ಜೈಲುಪಾಲಾಗ್ತಿದ್ದಂತೆಯೇ ಕೈಕೊಟ್ಟ ಲವರ್​ 'ರಕ್ಕಮ್ಮ'ಗೆ ಖಾಸಗಿ ಜೆಟ್​ ಗಿಫ್ಟ್​! ಮತ್ತೆ ತೆಕ್ಕೆಗೆ ಬೀಳ್ತಾಳಾ ನಟಿ ಜಾಕ್ವೆಲಿನ್​?

Published : Feb 15, 2025, 12:26 PM ISTUpdated : Feb 15, 2025, 01:12 PM IST
ಜೈಲುಪಾಲಾಗ್ತಿದ್ದಂತೆಯೇ ಕೈಕೊಟ್ಟ ಲವರ್​ 'ರಕ್ಕಮ್ಮ'ಗೆ ಖಾಸಗಿ ಜೆಟ್​ ಗಿಫ್ಟ್​! ಮತ್ತೆ ತೆಕ್ಕೆಗೆ ಬೀಳ್ತಾಳಾ ನಟಿ ಜಾಕ್ವೆಲಿನ್​?

ಸಾರಾಂಶ

ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸುಕೇಶ್ ಚಂದ್ರಶೇಖರ್‌ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿದ್ದಾರೆ. ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ ಆರೋಪದ ಮೇಲೆ ತನಿಖೆ ನಡೆಯುತ್ತಿದೆ. ಜೈಲಿನಿಂದಲೂ ಸುಕೇಶ್, ಜಾಕ್ವೆಲಿನ್‌ಗೆ ಪತ್ರ ಬರೆದು ಉಡುಗೊರೆಗಳನ್ನು ಕಳುಹಿಸುತ್ತಿದ್ದಾರೆ. ಜಾಕ್ವೆಲಿನ್‌ ಸುಕೇಶ್‌ನೊಂದಿಗಿನ ಸಂಬಂಧವನ್ನು ನಿರಾಕರಿಸಿದ್ದರೂ, ಚಾಟ್‌ ಸಂದೇಶಗಳು ಬಹಿರಂಗವಾಗಿವೆ.

ಬಾಲಿವುಡ್​ ಕ್ವೀನ್​, ರಾ... ರಾ... ರಕ್ಕಮ್ಮ ಬೆಡಗಿ ಜಾಕ್ವೆಲಿನ್​ ಫರ್ನಾಂಡೀಸ್​ (Jacqueline Fernandez) ಪಾಡು ಯಾರಿಗೂ ಬೇಡವಾಗಿದೆ. ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದರೂ ಸುಲಭದಲ್ಲಿ ಮಿಲೇನಿಯರ್​ ಸಿಕ್ಕನೆಂದು  ಇನ್ನಷ್ಟು, ಮತ್ತಷ್ಟು ದುಡ್ಡಿನ ಆಸೆಗೆ ಹೋಗಿ ಪಡಬಾರದ ಪಾಡು ಪಡುತ್ತಿದ್ದಾರೆ. ಅಷ್ಟಕ್ಕೂ ಇದು ಇಂದು, ನಿನ್ನೆಯದ್ದಲ್ಲಿ 2-3 ವರ್ಷಗಳಿಂದ ನಟಿ ಜಾಕ್ವೆಲಿನ್​ ಫರ್ನಾಂಡೀಸ್​ ಹಿಂದೆ ಬಿದ್ದಿರೋನು ಸುಕೇಶ್​ ಚಂದ್ರಶೇಖರ್​.  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Money Laundering case) ಜೈಲು ಸೇರಿದ್ದಾನೆ  ಸುಕೇಶ್ ಚಂದ್ರಶೇಖರ್. ಈ ಘಟನೆಯಲ್ಲಿ ಜಾಕ್ವೆಲಿನ್‌ ಹೆಸರೂ ಥಳಕು ಹಾಕಿಕೊಂಡಿದ್ದು, ತನಿಖಾಧಿಕಾರಿಗಳು ವರ್ಷಗಳಿಂದ ತನಿಖೆ ಮಾಡುತ್ತಲೇ ಇದ್ದಾರೆ. ತನಿಖೆಯ ವೇಳೆ ಜಾಕ್ವೆಲಿನ್​ ಕೂಡ ಇದರಲ್ಲಿ ಆರೋಪಿಯನ್ನಾಗಿಸಲಾಗಿದೆ. ಕೋಟಿ ಕೋಟಿ ಬೆಲೆ ಬಾಳುವ ವಜ್ರಾಭರಣಗಳು, ಹೈಟೆಕ್​ ಕುದುರೆ ಸೇರಿದಂತೆ ಸುಕೇಶ್​ನಿಂದ ಜಾಕ್ವೆಲಿನ್​ ಪಡೆದಿರುವ ಉಡುಗೊರೆಗಳಿಗೆ ಲೆಕ್ಕವೇ ಇಲ್ಲ ಎನ್ನುವುದು ಕೂಡ ತನಿಖೆ ವೇಳೆ ತಿಳಿದು ಬಂದಿದೆ. 

ಆದರೆ ಆತ ಜೈಲು ಪಾಲಾಗುತ್ತಿದ್ದಂತೆಯೇ ಜಾಕ್ವೆಲಿನ್​ ವರಸೆ ಬದಲಿಸಿದ್ದಾರೆ. ಆದರೆ ಈ ಲವರ್​ ಸುಮ್ನೆ ಇರ್ತಾನಾ? ಜೈಲಿನಿಂದಲೇ ಪತ್ರ ಬರೆದು ನಟಿಗೆ ಹಿಂಸೆ ಕೊಡುತ್ತಲೇ ಇದ್ದಾನೆ.  ನಿನ್ನೆ ಪ್ರೇಮಿಗಳ ದಿನಕ್ಕೆ ವಿಶೇಷ ಉಡುಗೊರೆ ಕೊಟ್ಟು ತನ್ನ ಲವರ್​ ಮನಸ್ಸನ್ನು ಬದಲಿಸುವ ದೊಡ್ಡ ಹೆಜ್ಜೆ ಇಟ್ಟಿದ್ದಾನೆ ಈ ವಂಚಕ. ಜೈಲಿನಲ್ಲಿ ಇದ್ದುಕೊಂಡೇ ಈ ಉಡುಗೊರೆಯನ್ನು ಆಕೆಗೆ ಕೊಟ್ಟಿದ್ದಾನೆ. ದುಬಾರಿ ಬೆಲೆಬಾಳುವ ಉಡುಗೊರೆಗೆ ಆಕೆ ಇದಾಗಲೇ ಹಲವು ಬಾರಿ ಮರುಳಾಗಿರುವ ಕಾರಣ, ಈಗಲೂ ತನ್ನ ತೆಕ್ಕೆಗೆ  ಬೀಳಿಸಿಕೊಳ್ಳುವ ಆಸೆ ಆತನದ್ದು. ಈಗ ಒಂದು ಪತ್ರ ಬರೆದಿದ್ದು, ನಿನ್ನನ್ನು ಬಿಟ್ಟು ಪ್ರೇಮಿಗಳ ದಿನ ಹೇಗೆ ಆಚರಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾನೆ ಈ ಪಾಗಲ್​ ಪ್ರೇಮಿ. ‘ಜಾಕಿ ಡಿಯರ್​ ಈಗಲೂ ನಿನ್ನನ್ನು ಹುಚ್ಚನಂತೆ ಲವ್​  ಮಾಡುತ್ತಿದ್ದೇನೆ.   ನಮ್ಮ ಪಾಲಿಗೆ ಪ್ರೇಮಿಗಳ ದಿನ ತುಂಬಾ ಮುಖ್ಯ,  ಈ ದಿನವೇ ನಮ್ಮ ಸಂಬಂಧ ಶುರುವಾಗಿದ್ದು ಎಂದಿರುವ ಸುಕೇಶ್​,  ಈ ವರ್ಷ ನಿನಗೆ  ಗಲ್ಫ್​ಸ್ಟ್ರೀಮ್ ಜೆಟ್​ ಉಡುಗೊರೆ ನೀಡುತ್ತಿದ್ದೇನೆ. ಇದರ ಒಳಗೆ ಮತ್ತು ಹೊರಗೆ ನಿನ್ನ ಹೆಸರಿನ ಅಕ್ಷರಗಳಾದ ಜೆಎಫ್​ ಬರೆಸಿದ್ದೇನೆ.   ಬೇರೆ ಬೇರೆ ದೇಶಗಳಿಗೆ ಹೋಗುವಾಗ ಇದರಲ್ಲಿಯೇ ಹೋಗು ಎಂದಿರುವ ಸುಕೇಶ್​, ಆಕೆಯ ಹುಟ್ಟುಹಬ್ಬಕ್ಕೆ ರಿಜಿಸ್ಟ್ರೇಷನ್ ನಂಬರ್​ ಆರಿಸಿರುವುದಾಗಿ ತಿಳಿಸಿದ್ದಾನೆ. 

