'ಜೈಲರ್‌'ಗೆ ಸೆನ್ಸಾರ್ ಶಾಕ್: ರಜನಿಕಾಂತ್ ಜೊತೆ ಸಿಗರೇಟ್ ಹಿಡಿದ ಶಿವಣ್ಣ, ಮೋಹನ್‌ಲಾಲ್, 11 ದೃಶ್ಯಕ್ಕೆ ಕತ್ತರಿ

Published : Jul 31, 2023, 10:58 AM ISTUpdated : Aug 01, 2023, 02:31 PM IST
'ಜೈಲರ್‌'ಗೆ ಸೆನ್ಸಾರ್ ಶಾಕ್: ರಜನಿಕಾಂತ್ ಜೊತೆ ಸಿಗರೇಟ್ ಹಿಡಿದ ಶಿವಣ್ಣ, ಮೋಹನ್‌ಲಾಲ್,  11 ದೃಶ್ಯಕ್ಕೆ ಕತ್ತರಿ

ಸಾರಾಂಶ

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾಗೆ ಸೆನ್ಸಾರ್ ಆಗಿದ್ದು ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಮೂವರು ಸ್ಟಾರ್ ನಟರು ಸಿಗರೇಟು ಹಿಡಿದಿರುವ ದೃಶ್ಯ ಸೇರಿದಂತೆ ಒಟ್ಟು 11 ದೃಶ್ಯಕ್ಕೆ ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ಸೂಚಿಸಿದೆ. 

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಈ ವರ್ಷದ ಭಾರಿ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿದೆ. ಈಗಾಗಲೇ 'ಕಾವಾಲ..' ಹಾಡಿನ ಮೂಲಕ ಭಾರಿ ಸದ್ದು ಮಾಡುತ್ತಿರುವ ಜೈಲರ್ ಇತ್ತೀಚೆಗಷ್ಟೆ ಅದ್ದೂರಿಯಾಗಿ ಆಡಿಯೋ ರಿಲೀಸ್ ಮಾಡಿ ಅಭಿಮಾನಿಗಳ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಈ ಸಿನಿಮಾ ತಮಿಳು ಜೊತೆಗೆ ಕನ್ನಡ ಮತ್ತು ಮಲಯಾಳಂ ಅಭಿಮಾನಿಗಳಿಗೂ ತುಂಬಾ ವಿಶೇಷವಾಗಿದೆ. 

ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಜೈಲರ್ ಸಿನಿಮಾಗೆ ಸೆನ್ಸಾರ್ ಆಗಿದ್ದು ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಅಂದಹಾಗೆ ಜೈಲರ್ ಸಿನಿಮಾ 2 ಗಂಟೆ 48 ನಿಮಿಷಾ 47 ಸೆಕೆಂಡ್ ಇದೆ. ಸದ್ಯ ಸೆನ್ಸಾರ್ ಬೋರ್ಡ್ ಸಿನಿಮಾದಿಂದ ಒಟ್ಟು 11 ದೃಶ್ಯಕ್ಕೆ ಕತ್ತರಿ ಹಾಕುವಂತೆ ಸೂಚಿಸಿದೆ. ಕೆಲವು ದೃಶ್ಯಗಳ ಅವಧಿ ಕಡಿಮೆ ಮಾಡಬೇಕು, ಹಿಂಸಾತ್ಮಕ ದೃಶ್ಯಗಳನ್ನು ತೆಗೆದು ಹಾಕಬೇಕು ಹಾಗೂ ಕೆಲವು ಪದಗಳನ್ನು ಮ್ಯೂಟ್ ಮಾಡುವಂತೆ ಸೆನ್ಸಾನ್ ಮಂಡಳಿ ಸಿನಿಮಾತಂಡಕ್ಕೆ ಸೂಚಿಸಿದೆ.

'ಸೂಪರ್ ಸ್ಟಾರ್' ಹೆಸರು ತೆಗೆದು ಹಾಕಲು ಹೇಳಿದೆ: 'ಜೈಲರ್' ಈವೆಂಟ್‌ನಲ್ಲಿ ರಜನಿಕಾಂತ್ ಮಾತು

ಮೋಹನ್ ಲಾಲ್ ಮಲಯಾಳಿ ವ್ಯಕ್ತಿಯಾಗಿಯೇ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಮೋಹನ್‌ಲಾಲ್ ಮಾತನಾಡುವ ಕೆಲವು ಮಲಯಾಳಂ ಪದಗಳಿಗನ್ನು ಮ್ಯೂಟ್ ಮಾಡುವಂತೆ ಸೆನ್ಸಾನ್ ಮಂಡಳಿ ಸೂಚಿಸಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ರಜನಿಕಾಂತ್ ಈ ಸಿನಿಮಾದಲ್ಲಿ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್‌ಲಾಲ್ ಮ್ಯಾಥ್ಯೂ ಪಾತ್ರಕ್ಕೆ ಬಣ್ಣ ಹಚ್ಚಿದ್ರೆ ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ನರಸಿಂಹ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂವರು ಸ್ಟಾರ್ ಕಲಾವಿದರ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೆನ್ಸಾರ್ ಮಂಡಳಿ ಹೇಳಿದೆ. ಅದರಲ್ಲೂ ಈ ಮೂವರು ಒಟ್ಟಿಗೆ ಸಿಗರೇಟು ಹಿಡಿದಿರುವ ದೃಶ್ಯ ತೆಗೆಯುವಂತೆ ಸೂಚಿಸಿದೆ ಎನ್ನುವ ಮಾಹಿತಿ ಹೇಳಿ ಬಂದಿದೆ. 

ರಜನಿಕಾಂತ್ ನನ್ನ ಚಿಕ್ಕಪ್ಪ ಇದ್ದಂತೆ: ಶಬ್ಬರಿಮಲೆ ಘಟನೆ ನೆನಪಿಸಿಕೊಂಡ ಶಿವರಾಜ್‌ಕುಮಾರ್‌

ಜೈಲರ್ ಸಿನಿಮಾ ಸೂಪರ್ ಸ್ಟಾರ್ ರಜನಿಕಾಂತ್ ಅವರ 169ನೇ ಸಿನಿಮಾವಾಗಿದೆ. ಸನ್ ಪಿಕ್ಟರ್ಸ್‌ನಲ್ಲಿ ಜೈಲರ್ ಚಿತ್ರ ಮೂಡಿ ಬರುತ್ತಿದೆ. ಮೊದಲ ಬಾರಿಗೆ ಮೂವರು ಖ್ಯಾತ ನಟರು ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದಳಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾದ ಸೋಲಿನ ಬಳಿಕ ನೆಲ್ಸನ್ ರಜನಿಕಾಂತ್ ಜೊತೆ ಜೈಲರ್ ಸಿನಿಮಾ ಮಾಡಿದ್ದಾರೆ. ಜೈಲರ್ ಮೂಲಕ ಮತ್ತೆ ಗೆಲುವಿನ ಹಾದಿ ಹಿಡಿಯುತ್ತಾರೆ ನೆಲ್ಸನ್ ಕಾದುನೋಡಬೇಕಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?