Ray Liotta; ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ನಿಧನ

Published : May 27, 2022, 01:14 PM IST
Ray Liotta; ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ನಿಧನ

ಸಾರಾಂಶ

ಹಾಲಿವುಡ್‌ನ ಖ್ಯಾತ ನಟ, ನಿರ್ಮಾಪಕ ರೇ ಲಿಯೊಟ್ಟಾ(Ray Liotta) ಕೊನೆಯುಸಿರೆಳೆದಿದ್ದಾರೆ(Death). ಗುಡ್‌ಫೆಲ್ಲಾಸ್(GoodFellas) ಸಿನಿಮಾದಲ್ಲಿ ಹೆನ್ರಿ ಹಿಲ್ ಪಾತ್ರದ ಮೂಲಕ ವಿಶ್ವದ ಗಮನ ಸೆಳೆದಿದ್ದ 67 ವರ್ಷದ ನಟ ರೇ ಲಿಯೊಟ್ಟಾ ನಿದ್ರೆ ಮಾಡುತ್ತಿರುವಾಗಲೇ ಚಿರನಿದ್ರೆಗೆ ಜಾರಿದ್ದಾರೆ ಎನ್ನುವ ಮಾಹಿತಿಯನ್ನು ಯುಎಸ್ ಮಾಧ್ಯಮಗಳು ವರದಿ ಮಾಡಿವೆ.

ಹಾಲಿವುಡ್‌ನ ಖ್ಯಾತ ನಟ, ನಿರ್ಮಾಪಕ ರೇ ಲಿಯೊಟ್ಟಾ(Ray Liotta) ಕೊನೆಯುಸಿರೆಳೆದಿದ್ದಾರೆ(Death). ಗುಡ್‌ಫೆಲ್ಲಾಸ್(GoodFellas) ಸಿನಿಮಾದಲ್ಲಿ ಹೆನ್ರಿ ಹಿಲ್ ಪಾತ್ರದ ಮೂಲಕ ವಿಶ್ವದ ಗಮನ ಸೆಳೆದಿದ್ದ 67 ವರ್ಷದ ನಟ ರೇ ಲಿಯೊಟ್ಟಾ ನಿದ್ರೆ ಮಾಡುತ್ತಿರುವಾಗಲೇ ಚಿರನಿದ್ರೆಗೆ ಜಾರಿದ್ದಾರೆ ಎನ್ನುವ ಮಾಹಿತಿಯನ್ನು ಯುಎಸ್ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಲಿಯೊಟ್ಟಾ ಅವರು ಡೊಮಿನಿಕೇಶನ್ ರಿಪಬ್ಲಿಕ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಡೇಂಜರ್ ವಾಟರ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಿದ್ರೆ ಮಾಡುತ್ತಿರುವಾಗಲೇ ನಿಧನಹೊಂದಿದ್ದಾರೆ ಎಂದು ತಿಳಿಸಲಾಗಿದೆ.

ಲಿಯೊಟ್ಟಾ ಅವರು ಪುತ್ರಿ ಕಾರ್ಸೆನ್ ಮತ್ತು ಫಿಯಾನ್ಸೆ ಜೆಸಿ ನಿಟ್ಟೊಲೊ ಅವರನ್ನು ಅಗಲಿದ್ದಾರೆ. ಲಿಯೊಟ್ಟಾ ಅವರ ಹೆನ್ರಿ ಹಿಲ್ ಪಾತ್ರ ಇವತ್ತಿಗೂ ಸಿನಿಮಾ ಪ್ರಿಯರನ್ನು ಕಾಡುವಂತ ಪಾತ್ರವಾಗಿದೆ. ವೃತ್ತಿ ಜೀವನದ ಪ್ರಾರಂಭದಲ್ಲಿ ಲಿಯೊಟ್ಟಾ 1990ರಲ್ಲಿ ಬಂದ ಕ್ರೈಮ್ ಥ್ರಿಲ್ಲರ್ ಸ್ಕಾರ್ಸೆಸೆಯದಲ್ಲಿ ಹೆನ್ರಿ ಹಿಲ್ ಗ್ಯಾಂಗ್ ಸ್ಟರ್ ಪಾತ್ರವನ್ನು ಮಾಡಿದ್ದರು. ಈ ಪಾತ್ರ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು.