ಸದ್ದಿಲ್ಲದೇ ನಡೆಯಿತು ಉರ್ಫಿ ಎಂಗೇಜ್‌ಮೆಂಟ್‌? ಯಾರೀ ಹಿಂದೂ ಯುವಕ? ಸತ್ಯ ತಿಳಿದು ಅಭಿಮಾನಿಗಳು ಶಾಕ್‌!

 ಅಷ್ಟಕ್ಕೂ ಜಾಕ್ವೆಲಿನ್​, ಈ ಹಿಂದೆ  ಮತ್ತೊಂದು ಕೇಸ್‌ ದಾಖಲಿಸಿದ್ದರು. ಜೈಲಿನೊಳಗಿಂದ ಸುಕೇಶ್‌ ತಮಗೆ ಕಿರುಕುಳ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಅದೇ ಇನ್ನೊಂದೆಡೆ, ತನಿಖಾಧಿಕಾರಿಗಳು ಒಂದೊಂದೇ ತನಿಖೆ ಮಾಡುತ್ತಲೇ ನಟಿಯ ವಿರುದ್ಧ ಆರೋಪ ಮತ್ತಷ್ಟು ಸುತ್ತಿಕೊಳ್ಳುತ್ತಿದೆ.  ತಮಗೂ, ಸುಕೇಶ್​ಗೂ ಸಂಬಂಧವೇ ಇಲ್ಲ. ನಾನು ಆತನಿಗೆ ಯಾವುದೇ ಚಾಟ್​ ಸಂದೇಶ ಕಳುಹಿಸಿಯೇ ಇಲ್ಲ ಎಂದು ಜಾಕ್ವೆಲಿನ್​ ಹೇಳಿದ್ದರು. ಆದರೆ ಇದೀಗ 2021ರ ಪತ್ರ ವ್ಯವಹಾರಗಳು ತನಿಖಾಧಿಕಾರಿಗಳ ಕೈಸೇರಿದೆ. 

ಇದನ್ನು ಖುದ್ದು ಸುಕೇಶ್​ ಪೊಲೀಸರಿಗೆ ನೀಡಿದ್ದಾನೆ. ಯಾವಾಗ ನಟಿ ತನ್ನ ವಿರುದ್ಧವೇ ತಿರುಗಿ ಬಿದ್ದಳೋ, ಆಕೆಯ ಬಣ್ಣ ಬಯಲು ಮಾಡುವುದಾಗಿ ಈ ಹಿಂದೆ ಸುಕೇಶ್​ ಹೇಳಿದ್ದ. ಈಗ ಅದರಂತೆಯೇ 2021ರಲ್ಲಿ ತಮ್ಮಿಬ್ಬರ ನಡುವೆ ನಡೆದಿರುವ ಚಾಟ್​ ಸಂದೇಶಗಳನ್ನು ತನಿಖಾಧಿಕಾರಿಗಳ ಕೈಗೆ ಇತ್ತಿದ್ದ. ಅಂದು ತಾನು  ಜಾಕ್ವೆಲಿನ್‌ಗೆ ಪತ್ರ ಬರೆದು ಹೊಸ ವರ್ಷದ ಶುಭಾಶಯ ಕೋರಿದ್ದ ಸಂದರ್ಭದಲ್ಲಿ, ಮರಳಿ ಆಕೆ  ಐ ಲವ್ ಯೂ  ಮೆಸೇಜ್ ಕಳುಹಿಸಿದ್ದಳು ಎಂದಿದ್ದ ಸುರೇಶ್​. ಒಟ್ಟಿನಲ್ಲಿ ಕೆಲವು ವರ್ಷಗಳಿಂದ ನಡೆಯುತ್ತಿರುವ ಈ ಪ್ರಕರಣದ ತನಿಖೆ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಸದ್ಯ ತಿಳಿಯುತ್ತಿಲ್ಲ. 

ಪ್ರೇಮಿಗಳ ದಿನಕ್ಕೆ ಸೊಂಟ ಬಳಕಿಸುತ್ತ ಭರ್ಜರಿ ಸ್ಟೆಪ್​ ಹಾಕಿದ ಸೀತಾ: ಮದ್ವೆ ಫಿಕ್ಸ್​ ಖುಷಿನಾ ಕೇಳ್ತಿರೋ ಫ್ಯಾನ್ಸ್​
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?