ತಾನು ಕಾಳು ಹಾಕುತ್ತಿದ್ದ ಹುಡ್ಗಿ ಇನ್ನೊಬ್ಬನ ಮದ್ವೆ ಆದ್ಲು; ನಟ ಶಿವಕಾರ್ತಿಕೇಯನ್ ಒನ್‌ಸೈಡ್‌ ಲವ್ ರಿವೀಲ್

Published : Feb 15, 2025, 12:05 PM ISTUpdated : Feb 15, 2025, 12:13 PM IST
ತಾನು ಕಾಳು ಹಾಕುತ್ತಿದ್ದ ಹುಡ್ಗಿ ಇನ್ನೊಬ್ಬನ ಮದ್ವೆ ಆದ್ಲು; ನಟ ಶಿವಕಾರ್ತಿಕೇಯನ್ ಒನ್‌ಸೈಡ್‌ ಲವ್ ರಿವೀಲ್

ಸಾರಾಂಶ

ನಟ ಶಿವಕಾರ್ತಿಕೇಯನ್ ತಮ್ಮ ಕಾಲೇಜು ದಿನಗಳ ಏಕಪಕ್ಷೀಯ ಪ್ರೇಮದ ಬಗ್ಗೆ ಬಹಿರಂಗಪಡಿಸಿದ್ದಾರೆ. ಆ ಹುಡುಗಿ ಬೇಗನೆ ಮತ್ತೊಬ್ಬರನ್ನು ಪ್ರೀತಿಸತೊಡಗಿದ್ದರಿಂದ ಅವರ ಪ್ರೇಮ ವಿಫಲವಾಯಿತು. ಮುಂದೆ ಆಕೆಯನ್ನು ಮಾಲ್‌ವೊಂದರಲ್ಲಿ ನೋಡಿದಾಗಲೂ ಮಾತನಾಡಿಸಲಿಲ್ಲ. ಆಕೆ ಬೇರೆ ಹುಡುಗನನ್ನು ಮದುವೆಯಾಗಿದ್ದಾಳೆ ಎಂದು ತಿಳಿದು, ತಾನು ಪ್ರೀತಿಸಿದ ಹುಡುಗಿ ಬೇರೆಯವರಿಗೂ ಸಿಗಲಿಲ್ಲವಲ್ಲ ಎಂದು ಸಮಾಧಾನಪಟ್ಟುಕೊಂಡಿದ್ದಾಗಿ ಹೇಳಿದ್ದಾರೆ.

ಮಿಮಿಕ್ರಿ ಕಲಾವಿದನಾಗಿ, ತಮಿಳು ಕಿರುತೆರೆ ನಿರೂಪಕನಾಗಿ ಅನಂತರ ನಾಯಕನಾದ ಶಿವಕಾರ್ತಿಕೇಯನ್‌ ಕೂಡ ಒನ್‌ಸೈಡ್‌ ಲವ್ ಅನುಭವಿಸಿರುವವರೇ. ಸಾಮಾನ್ಯವಾಗಿ ಪ್ರೀತಿ ಹೇಳಿಕೊಳ್ಳಲು ಯೋಚನೆ ಮಾಡುತ್ತಾರೆ..ರಿಜೆಕ್ಟ್ ಮಾಡಿಬಿಟ್ಟರೆ? ಜಗಳ ಮಾಡಿಬಿಟ್ಟರೆ ಅಥವಾ ಮುಂದೆ ಏನಾದರೂ ಸಮಸ್ಯೆ ಆಗಿಬಿಟ್ಟರೆ ಅನ್ನೋ ಭಯದಲ್ಲಿ ಸುಮ್ಮನಾಗುತ್ತಾರೆ. ಇದೇ ಭಯದಲ್ಲಿ ನಟ ಶಿವಕಾರ್ತಿಕೇಯನ್‌ ಕೂಡ ಕಾಲೇಜ್‌ನಲ್ಲಿ ಅನುಭವಿಸಿದ್ದಾರೆ. ಲವ್‌ ಅಟ್ ಫಸ್ಟ್ ಸೈಟ್‌ ಎಷ್ಟು ಬೇಗ ಬ್ರೇಕ್ ಅಯ್ತು ಎಂದು ರಿವೀಲ್ ಮಾಡಿದ್ದಾರೆ.

