ಗೋಧ್ರಾ ಹತ್ಯಾಕಾಂಡದ ಹಿಂದಿರುವ ಕೈ ಯಾರದ್ದು? ಭಯಾನಕ ಸತ್ಯ ಬಿಚ್ಚಿಟ್ಟ ಚಿತ್ರದ ಟೀಸರ್​ ರಿಲೀಸ್​

By Suvarna News  |  First Published Feb 5, 2024, 3:39 PM IST

2002ರಲ್ಲಿ ಗುಜರಾತಿನ ಗೋಧ್ರಾದಲ್ಲಿ 58 ಮಂದಿಯ ಸಜೀವ ದಹನಕ್ಕೆ ಕಾರಣವಾದ ರೈಲ್ವೆ ದುರಂತರ ಅಸಲಿಯತ್ತೇನು ಎಂದು ತೋರಿಸುವ ಗೋಧ್ರಾ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. 
 


2002ರ, ಫೆಬ್ರವರಿ 27ರಂದು ಗುಜರಾತ್​ನ ಗೋಧ್ರಾದಲ್ಲಿ ನಡೆದಿತ್ತು ಘನಘೋರ ಘಟನೆ. ಫೈಜಾಬಾದ್‌ನಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಸಬರ್‌ಮತಿ ಎಕ್ಸ್‌ಪ್ರೆಸ್ (Sabaramathi Express) ರೈಲಿನ ಮೇಲೆ ದಾಳಿ ನಡೆದಿತ್ತು. ಗೋಧ್ರಾ ಬಳಿ ನಡೆದ ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ 58 ಜನರು ಸಜೀವ ದಹನವಾದರು.  ಅಷ್ಟಕ್ಕೂ ಇದು ಆಕಸ್ಮಿಕವೋ ಅಥವಾ ದುರುದ್ದೇಶಪೂರ್ವಕವೋ? ಈ ಘಟನೆಯ ಹಿಂದಿರುವ ಕೈ ಯಾರದ್ದು? ಈ ಭಯಾನಕ ಸತ್ಯದ ಕುರಿತ ಗೋಧ್ರಾ ಚಿತ್ರದಲ್ಲಿ ತೋರಿಸಲಾಗಿದೆ.  ಅಂದು ಗೋಧ್ರಾದಲ್ಲಿ ನಡೆದ ಈ ಘಟನೆ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎನ್ನುವುದನ್ನು ಈ ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ. ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು, ಇದರಲ್ಲಿ ಗೋಧ್ರಾ ದುರಂತದ ಚಿತ್ರಣವನ್ನು ನೋಡಬಹುದಾಗಿದೆ. ಅಂದಹಾಗೆ ಚಿತ್ರ ಮಾರ್ಚ್​ 1ರಂದು ಬಿಡುಗಡೆಯಾಗಲಿದೆ. 

ಈ ಘಟನೆಯ ಕುರಿತು ಒಂದಿಷ್ಟು ಹೇಳುವುದಾದರೆ, ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ 59 ಹಿಂದೂ ಯಾತ್ರಿಕರು ಮತ್ತು ಕಾರಸೇವಕರು ಬೆಂಕಿಯಲ್ಲಿ ಜೀವಂತವಾಗಿ ದಹಿಸಿ ಹೋದರು. ಇಡೀ ದೇಶವೇ ಬೆಚ್ಚಿ ಬಿದ್ದ ಘಟನೆ ಇದು. ನರೇಂದ್ರ ಮೋದಿಯವರು ಆಗ ತಾನೇ ಗುಜರಾತ್​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಘಟನೆ ನಡೆದ  ತಕ್ಷಣ ರಾಜ್ಯ ಸರ್ಕಾರವು  ನಾನಾವತಿ ಮೆಹ್ತಾ ಆಯೋಗವನ್ನು (Nanavati  Mehta) ರಚಿಸಿ ಬೆಂಕಿಗೆ ಕಾರಣವೇನು ಎಂದು ತನಿಖೆ ನಡೆಸುವಂತೆ ಸೂಚಿಸಿತ್ತು. 2008 ರಲ್ಲಿ ವರದಿ ನೀಡಿದ್ದ ಆಯೋಗವು ಇದು ಮುಸ್ಲಿಂ ಗುಂಪು ಮಾಡಿದ ಪೂರ್ವ ಯೋಜಿತ ಅಗ್ನಿಸ್ಪರ್ಶ  ಎಂದು ತೀರ್ಮಾನಿಸಿ ವರದಿ ನೀಡಿತ್ತು.  ಇದರ ಮಧ್ಯೆ ಅಂದರೆ ಕೇಂದ್ರ ಸರ್ಕಾರದ ರೈಲ್ವೇ ಸಚಿವಾಲಯವು ಬ್ಯಾನರ್ಜಿ ಆಯೋಗವನ್ನು ರಚಿಸಿತ್ತು.  ಡಾ.ಮನಮೋಹನ್​ ಸಿಂಗ್​ ಪ್ರಧಾನಿಯಾಗಿದ್ದ ಸಮಯದಲ್ಲಿ ಅಂದರೆ 2006ರಲ್ಲಿ  ಬ್ಯಾನರ್ಜಿ ಆಯೋಗವು ವರದಿ ನೀಡಿ ರೈಲಿಗೆ ಬೆಂಕಿ ಬಿದ್ದುದು ಆಕಸ್ಮಿಕ ಎಂದು ವರದಿ ನೀಡಿತು.

