BBK9 ಕತ್ತೆತ್ತದೆ ಆಮೆ ತರ ಸ್ವಿಮ್ಮಿಂಗ್ ಮಾಡ್ತೀನಿ; ಆರ್ಯವರ್ಧನ್‌ ಹಾರ್ಟ್‌ ಚೆನ್ನಾಗಿರಲು ಇದೇ ಕಾರಣ

By Vaishnavi Chandrashekar  |  First Published Nov 30, 2022, 1:49 PM IST

 ಓಟಿಟಿಯಿಂಗ್ ಬಿಬಿ 9 ಎಂಟ್ರಿ ಕೊಟ್ಟ ಆರ್ಯವರ್ಧನ್ 66 ದಿನಗಳು ಪೂರೈಸಿದ್ದಾರೆ. ಸಣ್ಣಗಾಗಿ ಫಿಟ್ ಆಗಲು ಸ್ವಿಮ್ಮಿಂಗ್ ಕಾರಣ ಎಂದಿದ್ದಾರೆ....


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9ರಲ್ಲಿ ವೀಕ್ಷಕರ ಗಮನ ಸೆಳೆಯುತ್ತಿರುವುದು ಆರ್ಯವರ್ಧನ್ ಗುರೂಜಿ. ಸೀರಿಯಸ್ ಆಗಿರುವ ಹಾಸ್ಯ ಮಾಡುತ್ತಾರೆ, ಹಾಸ್ಯ ಮಾಡುವಾಗ ಸೀರಿಯಸ್‌ ಆಗಿರುತ್ತಾರೆ....ವೀಕೆಂಡ್ ವಿತ್ ಸುದೀಪ್ ಎಪಿಸೋಡ್‌ನಲ್ಲಿ ಏನ್ ಏನೋ ಮಾತನಾಡಿ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಒಟ್ಟಿನಲ್ಲಿ ಆರ್ಯವರ್ಧನ್‌ ಮನೋರಂಜನೆ ನೀಡುವುದರಲ್ಲಿ ನಂಬರ್ 1 ಎನ್ನಬಹುದು. ಅಡುಗೆ ಮನೆ ಬಿಟ್ಟರೆ ಸ್ವಿಮ್ಮಿಂಗ್ ಫೂಲ್‌ನಲ್ಲಿ ಕಾಣಿಸಿಕೊಳ್ಳುವ ಗುರೂಜಿ....

ಪೂಲ್ ಕಥೆ:

Tap to resize

Latest Videos

ಬಿಗ್ ಬಾಸ್ ಸ್ವಿಮ್ಮಿಂಗ್ ಪೂಲ್‌ಗೆ ಸಂಬಂಧ ಪಟ್ಟ ಯಾವುದೇ ಟಾಸ್ಕ್‌ ಕೊಟ್ಟರೂ ಸೂಪರ್ ಡೂಪರ್ ಅಗಿ ಮಾಡಿ ಮುಗಿಸುವುದು ಆರ್ಯವರ್ಧನ್. ಆದರೆ ಕೆಲವು ದಿನಗಳ ಹಿಂದೆ ಕೊಟ್ಟ ಟಾಸ್ಕ್‌ ಸ್ವಲ್ಪ ಕಷ್ಟವಾಗಿದ್ದ ಕಾರಣ ಅನುಪಮಾ ಗೌಡ ಬಳಿ ತಮ್ಮ ಸ್ವಿಮ್ಮಿಂಗ್ ಸ್ಕಿಲ್‌ನ ವಿವರಿಸುತ್ತಿದ್ದಾರೆ.

'ಬಿಗ್ ಬಾಸ್ ರೂಲ್ಸ್‌ ಬದಲಾಯಿಸುವುದಿಲ್ಲ ಎಂದು ನನಗೆ ತಿಳಿಯಿತ್ತು. ಮೊನ್ನೆ ನಡೆದ ನೀರಿನ ಟಾಸ್ಕ್‌ನಲ್ಲಿ ಹೆಚ್ಚಿನ ಎಫರ್ಟ್‌ ಹಾಕಿದೆ ಹೇಗೆಲ್ಲಾ ಮಾಡಬಹುದು ಹಾಗೆಲ್ಲಾ ಪ್ರಯತ್ನ ಪಟ್ಟಿರುವೆ. ನಾನು ಭೂಮಿ ಮೇಲೆ ಹೇಗೆ ವಾಸ ಮಾಡುತ್ತೀನಿ ಅದೇ ರೀತಿ ನೀರಿನೊಳಗೆ ವಾಸ ಮಾಡಬಹುದು ನಾನು ದಿನವೂ ಬೆಳಗ್ಗೆ 6 ಗಂಟೆಗೆ ಸ್ವಿಮ್ಮಿಂಗ್ ಮಾಡುತ್ತೀನಿ ಹಾಗಾಗಿ ವೇಟ್ ಲಾಸ್ ಆಗಿರುವುದು ಹಾಗೆ ನನ್ನ ಹಾರ್ಟ್‌ ಚೆನ್ನಾಗಿರುವುದು. ಸ್ವಿಮ್ಮಿಂಗ್ ಮಾಡುವವರಿಗೆ ಹಾರ್ಟ್‌ ಬೀಟ್‌ ತುಂಬಾ ಚೆನ್ನಾಗಿರುತ್ತದೆ. ನಾನು ಸ್ವಿಮ್ಮಿಂಗ್ ಮಾಡುವಾಗ ಕತ್ತು ಎತ್ತುವುದಿಲ್ಲ ನನಗೆ ಸ್ವಿಮ್ಮಿಂಗ್‌ನ ಕೋಚ್ ಹೇಳಿಕೊಟ್ಟಿದ್ದು...ಎತ್ತು ಎಲ್ಲಾ ಎತ್ತಿ ಸ್ವಿಮ್ಮಿಂಗ್ ಮಾಡುವುದಿಲ್ಲ ನಿಧಾನಕ್ಕೆ ಆಮೆ ರೀತಿ ತರ 12 ರೌಂಡ್ ಮಾಡ್ತೀನಿ. 50 ಮೀಟರ್ ಜಾಗದಲ್ಲಿ 12 ರೌಂಡ್ ಮಾಡ್ತೀನಿ' ಎಂದು ಆರ್ಯವರ್ಧನ್ ಹೇಳಿದ್ದಾರೆ.

