ಸೆನ್ಸಾರ್‌ ಮಂಡಳಿಯಿಂದ ರಾಮಾಯಣ ಸಿನಿಮಾಕ್ಕೆ ಸಿಕ್ಕಿದೆ ಸರ್ಟಿಫಿಕೆಟ್, ಕಟ್‌ ಆಯ್ತಾ ಸೀನ್? ರನ್‌ ಟೈಮ್‌ ರಿವೀಲ್

Published : Oct 31, 2026, 09:19 AM IST
Ramayana movie

ಸಾರಾಂಶ

ಬಹುನಿರೀಕ್ಷಿತ ಸಿನಿಮಾ ರಾಮಾಯಣ ಬಿಡುಗಡೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿದ್ದು, ಈಗ ಸಿನಿಮಾಗೆ ಸೆನ್ಸಾರ್‌ ಮಂಡಳಿ ಸೆನ್ಸಾರ್‌ ಪ್ರಮಾಣ ಪತ್ರ ನೀಡಿದೆ. ಹಾಗೆಯೇ ರನ್ ಟೈಮ್‌ ಕೂಡ ರಿವೀಲ್‌ ಆಗಿದೆ.

ಸದ್ಯ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ರಾಮಾಯಣ. ಇತ್ತೀಚೆಗೆ ಲಾಸ್ ಏಂಜಲೀಸ್ನಲ್ಲಿ ನಡೆದ ಚಿತ್ರದ ವರ್ಲ್ಡ್ ಪ್ರೀಮಿಯರ್ ಬಳಿಕ ಎಲ್ಲರ ಗಮನ ಸಿನಿಮಾದ ವಿಮರ್ಶೆಗಳತ್ತ ನೆಟ್ಟಿದೆ. ಇದುವರೆಗೆ ಚಿತ್ರಕ್ಕೆ ಬಹುತೇಕ ಪಾಸಿಟಿವ್ ರಿವ್ಯೂ ಸಿಕ್ಕಿವೆ. ಇದರ ಬೆನ್ನಲ್ಲೇ ವಿದೇಶದಲ್ಲಿ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ನಲ್ಲೂ ಭಾರಿ ಏರಿಕೆಯಾಗಿದೆ. ಇದೀಗ ಭಾರತದಲ್ಲಿ ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗಿದ್ದು, ಸೆನ್ಸಾರ್ ಮಂಡಳಿಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ.

ರಾಮಾಯಣಕ್ಕೆ U ಸರ್ಟಿಫಿಕೇಟ್

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (CBFC) ರಾಮಾಯಣ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಿದೆ. ಚಿತ್ರಕ್ಕೆ U ಸರ್ಟಿಫಿಕೇಟ್ ಸಿಕ್ಕಿದೆ. ಅಂದರೆ ಮಕ್ಕಳು ಸೇರಿದಂತೆ ಎಲ್ಲಾ ವಯಸ್ಸಿನವರು ಈ ಸಿನಿಮಾವನ್ನು ವೀಕ್ಷಿಸಬಹುದು. ವಿಶೇಷವೆಂದರೆ, ಚಿತ್ರದಲ್ಲಿನ ಯಾವುದೇ ದೃಶ್ಯವನ್ನು ಕತ್ತರಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿಲ್ಲ. ಇದರ ಜೊತೆಗೆ ಸಿನಿಮಾದ ರನ್ಟೈಮ್ ಕೂಡ ಅಧಿಕೃತವಾಗಿ ಬಹಿರಂಗವಾಗಿದೆ.

ಚಿತ್ರದ ಮೊದಲ ಭಾಗ ಒಟ್ಟು 195 ನಿಮಿಷಗಳ ಅವಧಿಯನ್ನು ಹೊಂದಿದೆ. ಅಂದರೆ ಬರೋಬ್ಬರಿ 3 ಗಂಟೆ 15 ನಿಮಿಷಗಳ ಕಾಲ ಸಿನಿಮಾ ಇರಲಿದೆ.

