ಮುಂಬೈ(ಅ.03): ಕ್ರ್ಯೂಸ್ ಹಡಗಿನಲ್ಲಿ ರೇವ್ ಪಾರ್ಟಿ ಮೇಲಿನ ದಾಳಿ ಬಳಿಕ ಒಂದೊಂದೆ ಕರಾಳ ಸತ್ಯಗಳು ಹೊರಬರುತ್ತಿದೆ. ಮುಂಬೈ ಕರಾವಳಿಯಿಂದ ಹೊರಡ ಕ್ರ್ಯೂಸ್ ಹಡಗಿನಲ್ಲಿ ನಡೆಯುತ್ತಿದ್ದ ಬಹುದೊಡ್ಡ ಡ್ರಗ್ಸ್ ಪಾರ್ಟಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಕುಟುಂಬದ ತಲೆ ನೋವು ಹೆಚ್ಚಿಸಿದೆ. ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದತೆ NCB ಅಧಿಕಾರಿಗಳಿಂದ ಬಂಧನಕ್ಕೊಳಾದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ನ್ನು ಮುಂಬೈ ಕೋರ್ಟ್ ಅಕ್ಟೋಬರ್ 4ರ ವರೆಗೆ NCB ಕಸ್ಟಡಿಗೆ ನೀಡಿದೆ.
ಬಾಲಿವುಡ್ ಡ್ರಗ್ಸ್ ಪಾರ್ಟಿ; ಶೂಟಿಂಗ್ ಕ್ಯಾನ್ಸಲ್ ಮಾಡಿ ಪುತ್ರನ ಬಿಡುಗಡೆಗೆ ಶಾರುಖ್ ಹರಸಾಹಸ!ಆರ್ಯನ್ ಖಾನ್ ಜೊತೆಗೆ ಡ್ರಗ್ಸ್ ಪೆಡ್ಲರ್ ಅರ್ಬಾಜ್ ಮರ್ಚೆಂಟ್ ಹಾಗೂ ಡಿಸೈನರ್ ಮುನ್‌ಮುನ್ ದಮೇಚಾ ಅವರನ್ನೂ ಮುಂಬೈ ಕೋರ್ಟ್ ಅಕ್ಟೋಬರ್ 4ರ ವರೆಗೆ ನರ್ಕೋಟಿಕ್ಸ್ ಅಧಿಕಾರಿಗಳ ಕಸ್ಟಡಿಗೆ ನೀಡಿದೆ. ಆರ್ಯನ್ ಖಾನ್ ವಿರುದ್ಧ ಸೆಕ್ಷನ್ 27 ಹಾಗೂ ಮಾದಕದ್ರವ್ಯ, ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (NDPS) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
undefined
ಮುಂಬೈ ಕರಾವಳಿಯಿಂದ ಗೋವಾಗೆ ತೆರಳುತ್ತಿದ್ದ ಕ್ರ್ಯೂಸ್ ಹಡಗಿನಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ರೇವ್ ಪಾರ್ಟಿಯಲ್ಲಿ ಮಾದಕ ವಸ್ತುಗಳ ಸೇವನೆ, ಮಾರಾಟ ದಂಧೆ ನಡೆಯುತ್ತಿತ್ತು ಅನ್ನೋ ಖಚಿತ ಮಾಹಿತಿ ಮೇರೆಗೆ NCB ಅಧಿಕಾರಿಗಳು ರೇವ್ ಪಾರ್ಟಿ ಮೇಲೆ ದಾಳಿ ಮಾಡಿ 10 ಸೆಲೆಬ್ರೆಟಿಗಳನ್ನು ವಶಕ್ಕೆ ಪಡೆದಿದ್ದರು.
