ಎಂದು ಹೈದರಾಬಾದಿನಲ್ಲಿ ನಡೆದ   ಪತ್ರಿಕಾಗೋಷ್ಠಿಯಲ್ಲಿ, ರಣಬೀರ್ ಹೇಳಿದ್ದಾರೆ.  ಮಗಳು ರಾಹಾ ಕಪೂರ್ ತಮ್ಮ ಮತ್ತು ಆಲಿಯಾ ಜೀವನದಲ್ಲಿ ಹೇಗೆ ಅಪಾರ ಸಂತೋಷವನ್ನು ತಂದಿದ್ದಾಳೆ ಎಂಬುದರ ಕುರಿತು ಹೇಳಿದ ನಟ, ಸದ್ಯ ವೃತ್ತಿಜೀವನದಲ್ಲಿ ವಿರಾಮ ಪಡೆದು  ತನ್ನ ಎಲ್ಲಾ ಸಮಯವನ್ನು ಅವಳಿಗೆ ಮೀಸಲಿಡಲು ಬಯಸಿದ್ದೇನೆ ಎಂದಿದ್ದಾರೆ.  

Tap to resize

Latest Videos

'ಅನಿಮಲ್'ಗೆ ಅಡಲ್ಟ್​ ಸರ್ಟಿಫಿಕೇಟ್​: ರಣಬೀರ್​-ರಶ್ಮಿಕಾ ಹಸಿಬಿಸಿ ದೃಶ್ಯಗಳಿಗೆ ಬಿತ್ತು ಕತ್ತರಿ! ಫ್ಯಾನ್ಸ್ ನಿರಾಸೆ

ಏನಾದ್ರೂ ಸಾಧಿಸಬೇಕು ಎಂದರೆ ಏನಾದರೂ ತ್ಯಾಗ ಮಾಡಬೇಕು. ಇದೇ ಕಾರಣಕ್ಕೆ ಮಗಳೊಂದಿಗೆ ಕಳೆಯಲು ಸದ್ಯ ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದರು. ಈ ಸುದ್ದಿ ವೈರಲ್‌ ಆಗುತ್ತಿದ್ದಂತೆಯೇ ಮೊದಲು ಆ ಕೆಲಸ ಮಾಡಪ್ಪಾ, ಯಾರು ಬೇಡ ಎಂದ್ರು ಎಂದು ಕೇಳ್ತಿದ್ದಾರೆ ನೆಟ್ಟಿಗರು. ರಶ್ಮಿಕಾ ಮಂದಣ್ಣ ಜೊತೆ ಅನಿಮಲ್‌ ಚಿತ್ರದಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಉಲ್ಲೇಖಿಸಿರುವ ಕೆಲ ತರ್ಲೆ ನೆಟ್ಟಿಗರು, ಕಂಡ ಕಂಡ ಹೆಣ್ಣುಮಕ್ಕಳ ಜೊತೆ ಹೀಗೆ ಲಿಪ್‌ಲಾಕ್‌, ಹಸಿಬಿಸಿ ದೃಶ್ಯಗಳಲ್ಲಿ ಸಮಯ ಮೀಸಲಿಟ್ಟಿದ್ದು ಸಾಕು, ಈಗಾದ್ರೂ ನಿನ್ನ ಮಗಳ ಕಡೆ ಗಮನ ಹರಿಸು ಎಂದಿದ್ದಾರೆ. ಪತ್ನಿ ಆಲಿಯಾಗೆ ದುಡಿಯಲು ಬಿಟ್ಟು ನೀನು ಆರಾಮಾಗಿರು ಎಂದು ಇನ್ನು ಕೆಲವರು ಹೇಳಿದ್ದಾರೆ. 

ಅದೇ ಇನ್ನೊಂದೆಡೆ, ಅನಿಮಲ್‌ ಚಿತ್ರದಲ್ಲಿ ಇಂಟಿಮೇಟ್‌  ದೃಶ್ಯಗಳು   ಹೇರಳವಾಗಿರುವ ಕಾರಣ ಎಲ್ಲಾ ದೃಶ್ಯಗಳನ್ನೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಕಟ್​ ಮಾಡುವಂತೆ ಆದೇಶಿಸಿದೆ.  ಚಿತ್ರಕ್ಕೆ ಅಡಲ್ಟ್​ ಸರ್ಟಿಫಿಕೇಟ್​ (A Certificate) ನೀಡಲಾಗಿದ್ದರೂ, ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಮಂಡಳಿ ನಿರ್ದೇಶಿಸಿದೆ. ಇಂಥ ಸೀನ್​ಗಳನ್ನು ನೋಡಲು ಕಾತರರಾಗಿದ್ದ ರಣಬೀರ್​-ರಶ್ಮಿಕಾ ಫ್ಯಾನ್ಸ್​ಗೆ ಬಹಳ ನಿರಾಸೆಯಾಗಿದೆ. 

ಒಬ್ಬರಿಗಾದ್ರೂ ನಾನು ಹೇಳಿದ್ದೇನೆಂದು ಅರ್ಥವಾಯ್ತಲ್ಲ, ಅಷ್ಟೇ ಸಾಕು: ರಿಷಬ್‌ ಶೆಟ್ಟಿ ಹೀಗೆ ಅಂದಿದ್ದೇಕೆ?
 

click me!