
ಡಿವೋರ್ಸ್ ಆಗುತ್ತಿದ್ದಂತೆ ನಟಿ ಸಮಂತಾ ಆರೋಗ್ಯ ಹದಗೆಟ್ಟಿತ್ತು. ಹೋದಲ್ಲಿ ಬಂದಲೆಲ್ಲ ತಾವು ಅನುಭವಿಸಿದ ಕಷ್ಟದ ದಿನಗಳ ಬಗ್ಗೆ ಅವರು ಮಾತನಾಡಿದರು. ಆಗೆಲ್ಲ ನಾಗಚೈತನ್ಯರದ್ದೇ ತಪ್ಪು ಇರಬಹುದು ಎಂದು ವೀಕ್ಷಕರು ತಿಳಿದು ಅವರನ್ನು ಕ್ರಿಮಿನಲ್ ಥರ ಕಂಡರು. ಇತ್ತೀಚೆಗೆ ಡಿವೋರ್ಸ್ ಬಗ್ಗೆ ನಾಗಚೈತನ್ಯ ಮೌನ ಮುರಿದಿದ್ದರು. ಇದಾದ ಬಳಿಕ ನಾಗಾರ್ಜುನ ಕೂಡ ಮಗನ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ.
ನಾಗಾರ್ಜುನ ಏನು ಹೇಳಿದ್ರು?
ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾಗಾರ್ಜುನ ಅವರು “ನಾಗಚೈತನ್ಯ ಮತ್ತೆ ತನ್ನ ಖುಷಿಯನ್ನು ಕಂಡುಕೊಂಡಿದ್ದಾನೆ. ಅವನೀಗ ಖುಷಿಯಾಗಿದ್ದಾನೆ. ನಾಗಚೈತನ್ಯಗೂ, ಕುಟುಂಬಕ್ಕೂ ಆ ಸಮಯ ಸುಲಭ ಇರಲಿಲ್ಲ. ಸಮಂತಾರಿಂದ ದೂರ ಆಗಿದ್ದು, ಅವನನ್ನು ಡಿಪ್ರೆಶನ್‌ಗೆ ದೂಡಿತ್ತು. ಯಾರಮುಂದೆಯೂ ಅವನು ತನ್ನ ಬೇಸರವನ್ನು ಹೊರಹಾಕಿರಲಿಲ್ಲ. ಅವನು ಬೇಸರದಲ್ಲಿದ್ದಾನೆ ಎನ್ನೋದು ನನಗೆ ಮಾತ್ರ ಗೊತ್ತಿತ್ತು” ಎಂದು ನಾಗಾರ್ಜುನ ಅವರು ಹೇಳಿದ್ದರು.
ನಟಿ ಸಮಂತಾ ಮೊಬೈಲ್ ವಾಲ್‌ಪೇಪರ್‌ನಲ್ಲಿ ಯಾರ ಫೋಟೋ ಇದೆ ಗೊತ್ತಾ?: ಬೆಳಗ್ಗೆ ಎದ್ದ ತಕ್ಷಣ ಇದನ್ನೇ ನೋಡ್ತಾರಂತೆ!
ನಾಗಾರ್ಜುನ ಹೇಳಿದ್ದೇನು?
ಇದಾದ ನಂತರದಲ್ಲಿ ಮತ್ತೆ ನಾಗಚೈತನ್ಯ ಅವರು ಮಾತನಾಡಿ, “ನಮ್ಮ ಮನೆಯಲ್ಲಿ ಈಗಾಗಲೇ ಒಂದು ಡಿವೋರ್ಸ್ ಆಗಿದೆ. ಅದರಿಂದ ಏನಾಗಲಿದೆ ಎಂಬುದು ನಮಗೆ ಗೊತ್ತು. ಮತ್ತೆ ಡಿವೋರ್ಸ್ ಅಂದ್ರೆ ಹೇಗೆ ಏನು ಎನ್ನೋದು ಅರಿವಿದೆ. ಇದೆಲ್ಲ ಗೊತ್ತಿದ್ದೇ ನಾವು ದೂರ ಆಗಿದ್ದೇವೆ. ಇದು ಎಲ್ಲರ ಮನೆಯಲ್ಲಿ ನಡೆಯೋದೆ, ನಮ್ಮ ಮನೆಯಲ್ಲಿ ಮಾತ್ರ ಅಲ್ಲ. ಏನೂ ಗೊತ್ತಿಲ್ಲದೆ ನನ್ನನ್ನು ಕ್ರಿಮಿನಲ್ ಅಂತ ದೂಷಿಸಿದರು. ಇನ್ನು ಶೋಭಿತಾಗೆ ಬಾಯಿಗೆ ಬಂದ ಹಾಗೆ ಮಾತನಾಡಿದರು. ನನ್ನ, ಸಮಂತಾ ವಿಚ್ಛೇದನಕ್ಕೂ ಶೋಭಿತಾಗೂ ಸಂಬಂಧವೇ ಇಲ್ಲ. ಇದನ್ನೆಲ್ಲ ಸಹಿಸಿಕೊಂಡಿರುವ ಅವಳು ನಿಜಕ್ಕೂ ಹೀರೋ” ಎಂದು ಹೇಳಿದ್ದರು.