ಈ ಹಿಂದೆ ಶಿವಕಾರ್ತಿಕೇಯನ್‌ರನ್ನು ಮಹಿಳಾ ಅಭಿಮಾನಿಯೊಬ್ಬರು ಪ್ರಶ್ನಿಸುತ್ತಾರೆ. 'ಸರ್ ಇರುವರೆಗೂ ಯಾರಿಗೂ ಗೊತ್ತಿಲ್ಲ ಸೀಕ್ರೆಟ್ ರಿವೀಲ್ ಮಾಡಬೇಕು. ಸುಮ್ಮನೆ ಏನೋ ಹೇಳಬಾರದು ಕಾಲೇಜ್‌ ದಿನಗಳ ಬಗ್ಗೆ ಹೇಳಬೇಕು' ಎಂದು ಡಿಮ್ಯಾಂಡ್ ಮಾಡುತ್ತಾರೆ. ಆಗ ಹಿಂಜರಿಯದೆ ತಮ್ಮ ಓನ್‌ ಸೈಡ್‌ ಲವ್ ರಿವೀಲ್ ಮಾಡಲು ಮುಂದಾಗಿದ್ದಾರೆ.'ನನಗೆ ಒನ್‌ ಸೈಡ್ ಲವ್‌ವೊಂದು ಇತ್ತು. ಆದರೆ ಅದು ಕೆಲವು ದಿನಗಳಲ್ಲಿ ಕರಗಿ ಹೋಗಿತ್ತು. ಏಕೆಂದರೆ ಅಕೆ ಅಷ್ಟು ಬೇಗ ಮತ್ತೊಬ್ಬ ಹುಡುಗನ ಜೊತೆ ಕಮೀಟ್ ಅಗಿಬಿಟ್ಟರು. ಬಹುಷ ನನ್ನ ಜೀವನದಲ್ಲಿ ಯಾರಿಗೂ ಹೇಳದೆ ಇರುವ ರಹಸ್ಯ ಅಂದ್ರೆ ಇದೇ ಇರಬೇಕು. ನಮ್ಮ ಕಾಲೇಜ್‌ನ ಕೆಲ ಸ್ನೇಹಿತರಿಗೆ ಮಾತ್ರ ಗೊತ್ತಿತ್ತು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಕಾರ್ತಿಕೇಯನ್ ಮಾತನಾಡಿದ್ದಾರೆ. 

ಒಂದು ವರ್ಷ ಆದ್ಮೇಲೆ ಅರಿಶಿಣ ಶಾಸ್ತ್ರದ ಫೋಟೋ ಹಂಚಿಕೊಂಡ ಸೌಂದರ್ಯ; ಜಗದೀಶ್ ನಗು ನೋಡಿ ಅಭಿಮಾನಿಗಳು ಭಾವುಕ

'ಆಗ ಏನು ಮಾಡಲು ಭಯ ಆಗುತ್ತಿತ್ತು ಏಕೆಂದರೆ ನಿಮ್ಮ ಮಗ ಹೀಗೆ ಮಾಡಿಬಿಟ್ಟ ಎಂದು ಮನೆಯಲ್ಲಿ ಪೋಷಕರಿಗೆ ಹೇಳಿದ್ದರೆ ಸಮಸ್ಯೆ ಆಗಬಹುದು ಎಂದು ಸುಮ್ಮನಾಗಿಬಿಟ್ಟೆ. ಯಾವುದೇ ರೀತಿಯಲ್ಲಿ ನಾನು ತರಲೆ ಮತ್ತು ತಂಟೆ ಮಾಡುತ್ತಿರಲಿಲ್ಲ. ನಾನು ಟಿವಿಯಲ್ಲಿ ನಿರೂಪಕನಾಗಿದ್ದಾಗ ಮಾಲ್‌ ಒಂದರಲ್ಲಿ ದೂರದಿಂದ ಆ ಹುಡುಗಿಯನ್ನು ಮತ್ತೆ ನೋಡಿದ್ದೆ. ಆದರೆ ಮಾತನಾಡಿಸಲಿಲ್ಲ. ಆಕೆ ಬೇರೆ ಹುಡುಗನನ್ನು ಮದುವೆ ಆಗಿದ್ದಾಳೆ ಎಂದು ತಿಳಿಯುತ್ತು. ಆಗ ಆಕೆ ಪ್ರೀತಿಸುತ್ತಿದ್ದ ಹುಡುಗ ಬೇರೆ ಹುಡುಗ ಆಗಿದ್ದು. ಅಬ್ಬಬ್ಬಾ ಅವನಿಗೂ ಅವಳು ಸಿಗಲಿಲ್ಲ ಎಂದು ಸಮಾಧಾನದಿಂದ ಖುಷಿ ಪಟ್ಟಿದ್ದೆ. ಅವಳ ಮದುವೆ ಸೇರಿದಂತೆ ಯಾವುದೇ ವಿಚಾರದ ಬಗ್ಗೆ ಚರ್ಚಿಸಲಿಲ್ಲ ಕಾರಣ ಆಕೆ ನಮ್ಮ ಕ್ಲಾಸ್‌ ಹುಡುಗಿ ಅಲ್ಲ. ಬೇರೆ ಕ್ಲಾಸ್ ಹುಡುಗಿ ಅಂತ ಸುಮ್ಮನಾಗಿದ್ದು' ಎಂದು ಕಾರ್ತಿಕೇಯನ್ ಹೇಳಿದ್ದಾರೆ. 

ಧನಂಜಯ್- ಧನ್ಯತಾ ಮದುವೆ ಒಡವೆಗಳ ಗ್ರಾಂ ಮತ್ತು ಬೆಲೆ ಬಗ್ಗೆ ರಿವೀಲ್ ಮಾಡಿದ ಡಿಸೈನರ್ ಶಚಿನಾ ಹೆಗ್ಗಾರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?