ಅಮೆರಿಕದಲ್ಲಿ ಮಾತ್ರ ಕಡಿಮೆ ರನ್ಟೈಮ್

ಲಾಸ್ ಏಂಜಲೀಸ್ನಲ್ಲಿ ನಡೆದ ರಾಮಾಯಣ ಚಿತ್ರದ ವರ್ಲ್ಡ್ ಪ್ರೀಮಿಯರ್ನಲ್ಲಿ ಸಿನಿಮಾದ ಅವಧಿಯನ್ನು 2 ಗಂಟೆ 45 ನಿಮಿಷಗಳಿಗೆ ಸೀಮಿತಗೊಳಿಸಲಾಗಿತ್ತು. ಅಲ್ಲಿ ಚಿತ್ರದ ಎಲ್ಲಾ ಹಾಡುಗಳನ್ನು ತೆಗೆದುಹಾಕಲಾಗಿತ್ತು. ಭಾರತದಲ್ಲಿರುವಂತೆ ವಿದೇಶಗಳಲ್ಲಿ ಸಿನಿಮಾಗಳಿಗೆ ಇಂಟರ್ವಲ್ ಇರುವುದಿಲ್ಲ. ಹೀಗಾಗಿ ವಿದೇಶಿ ಪ್ರೇಕ್ಷಕರಿಗೆ ಉತ್ತಮ ಅನುಭವ ನೀಡುವ ಉದ್ದೇಶದಿಂದ ಸಿನಿಮಾದ ಅವಧಿಯನ್ನು ಕಡಿಮೆ ಮಾಡಲಾಗಿದೆ. ಆದರೆ ವರ್ಲ್ಡ್ ಪ್ರೀಮಿಯರ್ನಲ್ಲಿ ಸಿನಿಮಾ ವೀಕ್ಷಿಸಿದ ಕೆಲವರು, ಹಾಡುಗಳೂ ಇದ್ದಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿನಿಮಾ ರಿಲೀಸ್ ಯಾವಾಗ?

ಭಾರತದಲ್ಲಿ ನವೆಂಬರ್ 5ರಂದು ರಾಮಾಯಣ ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗಿದೆ. ಈಗಾಗಲೇ ಚಿತ್ರ, ಜಾಗತಿಕ ಅಡ್ವಾನ್ಸ್ ಬುಕ್ಕಿಂಗ್ ಮೂಲಕ ಸುಮಾರು 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾಗಲು ಇನ್ನೂ ಐದು ದಿನ ಬಾಕಿ ಇರುವುದರಿಂದ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆಯುವ ನಿರೀಕ್ಷೆಯಿದೆ. ಅಮೆರಿಕದ ಸಿನಿಮಾ ವಿಮರ್ಶಕರಿಂದಲೂ ಚಿತ್ರಕ್ಕೆ ಸದ್ಯ ಬಹುತೇಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಭಾರತೀಯ ಪ್ರೇಕ್ಷಕರು ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆ ನೋಡ್ಬೇಕಿದೆ. ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ರವಿ ದುಬೆ ಮತ್ತು ಅರುಣ್ ಗೋವಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿತೇಶ್ ತಿವಾರಿ ಸಿನಿಮಾವನ್ನು ನಿರ್ದೇಶಿಸಿದ್ದು, ನಮಿತ್ ಮಲ್ಹೋತ್ರಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಿನಿರಂಗದಲ್ಲೇ ಹೊಸ ದಾಖಲೆ ಬರೆದ ಶಾರುಖ್ ಖಾನ್ 'ಕಿಂಗ್.. ಡಿಸ್ಟ್ರಿಬ್ಯೂಷನ್ ರೈಟ್ಸ್‌ ಭಾರೀ ಮೊತ್ತಕ್ಕೆ ಡೀಲ್!
ಅಬ್ಬಬ್ಬಾ... ₹4,000 ಕೋಟಿ ಬಜೆಟ್‌ನ 'ರಾಮಾಯಣ'! ಈ 5 ದೇಶಗಳ ವಾರ್ಷಿಕ ಜಿಡಿಪಿಗಿಂತಲೂ ಸಿನಿಮಾ ವೆಚ್ಚವೇ ಹೆಚ್ಚು!