Tap to resize

Latest Videos

ರಾಹುಲ್​ ಗಾಂಧಿ ಕೈಹಿಡಿದು ಸುದ್ದಿಯಾಗಿದ್ದ ನಟಿಗೆ ಬಟ್ಟೆ ತೊಡಲು ಕಷ್ಟವಾದ ಕಾಯಿಲೆ! ನೋವು ತೋಡಿಕೊಂಡ ಪೂನಂ

 ರಾಮನ ಸಾವಿರಾರು ಭಕ್ತರಾಗಿರುವ ಕಾರ ಸೇವಕರು  ವಿಶ್ವ ಹಿಂದೂ ಪರಿಷತ್ತಿನ ಆಜ್ಞೆಯ ಮೇರೆಗೆ ಗುಜರಾತ್‌ನಿಂದ ಅಯೋಧ್ಯೆಗೆ ಪೂರ್ಣಾಹುತಿ ಮಹಾ ಯಜ್ಞ ಎಂಬ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದರು. ಆ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.  ರೈಲು ಪ್ಲಾಟ್‌ಫಾರ್ಮ್‌ನಿಂದ (Flatform) ಹೊರಡಲು ಪ್ರಾರಂಭಿಸಿದಾಗ, ಯಾರೋ ತುರ್ತು ಚೈನ್​  ಎಳೆದರು. ಆಗ ರೈಲು ಸಿಗ್ನಲ್ ಪಾಯಿಂಟ್ ಬಳಿ ನಿಂತಿತ್ತು. ಈ ಸಂದರ್ಭದಲ್ಲಿ ರೈಲಿನ ಮೇಲೆ ಸುಮಾರು 2 ಸಾವಿರ  ಜನರ ಗುಂಪು ದಾಳಿ ಮಾಡಿತು. ಕೆಲವು ಕಲ್ಲು ತೂರಾಟದ ನಂತರ, ನಾಲ್ಕು ರೈಲು ಬೋಗಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಅದು S 6 ಬೋಗಿ.  ರೈಲಿನ ಮೇಲಿನ ದಾಳಿಯು  ಪಾಕಿಸ್ತಾನದ ಆದೇಶದ ಮೇರೆಗೆ ಜನರಿಂದ ಸಂಘಟಿತವಾದ್ದದ್ದಾಗಿದೆ ಎಂದು  ಇತಿಹಾಸಕಾರ ಐನ್​ಸ್ಲೀ ಥಾಮಸ್ ಎಂಬ್ರೀ ಹೇಳಿದ್ದಾರೆ.  ವಿದ್ವಾಂಸರಾದ ಮಾರ್ಥಾ ನುಸ್ಬಾಮ್ ಕೂಡ ಇದನ್ನು ಸಮರ್ಥಿಸಿದ್ದಾರೆ.  ಆದರೆ ರೈಲ್ವೆ ಸಚಿವಾಲಯ ಸೇರಿದಂತೆ ಒಂದು ವರ್ಗ ಈ ಘಟನೆ ಕೇವಲ ಆಕಸ್ಮಿಕ, ಉದ್ದೇಶಪೂರ್ವಕ ಅಲ್ಲ ಎಂದಿತು.

