
ಸಿನಿಮಾಗಳತ್ತ ಜನರು ಸುಳಿಯುವುದಿಲ್ಲ, ಕೋಟಿ ಕೋಟಿ ಬಂಡವಾಳ ಸುರಿದರೂ ಸಿನಿಮಾಗಳ ಫ್ಲಾಪ್ ಆಗುತ್ತಿವೆ ಎನ್ನುವ ಮಾತಿನ ನಡುವೆಯೇ ಇದೀಗ ಛಾವಾ (Chhaava- ಸಿಂಹದ ಮರಿ) ಬ್ಲಾಕ್‌ಬಸ್ಟರ್ ಎಂದು ಸಾಬೀತಾಗಿದೆ. ಐತಿಹಾಸಿಕ ಹಿನ್ನೆಲೆಯಿರುವ ಚಲನಚಿತ್ರಗಳು ಈ ಪರಿಯಲ್ಲಿ ಸೂಪರ್‌ಹಿಟ್ ಆಗುವುದು ಕಡಿಮೆಯೇ. ಆದರೆ ಛಾವಾ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಎನ್ನಿಸಿಕೊಂಡು ಮುನ್ನುಗ್ಗುತ್ತಿದೆ. ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಲಕ್ಕಿ ಸ್ಟಾರ್ ಎಂದು ಸಾಬೀತಾಗಿದ್ದಾರೆ. ಅನಿಮಲ್’, ‘ಪುಷ್ಪ 2’ ಬಳಿಕ ‘ಛಾವಾ’ ಅವರನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ. ಕ್ರೌರ್ಯದಿಂದ ತುಂಬಿದ ಅನಿಮಲ್‌ಗಿಂತಲೂ ಭಿನ್ನವಾಗಿ ಛಾವಾದಲ್ಲಿ ಇತಿಹಾಸದ ಸತ್ಯವನ್ನು ತೆರೆದಿಟ್ಟಿರುವ ಪಾತ್ರದಲ್ಲಿ ರಶ್ಮಿಕಾ ನಟಿಸಿರುವುದಕ್ಕೆ ಭಾರಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಟನೆಯಲ್ಲಿ ಈಕೆ ಮಾಗಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ತಾವು ಹೈದರಾಬಾದ್‌ನಲ್ಲಿ ಹುಟ್ಟಿದ್ದು ಎನ್ನುವ ಮೂಲಕ ಕನ್ನಡತಿ ರಶ್ಮಿಕಾ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರೂ, ಛಾವಾದಲ್ಲಿನ ಆಕೆಯ ಅಭಿನಯಕ್ಕೆ ಮನಸೋತಿದ್ದಾರೆ ಪ್ರೇಕ್ಷಕರು.
ಅಷ್ಟಕ್ಕೂ ಈ ಚಿತ್ರ ಇನ್ನಷ್ಟು ಎಲ್ಲರ ಗಮನ ಸೆಳೆಯಲು ಕಾರಣವಾದದ್ದು, ಈ ವೀರ ಸಾಂಭಾಜಿ ಕುರಿತು ಚರಿತ್ರೆಯಿಂದಾಗಿ. ಶಾಲೆಯಿಂದ ಹಿಡಿದು ಕಾಲೇಜು ಮಟ್ಟದವರೆಗೆ ನಾವು, ನಮ್ಮ ಹಿರಿಕರು ಮತ್ತು ನಮ್ಮ ಮಕ್ಕಳು ಓದಿರುವ ಇತಿಹಾಸ, ಪುಸ್ತಕದಲ್ಲಿ ಬರೆದಿರುವ ಅಂಶಗಳು ಬರೀ ಬುರುಡೆಗಳಿಂದಲೇ ತುಂಬಿವೆ ಎನ್ನುವ ಬಗ್ಗೆ ಇದಾಗಲೇ ಹಲವಾರು ಇತಿಹಾಸಕಾರರು, ಸಂಶೋಧಕರು ಮಾತನಾಡಿದ್ದು ಇದೆ. ಭಾರತದ ಸ್ವಾಂತಂತ್ರ ಸಂಗ್ರಾಮದಿಂದ ಹಿಡಿದು, ದೇಶಕ್ಕಾಗಿ ನಿಜವಾಗಿ ಬಲಿದಾನ ಮಾಡಿದವರ, ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರ ಬಗ್ಗೆ ಅದೆಷ್ಟೋ ವಿಷಯಗಳು ನಾವು ಕಲಿತೇ ಇಲ್ಲ, ನಿಜವಾದ ನಾಯಕರ ಹೆಸರುಗಳು ನಮ್ಮ ಪಠ್ಯ ಪುಸ್ತಕಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ತಿರುಚಿದ ಇತಿಹಾಸವನ್ನು ಮಕ್ಕಳ ತಲೆಗೆ ತುಂಬಿರುವುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಆದರೆ ಆ ಸತ್ಯದ ಅರಿವಿದ್ದರೂ, ಶಾಲೆಗಳಲ್ಲಿ ಅಂಕ ಪಡೆಯುವುದಕ್ಕಾಗಿ ಮಕ್ಕಳಿಗೂ ಅದೇ ಸುಳ್ಳಿನ ಪಾಠವನ್ನೇ ಕಲಿಯಲು ಪೋಷಕರು ಉತ್ತೇಜಿಸಬೇಕಾದ ಅನಿವಾರ್ಯತೆಯೂ ಇದೆ. ಇದರ ನಡುವೆಯೇ, ಛಾವಾ ಹಲವರಿಗೆ ಇಷ್ಟವಾಗಲು ಕಾರಣ, ಅದರಲ್ಲಿ ತೋರಿಸಿದ ಸತ್ಯದ ಕುರಿತು! ಬಾಬರ್, ಹುಮಾಯೂನ್, ಅಕ್ಬರ್, ಜಹಾಂಗೀರ್, ಶಹಜಹಾನ್ ಎಲ್ಲರೂ ಇತಿಹಾಸ ಪಾಠದಲ್ಲಿ ಹೀರೋಗಳನ್ನಾಗಿ ಮಾಡಿರುವುದೂ ಸುಳ್ಳಲ್ಲ.
ನಟಿ ರಶ್ಮಿಕಾಗೆ ಇನ್ನು ನಡೆಯಲು ಆಗೋದೇ ಇಲ್ವಾ? ಇನ್ಸ್ಟಾ ಪೋಸ್ಟ್ ನೋಡಿ ಫ್ಯಾನ್ಸ್ ಶಾಕ್!
ಸೋಷಿಯಲ್ ಮೀಡಿಯಾದಲ್ಲಿ ಕೂಡ ಛಾವಾ ಚಿತ್ರವನ್ನು ಹಾಡಿ ಹೊಗಳಿ ಕೊಂಡಾಡುತ್ತಿರುವವರ ಬರಹಗಳನ್ನು ನೋಡಿದಾಗಲೂ ಇದೇ ಕಾಣಿಸುವುದು ಇದೆ. ಅದರ ಒಂದು ಝಲಕ್ ಇಲ್ಲಿದೆ. ವಿನಯ್ ಶಿವಮೊಗ್ಗ ಎನ್ನುವವರು ತಮ್ಮ ಫೇಸ್‌ಬುಕ್‌ನಲ್ಲಿ ಛಾವಾ ಜನರ ಮನಸ್ಸನ್ನು ಗೆದ್ದಿರುವುದು ಯಾಕೆ ಎನ್ನುವ ಬಗ್ಗೆ ಸುಂದರವಾಗಿ ಉಲ್ಲೇಖಿಸಿದ್ದಾರೆ. ಇದೇ ರೀತಿ ಅಭಿಪ್ರಾಯ ಹಲವು ವೀಕ್ಷಕರಿಂದ ವ್ಯಕ್ತವಾಗಿದೆ. ಇನ್ನು ವಿನಯ್ ಅವರು ಬರೆದಿರುವಂತೆ, ಛೇ.. ಸಂಕಟದ ವಿಷಯ….. ನಾವು ಈ ವೀರ ಸಾಂಭಾಜಿ ಕುರಿತು ಎನನ್ನೂ ನಮ್ಮ ಇತಿಹಾಸದ ಪಠ್ಯ ಪುಸ್ತಕದಲ್ಲಿ ಓದಲೇ ಇಲ್ವಲ್ಲಾ... ಅದೆಷ್ಟು ತಿರುಚಿ ಮುರುಚಿದ ಚರಿತ್ರೆಯನ್ನು ನಮ್ಮ ತಲೆಗೆ ತುಂಬಲಾಗಿದೆ ಎಂದಿದ್ದಾರೆ.
