ಮಾಡೆಲ್ (model) ಕಂ ನಟಿ (actress) ಉರ್ಫಿ ಜಾವೇದ್‌ಗೆ (Urfi Javed) ಮೈ ಮುಚ್ಚಿಕೊಳ್ಳುವುದೆಂದರೆ ಅಲರ್ಜಿ. ಇನ್‌ಸ್ಟಾಗ್ರಾಂನಲ್ಲಿ ಹಾಟ್ ಫೋಟೋ ಹಾಕಿ ಟ್ರೋಲ್ ಮಾಡಿಸಿಕೊಳ್ಳುವುದು ಎಂದರೆ ಪ್ರೀತಿ. ಉರ್ಫಿ ಹೀಗ್ಯಾಕೆ?
ಬಾಲಿವುಡ್ (Bollywood) ಮತ್ತು ಫ್ಯಾಶನ್ ಇಂಡಸ್ಟ್ರಿಯ ಲೇಟೆಸ್ಟ್ ಹಾಟ್ ಬಜ್ ಎಂದರೆ ಉರ್ಫಿ ಜಾವೇದ್ (Urfi Javed). ಯಾವಾಗ್ಲೂ ತುಂಬಾ ಹಾಟ್ ಲುಕಿಂಗ್ ಡ್ರೆಸ್‌ನಲ್ಲಿ ಕಂಗೊಳಿಸುತ್ತಾ ಇರೋದರಿಂದಲೇ ಈಕೆ ಫೇಮಸ್ ಆಗಿದ್ದಾಳೆ. ತುಂಭಾ ಬೋಲ್ಡ್ ಡ್ರೆಸ್‌ಗಳನ್ನು (Bold) ಧರಿಸೋದಕ್ಕೇ ಈಕೆ ಫೇಮಸ್. ಆಕೆ ಇದನ್ನೇ ಮಾಡಲಿ ಎಂದು ಬಯಸೋರೂ ತುಂಬಾ ಮಂದಿ. ಈಕೆಯ ಇನ್‌ಸ್ಟಾಗ್ರಾಂ (instagram) ಯಾವಾಗ್ಲೂ ಈಕೆ ಧರಿಸಿದ ಬಿಕಿನಿ ಮುಂತಾದ ರಿವೀಲಿಂಗ್ ಡ್ರೆಸ್‌ಗಳಿಂದ ತುಂಬಿರುತ್ತವೆ. ಇದಕ್ಕೆ ತುಂಬಾ ಲೈಕ್‌ಗಳೂ ಬರುತ್ತವೆ. ಆದರೆ ಇದನ್ನು ಇಷ್ಟಪಡದೇ ಇರೋರೂ ತುಂಬಾ ಮಂದಿ ಇದಾರೆ. ಯಾಕಮ್ಮಾ ಇಂಥ ಡ್ರೆಸ್ ಹಾಕಿ ಉರಿಸ್ತೀಯ ಅನ್ನೋರೂ ಇದಾರೆ.
ಇತ್ತೀಚೆಗೆ ತಾನೇ ಈಕೆ ಒಂದು ವಿಚಿತ್ರ ಔಟ್‌ಫಿಟ್ ಧರಿಸಿ ಸುದ್ದಿಯಾಗಿದ್ದಳು. ತನ್ನ ಸ್ತನಗಳ ಮೇಲೆ ಬ್ರಾದ ಬದಲು ಎರಡು ಮೊಬೈಲ್ ಫೋನ್‌ಗಳನ್ನು ತೂಗುಬಿಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಳು. ಈ ಪೋಟೋಗೆ ಜನ ಸಕತ್ ಟ್ರೋಲ್ ಮಾಡಿದ್ದರು. ಇದೇನು ಫೋನ್ ಚಾರ್ಜಿಂಗ್ ಪಾಯಿಂಟಾ ಅನ್ನೋದು ಸುಮಾರು ಮಂದಿಯ ಕೊಂಕುನುಡಿಯಾಗಿತ್ತು.
ಆದ್ರೆ ಇಂಥಾ ಟ್ರೋಲಿಂಗ್‌ಗೆಲ್ಲಾ (Trolling) ಕೇರ್ ಮಾಡೋವಳಲ್ಲ ಉರ್ಫಿ. ಜನ ಎಷ್ಟೇ ಉರಿದುಕೊಂಡರೂ ಆಕೆ ತನ್ನ ಪಾಡಿಗೆ ತನ್ನ ದಿರಿಸು ತೊಟ್ಟು ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಾಕುತ್ತಾ ಇರುತ್ತಾಳೆ. ಈ ಉರ್ಫಿ ಹುಟ್ಟಿರೋದು ಮುಸ್ಲಿಂ ಸಮುದಾಯದಲ್ಲಿ ಅನ್ನುವುದನ್ನು ನೀವು ನಂಬಲಾರಿರಿ. ನಿಜ, ಮುಸ್ಲಿಂ ಧರ್ಮದಲ್ಲಿ ಈ ಬಗೆಯಲ್ಲಿ ಮಹಿಳೆಯರು ಮೈ ಪ್ರದರ್ಶಿಸುವುದು ನಿಷಿದ್ಧ. ಆದರೆ ಉರ್ಫಿ ಅದನ್ನೆಲ್ಲಾ ಧಿಕ್ಕರಿಸಿದ್ದಾಳೆ. ಇವಳು ಮೊದಲು ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್ (Instagram Influencer) ಆಗಿದ್ದಳು. ಅಲ್ಲಿಂದ ಬಿಗ್‌ಬಾಸ್ ಒಟಿಟಿಗೆ ಬಂದಳು. ಅಲ್ಲಿ ಈಕೆಯ ಪರ್‌ಫಾರ್ಮೆನ್ಸ್ ಈಕೆಗೆ ಇನ್ನಷ್ಟು ಹೆಸರು ತಂದುಕೊಟ್ಟಿತು. ಈಗಂತೂ ತನ್ನ ತುಂಡುಡುಗೆಗಳಿಂದಾಗಿಯೇ ಈಕೆ ಫೇಮಸ್ಸು.
