ದೀಪಿಕಾ ವಿಷ್ಯದಲ್ಲಿ ಸುಳ್ಳಾಯ್ತು ಸೆಲೆಬ್ರಿಟಿ ಜ್ಯೋತಿಷಿ ಭವಿಷ್ಯ! ರಾಜಯೋಗದ ಕಥೆಯೇನು ಕೇಳ್ತಿರೋ ಫ್ಯಾನ್ಸ್​...

Published : Sep 08, 2024, 03:46 PM IST
ದೀಪಿಕಾ ವಿಷ್ಯದಲ್ಲಿ ಸುಳ್ಳಾಯ್ತು ಸೆಲೆಬ್ರಿಟಿ ಜ್ಯೋತಿಷಿ ಭವಿಷ್ಯ! ರಾಜಯೋಗದ ಕಥೆಯೇನು ಕೇಳ್ತಿರೋ ಫ್ಯಾನ್ಸ್​...

ಸಾರಾಂಶ

ದೀಪಿಕಾ ಪಡುಕೋಣೆಗೆ ಹುಟ್ಟಲಿರುವ ಮಗು ಹಾಗೂ ಅದರ ಭವಿಷ್ಯದ ಬಗ್ಗೆ ಸೆಲೆಬ್ರಿಟಿ ಜ್ಯೋತಿಷಿ   ಪಂಡಿತ್ ಜಗನ್ನಾಥ ಗುರೂಜಿ   ಭವಿಷ್ಯ ನುಡಿದಿದ್ದರು. ಆದರೆ ಅದೀಗ ಸುಳ್ಳಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.   

ದೀಪಿಕಾ ಪಡುಕೋಣೆ ಗರ್ಭಿಣಿ ಹೌದೋ ಅಲ್ಲವೋ ಎಂಬ ಬಗ್ಗೆ ಕಳೆದ ಎಂಟು ತಿಂಗಳುಗಳಿಂದ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅದ್ಯಾವ ಮಟ್ಟಿಗೆ ಎಂದರೆ ದೀಪಿಕಾ ಮತ್ತು ರಣಬೀರ್​ ಸಿಂಗ್​ ತಮಗೆ ಸೆಪ್ಟೆಂಬರ್​ನಲ್ಲಿ ಮಗುಹುಟ್ಟಲಿದೆ ಎಂದು ದೀಪಿಕಾ ಎರಡು ತಿಂಗಳು ಗರ್ಭಿಣಿ ಇದ್ದಾಗಲೇ ಅನೌನ್ಸ್​ ಮಾಡಿದ್ದರು. ಅಲ್ಲಿಂದ ಶುರುವಾಗಿತ್ತು ಗರ್ಭಧಾರಣೆಯ ಚರ್ಚೆ. ಈಕೆ ಗರ್ಭಿಣಿಯೇ ಅಲ್ಲ, ಅದು ಫೇಕ್​ ಹೊಟ್ಟೆ. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುತ್ತಿದ್ದಾರೆ ದೀಪಿಕಾ ಎಂದೆಲ್ಲಾ ಹೇಳಲಾಗಿತ್ತು. ಅದು ಎಷ್ಟರಮಟ್ಟಿಗೆ ಎಂದರೆ, ಮೊನ್ನೆಮೊನ್ನೆಯಷ್ಟೇ ದೀಪಿಕಾ ಬಿಕಿನಿ ತೊಟ್ಟು ಹೊಟ್ಟೆ ಬಿಟ್ಟು ಶೂಟಿಂಗ್​ ಮಾಡಿಸಿದಾಗಲೂ ಇದು ಫೇಕ್​, ಎಡಿಟೆಡ್​ ಎಂದೇ ಹೇಳಲಾಗಿತ್ತು. ನಿಜವಾಗಿಯೂ ಗರ್ಭಿಣಿಯಾಗಿದ್ದರೆ, ಕಲರ್​ ಫೋಟೋಶೂಟ್​ ಮಾಡಿಸುತ್ತಿದ್ದರು ಎಂಬ ಚರ್ಚೆ ನಡೆದಿತ್ತು.

ಇವೆಲ್ಲವುಗಳ ಹೊರತಾಗಿಯೂ ಇವತ್ತು ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ವರದಿಯಾಗಿದೆ. ನಿನ್ನೆಯಷ್ಟೇ ಈ ದಂಪತಿ ಮುಂಬೈನ ಅಂಬಾನಿ ಮಾಲೀಕತ್ವದ ಎಚ್‌ಎನ್‌ ರಿಲಯನ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು.  ಅದಕ್ಕೂ ಮುನ್ನ ಗಣೇಶನ ದರ್ಶನ ಪಡೆದಿದ್ದರು ದೀಪಿಕಾ. ಅಷ್ಟಕ್ಕೂ ಇವರಿಗೆ ಸೆಪ್ಟೆಂಬರ್ 28ರಂದು  ಡೆಲಿವರಿ ಡೇಟ್ ಇತ್ತು. ಆದರೆ ನಿಗದಿಗಿಂತ 20 ದಿನ ಮೊದಲೇ ದೀಪಿಕಾ ರಣ್ವೀರ್ ಮನೆಗೆ ಮಗು ಜನಿಸಿದೆ. ಆದರೆ ಇದೀಗ ಮಗುವಿನ ಚರ್ಚೆ ಶುರುವಾಗಿದೆ. 

