ಕಳೆದ 15 ದಿನದಿಂದ ಆಸ್ಪತ್ರೆಯಲ್ಲಿ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಾಸ್ಯ ನಟ ರಾಜು ಶ್ರೀವಾತ್ಸವ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಗಂಭೀರ ಸ್ಥಿತಿಯಲ್ಲಿದ್ದ ಶ್ರೀವಾತ್ಸ್ ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅದಕ್ಕೂ ಮುಖ್ಯವಾಗಿ ರಾಜು ಶ್ರೀವಾತ್ಸವ್‌ಗೆ ಪ್ರಜ್ಞೆ ಮರಳಿದೆ
ದೆಹಲಿ(ಆ.25): ಹಾಸ್ಯ ನಟ, ಸ್ಟಾಂಡ್ ಅಪ್ ಕಾಮಿಡಿಯನ್ ರಾಜು ಶ್ರೀವಾತ್ಸವ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿರುವ ರಾಜು ಶ್ರೀವಾತ್ಸವ್‌ಗೆ ಪ್ರಜ್ಞೆ ಮರಳಿದೆ. ಇದೀಗ ಚಿಕಿತ್ಸೆಗೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ದೆಹೆಲಿ ಏಮ್ಸ್ ವೈದ್ಯರು ಹೇಳಿದ್ದಾರೆ. ಆಗಸ್ಟ್ 10 ರಂದು ರಾಜು ಶ್ರೀವಾತ್ಸವ್ ತೀವ್ರ ಎದೆನೋವು ಕಾಣಿಸಿಕೊಂಡು ಜಿಮ್‌ನಲ್ಲಿ ಕುಸಿದು ಬಿದಿದ್ದರು. ಆಸ್ಪತ್ರೆ ದಾಖಲಿಸಿದ ರಾಜು ಶ್ರೀವಾತ್ಸವ್ ಸ್ಥಿತಿ ಗಂಭೀರವಾಗಿತ್ತು. ಮೆದುಳಿನ ಸೋಂಕು ಕೂಡ ಕಾಣಿಸಿಕೊಂಡಿತ್ತು. ವೆಂಟಿಲೇಟರ್ ನೆರವಿನ ಮೂಲಕ ಚಿಕಿತ್ಸೆ ನೀಡಲಾಗಿತ್ತು. ಇದೀಗ 15 ದಿನಗಳ ಚಿಕಿತ್ಸೆ ಬಳಿಕ ರಾಜು ಶ್ರೀವಾತ್ಸವ್ ಚೇತರಿಸಿಕೊಂಡಿದ್ದಾರೆ. ಇದೀಗ ವೈದ್ಯರ ತಂಡ ತೀವ್ರ ನಿಘಾ ವಹಿಸಿದ್ದಾರೆ. ಇಷ್ಟೇ ಅಲ್ಲ ರಾಜು ಶ್ರೀವಾತ್ಸವ್ ಚೇತರಿಕೆಗೆ ಕೆಲ ದಿನಗಳು ಬೇಕು ಎಂದು ವೈದ್ಯರು ಹೇಳಿದ್ದಾರೆ.
ಆಗಸ್ಟ್ 10 ರಂದು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ರಾಜು ಶ್ರೀವಾತ್ಸವ್ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ರಾಜು ಶ್ರೀವಾತ್ಸವ್ ಆರೋಗ್ಯ ಕ್ಷೀಣಿಸಿತ್ತು. ಗಂಭೀರ ಸ್ಥಿತಿಗೆ ತಲುಪಿದ್ದ ರಾಜು ಶ್ರೀವಾತ್ಸವ್ ಕುರಿತು ನೆಗಟೀವ್ ಕಮೆಂಟ್ ಮಾಡಲಾಗಿತ್ತು ಈ ಕುರಿತು ಶ್ರೀವಾತ್ಸವ್ ಕುಟುಂಬ ಮನವಿ ಮಾಡಿತ್ತು. ಅಭಿಮಾನಿಗಳು ರಾಜು ಶ್ರೀವಾತ್ಸವ್ ಚೇತರಿಕೆಗೆ ಪಾರ್ಥಿಸಲು ಮನವಿ ಮಾಡಿದ್ದರು. ಇದರ ನಡುವೆ ರಾಜು ಶ್ರೀವಾತ್ಸವ್ ಕುರಿತು ಟೀಕಗಳು ಬೇಡ ಎಂದಿದ್ದರು.
undefined
ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ್ ಸ್ಥಿತಿ ಗಂಭೀರ; ವದಂತಿ ಹಬ್ಬಿಸಬೇಡಿ ಎಂದು ಪತ್ನಿ ಮನವಿ
ರಾಜು ಶ್ರೀವಾತ್ಸವ್ ಅವರಿಗೆ ಅಳವಡಿಸಿದ್ದ ವೆಂಟಿಲೇಟರ್ ತೆಗೆಯಲಾಗಿದೆ ಅನ್ನೋ ವರದಿಯನ್ನು ಸಹೋದರ ದೀಪೂ ಶ್ರೀವಾತ್ಸವ್ ನಿರಾಕರಿಸಿದ್ದಾರೆ. ರಾಜು ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ರಾಜುಗೆ ಹೆಚ್ಚಿನ ಸಮಯ ಬೇಕಿದೆ. ಹೀಗಾಗಿ ಇಲ್ಲ ಸಲ್ಲದ ಮಾಹಿತಿಗಳನ್ನು ಹರಿಬಿಡುವುದನ್ನು ನಿಲ್ಲಿಸಿ ಎಂದು ದೀಪೂ ಶ್ರೀವಾತ್ಸವ್ ಮನವಿ ಮಾಡಿದ್ದಾರೆ.
ಚಿಕಿತ್ಸೆ ನೀಡುತ್ತಿರುವ ವೈದ್ಯರ ಮಾತುಗಳಿಂದ ಕುಟುಂಬಕ್ಕೆ ಧೈರ್ಯ ಬಂದಿದೆ. ವೈದ್ಯರು ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ರಾಜು ಓರ್ವ ಹೋರಾಟಗಾರ, ಕಠಿಣ ಪರಿಸ್ಥಿತಿಯಲ್ಲಿ ಹೋರಾಟ ಜೀವನದಲ್ಲಿ ಯಶಸ್ಸು ಸಂಪಾದಿಸಿದ್ದಾರೆ. ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಜೀವನದಲ್ಲಿ ಎದುರಾಗಿರುವ ಈ ಸವಾಲಿನ ಪರಿಸ್ಥಿತಿಯನ್ನು ಎದುರಿಸಿ ಮರಳಲಿದ್ದಾರೆ ಎಂದು ರಾಜು ಶ್ರೀವಾತ್ಸವ್ ಪತ್ನಿ ಹೇಳಿದ್ದಾರೆ