ಬಾಲಿವುಡ್ ಎವರ್ಗ್ರೀನ್ ತಾರೆ ಶ್ರೀದೇವಿ ಅವರ ನಿಗೂಢ ಸಾವಿನ ಸುದ್ದಿಗೆ ಸಂಬಂಧಿಸಿದಂತೆ ಯುಟ್ಯೂಬರ್ ವಿರುದ್ಧ ಸಿಬಿಐ ಚಾರ್ಜ್ಷೀಟ್ ಸಲ್ಲಿಸಿದೆ. ಏನಿದು ವಿಷ್ಯ?
80-90ರ ದಶಕದಲ್ಲಿ ಬಾಲಿವುಡ್ ಚಿತ್ರದಲ್ಲಿ ನಂ.1 ಪಟ್ಟವನ್ನು ಯಾರಿಗೂ ಬಿಟ್ಟುಕೊಡದಿದ್ದ ಚೆಲುವೆ ಶ್ರೀದೇವಿ (Shreedevi). ತಮ್ಮ ಮುಗ್ಧ ಮುಖ, ಮನೋಜ್ಞ ನಟನೆ, ಸರಳ ವ್ಯಕ್ತಿತ್ವದ ಮೂಲಕ ಇವರು ಎಲ್ಲರ ಮನಸ್ಸು ಕದ್ದವರು. 13ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ, ರಾಷ್ಟ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ತಮ್ಮ ನಟನೆಯಿಂದ ಅನೇಕ ಪ್ರಶಸ್ತಿಗಳನ್ನು ಪಡೆದವರು. ಸೌಂದರ್ಯದ ಘನಿಯಂತಿದ್ದ ಶ್ರೀದೇವಿ ದುರಂತ ಅಂತ್ಯ (sad end) ಕಂಡವರು. ಇದೇ ಫೆ.28 ಶ್ರೀದೇವಿ ಅನುಮಾನಾಸ್ಪದವಾಗಿ ನಿಧನರಾಗಿ ಐದು ವರ್ಷಗಳು ಕಳೆಯುತ್ತವೆ. ಈಕೆಯದ್ದು ಸಾಮಾನ್ಯ ಸಾವು ಎಂದು ಹೇಳಲಾಗುತ್ತಿದ್ದರೂ, ಈಕೆಯ ಸಾವಿನ ರಹಸ್ಯ (Secret) ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಶ್ರೀದೇವಿಯ ಸಾವಿನ ರಹಸ್ಯದ ಬಗ್ಗೆ ಹಲವರು ಹಲವು ರೀತಿ ಆಡಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಕೊಲೆ ಎನ್ನುವುದು ಎಲ್ಲರ ಮಾತು. ಕೊಲೆಗಾರ ಯಾರು ಎನ್ನುವ ಬಗ್ಗೆಯೂ ಜನರು ಆಡಿಕೊಳ್ಳುತ್ತಿದ್ದರೂ ನಿಜ ಏನು ಎಂಬ ರಹಸ್ಯ ಮಾತ್ರ ಶ್ರೀದೇವಿಯ ಜೊತೆಗೇ ಸುಟ್ಟು ಭಸ್ಮವಾಗಿದೆ. 1963ರಲ್ಲಿ ಹುಟ್ಟಿದ್ದ ಈ ತಾರೆ ಇಂದು ಬದುಕಿರುತ್ತಿದ್ದರೆ, 60 ವರ್ಷ ವಯಸ್ಸಾಗಿರುತ್ತಿತ್ತು. ಆದರೆ 2018ರಲ್ಲಿ ಈಕೆ ದುರಂತ ಅಂತ್ಯ ಕಂಡರು. ಆದರೆ ವಯಸ್ಸಾದರೂ ಕೊನೆಯವರೆಗೂ ಆಕೆಯ ಮುಖದ ತೇಜಸ್ಸು ಎಂಥವರನ್ನೂ ಮರುಳು ಮಾಡುವಂತಿತ್ತು.
2018ರಲ್ಲಿ ಫೆಬ್ರವರಿ 20ರಂದು ನಟಿ ಕುಟುಂಬ ಸಹಿತವಾಗಿ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ಹೋಗಿದ್ದರು. ಇನ್ನೊಂದೆಡೆ, ಭಾರತದಲ್ಲಿ ಇದ್ದರು ಎನ್ನಲಾದ ಇವರ ಪತಿ ಬೋನಿ ಕಪೂರ್ (Bony Kapoor), ಫೆಬ್ರವರಿ 24ರಂದು ಶ್ರೀದೇವಿ ಭೇಟಿ ಮಾಡಿ ಸರ್ಪ್ರೈಸ್ ಕೊಡೋಕೆ ರೆಡಿ ಆಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಹೋಟೆಲ್ ಬಾತ್ರೂಮ್ಗೆ ಹೋಗಿದ್ದಷ್ಟೇ. ಅಲ್ಲಿಯೇ ಶ್ರೀದೇವಿ ಮೃತಪಟ್ಟಿದ್ದರು. ಬಾತ್ಟಬ್ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟರು ಎಂದೇ ಹೇಳಲಾಗುತ್ತಿದೆ. ಇವರ ಶವ ಸಿಕ್ಕಿದ್ದು ಬಾತ್ಟಬ್ನಲ್ಲಿ.(bathtub) ಆದರೆ ನಿಜವಾಗಿಯೂ ಏನು ಆಗಿದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ.
