Disha Salian ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾವಿನ ರಹಸ್ಯ ಬಯಲು ಮಾಡಿದ ಸಿಬಿಐ

Published : Nov 24, 2022, 09:33 AM ISTUpdated : Nov 24, 2022, 10:17 AM IST
Disha Salian ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾವಿನ ರಹಸ್ಯ ಬಯಲು ಮಾಡಿದ ಸಿಬಿಐ

ಸಾರಾಂಶ

ಸುಶಾಂತ್ ಸಿಂಗ್ ಮತ್ತು ದಿಶಾ ಸಾಲಿಯಾನ್ ಸಾವಿಗೂ ಯಾವುದೇ ಸಂಬಂಧವಿಲ್ಲ, ದಿಶಾ ಸಾವು ಆಕಸ್ಮಿಕ ಎಂದು ಸಿಬಿಸಿ ತೀರ್ಮಾನಕ್ಕೆ ಬಂದಿದೆ. 

ಬಾಲಿವುಡ್ ಚಿತ್ರರಂಗವನ್ನು ಒಮ್ಮೆ ನಡುಗಿಸಿ ಉಲ್ಟಾಪಲ್ಟಾ ಮಾಡಿದ್ದು ಸುಶಾಂತ್ ಸಿಂಗ್ ಮತ್ತು ಮ್ಯಾನೇಜರ್ ದಿಶಾ ಸಾಲಿಯಾನ್ ಸಾವು. 2020ರಲ್ಲಿ ಆದ ದಿಶಾ ಆತ್ಮಹತ್ಯೆ ಪ್ರಕರಣ ನೂರಾರೂ ಕಾಂಟ್ರವರ್ಸಿಗಳಿಗೆ ದಾರಿ ಮಾಡಿಕೊಟ್ಟಿತ್ತು, ಈ ವಿಚಾರದಲ್ಲಿ ಅನೇಕ ಗಣ್ಯರ ಹೆಸರು ಕೇಳಿ ಬಂದಿದ್ದು ನಿಜ. 28 ವರ್ಷದ ದಿಶಾ ಹಲವು ಸೆಲೆಬ್ರಿಟಿಗಳಿಗೆ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ ಅದರಲ್ಲೂ ಸುಶಾಂತ್‌ ಸಿಂಗ್‌ಗೆ ತುಂಬಾನೇ ಆತ್ಮೀಯವಾದ ಮ್ಯಾನೇಜರ್ ಆಗಿದ್ದರು. ದಿಶಾ ಆತ್ಮಹತ್ಯೆ ಮಾಡಿಕೊಂಡ ಒಂದು ವಾರದಲ್ಲಿ ಸುಶಾಂತ್ ಆಗಲಿದ್ದು ಶಾಕಿಂಗ್ ವಿಚಾರ...

ದಿಶಾ ಸಾವಿಗೆ ಸಂಬಂಧಿಸಿದಂತೆ ಯಾವುದೇ ಎಫ್‌ಐಆರ್‌ ಮತ್ತು ದೂರು ದಾಖಲಾಗದ ಕಾರಣ ಸಿಬಿಐ ತನಿಖೆಯನ್ನು ಕೈ ತೆಗೆದುಕೊಂಡು ಸುಶಾಂತ್ ಸಿಂಗ್ ಸಾವಿಗೆ ಕನೆಕ್ಟ್‌ ಮಾಡಿ ವಿಚಾರಣೆ ಆರಂಭಿಸಿದ್ದರು. ಯಾವುದೇ ಸುಳಿವು ಇಲ್ಲದ ಕಾರಣ ಸಿಬಿಐ ಜೊತೆಗೆ Enforcement Directorate ಮತ್ತು Narcotics Control Bureau ಕೂಡ ವಿಚಾರಣೆಗೆ ಕೈ ಜೋಡಿಸಿತ್ತು. ಜೂನ್ 8 ಅಥವಾ 9ರಂದು ಮುಂಬೈನ ಅಪಾರ್ಟ್‌ಮೆಂಟ್‌ವೊಂದರ 14ನೇ ಮಹಡಿಯ ಕೋಣೆಯಲ್ಲಿ ದಿಶಾ ಮೃತದೇಹ ಪತ್ತೆಯಾಗಿತ್ತು. 5 ದಿನಗಳ ನಂತರ ಸುಶಾಂತ್ ಸಾವಾಗಿದ್ದ ಕಾರಣ ಬಿಜೆಪಿ ಲೀಡರ್ ನಿತೇಷ್ ರಾಣೆ ಈ ಎರಡೂ ಸಾವಿಗೆ ಸಂಬಂಧವಿದೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದರು.

