'ವಿಕ್ರಮ್ ವೇದಾ' ಟೀಸರ್ ಔಟ್; ಬಾಲಿವುಡ್‌ಅನ್ನು ಸೋಲಿನ ಸುಳಿಯಿಂದ ಕಾಪಾಡ್ತಾರಾ ಹೃತಿಕ್ - ಸೈಫ್

Published : Aug 24, 2022, 02:04 PM IST
'ವಿಕ್ರಮ್ ವೇದಾ' ಟೀಸರ್ ಔಟ್; ಬಾಲಿವುಡ್‌ಅನ್ನು ಸೋಲಿನ ಸುಳಿಯಿಂದ ಕಾಪಾಡ್ತಾರಾ ಹೃತಿಕ್ - ಸೈಫ್

ಸಾರಾಂಶ

ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ದಿನ ಕೊನೆಗೂ ಬಂದಿದೆ. ಬಹು ನಿರೀಕ್ಷಿತ ವಿಕ್ರಮ್ ವೇದಾ ಚಿತ್ರದ ಟೀಸರ್ ಕೊನೆಗೂ ರಿಲೀಸ್ ಆಗಿದೆ.

ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ದಿನ ಕೊನೆಗೂ ಬಂದಿದೆ. ಬಹು ನಿರೀಕ್ಷಿತ ವಿಕ್ರಮ್ ವೇದಾ ಚಿತ್ರದ ಟೀಸರ್ ಕೊನೆಗೂ ರಿಲೀಸ್ ಆಗಿದೆ. ಹೃತಿಕ್ ಮತ್ತು ಸೈಫ್ ಅವರ ಈ ಟೀಸರ್ ಕುತೂಹಲ ಕೆರಳಿಸುತ್ತಿದೆ. ಇಬ್ಬರು ಸ್ಟಾರ್ ನಟರ  ಮುಖಾಮುಖಿ, ಆಕ್ಷನ್ ಸೀಕ್ವೆನ್ಸ್ ಮತ್ತು ಡೈಲಾಗ್‌ಗಳಿಂದ ವಿಕ್ರಂ ವೇದಾ ತುಂಬಿದೆ. ಈ ಟೀಸರ್ ರಿಲೀಸ್ ಆಗುತ್ತಿದ್ದಂತೆ ಹೃತಿಕ್ ಮತ್ತು ಸೈಫ್ ಅಲಿ ಖಾನ್ ದಕ್ಷಿಣ ಭಾರತದ ಸಿನಿಮಾಗಳ ಕಠಿಣ ಸ್ಪರ್ಧೆಗಳ ನಡುವೆ ಬಾಲಿವುಡ್‌ಗೆ ವರದಾನವಾಗುತ್ತಾ ಎನ್ನುವ ಚರ್ಚೆ ಪ್ರಾರಂಭವಾಗಿದೆ. 

ಸದ್ಯ ರಿಲೀಸ್ ಆಗಿರುವ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ವಿಕ್ರಮ್ ವೇದಾ ಟೀಸರ್ 1 ನಿಮಿಷ 46 ಸೆಕೆಂಡುಗಳಿದೆ. ಈ ಟೀಸರ್ ಪ್ರೇಕ್ಷಕರನ್ನು ವಿಕ್ರಮ್ ವೇದಾ ಪ್ರಪಂಚದೊಳಗೆ ಕರೆದೊಯ್ದಿದೆ. ಆಕ್ಷನ್, ಡೈಲಾಗ್, ಬ್ಯಾಗ್ರೌಡ್ ಮ್ಯೂಸಿಕ್ ಎಲ್ಲವೂ ನೋಡುಗರ ಗಮನ ಸೆಳೆಯುತ್ತಿದೆ. ಟೀಸರ್ ಶೇರ್ ಮಾಡಿರುವ ಹೃತಿಕ್ ರೋಷನ್ ಸೆಪ್ಟಂಬರ್ 30ಕ್ಕೆ ರಿಲೀಸ್ ಆಗುತ್ತಿದೆ ಎಂದು ಬಹಿರಂಗ ಪಡಿಸಿದ್ದಾರೆ. 

