ಮೈ ಕಾಣುವ ಬಟ್ಟೆಗೆ ದೇವಿ ಲಕ್ಷ್ಮಿ ನೆಕ್ಲೇಸ್ ಧರಿಸಿದ್ದ ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು

By Shruthi KrishnaFirst Published Mar 28, 2023, 11:21 AM IST
Highlights

ಮೈ ಕಾಣುವ ಬಟ್ಟೆಗೆ  ಲಕ್ಷ್ಮಿ ವಿಗ್ರಹ ವಿರುವ ನೆಕ್ಲೇಸ್ ಧರಿಸಿದ್ದ ರ್ಯಾಂಪ್ ವಾಕ್ ಮಾಡಿದ್ದ ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲಾಗಿದೆ. 

ಬಾಲಿವುಡ್ ಖ್ಯಾತ ನಟಿ ತಾಪ್ಸಿ ಪನ್ನು ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ನೇರ ನಡೆ, ನುಡಿಯ ಮೂಲಕವೇ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ತಾಪ್ಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪದ ಮೇರೆಗೆ ನಟಿ ತಾಪ್ಸಿ ವಿರುದ್ಧ ದೂರು ದಾಖಲಾಗಿದೆ. ಇತ್ತೀಚೆಗಷ್ಟೆ ರ್ಯಾಂಪ್ ವಾಕ್ ಮಾಡಿದ್ದ ನಟಿ ತಾಪ್ಸಿ ಬೋಲ್ಡ್ ಬಟ್ಟೆಗೆ ಲಕ್ಷ್ಮಿ ನೆಕ್ಲೇಸ್ ಧರಿಸಿದ್ದರು. ಇದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ದೂರು ದಾಖಲಾಗಿದೆ.

ಮಾರ್ಚ್ 12 ರಂದು ಮುಂಬೈನಲ್ಲಿ ನಡೆದ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ನಟಿ ತಾಪ್ಸಿ ಪನ್ನು ರ್ಯಾಂಪ್ ವಾಕ್ ಮಾಡಿದ್ದರು. ರ್ಯಾಂಪ್ ವಾಕ್‌ಗೆ ತಾಪ್ಸಿ ಕೆಂಪು ಬಣ್ಣದ ಗೌನ್ ಧರಿಸಿದ್ದರು. ಲಕ್ಷ್ಮಿ ದೇವಿಯ ಚಿತ್ರವಿರುವ ನೆಕ್ಲೇಸ್ ಧರಿಸಿದ್ದರು. ತಾಪ್ಸಿ ಧರಿಸಿದ್ದ ಡ್ರೆಸ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಇದೀಗ ದೂರು ದಾಖಲಾಗಿದೆ. ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಪುತ್ರ, ಹಿಂದ್ ರಕ್ಷಕ್ ಸಂಘಟನೆಯ ಏಕಲವ್ಯ ಸಿಂಗ್ ಗೌರ್ ಮಾರ್ಚ್ 27ರಂದು ಇಂದೋರ್‌ನಲ್ಲಿ ದೂರು ದಾಖಲಿದ್ದಾರೆ. ತಾಪ್ಸಿ ಪನ್ನು ಲಕ್ಷ್ಮಿ ದೇವಿಯ ಚಿತ್ರವಿರುವ ನೆಕ್ಲೇಸ್ ಧರಿಸುವ ಜೊತೆಗೆ ಬೋಲ್ಡ್ ಉಡುಗೆ ಧರಿಸಿ ಅಶ್ಲೀಲತೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ. 

ಒಂದು ವೇಳೆ ಕಂಗನಾ ಎದುರು ಬಂದ್ರೆ ಏನ್ ಮಾಡ್ತೀರಾ? ನಟಿ ತಾಪ್ಸಿ ರಿಯಾಕ್ಷನ್ ಹೀಗಿತ್ತು

Latest Videos

ನೆಟ್ಟಿಗರ ತರಾಟೆ

ತಾಪ್ಸಿ ಪನ್ನು ಬೋಲ್ಡ್ ಡ್ರೆಸ್‌ನಲ್ಲಿ  ಮಾ ಲಕ್ಷ್ಮಿ ವಿಗ್ರಹವಿರುವ ನೆಕ್ಲೇಸ್ ಧರಿಸಿರುವುದು ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಹಿಂದೂ ಧರ್ಮಕ್ಕೆ 'ಅಪಮಾನ' ಎಂದು ಹೇಳುತ್ತಿದ್ದಾರೆ. ಇದು ಅಶ್ಲೀಲ ಫೋಟೋ. ದೇಹಪೂರ್ತಿ ಕಾಣಿಸುವ ಡ್ರೆಸ್​ನ ಜೊತೆ ಹಿಂದೂ ಧರ್ಮಿಯರು ಅತ್ಯಂತ ಭಕ್ತಿಯಿಂದ ಪೂಜಿಸುವ ಲಕ್ಷ್ಮೀದೇವಿ ಫೋಟೋ ಇರುವ ನೆಕ್ಲೇಸ್​ ಧರಿಸಿರುವುದು ಖಂಡನಾರ್ಹ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಭಾರತೀಯ ಮಹಿಳೆಯರಿಗೆ ಅವರದ್ದೇ ಆದ ಘನತೆ ಇದೆ. ಅವರನ್ನು ದೇವತೆಗಳಿಗೆ ಹೋಲಿಸಲಾಗುತ್ತದೆ. ಇಂಥ ಅಶ್ಲೀಲ ಬಟ್ಟೆ ಧರಿಸಿ ಲಕ್ಷ್ಮಿಯನ್ನು ಅಪಮಾನ ಮಾಡಿರುವ ನೀವು ಹೆಣ್ಣೇ ಅಲ್ಲ ಎಂದು ಇನ್ನು ಕೆಲವರು ಕೆಂಡ ಕಾರುತ್ತಿದ್ದಾರೆ. 

ಬೋಲ್ಡ್​ ಆಗಿ ಕಾಣಲು ಹೋಗಿ ಎಡವಟ್ಟು ಮಾಡಿಕೊಂಡ Taapsee Pannu

ತಾಪ್ಸಿ ಪನ್ನು ಸಿನಿಮಾಗಳು 

ತಾಪ್ಸಿ ಪನ್ನು ಸದ್ಯ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೊನೆಯದಾಗಿ ಬ್ಲರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಜನ ಗಣ ಮನ, ಏಲಿಯನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಶಾರುಖ್ ಖಾನ್ ನಟನೆಯ ಡಂಕಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ತಾಪ್ಸಿ ಕಿಂಗ್ ಖಾನ್ ಶಾರುಖ್ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾಗೆ ರಾಜಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. 


 

click me!