ಈಕೆ ಹುಟ್ಟಿದ್ದು 1996 ಅಕ್ಟೋಬರ್ 15ರಂದು. ಲಖನೋದಲ್ಲಿ ಜನಿಸಿದವಳು. ಹುಟ್ಟಿದ್ದು ಮೇಲ್ವರ್ಗದ ಮುಸ್ಲಿಂ ಕುಟುಂಬದಲ್ಲಿ. ಲಖನೋದ ಸಿಟಿ ಮಾಂಟೆಸ್ಸೊರಿ ಸ್ಕೂಲ್‌ನಲ್ಲಿ ಓದಿದಳು. ಅಮಿಟಿ ಯೂನಿವರ್ಸಿಟಿಯಲ್ಲಿ ಮಾಸ್ ಕಮ್ಯುನಿಕೇಶನ್‌ನಲ್ಲಿ ಪದವಿ ಪಡೆದಳು. ಸಣ್ಣಪುಟ್ಟ ಕಿರುತೆರೆ ಸೀರಿಯಲ್‌ಗಳಲ್ಲಿ (Small Screen) ನಟಿಸಿತೊಡಗಿದಳು, ಮಾಡೆಲಿಂಗ್ ಮಾಡಿದಳು. ದಿಲ್ಲಿಯಲ್ಲಿ ಸಿನಿಮಾದ ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ಇದ್ದಳು.
ಝೆರೋಧಾ ಮುಖ್ಯಸ್ಥನ ಜೊತೆ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಡೇಟಿಂಗ್; ಫೋಟೋ ವೈರಲ್
ಈಕೆಯ ಫೋಟೋ ಯಾವಾಗಲೂ ನೋಡುವವರು ಒಂದು ವಿಶೇಷ ಗಮನಿಸಿರಬಹುದು. ಈಕೆಯ ಎಡ ಪಕ್ಕೆಯ ಮೇಲೆ, ಎದೆಯಿಂದ ಕೊಂಚ ಕೆಳಗೆ, ಒಂದು ಮೆಣಸಿನಕಾಯಿಯ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಅದನ್ನು ತೋರಿಸುವುದು ಎಂದು ಆಕೆಗೆ ಬಲು ಇಷ್ಟ. ಮೆಣಸಿನಕಾಯಿ ಅಂದ್ರೆ ಮತ್ತೇನಿಲ್ಲ, ತಾನು ಮೆಣಸಿನಷ್ಟೇ ಖಾರ- ಹಾಟ್ ಎಂದು ಹೇಳುವ ಪ್ರಯತ್ನ ಅಷ್ಟೇ!
ಟ್ರೆಂಡೀ ಡ್ರೆಸ್ ಹಾಕುವುದರ ಜತೆಗೆ ಹಾಡುವುದು ಮತ್ತು ಡ್ಯಾನ್ಸ್ ಮಾಡುವುದು ಕೂಡ ಈಕೆಯ ಹಾಬ್ಬಿಗಳು. ಏ ಮೇರೆ ಹಂಸಫರ್, ಬಡೇ ಭಯ್ಯಾ ಕಿ ದುಲ್ಹನಿಯಾ ಮೊದಲಾದ ಸೀರಿಯಲ್‌ಗಳು, ಬೇಪನ್ನಾ, ಮೇರಿ ದುರ್ಗಾ ಮೊದಲಾದ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾಳೆ.
ಹಾಟ್ ಡ್ರೆಸ್‌ಗಳಿಂದಲೇ (Hot Dress) ಹೆಸರು ಗಳಿಸಿಕೊಂಡಿರುವ ಈಕೆ ವರ್ಷಕ್ಕೆ ಏನಿಲ್ಲವೆಂದರೂ ೨೫ ಕೋಟಿ ರೂಪಾಯಿ ಗಳಿಸುತ್ತಾಳೆ. ಒಂದು ಟಿವಿ ಶೋಗೆ 50 ಲಕ್ಷಕ್ಕೂ ಅಧಿಕ ಹಣ ಚಾರ್ಜ್ ಮಾಡುತ್ತಾಳೆ. ಇಂಥಾ ಸುಂದರಿ ಮತ್ತು ಬಿಸಿಬಿಸಿ ಚೆಲುವೆಗೆ ಹಿಂದಿ ಸಿನಿಮಾದಲ್ಲಿ ನಟಿಸುವ ಆಸೆ ಇಲ್ಲವೇ? ಇದೆ. ಆದರೆ ಅಭಿನಯಕ್ಕಿಂತಲೂ ಹಾಟ್ ಡ್ರೆಸ್ ಹಾಗೂ ಕಾಂಟ್ರವರ್ಸಿಯಲ್ಲೇ ಹೆಚ್ಚು ಮಜಾ ಇದೆ ಎಂದು ಈಕೆ ನಂಬಿದಂತಿದೆ.
ಬಾತ್‌ರೂಮ್‌ಲಿ ಬಟ್ಟೆ ಬಿಚ್ಚಿ ಪೋಸ್ ನೀಡಿದ ದಿಶಾ ಪಟಾನಿ; ಅತಿಯಾಯ್ತು ಎಂದ ನೆಟ್ಟಿಗರು