ವಿಕ್ರಮ್ ವೇದಾ ಚಿತ್ರಕ್ಕೆ ಪುಷ್ಕರ್​-ಗಾಯತ್ರಿ ನಿರ್ದೇಶನ ಮಾಡಿದ್ದಾರೆ. ಟೀಸರ್ ಬಿಡುಗಡೆಯಾಗಿ ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೇ ವೀಕ್ಷಣೆ ಪಡೆದುಕೊಂಡಿದೆ. ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ನಟಿಸಿದ್ದರೆ, ಗ್ಯಾಂಗ್​ಸ್ಟರ್​ ಆಗಿ ಹೃತಿಕ್​ ರೋಷನ್​ ಮನರಂಜನೆ ನೀಡಲಿದ್ದಾರೆ. ಇಬ್ಬರ ನಡುವೆ ಈ ಸಿನಿಮಾದಲ್ಲಿ ಹಲವು ಮುಖಾಮುಖಿ ದೃಶ್ಯಗಳು ಇರಲಿವೆ. ಭರ್ಜರಿ ಸಾಹಸ ಸನ್ನಿವೇಶಗಳು ಕೂಡ ಇವೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ರಗಡ್​ ಗೆಟಪ್​ನಲ್ಲಿ ಹೃತಿಕ್​ ರೋಷನ್​ ಕಾಣಿಸಿಕೊಂಡಿದ್ದಾರೆ.

ಬಾಯ್‌ಫ್ರೆಂಡ್‌ ಜೊತೆ ಹೃತಿಕ್‌ ರೋಷನ್‌ ಮಾಜಿ ಪತ್ನಿ ರೊಮ್ಯಾಂಟಿಕ್‌ ಫೋಟೋ ವೈರಲ್‌

 ಅಂದಹಾಗೆ ಹೃತಿಕ್ ಮತ್ತು ಸೈಫ್ ಅಲಿ ಖಾನ್ ಅವರ ವಿಕ್ರಮ್ ವೇದಾ ಸಿನಿಮಾ ತಮಿಳಿನ ಸೂಪರ್ ಹಿಟ್ ವಿಕ್ರಮ್ ವೇದಾ ಸಿನಿಮಾದ ರಿಮೇಕ್. ಅದೇ ಹೆಸರಿನಲ್ಲಿ ಬಾಲಿವುಡ್‌ನಲ್ಲೂ ರಿಮೇಕ್ ಮಾಡಲಾಗಿದೆ. ಮೂಲ ನಿರ್ದೇಶಕರೇ ಹಿಂದಿ ವಿಕ್ರಮ್ ವೇದಾಗೂ ಆಕ್ಷನ್ ಕಟ್ ಹೇಳಿದ್ದಾರೆ. ತಮಿಳಿನಲ್ಲಿ ಮಾಧವನ್ ಮತ್ತು ವಿಜಯ್ ಸೇತುಪತಿ ನಟಿಸಿದ್ದರು. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಾಧವನ್ ಕಾಣಿಸಿಕೊಂಡಿದ್ದರು. ವಿಜಯ್ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ನಟಿಸಿದ್ದರು. ಹಿಂದಿಯಲ್ಲಿ ಮಾಧವನ್ ಪಾತ್ರವನ್ನು ಸೈಫ್ ಅಲಿ ಖಾನ್ ಮಾಡಿದ್ರೆ, ವಿಜಯ್ ಸೇತುಪತಿ ಪಾತ್ರದಲ್ಲಿ ಹೃತಿಕ್ ರೋಷನ್ ಕಾಣಿಸಿಕೊಂಡಿದ್ದರೆ. ತಮಿಳಿನಲ್ಲಿ ನಾಯಕಿಯರಾಗಿ ಶ್ರದ್ಧಾ ಶ್ರೀನಾಥ್ ವರಲಕ್ಷ್ಮಿ ಶರತ್ ಕುಮಾರ್ ಕಾಣಿಸಿಕೊಂಡಿದ್ದರು. ಹಿಂದಿಯಲ್ಲಿ ರಾಧಿಕಾ ಆಪ್ಟೆ ನಟಿಸಿದ್ದಾರೆ.

2ನೇ ಮದುವೆಗೆ ಹೃತಿಕ್ ರೋಷನ್ ಸಜ್ಜು; ಶೀಘ್ರದಲ್ಲೇ ಪ್ರೇಯಸಿ ಸಬಾ ಜೊತೆ ಹಸೆಮಣೆ ಏರಲಿರುವ ನಟ?

ಬಾಲಿವುಡ್‌ನಲ್ಲಿ ಈಗಾಗಲೇ ಸಾಲು ಸಾಲು ಸಿನಿಮಾಗಳು ಸೋಲು ಕಾಣುತ್ತಿವೆ. ಸೋಲಿನ ಸುಳಿಯಲ್ಲಿರುವ ಬಾಲಿವುಡ್‌ ಅನ್ನು ಪಾರುಮಾಡುತ್ತಾ ಎನ್ನುವ ಕುತೂಹಲ ವಿಕ್ರಮ್ ವೇದಾ ಸಿನಿಮಾಮೇಲಿದೆ. ಸದ್ಯ ಟೀಸರ್ ನೋಡಿದ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹಾಗಾಗಿ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಬಹುನಿರೀಕ್ಷೆಯ ಸಿನಿಮಾ ಸೆಪ್ಟಂಬರ್ 30ರಂದು ರಿಲೀಸ್ ಆಗುತ್ತಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್