ಶಾರುಖ್ ಪುತ್ರನ ಬಳಿ 13 ಗ್ರಾಂ ಕೊಕೆನ್, 21 ಗ್ರಾಂ ಚರಾಸ್ ಪತ್ತೆ; ಆರ್ಯನ್ ಖಾನ್‌ಗೆ ಹೆಚ್ಚಾಯ್ತು ಸಂಕಷ್ಟ!

By Suvarna NewsFirst Published Oct 3, 2021, 10:24 PM IST
Highlights
  • ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಹೆಚ್ಚಾಯ್ತು ಸಂಕಷ್ಟ
  •  ಆರ್ಯನ್ ಬಳಿ 13 ಗ್ರಾಂ ಕೊಕೆನ್, 21 ಗ್ರಾಂ ಚರಾಸ್ ಸೇರಿ ಮಾದ್ರಕ ವಸ್ತು ಪತ್ತೆ
  • NCB ಅಧಿಕಾರಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗ

ಮುಂಬೈ(ಅ.03): ಹೈ ಪ್ರೊಫೈಲ್ ಡ್ರಗ್ಸ್ ಪ್ರಕರಣ(Drug Case) ಬಾಲಿವುಡ್(Bollywood) ಹಾಗೂ ದೇಶವನ್ನೇ ಬೆಚ್ಚಿಬೀಳಿಸಿದೆ. ಕ್ರ್ಯೂಸ್ ಹಡಗಿನಲ್ಲಿ(Cruise Drug bust) ನಡೆದ ರೇವ್ ಪಾರ್ಟಿಯಲ್ಲಿ ನಡೆದ NCB ಅಧಿಕಾರಿಗಳ ದಾಳಿ ಬಾಲಿವುಡ್ ಡ್ರಗ್ಸ್ ಕರಾಳ ಕತೆಯನ್ನು ಬಿಚ್ಚಿಟ್ಟಿದೆ. ಬಾಲಿವುಟ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಮೂವರು ಡ್ರಗ್ಸ್ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದಾರೆ. ಆರ್ಯನ್ ಖಾನ್ ಹಾಗಾ ಶಾರುಖ್ ಕುಟುಂಬದ ಸಂಕಷ್ಟ ಹೆಚ್ಚಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.

ಡ್ರಗ್ಸ್ ಪಾರ್ಟಿ; ಶಾರುಖ್ ಪುತ್ರ ಆರ್ಯನ್ ಅ.4ರ ವರೆಗೆ NCB ಕಸ್ಟಡಿಗೆ ನೀಡಿದ ಮುಂಬೈ ಕೋರ್ಟ್

ಆರ್ಯನ್ ಖಾನ್(Aryan Khan) ಬಂಧನ ಹಾಗೂ ಮುಂಬೈ ಕೋರ್ಟ್ NCB ಕಸ್ಟಡಿಗೆ ನೀಡಿದ ಬಳಿಕ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಆರ್ಯನ್ ಖಾನ್ ಬಳಿ 13 ಗ್ರಾಂ ಕೊಕೆನ್, 21 ಗ್ರಾಂ ಚರಾಸ್ , 21 ಗ್ರಾಂ MDMA ಮಾತ್ರೆ, ಹಾಗೂ 5 ಗ್ರಾಂ MD ಮಾದಕ ವಸ್ತುಗಳ ಪತ್ತೆಯಾಗಿದೆ ಎಂದು NCB ಅಧಿಕಾರಿಗಳು ಹೇಳಿದ್ದಾರೆ.