ಬಾಲಿವುಡ್ ಡ್ರಗ್ಸ್ ಪಾರ್ಟಿ: ಕ್ರೂಸ್‌ಗೆ ಎಂಟ್ರಿಯಾದವರಿಗೆ 14 ಪುಟಗಳ 'ಕ್ರಯಾಕ್ ಬೈಬಲ್
ವಶಕ್ಕೆ ಪಡೆದ NCB ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬಳಿಕ ಆರ್ಯನ್ ಸೇರಿದಂತೆ ಮೂವರ ವೈದ್ಯಕೀಯ ಪರೀಕ್ಷೆ ನಡೆಸಿ ಬಂಧಿಸಿದ್ದಾರೆ. ಇಂದು ಸಂಜೆ ಮುಂಬೈ ಕೋರ್ಟ್‌ಗೆ ಹಾಜರುಪಡಿಸಿದ NCB ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿ ನೀಡುವಂತೆ ಮನವಿ ಮಾಡಿದ್ದರು. NCB ಅಧಿಕಾರಿಗಳ ಮನವಿ ಪುರಸ್ಕರಿಸಿದ ಮುಂಬೈ ಕೋರ್ಟ್ ನಾಳೆ ವರೆಗೆ NCB ಕಸ್ಡಡಿಗೆ ನೀಡಿದೆ.
ರೇವ್ ಪಾರ್ಟಿ ಸೇರಿದಂತೆ ಹಲವು ಪಾರ್ಟಿಗಳಲ್ಲಿ ಡ್ರಗ್ಸ್ ಪಾರ್ಟಿಗಳು ನಡೆಯುತ್ತಿದೆ. ಇದು ವ್ಯವಸ್ಥಿತ ಜಾಲ. ಇದರ ಹಿಂದಿನ ಜಾಲವನ್ನು ಭೇದಿಸಲು ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು NCB ಅಧಿಕಾರಿಗಳು ಹೇಳಿದ್ದಾರೆ. ಇತ್ತ ಆರ್ಯನ್ ಖಾನ್ ಪರ ಹಾಜರಾದ ವಕೀಲ ಸತೀಶ್ ಮನೇಶಿಂದೆ, ನನ್ನ ಕಕ್ಷಿದಾರ ಆರ್ಯನ್‌ನಿಂದ ಯಾವುದೇ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿಲ್ಲ. ಆರ್ಯನ್ ಖಾನ್ ಅವರನ್ನು ರೇವ್ ಪಾರ್ಟಿಗ ಆಹ್ವಾನಿಸಲಾಗಿತ್ತು. ಆಹ್ವಾನದ ಮೇರೆಗೆ ಆರ್ಯನ್ ಖಾನ್ ಪಾರ್ಟಿಗೆ ತೆರಳಿದ್ದರು. ಈ ಪಾರ್ಟಿಯಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಗೂ ಆರ್ಯನ್ ಖಾನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸತೀಶ್ ಮನೇಶಿಂದೆ ವಾದಿಸಿದ್ದಾರೆ.
ಇದೇ ವೇಳೆ ಕ್ರ್ಯೂಸ್ ಹಡುಗು ಕಂಪನಿ ಸ್ಪಷ್ಟನೆ ನೀಡಿದೆ. ಹಡಗಿನಲ್ಲಿ ನಡೆದ ರೇವ್ ಪಾರ್ಟಿ ಹಾಗೂ ಡ್ರಗ್ಸ್ ಪಾರ್ಟಿಲ್ಲಿ ಕ್ರ್ಯೂಸ್ ಹಡುಗು ಕಂಪನಿಗೆ ಯಾವುದೇ ಪಾತ್ರವಿಲ್ಲ. ಆದರೆ NCB ಅಧಿಕಾರಿಗಳು ದೆಹಲಿ ಮೂಲದ ಕ್ರ್ಯೂಸ್ ಹಡಗು ಮ್ಯಾನೇಜ್ಮೆಂಟ್ ಕಂಪನಿಗೂ ನೊಟೀಸ್ ನೀಡಿದೆ.