ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಸಮಾಪ್ತಿ ವರದಿಯನ್ನು ಸಿಬಿಐ ಕೋರ್ಟ್‌ಗೆ ಸಲ್ಲಿಸಿದೆ. ಈ ವರದಿಯಲ್ಲಿ ಸುಶಾಂತ್ ಸಾವಿಗೆ ಕಾರಣವನ್ನು ಹೇಳಿದೆ. ಅಷ್ಟಕ್ಕೂ ನಿಗೂಢ ಪ್ರಕರಣ ಕುರಿತು ಸಿಬಿಐ ತನಿಖೆಯಲ್ಲಿ ಪತ್ತೆಯಾಗಿದ್ದೇನು?
ಮುಂಬೈ(ಮಾ.22) ಬಾಲಿವುಡ್‌ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಬದುಕು ಅಂತ್ಯಗೊಳಿಸಿದ ಸುದ್ದಿ ಬಹುತೇಕರನ್ನು ಬೆಚ್ಚಿ ಬೀಳಿಸಿತ್ತು. ನಟನೆ, ಪ್ರತಿಭೆ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದ ಸುಶಾಂತ್ ಸಾವಿನ ಬೆನ್ನಲ್ಲೇ ಆರೋಪ ಪ್ರತ್ಯಾರೋಪಗಳು ಕೇಳಿಬಂದಿತ್ತು. ಇಷ್ಟೇ ಅಲ್ಲ ಪ್ರಕರಣ ಕೂಡ ದಾಖಲಾಗಿತ್ತು. ಈ ಪ್ರಕರಣಕ್ಕೆ ಎಂಟ್ರಿಕೊಟ್ಟ ಸಿಬಿಐ ಕಳೆದ ನಾಲ್ಕು ವರ್ಷ ತನಿಖೆ ನಡೆಸಿ ಇದೀಗ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಮಾಪ್ತಿ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದೆ.ಈ ವರದಿಯಲ್ಲಿ ಸುಶಾಂತ್ ಸಾವಿಗೆ ಕಾರಣವನ್ನು ಸಿಬಿಐ ಹೇಳಿದೆ.
ಸುಶಾಂತ್ ಸಿಂಗ್ ರಜಪೂತ್ ತಂದೆ ದಾಖಲಿಸಿದ್ದ ದೂರು ಹಾಗೂ ಸುಶಾಂತ್ ಕುಟುಂಬಸ್ಥರು ದಾಖಲಿಸಿದ್ದ ಎರಡು ದೂರು ಆಧರಿಸಿ ಸಿಬಿಐ ತನಿಖೆ ನಡೆಸಿತ್ತು. ಆಗಸ್ಟ್ 2020ರಲ್ಲಿ ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಕಳೆದ ನಾಲ್ಕು ವರ್ಷಗಳಿಂದ ಸುದೀರ್ಘ ತನಿಖೆ ನಡೆಸಿದ ಸಿಬಿಐ ಇದೀಗ ಮುಂಬೈ ಕೋರ್ಟ್‌ಗೆ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿಂದೆ ಕಾಣದ ಕೈಗಳ ಕೈವಾಡವಿದೆ ಅನ್ನೋ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದಿದೆ. ನಟನ ಸಾವಿಗೆ ಇತರರು ಪ್ರಚೋದನೆ ನೀಡಿರುವ ಬಗ್ಗೆ, ಒತ್ತಡ ಹಾಕಿರುವ ಬಗ್ಗೆಯೂ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಸಿಬಿಐ ತನ್ನ ವರದಿಯಲ್ಲಿ ಹೇಳಿದೆ.
ಅತೀ ಚಿಕ್ಕ ವಯಸ್ಸಿಗೆ ನಿಗೂಢವಾಗಿ ಸಾವು ಕಂಡ ಭಾರತೀಯ ತಾರೆಯರಿಯವರು!
ಸಿಬಿಐ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಲಭ್ಯವಿರುವ ಎಲ್ಲಾ ಸಾಕ್ಷ್ಯಗಳನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದೆ. ಈ ಪೈಕಿ ಸುಶಾಂಕ್ ಸಿಂಗ್ ರಜಪೂತ್ ಮರಣೋತ್ತರ ಪರೀಕ್ಷೆ ವರದಿಯನ್ನು ತನಿಖೆ ನಡೆಸಿದೆ. ಇನ್ನು ಸುಶಾಂತ್ ಸಿಂಗ್ ರಜಪೂತ್ ವ್ಯಾಟ್ಸಾಪ್ ಸಂದೇಶ, ಮೆಸೇಜ್, ಕರೆ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಅಮೆರಿಕದ ಕಳುಹಿಸಿ ಪರೀಕ್ಷಿಸಿದೆ. ಈ ವರದಿಯಲ್ಲೂ ಯಾವುದೇ ಮೆಸೇಜ್ ಡಿಲೀಟ್ ಮಾಡಿರುವುದಾಗಿ, ಎಡಿಟ್ ಮಾಡಿರುವುದಾಗಿ ಆಗಿಲ್ಲ ಎಂದಿದೆ.
ಇನ್ನೇ ರೆಹಾ ಚಕ್ರಬೊರ್ತಿ ಮೇಲಿನ ಆರೋಪ, ಆಕೆಯ ಹೇಳಿಕೆ ಸೇರಿದಂತೆ ಎಲ್ಲವನ್ನು ದಾಖಲಿಸಿ ತನಿಖೆ ನಡೆಸಲಾಗಿದೆ. ಸಾವಿಗೆ ಪ್ರಚೋದನೆ ನೀಡುವಂತ ಸಂಭಾಷಣೆ, ಸಂದೇಶ ವಿನಿಮವಯವಾಗಿಲ್ಲ. ಇಮೇಲ್ ಸೇರಿದಂತೆ ಇತರ ಎಲ್ಲಾ ವೇದಿಕೆಗಳನ್ನು ಪರಿಶೀಲಿಸಿ ತನಿಖೆ ನಡೆಸಿರುವುದಾಗಿ ಸಿಬಿಐ ವರದಿಯಲ್ಲಿ ಹೇಳಿದೆ.
ಸಿಬಿಬಿಐ ವರದಿ ಕಳೆದ ಹಲವು ವರ್ಷಗಳಿಂದ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುತ್ತ ಇದ್ದ ಅನುಮಾನಕ್ಕೆ ತೆರೆ ಎಳೆದಿದೆ. ಸುಶಾಂತ್ ಸಾವಿನ ಹಿಂದೆ ಪ್ರಭಾವಿಗಳ ಕೈವಾಡವಿದೆ ಅನ್ನೋ ಆರೋಪ, ಅನುಮಾನಕ್ಕೆ ತೆರೆ ಬಿದ್ದಿದೆ.
ಸುಶಾಂತ್ ಸಿಂಗ್ ಸಾವಿನ ಮರಣೋತ್ತರ ಪರೀಕ್ಷಾ ವರದಿ ಏಮ್ಸ್ನಲ್ಲಿ ಅದಲು- ಬದಲು: ನಟಿ ಸೋಮಿ ಸ್ಫೋಟಕ ಹೇಳಿಕೆ!