
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಟಿವಿ ಶೋ ‘ಡಾನ್ಸಿಂಗ್ ಚಾಂಪಿಯನ್’(Dancing Champion)ಇದೀಗ ಫಿನಾಲೆ ಹಂತ ತಲುಪಿದೆ. ಅಂದಹಾಗೆ ಇದೇ ಭಾನುವಾರ ಫಿನಾಲೆ ಸಂಭ್ರಮ(Grand Finale) ಅದ್ದೂರಿಯಾಗಿದ್ದು, ಸಂಜೆ 6 ಗಂಟೆಗೆಯಿಂದ ಪ್ರಸಾರವಾಗಲಿದೆ. ವರ್ಣರಂಜಿತ ಫಿನಾಲೆ ಕಾರ್ಯಕ್ರಮದಲ್ಲಿ ಈ ಡಾನ್ಸ್ ಶೋನ ವಿಜೇತರು ಯಾರು ಎಂಬುದು ನಿರ್ಧಾರವಾಗಲಿದೆ.
ಅಂತಿಮ ಸುತ್ತು ತಲುಪಿರುವ ಐದು ಜೋಡಿಗಳಲ್ಲಿ ಒಂದು ಜೋಡಿ ಈ ಸಲದ ಡಾನ್ಸಿಂಗ್ ಚಾಂಪಿಯನ್ ಟ್ರೋಫಿಯನ್ನು ಗೆದ್ದು ಬೀಗುವ ಜೊತೆಗೆ ಐದು ಲಕ್ಷ ರೂಪಾಯಿ ಬಹುಮಾನವೂ ಅವರ ಪಾಲಾಗಲಿದೆ. ಅಂದಹಾಗೆ ಮೇ 29ನೇ ತಾರೀಕು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರಲಿರುವ ವರ್ಣರಂಜಿತ ಫಿನಾಲೆ ಹಲವು ವಿಶೇಷಗಳನ್ನು ಹೊತ್ತು ತರಲಿದೆ. ಈ ಬಾರಿಯ ಡಾನ್ಸಿಂಗ್ ಚಾಂಪಿಯನ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲಾಗುತ್ತಿದೆ.
ಪುನೀತ್ ರಾಜ್ ಕುಮಾರ್ ಅವರ ನೆನಪಿಗೆ ಅರ್ಪಿಸಲಾದ ಫಿನಾಲೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಆಗಮಿಸಲಿದ್ದಾರೆ. ಚಾಂಪಿಯನ್ ಶಿಪ್ ಟ್ರೋಫಿಯನ್ನು ಅವರು ಅನಾವರಣಗೊಳಿಸುವರು. ಇನ್ನು ಪ್ರಶಸ್ತಿ ಪ್ರದಾನ ಮಾಡಲು ಸ್ಯಾಂಡಲ್ ವುಡ್ ಖ್ಯಾತ ನಟ ಧ್ರುವ ಸರ್ಜಾ ಆಗಮಿಸಲಿದ್ದಾರೆ. ಧ್ರುವ ವೇದಿಕೆ ಮೇಲೆ ಕುಣಿದು ಕಾರ್ಯಕ್ರಮದ ರಂಗೇರಿಸಲಿದ್ದಾರೆ. ಈ ಇಬ್ಬರ ಉಪಸ್ಥಿತಿಯಿಂದ ಫಿನಾಲೆಯ ಸಂಭ್ರಮ ಮತ್ತಷ್ಟು ಹೆಚ್ಚಲಿದೆ.
ಡ್ಯಾನ್ಸಿಂಗ್ ಚಾಂಪಿಯನ್ ಫಿನಾಲೆಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್; ಧ್ರುವ ಸರ್ಜಾ ಸ್ಪೆಷಲ್ ಜಡ್ಜ್!
ಈಗಾಗಲೇ ಐದು ಜೋಡಿಗಳು ಅಂತಿಮ ಸುತ್ತು ತಲುಪಿದ್ದು ಫಿನಾಲೆ ದಿನ ವಿಜಯಶಾಲಿಯಾಗಲು ತಮ್ಮೆಲ್ಲ ಪ್ರತಿಭೆಯನ್ನು ಪಣಕ್ಕಿಟ್ಟು ನರ್ತಿಸಲಿವೆ. ಚಂದನಾ-ಅಕ್ಷತಾ, ಅದಿತಿ-ಸಾಗರ್, ಆರ್ಜುನ್-ರಾಣಿ, ಆರಾಧ್ಯ-ನಿವೇದಿತಾ ಮತ್ತು ಅನ್‌ಮೋಲ್-ಆದಿ ಫಿನಾಲೆ ಕಣದಲ್ಲಿರುವ ಜೋಡಿಗಳು. ಈ ಜೋಡಿಗಳಲ್ಲಿ ವಿಜಯ ಮಾಲೆ ಯಾರ ಕೊರಳಿಗೆ ಬೀಳಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಒಂದಕ್ಕಿಂತ ಒಂದು ಜೋಡಿ ಅದ್ಭುತವಾಗಿ ನೃತ್ಯ ಮಾಡುತ್ತಾರೆ. ಹಾಗಾಗಿ ಟ್ರೋಫಿಗಾಗಿ ಭಾರಿ ಪೈಪೋಟಿ ಇದೆ.
ಡಾನ್ಸಿಂಗ್ ಚಾಂಪಿಯನ್ ನ ಮೂವರು ತೀರ್ಪುಗಾರರಲ್ಲಿ ಒಬ್ಬರಾದ ನಟ ವಿಜಯ ರಾಘವೇಂದ್ರ ಮಾತನಾಡಿ, 'ಈ ಶೋ ಆರಂಭದಿಂದಲೂ ಅತ್ಯಂತ ಸ್ಪರ್ಧಾತ್ಪಕವಾಗಿತ್ತು. ಅಂತಿಮವಾಗಿ ಗೆಲುವು ಯಾರ ಪಾಲಾಗಲಿದೆ ಅಂತ ಊಹಿಸುವುದು ಅಸಾಧ್ಯ' ಎಂದು ಹೇಳಿದರು.
ಶೂಟಿಂಗ್ ಸೆಟ್‌ನಲ್ಲಿ ಎಷ್ಟು ಕೂಲ್ ಆಗಿರುತ್ತಾರೆ ಮೇಘನಾ ರಾಜ್ ನೋಡಿ!
ಕಲರ್ಸ್ ವಾಹಿನಿಯ ಕನ್ನಡ ಕ್ಲಸ್ಟರ್ ಮುಖ್ಯಸ್ಥ ಪರಮೇಶ್ ಗುಂಡ್ಕಲ್ 'ಈ ಶೋ ಕರ್ನಾಟಕದ ಡಾನ್ಸ್ ಪ್ರತಿಭೆಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದೆ' ಎಂದು ಅಭಿಪ್ರಾಯಪಟ್ಟರು. ಈ ಹಬ್ಬದೂಟದಂಥ ಫಿನಾಲೆ ಕಾರ್ಯಕ್ರಮವನ್ನು ನೋಡಲು ಮರೆಯದಿರಿ. ಮೇ 29 ಸಂಜೆ 6ಕ್ಕೆ ಕಲರ್ಸ್ ಕನ್ನಡ ವಾಹಿನಿಯ ಮುಂದೆ ಕುಳಿತು ಫಿನಾಲೆ ಎಂಜಾಯ್ ಮಾಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.