ದನದ ಮಾಂಸ ತಿಂದಿದ್ದಕ್ಕೆ ಭಾರತ ಬಿಟ್ಟು ಹೋದ್ರಾ ಪ್ರಿಯಾಂಕಾ; ಊಹಾಪೋಹಗಳಿಗೆ ನಟಿ ಹೇಳಿದ್ದೇನು?

By Vaishnavi Chandrashekar  |  First Published Mar 28, 2023, 10:48 AM IST

ಸರಿಯಾದ ರೀತಿಯಲ್ಲಿ ಕೆಲಸ ಸಿಗದ ಕಾರಣ ಬಾಲಿವುಡ್‌ನಿಂದ ಹೊರ ನಡೆದಿರುವುದಾಗಿ ಪ್ರಿಯಾಂಕಾ ಚೋಪ್ರಾ ರಿವೀಲ್ ಮಾಡಿದ್ದಾರೆ. ಅಲ್ಲದೆ ಅನೇಕರ ಜೊತೆ ಸಂಬಂಧ ಸರಿಯಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ.... 


ಅಮೆರಿಕಾ ಪಾಪ್ ಸಿಂಗರ್ ನಿಕ್ ಜೋನಾಸ್‌ನ ಪ್ರೀತಿಸಿ ಮದುವೆಯಾಗಿರುವ ಪ್ರಿಯಾಂಕಾ ಚೋಪ್ರಾ ಹಿಂದಿ ಚಿತ್ರರಂಗವನ್ನು ಬಿಟ್ಟು ಯುಎಸ್‌ನಲ್ಲಿ ಸೆಟಲ್‌ ಆಗಲು ಕಾರಣವೇನು ಎಂದು ಹಲವು ಬಾರಿ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಮೌನವೇ ಉತ್ತರ ಎನ್ನುತ್ತಿದ್ದ ನಟಿ ಮೊದಲ ಸಲ ಕಾರಣ ರಿವೀಲ್ ಮಾಡಿದ್ದಾರೆ. ಸರಿಯಾದ ಅವಕಾಶ ಅಂದ್ರೆ ಏನು? ಗೋಮಾಂಸ ಸೇವಿಸಲು ಯಾರಿಂದ ಒತ್ತಾಯವಿತ್ತು......?

ಡಾಕ್ಸ್ ಶೆಫರ್ಡ್ ಅವರ ಪಾಡ್‌ಕ್ಯಾಸ್ಟ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ನಲ್ಲಿ ಮಾತನಾಡುವಾಗ ಯಾವ ಕಾರಣಕ್ಕೆ ಹಿಂದಿ ಚಿತ್ರರಂಗವನ್ನು ಬಿಟ್ಟು ಯುಎಸ್‌ನಲ್ಲಿ ಕೆಲಸ ಹುಡುಕಲು ಆರಂಭಿಸಿದರು? ಮೊದಲ ಸಲ ಸಂದರ್ಶನದಲ್ಲಿ ನನಗೆ ತುಂಬಾ ಸೇಫ್ ಫೀಲ್ ಆಗುತ್ತಿದೆ ಎಂದು ಹೇಳಲು ಕಾರಣವೇನು? ಒಂದು ರೀತಿ ಗೊಂದಲದಲ್ಲಿ ಮಾತನಾಡಿರುವ ಪ್ರಿಯಾಂಕಾ ಹೇಳಿಕೆಯಲ್ಲಿ ಹೈಲೈಟ್ ಆಗಿರುವುದು ಎರಡೇ ವಿಚಾರ, ಒಂದು ಗೋಮಾಂಸ ಮತ್ತೊಂದು ಅವಕಾಶ. 

Tap to resize

Latest Videos

ಪತಿ ನಿಕ್‌ ಜೋನಾಸ್‌ ಮೇಲೆ ಬ್ರಾ ಎಸೆದ ಅಭಿಮಾನಿ; ಹಿಡಿದು ಸಂಭ್ರಮಿಸಿದ ಪ್ರಿಯಾಂಕಾ ಚೋಪ್ರಾ

'ಬಾಲಿವುಡ್‌ ಚಿತ್ರರಂಗದಲ್ಲಿ ನನ್ನನ್ನು ಮೂಲೆ ಮಾಡಿಬಿಟ್ಟರು. ಅನೇಕರು ನನಗೆ ಅವಕಾಶ ಕೊಡುವುದು ನಿಲ್ಲಿಸಿದ್ದರು, ಹಲವರ ಜೊತೆ ನಾನು ಗೋಮಾಂಸ ಸೇವಿಸಿರುವೆ, ಬೇರೆ ಅವರ ರೀತಿ ನನಗೆ ಗೇಮ್ ಆಡಿ ಕೆಲಸ ಗಿಟ್ಟಿಸಿಕೊಳ್ಳಲು ಬರುವುದಿಲ್ಲ ಅಲ್ಲಿ ನಡೆಯುತ್ತಿದ್ದ ಡ್ರಾಮಾ ನೋಡಲಾಗದೆ ನಾನು ಬ್ರೇಕ್ ತೆಗೆದುಕೊಂಡು ಹೊರ ಬರಬೇಕಿತ್ತು' ಎಂದು ಪ್ರಿಯಾಂಕಾ ಮಾತನಾಡಿದ್ದಾರೆ. 

