
ಮುಂಬೈ: ಹಾಸ್ಯ ಕಲಾವಿದ ಕೃಷ್ಣ ಅಭಿಷೇಕ್ ಸಾರ್ವಜನಿಕವಾಗಿ ನಡೆದುಕೊಂಡ ರೀತಿ ಕೆಲ ಅಭಿಮಾನಿಗಳಿಗೆ ಇಷ್ವವಾಗಿಲ್ಲ. ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ನೀಡುವ ಸಂದರ್ಭದಲ್ಲಿ ಪತ್ನಿ ಕಶ್ಮೇರಾ ಶಾ ಅವರ ಬ್ಯಾಕ್ ನೋಡಿ ಕೆಟ್ಟದಾಗಿ ಕಣ್ಸನೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ನಿಮಗೆ ನಾಚಿಕೆ ಆಗಲ್ಲವಾ? ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬ ಅರಿವು ಇವರಿಗೆ ಇಲ್ಲದಂತಾಗಿದೆ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋಗೆ 24 ಸಾವಿರಕ್ಕೂ ಅಧಿಕ ವ್ಯೂವ್ ಮತ್ತು ಲೈಕ್ಸ್ ಬಂದಿವೆ. ಹಾಗೆ ನೂರಾರು ಕಮೆಂಟ್‌ಗಳು ಸಹ ಬಂದಿವೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಮುಂಬೈ ನಗರದಲ್ಲಿ ಸೆಲಿಬ್ರಿಟಿಗಳು ಇರೋ ಜಾಗದಲ್ಲಿ ಕ್ಯಾಮೆರಾ ಹಿಡಿದುಕೊಂಡು ಪಾಪರಾಜಿಗಳು ನಿಂತಿರುತ್ತಾರೆ. ಹಾಗೆ ಕೃಷ್ಣ ಅಭಿಷೇಕ್ ಮತ್ತು ಕಶ್ಮೇರಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಂತೆ ಫೋಟೋಗೆ ಪೋಸ್ ನೀಡಿ ಎಂದು ಕೇಳಿಕೊಂಡಿದ್ದಾರೆ. ಕೃಷ್ಣ ಕ್ಯಾಮೆರಾಗೆ ಮುಖ ಮಾಡಿ ನಿಂತ್ರೆ, ಕಶ್ಮೇರಾ ಪತಿಯ ಹೆಗಲ್ಮೇಲೆ ಕೈ ಹಾಕಿ ಹಿಂದಿನಿಂದ ತಿರುಗಿ ನೋಡುತ್ತಿರುವ ಸ್ಟೈಲ್‌ನಲ್ಲಿ ಪೋಸ್ ನೀಡಿದರು. ಕಶ್ಮೇರಾ ಒಳ್ಳೆ ಪೋಸ್ ನೀಡಿದ ಕಾರಣ ಎಲ್ಲಾ ಪಾಪರಾಜಿಗಳು ವಾವ್ ಎಂದು ಮೆಚ್ಚುಗೆ ಸೂಚಿಸಿದರು.
ಪಾಪರಾಜಿಗಳೆಲ್ಲರೂ ವಾವ್ ಅನ್ನುತ್ತಲೇ ಕೃಷ್ಣ ಅಭಿಷೇಕ್, ಪತ್ನಿಯ ಹಿಂಬದಿಯನ್ನು ನೋಡಿ ಅಸಹ್ಯವಾಗಿ ಕಣ್ಸನ್ನೆ ಮಾಡುತ್ತಾರೆ. ನಂತರ ತಾವು ಕ್ಯಾಮೆರಾಗೆ ಬೆನ್ನು ಮಾಡಿ ನಿಂತು ನಮ್ಮ ಬ್ಯಾಕ್ ಸಹ ನೋಡಿಕೊಳ್ಳಿ ಅಂತಾರೆ. ಇದಕ್ಕೆ ಕಶ್ಮೇರಾ ಇದು ನನ್ನದು ಎಂದು ಹೇಳುತ್ತಾರೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು, ಕೃಷ್ಣ ಅಭಿಷೇಕ್ ಅವರದ್ದು ಹಾಸ್ಯಪ್ರಜ್ಞೆ ಎಂದು ಕಮೆಂಟ್ ಮಾಡಿದ್ದಾರೆ. ಎಲ್ಲವನ್ನು ಕ್ರೀಡಾಮನೋಭಾವದಿಂದ ತೆಗೆದುಕೊಳ್ಳಬೇಕು ಅಂತಾನೂ ಕಮೆಂಟ್ ಮಾಡಲಾಗಿದೆ.
