ರೂಮಿಗೆ ಬಂದು ಮೊದಲು ಬಳೆ ಮುಟ್ಟಿದ, ಆಮೇಲೆ... ನಟನ ಹೆಸರು ಬಹಿರಂಗಗೊಳಿಸುವ ಮೂಲಕ ತಮಗಾದ ಲೈಂಗಿಕ ದೌರ್ಜನ್ಯ ತೆರೆದಿಟ್ಟಿದ್ದಾರೆ ನಟಿ ಶ್ರೀಲೇಖಾ ಮಿತ್ರಾ
ಕಾಸ್ಟಿಂಗ್ ಕೌಚ್ (casting couch) ಎನ್ನುವುದು ಕೆಲ ವರ್ಷಗಳಿಂದ ಸಿನಿರಂಗದಲ್ಲಿ ಬಹಳ ಸದ್ದು ಮಾಡಿದ ಶಬ್ದ. 2018ರಲ್ಲಿ ನಟಿ ಶ್ರುತಿ ಹರಿಹರನ್ ಅವರು ತಮಗೆ ಆಗಿರುವ ಕಹಿ ಘಟನೆಗಳನ್ನು ಹಂಚಿಕೊಂಡಿದ್ದರು. ನಂತರ ಮೀ ಟೂ ಎಂಬ ದೊಡ್ಡ ಅಭಿಯಾನವೇ ಶುರುವಾಯಿತು. ಅಲ್ಲಿಂದೀಚೆಗೆ ಹಲವು ನಟಿಯರು ಮುನ್ನೆಲೆಗೆ ಬಂದು ತಮ್ಮ ಮೇಲಾಗಿದ್ದ ಲೈಂಗಿಕ ದೌರ್ಜನ್ಯಗಳ ಕುರಿತು ಹೇಳಿಕೊಂಡರು. ಅಲ್ಲಿಂದ ಮೀ ಟೂ ಹಾಗೂ ಕಾಸ್ಟಿಂಗ್ ಕೌಚ್ ಎನ್ನುವುದು ದೊಡ್ಡ ಸ್ವರೂಪ ಪಡೆದುಕೊಂಡಿತು. ನಟನಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲಿನ ಮಹಿಳೆಯರೂ ಇದರ ಬಗ್ಗೆ ವಿವರಣೆ ನೀಡತೊಡಗಿದರು. ಇದಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಹಲವು ನಟಿಯರು ಈ ಬಗ್ಗೆ ಭಯಾನಕ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಬೇಕು, ಟಾಪ್ ಸ್ಥಾನ ಪಡೆಯಬೇಕು, ಇಂಡಸ್ಟ್ರಿಯಲ್ಲಿ ಬೇರೂರಬೇಕು ಎಂದರೆ ಕೆಲವು ನಟರು, ನಿರ್ದೇಶಕರು, ನಿರ್ಮಾಪಕರು... ಹೀಗೆ ಎಲ್ಲರ ಜೊತೆ ಮಲಗುವುದು ಅನಿವಾರ್ಯ ಎನ್ನುವ ಅರ್ಥದಲ್ಲಿಯೇ ಬಹುತೇಕ ಎಲ್ಲಾ ನಟಿಯರೂ ಹೇಳಿಕೊಂಡಿದ್ದಾರೆ.