ಲಿಯೊಟ್ಟಾ ಅವರ ಬಾಲ್ಯ ಎಲ್ಲರಂತೆ ಇರಲಿಲ್ಲ. 1954ರಲ್ಲಿ ನ್ಯೂಯಾರ್ಕ್ ನಲ್ಲಿ ಜನಿಸಿದ ಲಿಯೊಟ್ಟಾ ಅವರನ್ನು ಅನಾಥಾಶ್ರಮಕ್ಕೆ ಸೇರಿಸಲಾಯಿತು. 6 ತಿಂಗಳ ಮಗುವಾಗಿದ್ದ ಲಿಯೊಟ್ಟ ಅವರನ್ನು ದಂಪತಿಯೊಬ್ಬರು ದತ್ತು ಪಡೆದರು. ದೊಡ್ಡವರಾದ ಮೇಲೆ ತನ್ನ ನಿಜವಾದ ಪೋಷಕರು ಯಾರೆಂದು ತಿಳಿಯಲು ಹರಸಾಹಸ ಪಟ್ಟಿದ್ದರು. ಕೊನೆಯಗೂ ನಿಜವಾದ ಪೋಷಕರನ್ನು ಪತ್ತೆಹಚ್ಚಿದ್ದ ಲಿಯೊಟ್ಟಾ ಸ್ಕಾಟ್ಲಾಂಡ್ ಮೂಲದವರು ಎಂಬುದನ್ನು ತಿಳಿದುಕೊಂಡರು.

KGF Chapter 2: ಹಾಲಿವುಡ್‌ ಕೂಡಾ ಬೆಚ್ಚಿ ಬಿದ್ದಿದೆಯಂತೆ ರಾಕಿ ಭಾಯ್ ಸಿನಿಮಾ ನೋಡಿ!

ಲಿಯೊಟ್ಟಾ ಅವರು ಅನೇಕ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಿ ರ್ಯಾಟ್ ಪ್ಯಾಕ್, ಅನ್ ಫರ್ಗೆಟಬಲ್, ಕಾಪ್ ಲ್ಯಾಂಡ್, ಫೀನಿಕ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಸಿನಿಮಾ ಮಾತ್ರವಲ್ಲದೇ ಅನೇಕ ಟಿವಿ ಕಾರ್ಯಕ್ರಮಗಳು ಕಾಣಿಸಿಕೊಂಡಿದ್ದಾರೆ. ಇಆರ್, ಅನ್ ಬ್ರೇಕಬಲ್ ಕಿಮ್ಮಿ ಸ್ಮಿತ್, ಕಸಬ್ಲಾಂಕಾ ಸೇರಿದಂತೆ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಮಿಂಚಿದ್ದಾರೆ.

ಇತ್ತೀಚಿಗೆ ಲಿಯೊಟ್ಟಾ ಅಲನ್ ಟೇಲರ್ಸ್ ಅವರ ದಿ ಮೆನಿ ಸೇಂಟ್ಸ ಆಫ್ ನೆವಾರ್ಕ್, ಕ್ರೈಮ್ ಥ್ರಿಲ್ಲರ್ ನೋ ಸಡನ್ ಮೂವ್, ಮ್ಯಾರೇಜ್ ಸ್ಟೋರಿ, ಬ್ಲಾಕ್ ಬರ್ಡ್ ಸೀರಿಸ್‌ನಲ್ಲಿ ನಟಿಸಿದ್ದರು.

ಮೊದಲ ಮಗು ಸ್ವಾಗತಿಸಿದ ಗಾಯಕಿ Rihanna ಮತ್ತು ASAP Rocky!

ಕಾಪ್ ಲ್ಯಾಂಡ್ ನಿರ್ದೇಶಕ ಜೇಮ್ಸ್ ಮ್ಯಾನ್‌ಗೋಲ್ಡ್ ರೇ ಲಿಯೊಟ್ಟಾ ಅವರಿಗೆ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜೇಮ್ಸ್, ರೇ ಲಿಯೊಟ್ಟಾ ಅವರ ಹಠಾತ್ ನಿಧನ ಸುದ್ದಿ ಕೇಳಿ ಆಘಾತತಂದಿದೆ. ತುಂಬಾ ದುಃಖವಾಗಿದೆ. ಅದ್ಭುತವಾದ ನಟ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ. ಇನ್ನು ಅನೇಕ ಕಲಾವಿದರು ಮತ್ತು ನಿರ್ದೇಶಕರು ರೋ ಲಿಯೊಟ್ಟಾ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!