ಇದೇ ವೇಳೆ ನಮ್ಮ ಹಾಗೂ ನಮ್ಮ ಮಕ್ಕಳ ತಲೆಯಲ್ಲಿ ತುಂಬಲಾದ- ತುಂಬಲಾಗುತ್ತಿರುವ ಕೆಲವು ಲೂಟಿಕೋರರ ಬಗ್ಗೆಯೂ ಬರೆದಿರುವ ಅವರು, ‘ಎಲ್ಲಿಂದಲೋ ಬಂದ ಬಾಬರ್ ಎಂಬ ಲೂಟಿಕೋರನ ವಂಶಾವಳಿಯನ್ನು ಕಂಠಪಾಠ ಮಾಡುವ ನಮಗೆ ಇಲ್ಲಿಯೇ ಸ್ವರಾಜ್ಯದ ಕನಸು ಕಂಡ ಶಿವಾಜಿಯ , ಆ ಮಹನೀಯನ ವಂಶದ ನಿಜವಾದ ಶೌರ್ಯಗಾಥೆಗಳು ಗೊತ್ತೇ ಆಗಲಿಲ್ಲ. “ಛಾವ” ಈ ಚಿತ್ರ ನೋಡಿ ಮನ ರೋಮಾಂಚನವಾಯಿತು . ಸತಾತನ ಧರ್ಮದ ಸಹಿಷ್ಣುತೆಯ ನಿಲುವ ಕಂಡು ಗರ್ವ ಮೂಡಿತು. ನಮಗೆ ಗೊತ್ತಿಲ್ಲದ ಅಥವಾ ಬಚ್ಚಿಟ್ಟ ಕಥೆಯನ್ನು ತಿಳಿದು ನೋವಾಯಿತು. ಶಿವಾಜಿಯ ಮಗನೆಂದು ಸಾಂಭಾಜಿಯ ಹೆಸರು ಪ್ರಸಿದ್ಧಿಗೆ ಬರಲಿಲ್ಲ. ಆತ ಸ್ವಯಂ ಸಾಮರ್ಥ್ಯದ ಮೂಲಕ ಔರಂಗಜೇಬನೆಂಬ ಮತಾಂಧನಿಗೆ ಸಿಂಹಸ್ವಪ್ನವಾಗಿದ್ದ . ಈ ಮರಿಸಿಂಹದ ವೀರಾವೇಶ -ಸ್ವಾಭಿಮಾನ ಕಂಡು ಕಣ್ತುಂಬಿಬಂತು‘ ಎಂದು ಬರೆದಿದ್ದಾರೆ. ಚಿತ್ರದ ಕೊನೆಯಲ್ಲಿ ಬರುವ ಔರಂಗಜೇಬ-ಸಾಂಭಾಜಿಯ ನಡುವಿನ ಸಂಭಾಷಣೆ ನಿಜಕ್ಕೂ ಅಮೋಘವಾಗಿದೆ . ಸನಾತನ ಧರ್ಮದ ಔನತ್ಯವನ್ನು ಈ ಮಾತುಕತೆಯಲ್ಲಿ ಎತ್ತಿ ತೋರಿಸಲಾಗಿದೆ . ಕೆಲವರು ಸೋತು ಗೆಲ್ಲುತ್ತಾರೆ …..ಇನ್ನು ಕೆಲವರು ಗೆದ್ದರೂ ಸೋತು ಸತ್ತೇ ಹೋಗುತ್ತಾರೆ. …. ಕಳೆದುಕೊಂಡಿರುವ ಸ್ವಾಭಿಮಾನವನ್ನು ಕೆದಕಿ ಕಾಡುವ ಈ ಚಿತ್ರವನ್ನು ಒಮ್ಮೆ ನೋಡಲೇಬೇಕು ಎಂದು ಅವರು ಹೇಳುವ ಮೂಲಕ, ಇತಿಹಾಸದ ಪುಟಗಳನ್ನು ತಿರುವಿ ಹಾಕಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ಟ್ವೀಟ್ಗೆ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಕಿಡಿಕಿಡಿ: ಜಾಲತಾಣದಲ್ಲಿ ಪರ-ವಿರೋಧಗಳ ಬಿಸಿಬಿಸಿ ಚರ್ಚೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.