ಕೆಲವರು ಪ್ರಚಾರಕ್ಕೆ ಸುಳ್ಳೆ ಸುಳ್ಳೆ ಹೇಳುತ್ತಿದ್ದಾರೆ ಎನ್ನುವುದು ಇತ್ತೀಚಿಗೆ ಮಾತು ಹೆಚ್ಚಾಗಿದೆ. ಏಕೆಂದರೆ, ಯಾರ ಹೆಸರೂ ಹೇಳದೇ ನಟಿಯರು ಹೀಗೆಲ್ಲಾ ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ. ಆದರೆ ಇದೀಗ ಮಲಯಾಳಂ ನಟಿ ನಿರ್ದೇಶಕರೊಬ್ಬರ ಹೆಸರನ್ನು ಬಹಿರಂಗವಾಗಿಯೇ ಹೇಳುವ ಮೂಲಕ ಶಾಕ್ ನೀಡಿದ್ದಾರೆ ಮಲಯಾಳಂ ನಟಿ ಶ್ರೀಲೇಖಾ ಮಿತ್ರಾ. ಕಾಸ್ಟಿಂಗ್ ಕೌಚ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರಲ್ಲಿಯೂ ಮಲಯಾಳಂ ಇಂಡಸ್ಟ್ರಿ ಬಗ್ಗೆ ಹೆಚ್ಚಿನ ನಟಿಯರು ಈ ರೀತಿ ಹೇಳಿದ್ದರಿಂದ, ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ನಿವೃತ್ತ ನ್ಯಾಯಮೂರ್ತಿ ಹೇಮಾ ನೇತೃತ್ವದ ಸಮಿತಿ ರಚಿಸಲಾಗಿತ್ತು. ಸಮಿತಿ ಇದೀಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದರಲ್ಲಿ ನಟಿ ಶ್ರೀಲೇಖ ಮಿತ್ರ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ. ಅದು ಮಲಯಾಳಂ ಚಿತ್ರರಂಗದ ಹಿರಿಯ ನಿರ್ದೇಶಕ, ಚಿತ್ರಕತೆಗಾರ ಹಾಗೂ ನಟನ ವಿರುದ್ಧ. ಇದೀಗ ಮಲಯಾಳಂ ಇಂಡಸ್ಟ್ರಿಯಲ್ಲಿ ಹಲ್ಚಲ್ ಸೃಷ್ಟಿಸಿದೆ!
undefined
2009 ರ ‘ಪಾಲೇರಿ ಮಾಣಿಕ್ಯಂ: ಒರು ಪತಿರ್ಕೋಲಪತ್ಕತಿಂತೆ ಕಥಾ’ ಚಿತ್ರದ ಆಡಿಷನ್ ಸಂದರ್ಭದಲ್ಲಿ ನಡೆದ ದೌರ್ಜನ್ಯವನ್ನು ನಟಿ ವಿವರಿಸಿದ್ದಾರೆ. ರಂಜಿತ್ ತಮಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಹೇಳಿದ್ದಾರೆ. ನಾನು ರಂಜಿತ್ ಅವರ ಬೆಡ್ ರೂಮ್ ಬಾಲ್ಕನಿಯಲ್ಲಿ ನಿಂತುಕೊಂಡು ಫೋನ್‌ನಲ್ಲಿ ಸಿನಿಮಾಟೋಗ್ರಾಫರ್‌ನೊಂದಿಗೆ ಮಾತಾಡುತ್ತಿದ್ದೆ. ನಾನು ಅಲ್ಲಿ ನಿಂತಿದ್ದ ವೇಳೆ ಅವರು ನನ್ನ ಬಳೆಗಳನ್ನು ಮುಟ್ಟಿದರು ಎನ್ನುತ್ತಲೇ ತಮಗಾಗಿರುವ ದೌರ್ಜನ್ಯ ತೆರೆದಿಟ್ಟಿದ್ದಾರೆ. ಈ ಚಿತ್ರದಲ್ಲಿ ಮಮ್ಮುಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಬಟ್ಟೆ ಚೇಂಜ್ ಮಾಡೋ ಹಾಗಿಲ್ಲ, ವಾಷ್‌ರೂಮ್‌ಗೆ ಹೋಗೋದೂ ಕಷ್ಟ: ನೋವು ತೋಡಿಕೊಂಡ ರಾಗಿಣಿ