ಇದನ್ನೂ ಓದಿ: ಕಥೆ ಮುಗಿತು ಅನ್ನೋವಷ್ಟರಲ್ಲಿ ರಾಮಾಚಾರಿ ಧಾರಾವಾಹಿಗೆ ಪುಟ್ಟಗೌರಿಯ ಟಚ್; ಓ.. ನೋ! ಎಂದ ವೀಕ್ಷಕರು
ಕೃಷ್ಣ ಅಭಿಷೇಕ್ ಹಾಸ್ಯ ಕಲಾವಿದರಾಗಿದ್ದು, ಕಿರುತೆರೆ ಜೊತೆಯಲ್ಲಿ ಆಗಾಗ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತ ಕಶ್ಮೇರಾ ಸಹ ಓರ್ವ ಡ್ಯಾನ್ಸರ್ ಆಗಿದ್ದು, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲಗು, ಹಿಂದಿ, ಭೋಜಪುರಿ ಸಿನಿಮಾಗಳ ವಿಶೇಷ ಹಾಡಿನಲ್ಲಿ ಕಶ್ಮೇರಾ ಹೆಜ್ಜೆ ಹಾಕಿದ್ದಾರೆ. ಇದೆಲ್ಲದರ ಜೊತೆ ಪತಿಯೊಂದಿಗೆ ಹಲವು ರಿಯಾಲಿಟಿ ಶೋಗಳಲ್ಲಿಯೂ ಭಾಗಿಯಾಗಿದ್ದಾರೆ. ಸದ್ಯ ಹಾಸ್ಯ ಕಲಾವಿದೆ ಭಾರತಿ ಸಿಂಗ್ ನಡೆಸಿಕೊಡುವ 'ಲಾಫ್ಟರ್ ಶೆಫ್; ಅನ್‌ಲಿಮಿಟೆಡ್ ಎಂಟರ್‌ಟೈನ್ಮೆಂಟ್' (Laughter Chefs – Unlimited Entertainment) ಭಾಗಿಯಾಗಿದ್ದು, ಇವರಿಬ್ಬರ ತಮಾಷೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.
ಕಶ್ಮೇರಾ ಹಿಂದಿಯ ಬಿಗ್‌ಬಾಸ್ ಸೀಸನ್ 1ರ ಸ್ಪರ್ಧಿಯಾಗಿದ್ದರು. ನಚ್ ಬಲಿಯೇ 3, ದಿಲ್ ಜಿತೇಗಿ ದೇಶಿ ಗರ್ಲ್, ಕಭಿ ಕಭಿ ಪ್ಯಾರ್ ಕಭಿ ಕಭಿ ಯಾರ್, ಇಸ್ ಜಂಗಲ್ ಸೇ ಮುಜೆ ಬಚಾವೋ, ಫಿಯರ್ ಫ್ಯಾಕ್ಟರ್- ಖತರೋಂ ಕಿ ಕಿಲಾಡಿ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಕಶ್ಮೇರಾ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಾವನ ಶರ್ಟ್-ಪ್ಯಾಂಟ್ ಹಾಕೊಂಡು ಓಡಾಡ್ತಿದ್ದ ನಟನ ಬಳಿಯಲ್ಲಿದೆ ಶೂ, ಬಟ್ಟೆ ಇರಿಸಲು 3BHK ಫ್ಲ್ಯಾಟ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.