ಆದ್ದರಿಂದ ರೈಲ್ವೆ ಸಚಿವಾಲಯದ (Railway Ministry) ವರದಿ ಒಂದೆಡೆ ಹಾಗೂ ನಾನಾವತಿ ಮೆಹ್ತಾ ನೀಡಿದ್ದ ವರದಿ ಇನ್ನೊಂದೆಡೆ. ಇದರ ಬಗ್ಗೆ ಭಾರಿ ವಾದ ಪ್ರತಿವಾದಗಳ ಅಲೆ ಎದ್ದಿತು. ದೇಶಮಟ್ಟದಲ್ಲಿ ಇದು ಬಹಳ ಚರ್ಚೆಗೆ ಗ್ರಾಸವಾಯಿತು. ಕೊನೆಗೆ ಈ ಘಟನೆ ಕೋರ್ಟ್​ ಮೆಟ್ಟಿಲೇರಿತು.   2011ರಲ್ಲಿ  ವಿಚಾರಣಾ ನ್ಯಾಯಾಲಯವು ಘಟನೆಗೆ ಸಂಬಂಧಿಸಿದಂತೆ  31 ಮುಸ್ಲಿಮರನ್ನು ಅಪರಾಧಿಗಳೆಂದು ಘೋಷಿಸಿತು. ನಾನಾವತಿ -ಮೆಹ್ತಾ ಆಯೋಗ ನೀಡಿರುವ ವರದಿ ಸರಿಯೆಂದು ಅಭಿಪ್ರಾಯ ಪಟ್ಟಿದ್ದ ಕೋರ್ಟ್​ ಈ ಶಿಕ್ಷೆಯನ್ನು ನೀಡಿತ್ತು. ಶಿಕ್ಷೆಯ ವಿರುದ್ಧ ಹೈಕೋರ್ಟ್​ಗೆ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು  ಅಕ್ಟೋಬರ್ 2017 ರಲ್ಲಿ, ಗುಜರಾತ್ ಹೈಕೋರ್ಟ್ ವಜಾಗೊಳಿಸಿ, ಶಿಕ್ಷೆ ಸರಿಯಾಗಿದೆ ಎಂದಿತ್ತು.  

ನಟರಾದ ಅನುಷ್ಕಾಶೆಟ್ಟಿ- ಪ್ರಭಾಸ್​ ಮದ್ವೆ ಫೋಟೋಗಳು ವೈರಲ್​: ದೂರು ದಾಖಲಿಸಿದ ಪೋಷಕರು!

ಈ ಘಟನೆಯ ಕುರಿತು ಇಂದಿಗೂ ಆಗಾಗ್ಗೆ ವಿವಾದ ಭುಗಿಲೇಳುತ್ತಲೇ ಇರುತ್ತದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದು ಎಂದು ಒಂದು ವರ್ಗ ಹೇಳಿದರೆ, ಇದು ಆಕಸ್ಮಿಕ ಎನ್ನುವುದು ಇನ್ನೊಂದು ವರ್ಗದ ವಾದ. ಇದೀಗ ಈ ಸಂಪೂರ್ಣ ಚಿತ್ರಣವನ್ನು ತೆರೆ ಮೇಲೆ ತರಲು ಸಿದ್ಧರಾಗಿದ್ದಾರೆ ನಿರ್ದೇಶಕ ಎಂ.ಕ.ಎ ಶಿವಾಕ್ಷಿ (M.K. Shivaaksh). ಇದರ ನಿರ್ಮಾಪಕರು  ಬಿ.ಜ. ಪುರೋಹಿತ್​ (B.J. Purohit). ಅಂದು ಗೋಧ್ರಾದಲ್ಲಿ ನಡೆದ ಈ ಘಟನೆ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎನ್ನುವುದನ್ನು ಈ ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ. ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು, ಇದರಲ್ಲಿ ಗೋಧ್ರಾ ದುರಂತದ ಚಿತ್ರಣವನ್ನು ನೋಡಬಹುದಾಗಿದೆ. 

click me!