ಖಾಲಿ ಬ್ಯಾಗ್‌ ಹಿಡಿದು ಪೋಸ್‌ ಕೊಟ್ಟ ಸಾರಾ ಟ್ರೋಲ್; ವಾರ್ನಿಂಗ್ ಕೊಟ್ಟ ಖಾನ್‌ ಪುತ್ರಿ

Published : Jun 23, 2022, 10:28 AM IST
ಖಾಲಿ ಬ್ಯಾಗ್‌ ಹಿಡಿದು ಪೋಸ್‌ ಕೊಟ್ಟ ಸಾರಾ ಟ್ರೋಲ್; ವಾರ್ನಿಂಗ್ ಕೊಟ್ಟ ಖಾನ್‌ ಪುತ್ರಿ

ಸಾರಾಂಶ

ಖಾಲಿ ಬ್ಯಾಗ್‌ ಹಿಡಿದುಕೊಂಡು ಪ್ಯಾಪರಾಜಿಗಳ ಕಣ್ಣಿಗೆ ಬಿದ್ದ ಸಾರಾ. ಟ್ರೋಲ್‌ ಮಾಡುವವರಿಗೆ ಖಡಕ್ ಉತ್ತರ ಕೊಟ್ಟ ನಟಿ... 

ಬಾಲಿವುಡ್‌ ಚಿತ್ರರಂಗವನ್ನು ರೂಲ್ ಮಾಡುತ್ತಿರುವುದು ಖಾನ್‌ ಮತ್ತು ಕಪೂರ್‌ಗಳು. ಸ್ಟಾರ್ ನಟ ಸೈಫ್‌ ಅಲಿ ಖಾನ್ ಪುತ್ರಿ ಸಾರಾ ಖೇದರ್‌ನಾಥ್ ಸಿನಿಮಾ ಮೂಲಕ ಬಣ್ಣದ ಜರ್ನಿ ಆರಂಭಿಸಿದ್ದರು. 2018ರಿಂದ ನಾನ್‌ ಸ್ಟಾಪ್‌ ಯಶಸ್ಸು ಕಾಣುತ್ತಿರುವ ಸುಂದರಿ ಸಣ್ಣ ಪುಟ್ಟ ವಿಚಾರಗಳಿಗೆ ಟ್ರೋಲ್ ಆಗುತ್ತಿರುವುದು ಶಾಕಿಂಗ್. ಜಿಮ್‌ನಿಂದ ಹೊರ ಬಂದಾಗ, ಪಾರ್ಟಿಯಲ್ಲಿದ್ದಾಗ, ತಂದೆ ಜೊತೆ ಶಾಪಿಂಗ್ ಮಾಡುವಾಗ ಪ್ರತಿ ಕ್ಷಣವೂ ಪ್ಯಾಪರಾಜಿಗಳು ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. 

ಕೆಲವು ದಿನಗಳ ಹಿಂದೆ ಸಾರಾ ಜಿಮ್‌ನಿಂದ ಹೊರ ಬರುತ್ತಿರುವಾಗ ಮತ್ತೆ ಪ್ಯಾಪರಾಜಿಗಳಿಗೆ ಕಾಣಿಸಿಕೊಂಡಿದ್ದಾರೆ. ನಿಯಾನ್‌ ಆರೇಂಜ್‌ ಚಡ್ಡಿ, ಲೈಟ್‌ ಬ್ಲೂ ಕ್ರಾಪ್‌ ಟೀ-ಶರ್ಟ್‌ ಧರಿಸಿರುವ ಸಾರಾ, ಸಾರಾ ಎಂದು ಬರೆದಿರುವ ಬ್ಯಾಗ್‌ನ ಕ್ಯಾರಿ ಮಾಡಿದ್ದಾರೆ. ಡಿಸೈನರ್ ಬ್ಯಾಗ್ ಆಗಿರುವ ಕಾರಣ ನೆಟ್ಟಿಗರ ಗಮನ ಸೆಳೆದಿದೆ, ಆದರೆ ಬ್ಯಾಗ್ ಖಾಲಿ ಕಾಣಿಸುತ್ತಿರುವುದಕ್ಕೆ ಟ್ರೋಲ್ ಆಗಿದ್ದಾರೆ. ಯಾವ ಬ್ರ್ಯಾಂಡ್‌ನ ಪ್ರಮೋಟ್ ಮಾಡುತ್ತಿದ್ದೀರಾ? ಅಥವಾ ಕಾಣಿಸದಂತೆ ಏನ್ ಇಟ್ಟಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. 

ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ರಾಣಿಯಾಗಬೇಕು: ಆಸೆ ಬಿಚ್ಚಿಟ್ಟ ಸಾರಾ

ಸಾಮಾನ್ಯವಾಗಿ ಸಾರಾ ಯಾವ ಟ್ರೋಲ್‌ಗಳಿಗೂ ರಿಯಾಕ್ಟ್ ಮಾಡುವುದಿಲ್ಲ. 'ನನ್ನ ಕೆಲಸದ ವಿಚಾರಕ್ಕೆ ಟ್ರೋಲ್ ಆದರೆ ಬೇಸರವಾಗುತ್ತದೆ ಏಕೆಂದರೆ ಜನರಿಗೋಸ್ಕರ ನಾನು ಸಿನಿಮಾ ಮಾಡುತ್ತಿರುವುದು. ಅವರಿಗೆ ಸಿನಿಮಾ ಇಷ್ಟ ಆಗುತ್ತಿಲ್ಲ ಅಂದ್ರೆ ತೊಂದರೆ ಆಗುತ್ತದೆ. ನಾನು ಇರುವ ರೀತಿಗೆ, ಧರಿಸುವ ಬಟ್ಟೆಗೆ ಕಾಮೆಂಟ್ ಮಾಡಿದ್ದರೆ ಟ್ರೋಲ್ ಮಾಡಿದ್ದರೆ ನಾನು ಕೇರ್ ಮಾಡುವುದಿಲ್ಲ. ಮಾನಸಿಕ ನೆಮ್ಮದಿ ನನಗೆ ಮುಖ್ಯವಾಗುತ್ತದೆ ಜನರು ಹೇಳುವುದಲ್ಲ' ಎಂದು ಸಾರಾ ಈ ಹಿಂದೆ ಹೇಳಿದ್ದರು. 

ಎಕ್ಸ್‌ ಬಾಯ್‌ಫ್ರೆಂಡ್‌ ಜೊತೆ ಸಾರಾ:

ಕಾರ್ತಿಕ್ ಆರ್ಯನ್ (Kartik Aaryan) ಮತ್ತು ಅವರ ಮಾಜಿ ಗೆಳತಿ ಸಾರಾ ಅಲಿ ಖಾನ್ (Sara Ali Khan) ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ, ಇದರಲ್ಲಿ ಇಬ್ಬರೂ ಒಟ್ಟಿಗೆ ಮಾಧ್ಯಮಗಳಿಗೆ ಪೋಸ್ ನೀಡುತ್ತಿದ್ದಾರೆ. ಬ್ರೇಕಪ್ ನಂತರ ಇದೇ ಮೊದಲ ಬಾರಿಗೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಈ ವಿಡಿಯೋದಿಂದಾಗಿ ಸಾರಾ ಅಲಿ ಖಾನ್ ತೀವ್ರವಾಗಿ ಟ್ರೋಲ್ ಆಗುತ್ತಿದ್ದಾರೆ. 'ಫ್ಲಾಪ್ ಆಗುವಾಗ, ಸಾರಾ ಓಡಿ ಹೋದರು, ಈಗ ಸೂಪರ್‌ಹಿಟ್ ಆದಾಗ, ಮತ್ತೆ ಬಂದಿದ್ದಾರೆ' ಎಂದು  ಸೋಷಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಬಾಕ್ಸ್‌ನಲ್ಲಿ ಬರೆದಿದ್ದಾರೆ. 'ಚಿತ್ರ ಹಿಟ್ ಆಗಿದ್ದರೆ ಎಲ್ಲರೂ ಹಿಂದೆ ಬೀಳುತ್ತಾರೆ ' ಎಂದು ಮತ್ತೊಬ್ಬರು ಬರೆದಿದ್ದಾರೆ. 

ಬ್ರಾ ಮತ್ತು ಪಾರದರ್ಶಕ ಪ್ಯಾಂಟಲ್ಲಿ ಪೋಸ್‌ ನೀಡಿದ ಸೈಫ್ ಮಗಳು Sara Ali Khan

ಬೋಲ್ಡ್‌ ಫೋಟೋಶೂಟ್‌:

 ಸಾರಾ ಥೈ-ಹೈ ಸ್ಲಿಟ್ ಕಪ್ಪು ಪಾರದರ್ಶಕ ಉಡುಗೆಯನ್ನು ಧರಿಸಿದ್ದಾರೆ. ಆಕೆಯ ಉಡುಪನ್ನು ಬ್ರಾ ಸ್ಟೈಲ್ ಟಾಪ್‌ನೊಂದಿಗೆ ಜೋಡಿಸಲಾಗಿದೆ. ಅವರು ತನ್ನ ಕೂದಲನ್ನು ಕಟ್ಟದೆ ಹಾಗೆಯೇ ಬಿಟ್ಟಿದ್ದರು.ಲೈಟ್ ಮೇಕ್ಅಪ್, ಸ್ಮೋಕಿ ಐ ಮೇಕಪ್‌ ಮತ್ತು ಎತ್ತರದ ಹಿಲ್ಸ್‌ ಬೂಟುಗಳೊಂದಿಗೆ ತನ್ನ ಲುಕ್‌ ಅನ್ನು ಪೂರ್ಣಗೊಳಿಸಿದರು. ಸಾರಾ ಅಲಿ ಖಾನ್ ತುಂಬಾ ಈ ಬೋಲ್ಡ್ ಮತ್ತು ಸೆಕ್ಸಿ ಫೋಟೋಶೂಟ್ ಸಖತ್‌ ವೈರಲ್‌ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?