ದೀಪಿಕಾ ಪಡುಕೋಣೆ ಮಗುವಿನ ಹೆಸರು ರಿವೀಲ್​? ಹೆಸರಿಗೆ ಪರ್ಮಿಷನ್​ ಪಡೆದಿದ್ದಾರೆ ರಣವೀರ್​ ಸಿಂಗ್!

ಅದೇನೆಂದರೆ, ಸೆಲೆಬ್ರಿಟಿ ಜ್ಯೋತಿಷಿ   ಪಂಡಿತ್ ಜಗನ್ನಾಥ ಗುರೂಜಿ ನುಡಿದ ಭವಿಷ್ಯ ಸುಳ್ಳಾಗಿದೆ. ಅಷ್ಟಕ್ಕೂ ಕಳೆದ ಜುಲೈ ತಿಂಗಳಿನಲ್ಲಿ ಜ್ಯೋತಿಷಿ ಪಂಡಿತ್ ಜಗನ್ನಾಥ ಗುರೂಜಿ ಅವರು ದೀಪಿಕಾಗೆ ಗಂಡು ಮಗು ಹುಟ್ಟಲಿದೆ ಎಂದು ಭವಿಷ್ಯ ನುಡಿದಿದ್ದರು. ಈ ಮಗು ದಂಪತಿಗೆ ರಾಜಯೋಗ ತರಲಿದೆ ಎಂದೂ ಹೇಳಿದ್ದರು.  ಗಂಡು ಮಗುವಿಗೆ ಸಂಪೂರ್ಣ ದೇವರ ಅನುಗ್ರಹವಿದೆ. ಮಗುವಿನ ಶುಕ್ರ ದೆಸೆ ಸೆಲೆಬ್ರೆಟಿ ದಂಪತಿಗಳ ಯಶಸ್ಸು ದಪ್ಪುಟ್ಟು ಮಾಡಲಿದೆ ಎಂದು ಜಗನ್ನಾಥ ಗುರೂಜಿ ಹೇಳಿದ್ದರು. ದೀಪಿಕಾ ಹಾಗೂ ರಣವೀರ್ ಬಾಳಲ್ಲಿ ಗಂಡು ಮಗು ಹೊಸ ಯಶಸ್ಸನ್ನು ನೀಡಲಿದೆ. ಈ ಜೋಡಿಯ ಪ್ರೀತಿ, ಖುಷಿ ಹಾಗೂ ಸಂಭ್ರವನ್ನು ಹೆಚ್ಚಿಸಲಿದೆ ಎಂದಿದ್ದರು. 

ಆದರೆ ಇದೀಗ ಎಲ್ಲವೂ ಸುಳ್ಳಾಗಿದೆ. ಸೆಲೆಬ್ರಿಟಿ ಜ್ಯೋತಿಷಿಯೇ ಹೀಗೆ ತಪ್ಪು ಹೇಳಿದರೆ ಹೇಗೆ ಎನ್ನುವ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ.  ಅಷ್ಟಕ್ಕೂ  2021-22ರಲ್ಲಿ ಹಿಂದಿಯ ಕಲರ್ಸ್​ ಟಿ.ವಿಯಲ್ಲಿ ಪ್ರಸಾರ ಆಗ್ತಿದ್ದ ಬಿಗ್​ ಪಿಕ್ಚರ್​ ಷೋನಲ್ಲಿ ರಣವೀರ್​ ಸಿಂಗ್​ ತಮಗೆ ಹುಟ್ಟಲಿರುವುದು ಗಂಡು ಮಗು ಎನ್ನುವ ಮೂಲಕ ಮಗನಿಗೆ ಶೌರ್ಯವೀರ್​ ಸಿಂಗ್ ಎಂದು ಹೆಸರು ಇಡುವುದಾಗಿ ಹೇಳಿದ್ದರು. ಅಲ್ಲಿಗೆ ಬಂದಿರುವ ಸ್ಪರ್ಧಿಯೊಬ್ಬರ ಹೆಸರು ಇವರಿಗೆ ಇಷ್ಟವಾಗಿತ್ತು.  ಆಗ ಅವರು, ನನಗೆ ಹೆಚ್ಚಾಗಿ ಹುಟ್ಟುವುದು ಗಂಡುಮಗುವೇ. ಗಂಡುಮಗು ಹುಟ್ಟಿದರೆ ಈ ಹೆಸರನ್ನೇ ಇಡುತ್ತೇನೆ ಎಂದಿದ್ದರು. ಈ ಹೆಸರನ್ನು ನಾನು ನಿಮ್ಮಿಂದ ಪಡೆಯಲಿ ಪರ್ಮಿಷನ್​ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದ ರಣವೀರ್​ , ಇದೇ ಹೆಸರನ್ನು ಮಗುವಿಗೆ ಇಡುವ ಇಚ್ಛೆ ವ್ಯಕ್ತಪಡಿಸಿದ್ದರು. 

ಶಮಿಕಾ ಭೈರಾದೇವಿಗೆ ಕೊಟ್ಟ ಆಡಿಷನ್ ನೋಡಿ ಅತ್ತುಬಿಟ್ಟೆ... ಸಿನಿಮಾಕ್ಕೆ ಪುತ್ರಿ ಎಂಟ್ರಿಗೆ ರಾಧಿಕಾ ಹೇಳಿದ್ದೇನು?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?