ಇನ್ನು thandel movie ಸಿನಿಮಾ ಸಕ್ಸಸ್ ಮೀಟ್ ವೇಳೆ ನಾಗಚೈತನ್ಯ ಬಗ್ಗೆ ಮಾತನಾಡಿದ್ದ ನಾಗಾರ್ಜುನ ಅವರು “ನನ್ನ ಮಗ ನಾಗಚೈತನ್ಯ ಮುಖದಲ್ಲಿ ಖುಷಿ ನೋಡಿ ನನಗೆ ಖುಷಿಯಾಗಿದೆ. ಸಿನಿಮಾದುದ್ದಕ್ಕೂ ಅವನು ಕ್ಯಾರೆಕ್ಟರ್‌ನಲ್ಲಿದ್ದ. ಇನ್ನು ಕೆಲ ದೃಶ್ಯಗಳು ತುಂಬ ಭಾವನಾತ್ಮಕವಾಗಿವೆ. ನಾನು ಸಕ್ಸಸ್ ಮೀಟ್ ಅಟೆಂಡ್ ಆಗಿ ತುಂಬ ವರ್ಷಗಳೇ ಆಗಿತ್ತು. ಈ ಸಿನಿಮಾ ಯಶಸ್ಸು ನನಗೆ ಖುಷಿ ಕೊಟ್ಟಿದೆ” ಎಂದು ಹೇಳಿದ್ದರು.
ಸಮಂತಾ ಬಗ್ಗೆ ಮೊದಲ ಬಾರಿ ನಾಗ ಚೈತನ್ಯ ಪ್ರತಿಕ್ರಿಯೆ! | #nagachaitanya #samantha #shorts
ಸಮಂತಾ ಅವ್ರೇ ದೂರ ಮಾಡಿದ್ರಾ?
ಪದೇ ಪದೇ ನಾಗಾರ್ಜುನ ಅವರು ಮಗನ ಮುಖದಲ್ಲಿ ಖುಷಿ ನೋಡಿದೆ, ಬೇಸರದಲ್ಲಿದ್ದ ಎನ್ನುವ ಮಾತು ವೀಕ್ಷಕರಿಗೆ ಗೊಂದಲ ಮೂಡಿಸಿದೆ. ಸಮಂತಾ ಅವರೇ ನಾಗಚೈತನ್ಯರಿಂದ ದೂರ ಆದರು ಎಂದು ಪರೋಕ್ಷವಾಗಿ ನಾಗಾರ್ಜುನ ಹೇಳುತ್ತಿದ್ದಾರಾ ಎನ್ನುವ ಸಂಶಯ ಉಂಟಾಗಿದೆ. ಒಟ್ಟಿನಲ್ಲಿ ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನಕ್ಕೆ ಅಸಲಿ ಕಾರಣ ಏನು ಎನ್ನೋದು ಇನ್ನೂ ರಿವೀಲ್ ಆಗಿಲ್ಲ.
ಏಳು ವರ್ಷಗಳ ಕಾಲ ಪ್ರೀತಿಸಿದ್ದ ಸಮಂತಾ ಹಾಗೂ ನಾಗಚೈತನ್ಯ ಅವರು ಹಿಂದು, ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆಯಾಗಿದ್ದರು. ಈ ಅದ್ದೂರಿ ಮದುವೆಗೆ ಕೋಟಿ ಕೋಟಿ ರೂಪಾಯಿ ಖರ್ಚು ಆಗಿತ್ತು. ಇದಾದ ಬಳಿಕ ನಾಲ್ಕು ವರ್ಷಗಳ ಕಾಲ ಈ ಜೋಡಿ ಹೊರಗಿನ ಜಗತ್ತಿಗೆ ತಾವು ಚೆನ್ನಾಗಿದ್ದೇವೆ ಎನ್ನುವ ರೀತಿಯಲ್ಲಿ ನಡೆದುಕೊಂಡಿತ್ತು. ಕೊನೆಗೂ 2021ರಲ್ಲಿ ಈ ಜೋಡಿ ಡಿವೋರ್ಸ್ ಪಡೆದ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿತ್ತು.
ನಟಿ ಸಮಂತಾಗೆ ಡಿವೋರ್ಸ್ ಕೊಟ್ಟಿದ್ದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟ ನಾಗ ಚೈತನ್ಯ!
ನಾಗಚೈತನ್ಯ ಅವರು ವರ್ಷಗಳ ಕಾಲ ಪ್ರೀತಿಸಿ ನಟಿ ಶೋಭಿತಾ ಜೊತೆ ಮರುಮದುವೆಯಾಗಿದ್ದಾರೆ. ಇನ್ನು ಸಮಂತಾ ಅವರು “ನನ್ನ ಹೃದಯ ಬ್ಲಾಕ್ ಆಗಿದೆ, ಮತ್ತೆ ಪ್ರೀತಿ ಹುಟ್ಟೋದಿಲ್ಲ, ಯಾರಿಗೂ ನನ್ನ ಹೃದಯದೊಳಗಡೆ ಪ್ರವೇಶ ಇಲ್ಲ” ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.