ಸುದೀಪ್‌ ಕ್ಲಾಸ್:

ಕೆಲವು ವಾರಗಳ ಹಿಂದೆ ನಡೆದ  ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಎಂದಿನಂದೆ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ. ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿದ್ದಾರೆ. 'ಈ 16 ಮಂದಿಯಲ್ಲಿ ಟಾಪ್ 2 ಯಾರು ಆಗ್ತಾರೆ ಎಂದು ಕೇಳಿದರು. ಸ್ಪರ್ಧಿಗಳು ಒಬ್ಬರ ಹೆಸರನ್ನು ಹೇಳುತ್ತಿದ್ದರು.  ಆರ್ಯವರ್ಧನ್ ಗುರೂಜಿ, ಅನುಪಮಾ ಹೆಸರು ಹೇಳಿ ಬಿಗ್ ಬಾಸ್‌ಗೂ ಅನುಪಮಾ ಒಳಗಡೆ ಬರ್ಬೇಕು ಅಂತ ಆಸೆ ಇತ್ತು ಎಂದು ಹೇಳಿದರು. ಇದರಿಂದ ಕೆರಳಿದ ಸುದೀಪ್ ಹಾಗೆಲ್ಲ ಮಾತನಾಡಬೇಡಿ ಸರ್ ಎಂದು ಹೇಳಿದರು. 'ಬಂಗಾರದ ಟಾಸ್ಕ್ ನಲ್ಲಿ ಎಷ್ಟು ಬಂಗಾರ ಇದೆ ಅಂತ ಗೊತ್ತಿದ್ದರೂ ಅನುಪಮಾನ ಒಳಗಡೆ ಕರೆಸುತ್ತಾರೆ ಅಂದರೆ  ಏನು ಅರ್ಥ. ಮ್ಯಾಚ್ ಫಿಕ್ಸಿಂಗ್ ಆಗಿದೆ ಇಲ್ಲಿ' ಎಂದು ಗಂಭೀರ ಅರೋಪ ಮಾಡಿದರು. ಸುದೀಪ್ ಸ್ಪರ್ಧಿಗಳಲ್ಲಿ ನಿಮಗೆ ಹಾಗೆ ಅನಿಸಿತಾ ಎಂದು ಕೇಳಿದರು. ಸ್ಪರ್ಧಿಗಳೆಲ್ಲಾ ಇಲ್ಲ ಎಂದರು. 

BBK9 ಬೆಂಗಳೂರು ಬಿಟ್ಟು ಮೈಸೂರಿಗೆ ಹೋಗೋ ಪ್ಲ್ಯಾನ್ ಮಾಡಿದ ಅಮೂಲ್ಯ ಗೌಡ

ಅರ್ಯವರ್ಧನ್ ಮಾತಿನಿಂದ ಕೆಂಡವಾದ ಸುದೀಪ್ ಮಾತಿನ ಮೇಲೆ ನಿಗಾ ಇರಲಿ ಎಂದು ಎಚ್ಚರಿಕೆ ನೀಡಿದರು. ಆದರೂ ಸಹ ಆರ್ಯವರ್ದನ್ ಯೋಚನೆ ಮಾಡಿ ಹೇಳಬೇಕಲ್ಲ ಹಾಗಾಗಿ ಹೇಳುತ್ತಿದ್ದೀನಿ ಎಂದು ತನ್ನ ಮಾತನ್ನು ಸಮರ್ಥಿಸಿಕೊಂಡರು. ಮ್ಯಾಚ್ ಫಿಕ್ಸಿಂಗ್ ಅಂದರೆ ಏನು? ಅಲ್ಲಿ ಕುಳಿತು ಆಡುತ್ತಿರುವವರೆಲ್ಲ ಏನು ಹಾಗಾದ್ರೆ, ಯಾರಿಗೂ ಯೋಗ್ಯತೆ ಇಲ್ವಾ, ಮೋಸ ಮಾಡಿ ಗೆಲ್ತಾ ಇದ್ದಾರಾ ಎಂದು ಸುದೀಪ್ ಏರು ಧ್ವನಿಯಲ್ಲಿ ಪ್ರತಿಕ್ರಿಯೆ ನೀಡಿದರು.

click me!