ಶೂಟಿಂಗ್ಗೆಂದು ಕೊಚ್ಚಿಗೆ ಹೋಗಿದ್ವಿ. ಮೊದಲಿಗೆ ನಿರ್ದೇಶಕ ರಂಜಿತ್ ಅನ್ನು ಭೇಟಿ ಆದಾಗ ಅವರೊಬ್ಬ ಒಳ್ಳೆಯ, ಜ್ಞಾನವಂತ ವ್ಯಕ್ತಿ ಎನಿಸಿತ್ತು. ನಂತರ ಸಂಜೆ ಹೋಟೆಲ್ ಒಂದರಲ್ಲಿ ಸಿನಿಮಾದ ಇತರೆ ತಂತ್ರಜ್ಞರು ಹಾಗೂ ನಿರ್ಮಾಪಕರೊಟ್ಟಿಗೆ ಸಭೆ ಏರ್ಪಾಟು ಮಾಡಿದ್ದರು. ಅವರೂ ಬಂದಿದ್ದರು. ಹೋಟೆಲ್ನಲ್ಲಿ ನನಗೂ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಅಲ್ಲಿ, ಫೋನಿನಲ್ಲಿ ಮಾತನಾಡುತ್ತಿದ್ದರಂತೆ. ಆಗ ನನ್ನನ್ನು ಕಡಿಮೆ ಬೆಳಕಿರುವ ಕೋಣೆಯೊಳಗೆ ಕರೆದುಕೊಂಡು ಹೋಗಿ ದೌರ್ಜನ್ಯ ನಡೆಸಿದರು. ನಾನು ಫೋನ್‌ನಲ್ಲಿ ಮಾತನಾಡಲು ಆರಂಭಿಸುತ್ತಿದ್ದಂತೆ, ಮೊದಲಿಗೆ ಬಳೆಗಳನ್ನು ಮುಟ್ಟಲು ಆರಂಭಿಸಿದರು. ನನಗೆ ಆಗ ಏನು ಎಂದು ಗೊತ್ತಾಗಲಿಲ್ಲ. ನಂತರ ರಂಜಿತ್ ನನ್ನ ಕತ್ತು, ಕೆನ್ನೆ ಮುಟ್ಟಲು ಶುರು ಮಾಡಿದರು. ಭಯದಿಂದ ಹೊರಗೆ ಹೋದೆ.. ನಿರ್ಮಾಪಕರ ಬಳಿ ವಿಷಯ ಹೇಳಿ, ನಾನು ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೆ ಎಂದು ನಟಿ ಹೇಳಿದ್ದಾರೆ.
ಹೋಟೆಲ್ನಲ್ಲಿ ಇರಲು ಭಯವಾಯಿತು. ರೂಂ ಬಾಗಿಲಿಗೆ ಚೇರುಗಳನ್ನು ಅಡ್ಡ ಇಟ್ಟುಕೊಂಡು ಮಲಗಿದ್ದೆ. ಬೆಳಗಾಗುವುದನ್ನೇ ಕಾಯುತ್ತಿದ್ದೆ. ಕೂಡಲೇ ಅಲ್ಲಿಂದ ಪಲಾಯನ ಮಾಡಿ ಕೊಲ್ಕತ್ತಕ್ಕೆ ಹೋಗಿಬಿಟ್ಟೆ ಎಂದಿದ್ದಾರೆ. ಇದೀಗ ಮಹಿಳಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸುವಂತೆ ತಿಳಿಸಿದೆ. ಇದು ಸತ್ಯವೇ ಆಗಿದ್ದರೆ, ರಂಜಿತ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಯೋಗವು ಆಗ್ರಹಿಸಿದೆ. ರಂಜಿತ್ ಅವರ ವಿರುದ್ಧ ಪ್ರತಿಭಟನೆಗಳೂ ನಡೆಯುತ್ತಿವೆ.
ಅವ್ರು ಮಲಗಲು ರೆಡಿ ಇದ್ರೆ ತಾನೇ ಇವ್ರೂ ಮುಂದಾಗೋದು! ಕಾಸ್ಟಿಂಗ್ ಕೌಚ್ ಅನ್ನೋರಿಗೆ ನಟಿ ಲಕ್ಷ್ಮಿ ತಿರುಗೇಟು