ಹಾಲಿವುಡ್ ಎಂಟ್ರಿ ಬಗ್ಗೆ ಶಾರುಖ್ ಖಾನ್ ಮಾತಿಗೆ ಪ್ರಿಯಾಂಕಾ ಚೋಪ್ರಾ ತಿರುಗೇಟು

ದೇಸಿ ಹಿಟ್ಸ್‌ನ ಅಂಜುಲಾ ಆಚಾರ್ಯ ಮೊದಲ ಸಲ ಪ್ರಿಯಾಂಕಾ ಚೋಪ್ರಾರನ್ನು ಮ್ಯೂಸಿಕ್ ವಿಡಿಯೋದಲ್ಲಿ ನೋಡಿ ಕರೆ ಮಾಡಿ ಸಾತ್ ಖೂನ್ ಮಾಫ್ ಚಿತ್ರೀಕರಣ ಮಾಡಲು ಆಹ್ವಾನಿಸಿದ್ದರು. ಆಗ ಯುಎಸ್‌ನಲ್ಲಿ ಮ್ಯೂಸಿಕ್ ಕೆರಿಯರ್‌ ಆರಂಭಿಸಲು ಇಷ್ಟವೇ ಎಂಬ ಪ್ರಶ್ನೆ ಬಂದಾಗ ಪಿಗ್ಗಿ ಒಪ್ಪಿಕೊಂಡಿದ್ದಾರೆ. 'ಈ ಹಾಡು ನನ್ನನ್ನು ಮತ್ತೊಂದು ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟಿದೆ. ನನಗೆ ಸಿನಿಮಾ ಬೇಕು ಸಿನಿಮಾನೇ ಮಾಡಬೇಕು ಎನ್ನುವ ಹಂಬಲ ಈಗಿಲ್ಲ ನಾನು ಪಡೆಯಲು ಬಯಸಲಿಲ್ಲ ಆದರೆ ನಾನು ಕೆಲವು ಕ್ಲಬ್‌ಗಳು ಮತ್ತು ಜನರ ಗುಂಪುಗಳನ್ನು ಸ್ಮೂಜ್ ಮಾಡಬೇಕಾಗುತ್ತದೆ. ಇದಕ್ಕೆ ಗ್ರೋವ್ಲಿಂಗ್ ಅಗತ್ಯವಿರುತ್ತದೆ ಮತ್ತು ನಾನು ಅದನ್ನು ಮಾಡಲು ಬಯಸುವುದಿಲ್ಲ ಎಂದು ನಾನು ಬಹಳ ಸಮಯದಿಂದ ಕೆಲಸ ಮಾಡಿದ್ದೇನೆ' ಎಂದು ಪ್ರಿಯಾಂಕಾ ಹೇಳಿದ್ದಾರೆ. 

'ಯುಎಸ್‌ನಲ್ಲಿ ಸಂಗೀತ ಅವಕಾಶ ಸಿಕ್ಕಾಗ ತುಂಬಾ ಖುಷಿ ಪಟ್ಟು **** ನಾನು ಅಮರಿಕಗೆ ಹೋಗುತ್ತಿರುವೆ ಎಂದು ತೀರ್ಮಾನ ಮಾಡಿದೆ. ಅದಾದ ಮೇಳೆ ಪಿಟ್‌ಬುಲ್, ವಿಲ್ ಐ ಅಮ್, ಫಾರೆಲ್ ವಿಲಿಯಮ್ಸ್, ಜೈ Z ಜೊತೆ ಕೆಲಸ ಮಾಡಿರುವೆ. ಸಂಗೀತ ಕ್ಷೇತ್ರ ಅಷ್ಟಾಗಿ ಕೈ ಹಿಡಿಯಲಿಲ್ಲ ಹೀಗಾಗಿ ನನ್ನ ಮೊದಲ ಕೆಲಸವೇ ಬೆಸ್ಟ್‌ ಎಂದು ಒಮ್ಮೆ ಅನಿಸಿತ್ತು' ಎಂದಿದ್ದಾರೆ ಪ್ರಿಯಾಂಕಾ. 

click me!