ಈಗ ಸಿಬಿಐ ನೀಡಿರುವ ಮಾಹಿತಿ ಪ್ರಕಾರ ದಿಶಾ ಮಧ್ಯಪಾನ ಸೇವಿಸಿ ನಿಯಂತ್ರಣ ಸಿಗದೆ ಬಿದ್ದಿರುವುದು ಎಂದಿದ್ದಾರೆ. 'ದಿಶಾ ಸಾಲಿಯಾನ್ ಸಾವಿನ ವಿಚಾರದಲ್ಲಿ ನೂರಾರು ರೀತಿಗಳಲ್ಲಿ  ಆರೋಪಗಳು ಕೇಳಿ ಬಂದಿದ್ದು ಸುಶಾಂಗ್ ಸಿಂಗ್ ಸಾವಿಗೆ ಸಂಬಂಧವಿದೆ ಎಂದು ಹೇಳಲಾಗಿತ್ತು ಕಾರಣ ಸುಶಾಂತ್ ಮತ್ತು ದಿಶಾ ಒಟ್ಟಿಗೆ ಕೆಲಸ ಮಾಡಿದ್ದಾರೆ. ವಿಚಾರಣೆಯಲ್ಲಿ ತಿಳಿದು ಬಂದಿರುವ ಮಾಹಿತಿ ಪ್ರಕಾರ ದಿಶಾ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ನಿವಾಸದಲ್ಲಿ ಪಾರ್ಟಿ ಆಯೋಜಿಸಿದ್ದರು. ಜೂನ್ 8ರಂದು ಬರ್ತಡೇ ಪಾರ್ಟಿ ನಡೆದಿದೆ. ಆ ರಾತ್ರಿ ದಿಶಾ ಮಧ್ಯಪಾನ ಸೇವಿಸಿದ್ದಾರೆ ಪ್ಯಾರಪೆಟ್‌ ಮೇಲೆ ನಡೆದುಕೊಂಡು ಹೋಗುವಾಗ ನಿಂತ್ರಣ ತಪ್ಪಿ ಬಿದ್ದಿದ್ದಾರೆ.' ಎಂದು ಎಕನಾಮಿಕ್‌ ಟೈಮ್ಸ್ ಗೆ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ದಿಶಾ ಸಾಲಿಯನ್ ಜೊತೆ ಫೋಟೋ ವೈರಲ್‌ - ಬಚ್ಚನ್‌ ಸೊಸೆಗೂ ಬಂತಾ ಕಂಟಕ?

'ರಾಣೆ ನೀಡಿರುವ ಹೇಳಿಕೆ ಪ್ರಕಾರ ಸಾಲಿಯಾನ್ ಮತ್ತು ಸುಶಾಂತ್ ಸಾವಿಗೆ ಯಾವುದೇ ಸಂಬಂಧ ಪಟ್ಟ ಮಾಹಿತಿ ಲಭ್ಯವಿಲ್ಲ. ಸಹಾಯ ಬೇಕೆಂದು ಸಾಲಿಯಾನ್ ಸುಶಾಂತ್‌ನ ಸಂಪರ್ಕ ಮಾಡಿದ್ದಾಳೆ ಎನ್ನುವ ಕೇಳಿಕೆ ನೀಡಿದ್ದರು. ಸಂಪೂರ್ಣ ತನಿಖೆ ಪ್ರಕಾರ ಯಾವ ಮಾಹಿತಿನೂ ಲಭ್ಯವಿಲ್ಲ' ಎಂದು ಸಿಬಿಐ ಕೋಟ್ ಮಾಡಿದ್ದಾರೆ. 

ಸಿಕ್ಕ ಸಾಕ್ಷಿಗಳು:

ಐದು ಜನ ಅಧಿಕಾರಿಗಳ ಸಿಬಿಐ ತಂಡ ಖಾಸಗಿ ಕಾರಿನಲ್ಲಿ ದಿಶಾ ಸಾಲಿಯಾನ್ ಪ್ರಿಯತಮ ರೋಹನ್ ರೈ ಅಪಾರ್ಟ್ ಮೆಂಟ್ ನಲ್ಲಿ ಶೋಧ ನಡೆಸಿದ್ದರು,ಸೆಕ್ಯೂರಿಟಿಯವರಿಗೂ ತಿಳಿಸದೆ ಗಂಟೆಗಳ ಕಾಲ ಶೋಧ ನಡೆಸಿದ್ದು ಕೆಲ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು.ಬಿಜೆಪಿ ನಾಯಕ ನೀತೀಶ್ ರಾಣೆ ಸಹ ದಿಶಾ ಆತ್ಮಹತ್ಯೆ ಮತ್ತು ಸುಶಾಂತ್ ಸಾವು ಒಂದಕ್ಕೊಂದು ಸಂಬಂಧ ಇದೆ ಎಂದು ಆರೋಪ ಮಾಡಿದ್ದರು. ರಿಯಾ ಚಕ್ರವರ್ತಿ ಕಾರಣಕ್ಕೆ ಪಾರ್ಟಿಯೊಂದರಲ್ಲಿ ಸುಶಾಂತ್ ಇದ್ದಾಗಲೆ ಗಲಾಟೆ ನಡೆದಿದ್ದು. ಆ ದಿನ ಸುಶಾಂತ್ ದಿಶಾ ಅಪಾರ್ಟ್‌ ಮೆಂಟ್ ಗೆ ತೆರಳಿದ್ದರು ಎಂದು ಹೇಳಲಾಗಿತ್ತು.ದಿಶಾ ಸಾಲಿಯಾನ್ ಮೊಬೈಲ್ ಸಹ ಪಾರ್ಟಿ ನಡೆದಿದೆ ಎನ್ನಲಾದ ದಿನ ಆಫ್ ಆಗಿತ್ತು, ಇದು ಯಾಕೆ? ಎಂದು ಬಿಜೆಪಿ ನಾಯಕ ಪ್ರಶ್ನೆ ಮಾಡಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!