ಭಾರತ ವಿಶ್ವ ಕಪ್ ಸೋಲಲು ಅಮಿತಾಭ್ ಬಚ್ಚನ್ ಕಾರಣ ಅನ್ನುತ್ತಿದ್ದಾರೆ ಕ್ರಿಕೆಟ್ ಪ್ರೇಮಿಗಳು. ಅಷ್ಟಕ್ಕೂ ಅವರು ಹೀಗೆ ಹೇಳ್ತಿರೋದು ಯಾಕೆ?
ನಿನ್ನೆ ಗುಜರಾತಿನ ಅಹಮದಾಬಾದ್ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವ ಕಪ್ನಲ್ಲಿ ಭಾರತ ಪರಾಭವಗೊಂಡಿತು. ಉಳಿದ 10 ಪಂದ್ಯಗಳನ್ನು ಗೆದ್ದರೂ ಫೈನಲ್ನಲ್ಲಿ ಸೋತುದದ್ದಾಗಿ ಭಾರತ ಪ್ರೇಮಿಗಳು ದುಃಖ ಪಟ್ಟರು. 2003ರಲ್ಲಿ ಈ ಎರಡೂ ದೇಶಗಳು ಫೈನಲ್ ಆಡಿದಾಗ ಅದರಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಆದ್ದರಿಂದ ಭಾರತಕ್ಕೆ ಇದು ಚಾಲೆಂಜಿಂಗ್ ಆಟವಾಗಿತ್ತು. ಆದರೆ ಗೆಲುವು ಸಾಧಿಸದೇ ದೇಶ ಪ್ರೇಮಿಗಳು ನೋವು ಅನುಭವಿಸುವಂತಾಯಿತು. ಭಾರತ ಸೋತರೂ ಫೈನಲ್ ವರೆಗೆ ಪ್ರವೇಶಿಸಿರುವುದು ಸುಲಭದ ಮಾತಲ್ಲ ಎಂದು ಭಾರತದ ತಂಡಕ್ಕೆ ಪ್ರೋತ್ಸಾಹದ ನುಡಿಗಳನ್ನು ಇದಾಗಲೇ ಹಲವರು ಆಡುತ್ತಿದ್ದಾರೆ. ಫೈನಲ್ವರೆಗೆ ಬಂದಿರುವುದೇ ನಮ್ಮ ದೇಶಕ್ಕೆ ಹೆಮ್ಮೆ ಎಂದು ಕ್ರಿಕೆಟಿಗರಿಗೆ ಸಾಂತ್ವನದ ನುಡಿಗಳನ್ನು ಹೇಳುತ್ತಿದ್ದಾರೆ.
ಇವೆಲ್ಲವುಗಳ ನಡುವೆಯೇ ನಟ ಅಮಿತಾಭ್ ಬಚ್ಚನ್ ಸಕತ್ ಸುದ್ದಿಯಾಗುತ್ತಿದ್ದಾರೆ. ಭಾರತ ತಂಡವು ಫೈನಲ್ನಲ್ಲಿ ಸೋಲಲು ನಟ ಅಮಿತಾಭ್ ಬಚ್ಚನ್ ಅವರೇ ಕಾರಣ ಎಂದು ಕೆಲವು ಕ್ರಿಕೆಟ್ ಪ್ರೇಮಿಗಳು ನಟನ ಕಾಲೆಳೆಯುತ್ತಿದ್ದಾರೆ. ಹಲವರು ತಮಾಷೆಗಾಗಿ ನಟನ ಕಾಲೆಳೆಯುತ್ತಿದ್ದರೂ, ಇನ್ನು ಕೆಲವರು ಇದು ನಿಜ ಎಂದೂ ಹೇಳುತ್ತಿದ್ದಾರೆ. ಅಷ್ಟಕ್ಕೂ ಕ್ರಿಕೆಟ್ ವಿಶ್ವಕಪ್ ಗೆಲಲ್ಲು ಭಾರತ ವಿಫಲವಾಗಿರುವುದಕ್ಕೂ, ನಟ ಅಮಿತಾಭ್ ಬಚ್ಚನ್ ಅವರಿಗೂ ಏನು ಕಾರಣ ಎಂದು ಅಚ್ಚರಿಯಾಗಬಹುದು.
undefined
ಅಮಿತಾಭ್ ಸರ್ ಪ್ಲೀಸ್ ಪ್ಲಿಸ್... ಫೈನಲ್ ಮ್ಯಾಚ್ ನೋಡ್ಬೇಡಿ ಅಂತಿದ್ದಾರೆ ನೆಟ್ಟಿಗರು! ಅಷ್ಟಕ್ಕೂ ಆಗಿದ್ದೇನು?