ರಾಹುಲ್ ಗಾಂಧಿ ಕೈಹಿಡಿದು ಸುದ್ದಿಯಾಗಿದ್ದ ನಟಿಗೆ ಬಟ್ಟೆ ತೊಡಲು ಕಷ್ಟವಾದ ಕಾಯಿಲೆ! ನೋವು ತೋಡಿಕೊಂಡ ಪೂನಂ
ಈಕೆ ಸಾವನ್ನಪ್ಪುತ್ತಿದ್ದಂತೆಯೇ ಸಾವಿನ ಬಗ್ಗೆ ಹಲವಾರು ಊಹಾಪೋಹ, ಗಾಳಿಸುದ್ದಿಗಳು ಹುಟ್ಟಿಕೊಂಡವು. ಇಂಥ ಸೆಲೆಬ್ರಿಟಿಗಳ ಸಾವು ಎಂದ ಮೇಲೆ ಕೇಳಬೇಕೆ? ಕೆಲವು ಯೂಟ್ಯೂಬರ್ಗಳು ಸಾವನ್ನು ಸೆನ್ಸೇಷನಲ್ ಮಾಡಲು ಏನೇನೋ ಸುದ್ದಿಗಳನ್ನು ಹರಿಬಿಟ್ಟರು. ಈ ರೀತಿಯಾಗಿ ಸುದ್ದಿ ಹರಡಿರುವ ಆರೋಪದ ಮೇಲೆ ಇದೀಗ ಸಿಬಿಐ ಕೈಲಿ ಸಿಕ್ಕಿಬಿದ್ದಿದ್ದಾರೆ ಯೂಟ್ಯೂಬರ್ ದೀಪ್ತಿ ಆರ್. ಪಿನ್ನಿತಿ. ಶ್ರೀದೇವಿ ಸಾವಿನ ಬಗ್ಗೆ ಭಾರತ ಮತ್ತು ಯುಎಇ ಸರ್ಕಾರದ ನಡುವೆ ರಹಸ್ಯ ಅಡಗಿದೆ ಎಂದು ವಿವಿಧ YouTube ವಿಡಿಯೋಗಳಲ್ಲಿ ದೀಪ್ತಿ ಹೇಳುತ್ತಾ ಬಂದರು. ಇಷ್ಟೇ ಆಗಿದ್ದರೆ ಕ್ಷಮಿಸಬಹುದಿತ್ತೇನೋ. ಆದರೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು, ಎಕ್ಸ್ಕ್ಲ್ಯೂಸಿವ್ ಸುದ್ದಿ ಎಂದು ಸಾಬೀತು ಮಾಡಲು ದೀಪ್ತಿ ಆರ್ ಪಿನ್ನಿತಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಆರೋಪ ಎದುರಿಸುತ್ತಿದ್ದಾರೆ.
ಇದೀಗ ಸಿಬಿಐ ಇವರ ವಿರುದ್ಧ ಚಾರ್ಜ್ಷೀಟ್ ದಾಖಲು ಮಾಡಿದೆ. ಸ್ವಯಂ ಘೋಷಿತ ತನಿಖಾಧಿಕಾರಿ ಎಂದು ಹೇಳಿಕೊಂಡಿದ್ದ ಭುವನೇಶ್ವರ ಮೂಲದ ದೀಪ್ತಿ ಎಂದು ಸಿಬಿಐ ಹೇಳಿದ್ದು, ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಬಾಲಿವುಡ್ ಸ್ಟಾರ್ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ದೀಪ್ತಿ ಕೂಡ ಇದೇ ರೀತಿಯ ಸಂವೇದನಾಶೀಲ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಗೋಧ್ರಾ ಹತ್ಯಾಕಾಂಡದ ಹಿಂದಿರುವ ಕೈ ಯಾರದ್ದು? ಭಯಾನಕ ಸತ್ಯ ಬಿಚ್ಚಿಟ್ಟ ಚಿತ್ರದ ಟೀಸರ್ ರಿಲೀಸ್