
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗ್ಯಾಂಗ್ ಜೈಲು ಪಾಲಾಗಿದ್ರೂ, ವಿವಾದಗಳು, ಸಂಚುಗಳು ಮಾತ್ರ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಕಾನೂನಿನ ಕಪಿಮುಷ್ಟಿಯಿಂದ ದಾಸನನ್ನ ಹೇಗಾದ್ರೂ ಮಾಡಿ ಪಾರು ಮಾಡಬೇಕು ಅಂತ ಒಳಗೊಂದು ಟೀಮ್, ಹೊರಗೊಂದು ಟೀಮ್ ನಿರಂತರವಾಗಿ ಸ್ಕೆಚ್ ಹಾಕ್ತಾನೇ ಇದೆ.
ಈ ಬಾರಿ ಪೊಲೀಸರು ನಡೆಸಿರೋ ಆಪರೇಷನ್‌ನಲ್ಲಿ ದೊಡ್ಡ ಆಘಾತಕಾರಿ ಸತ್ಯವೊಂದು ಹೊರಬಿದ್ದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಕೋರ್ಟ್ ಅಂಗಳದಲ್ಲಿದೆ. ಪ್ರಮುಖ ಸಾಕ್ಷಿಗಳ ಹೇಳಿಕೆಗಳು ದರ್ಶನ್ ಭವಿಷ್ಯವನ್ನ ನಿರ್ಧಾರ ಮಾಡಲಿವೆ. ಇದನ್ನೇ ಬಂಡವಾಳ ಮಾಡಿಕೊಂಡ ದರ್ಶನ್ ಆಪ್ತ ವಲಯದ ಕೆಲವರು, ಸಾಕ್ಷಿಗಳನ್ನ ಕೊಂಡುಕೊಳ್ಳಲು ಮುಂದಾಗಿದ್ರು ಅನ್ನೋದು ಬೆಳಕಿಗೆ ಬಂದಿದೆ.
ಈಗಾಗ್ಲೇ ಒಬ್ಬ ಸಾಕ್ಷಿದಾರನನ್ನ ಬೆದರಿಸಿದ ಮೂವರು ದರ್ಶನ್ ಅಭಿಮಾನಿಗಳನ್ನ ಅರೆಸ್ಟ್ ಮಾಡಿರೋ ವಿಷ್ಯ ಗೊತ್ತೇ ಇದೆ. ಬಂಧಿತರ ಪೈಕಿ ತೀವ್ರ ವಿಚಾರಣೆಗೆ ಒಳಗಾಗಿರುವ ದಾಸನ ಅಭಿಮಾನಿ ಪುನೀತ್ ನನ್ನ ಪೊಲೀಸರು ಸದ್ಯ 10 ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ಈ ಪುನೀತ್ ಪೊಲೀಸರ ಮುಂದೆ ನಿರಂತರವಾಗಿ ಹೇಳಿಕೆಗಳನ್ನ ಬದಲಿಸ್ತಾ ಇದ್ದಾನಂತೆ.
ಸದ್ಯದ ಮಾಹಿತಿ ಪ್ರಕಾರ, ಈತ ಯಾರೋ ಪ್ರಭಾವಿಗಳ ಸೂಚನೆ ಮೇರೆಗೆ ಈ ಇಡೀ ಕೇಸ್ನ ಸಾಕ್ಷಿ ನಾಶದ ‘ಡೀಲ್’ ಕುದುರಿಸಲು ಮುಂದಾಗಿದ್ದ ಎನ್ನಲಾಗಿದೆ. 10 ದಿನಗಳ ಈ ಸುದೀರ್ಘ ವಿಚಾರಣೆಯಲ್ಲಿ ಪುನೀತ್ ಅಸಲಿ ಸತ್ಯವನ್ನ ಬಾಯಿ ಬಿಟ್ಟರೆ, ಈ ಡೀಲ್ ಕುದುರಿಸಲು ಹಣದ ಆಮಿಷ ಒಡ್ಡಿದ ದೊಡ್ಡ ವ್ಯಕ್ತಿಗಳಿಗೆ ನೇರ ಸಂಕಷ್ಟ ಅಂತೂ ಕಟ್ಟಿಟ್ಟ ಬುತ್ತಿ.
ಸಾಕ್ಷಿಗೆ ಬೆದರಿಕೆ ಹಾಕಲು ಆರೋಪಿಗಳು ಬಳಸಿದ್ದ ಮೊಬೈಲ್ ಫೋನ್‌ಗಳನ್ನ ಪೊಲೀಸರು ಈಗಾಗಲೇ ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಮೊಬೈಲ್‌ನಿಂದ ಡಿಲೀಟ್ ಮಾಡಲಾಗಿರುವ ಕರೆಗಳ ವಿವರ, ವಾಟ್ಸಾಪ್ ಚಾಟ್‌ಗಳು ಮತ್ತು ಪ್ರಮುಖ ಆಡಿಯೋ ರೆಕಾರ್ಡಿಂಗ್‌ಗಳನ್ನು Retrieve ಮಾಡೋ ಪ್ರಕ್ರಿಯೆ ನಡೀತಾ ಇದ್ದು, ಇನ್ನೆರಡು ದಿನಗಳಲ್ಲಿ ಸಂಪೂರ್ಣ ವರದಿ ಪೊಲೀಸರ ಕೈಸೇರಲಿದೆ.