ಆಗಿದ್ದೇನೆಂದರೆ, ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯ ಮುಗಿದ ಬಳಿಕ ಅಮಿತಾಭ್ ಬಚ್ಚನ್ ಭಾರತದ ತಂಡವನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದರು. ಅದರಲ್ಲಿ ಅವರು, ‘ನಾನು ಯಾವಾಗ ಮ್ಯಾಚ್ ನೋಡುವುದಿಲ್ಲವೋ ಆ ದಿನವೇ ಭಾರತ ಪಂದ್ಯವನ್ನು ಗೆಲ್ಲುತ್ತದೆ ’ ಎಂದಿದ್ದರು. ಇದೇ ಕಾರಣಕ್ಕೆ ಕ್ರಿಕೆಟ್ ಅಭಿಮಾನಿಗಳು ಹಾಗಿದ್ದರೆ ದಯವಿಟ್ಟು ಅಂತಿಮ ಪಂದ್ಯ ನೋಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಮಿತಾಭ್ ಅವರನ್ನು ಕೇಳಿಕೊಳ್ಳುತ್ತಿದ್ದರು. ಸರ್ ನಿಮ್ಮ ಮೇಲೆ ಅಪಾರ ಗೌರವ ಇದೆ. ಇದೀಗ ನೀವು ಫೈನಲ್ ಮ್ಯಾಚ್ ನೋಡಿದರೆ, ಸೋಲುವ ಭಯ ಶುರುವಾಗಿದೆ ಎಂದು ಮನವಿ ಮಾಡಿದ್ದರು. ಇನ್ನೂ ಕೆಲವರು ತಮಾಷೆಯ ಸಲಹೆಗಳನ್ನೂ ನೀಡಿದ್ದರು. ಫೈನಲ್ ಪಂದ್ಯದ ಮುಕ್ಯಾಯದ ನಂತರ ಹೈಲೆಟ್ಸ್ ನೋಡಿ ಸಂಭ್ರಮಿಸಿ ಎಂದು ಹೇಳಿದ್ದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಮಿತಾಭ್ ಅವರು, ಈಗ ನಾನು ಹೋಗಬೇಕೇ ಅಥವಾ ಬೇಡವೇ ಎಂದು ಯೋಚಿಸುತ್ತಿದ್ದೇನೆ ಎಂದಿದ್ದರು. ಅದಕ್ಕೆ ಮತ್ತೆ ರಿಪ್ಲೈ ಮಾಡಿರುವ ಅಭಿಮಾನಿಗಳು, ಪ್ಲೀಸ್ ಸರ್.. ಇದೊಂದು ತ್ಯಾಗ ಮಾಡಿ, ಫೈನಲ್‌ನಿಂದ ದೂರವಿರಿ. ಮನೆಯೊಳಗೆ ಇರಿ ಎಂದಿದ್ದರು. ಆದರೆ ನಿನ್ನೆ ಅಮಿತಾಭ್ ಅವರು ಮ್ಯಾಚ್ ನೋಡಿದ್ದಾರೆ. ಭಾರತ ಪರಾಭವಗೊಳ್ಳುತ್ತಿದ್ದಂತೆಯೇ ಈ ಬಗ್ಗೆ ನೋವನ್ನು ತೋಡಿಕೊಂಡಿದ್ದರು. ಜೊತೆಗೆ ಭಾರತ ಸರ್ವ ಪ್ರಯತ್ನ ಮಾಡಿ ಫೈನಲ್ ತಲುಪಿರುವಕ್ಕೆ ಹೆಮ್ಮೆ ಎನ್ನಿಸುತ್ತದೆ ಎಂದು ಹೇಳುವ ಮೂಲಕ ತಂಡದ ಕ್ರಿಕೆಟಿಗರಿಗೆ ಸಾಂತ್ವನದ ನುಡಿಗಳನ್ನೂ ಹೇಳಿದ್ದರು. ಆದರೆ ಕಾಕತಾಳೀಯ ಎನ್ನುವಂತೆ ಅಮಿತಾಭ್ ಅವರು ಮ್ಯಾಚ್ ನೋಡಿದಾಗಲೇ ಭಾರತ ಸೋಲನ್ನು ಅನುಭವಿಸಿದ್ದು, ಅದಕ್ಕೆ ನೀವೇ ಕಾರಣ ಎಂದು ಫ್ಯಾನ್ಸ್ ನಟನ ಕಾಲೆಳೆಯುತ್ತಿದ್ದಾರೆ.
ಅಮ್ಮ ಚಿಕ್ಕವಳಿದ್ದಾಗ ನಾನ್ ಹುಟ್ಟಿದ್ರೆ ಈ ಅಪ್ಪನ ಜತೆ ಮದ್ವೆ ಮಾಡ್ತಿರಲಿಲ್ಲ: ಬಿಗ್ಬಾಸ್ನಲ್ಲಿ ಸ್ಪರ್ಧಿ ಕಣ್ಣೀರು!