ನಿಷೇಧಿತ ಮಾದಕ ವಸ್ತುಗಳು ಸ್ವತಃ ಆರ್ಯನ್ ಖಾನ್ ಬಳಿ ಪತ್ತೆಯಾಗಿರುವ ಕಾರಣ ಆರ್ಯನ್ ವಿರುದ್ಧ ನಿಷೇಧಿತ ವಸ್ತುಗಳ ಖರೀದಿ, ಬಳಕೆ ಹಾಗೂ ಸ್ವಾಧಿನ ಪಡಿಸಿಕೊಂಡ ಪ್ರಕರಣಗಳು ದಾಖಲಾಗಿದೆ. ಶಾರುಖ್ ಖಾನ್(Shah rukh khan) ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಪುತ್ರನ ಬಿಡುಗಡೆಗೆ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಬಾಲಿವುಡ್ ಡ್ರಗ್ಸ್ ಪಾರ್ಟಿ; ಶೂಟಿಂಗ್ ಕ್ಯಾನ್ಸಲ್ ಮಾಡಿ ಪುತ್ರನ ಬಿಡುಗಡೆಗೆ ಶಾರುಖ್ ಹರಸಾಹಸ!

ಮುಂಬೈ(Mumbai) ಕರಾವಳಿ ತೀರದಿಂದ ಶನಿವಾರ(ಅ.02) ರಾತ್ರಿ ಕೊರ್ಡೆಲಿಯಾ ಕ್ರ್ಯೂಸ್ ಹಡಗು ಗೋವಾಗೆ ಹೊರಟಿದೆ. ಮುಂಬೈನಿಂದ ಸಮುದ್ರದಲ್ಲಿ ಪ್ರಯಾಣ ಆರಂಭಗೊಂಡ ಬೆನ್ನಲ್ಲೇ ರೇವ್ ಪಾರ್ಟಿ(Rave Party) ಆರಂಭಗೊಂಡಿದೆ. ಈ ಪಾರ್ಟಿಯಲ್ಲಿ ಹಲವು ಮಾದಕ ವಸ್ತುಗಳ ಬಳಕೆ, ವಿನಿಮಯ ಆರಂಭಗೊಂಡಿದೆ. ಖಚಿತ ಮಾಹಿತಿ ಮೇರೆಗೆ ಪ್ರಯಾಣಿಕರಂತೆ ಹಡುಗು ಸೇರಿದ್ದ NCB ಅಧಿಕಾರಿಗಳು, ನೇರವಾಗಿ ಪಾರ್ಟಿ ಮೇಲೆ ದಾಳಿ ಮಾಡಿದ್ದಾರೆ. 

ದಾಳಿ ವೇಳೆ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದರಲ್ಲಿ ಆರ್ಯನ್ ಖಾನ್, ಡ್ರಗ್ ಪೆಡ್ಲರ್ ಹಾಗೂ ಆರ್ಯನ್ ಆಪ್ತ ಅರ್ಬಾಜ್ ಮರ್ಚೆಂಟ್ ಹಾಗೂ ಮುನ್‌ಮನ್ ದಮೇಚಾ ಅವರನ್ನು NCB ಅಧಿಕಾರಿಗಳು ಅರಸ್ಟ್ ಮಾಡಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಮೂವರನ್ನು  NCB ಅಧಿಕಾರಿಗಳು ಮುಂಬೈ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಬಾಲಿವುಡ್‌ ಡ್ರಗ್ಸ್ ಪಾರ್ಟಿ: ಕ್ರೂಸ್‌ಗೆ ಎಂಟ್ರಿಯಾದವರಿಗೆ 14 ಪುಟಗಳ 'ಕ್ರಯಾಕ್ ಬೈಬಲ್

ಡ್ರಗ್ಸ್ ಹಿಂದಿನ ಅತೀ ದೊಡ್ಡ ಜಾಲ ಪತ್ತೆ ಹಚ್ಚಲು ಮೂವರನ್ನು ಹೆಚ್ಚಿನ ವಿಚಾರಣೆ ನೀಡಬೇಕು ಎಂದು  NCB ಅಧಿಕಾರಿಗಳು ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಅಕ್ಟೋಬರ್ 4ರ ವರೆಗೆ   NCB ಕಸ್ಟಡಿ ನೀಡಿದೆ.

click me!