Casteist Scene In 83: ಜಾತಿ ಅಧರಿತ ಕೋಟಾ ಅವಹೇಳನ: ‘83’ ಹೊಸ ವಿವಾದ

By Kannadaprabha NewsFirst Published Jan 1, 2022, 2:00 AM IST
Highlights
  • ಜಾತಿವಾದಿ ಸಂಭಾಷಣೆ ಬಗ್ಗೆ ನೆಟ್ಟಿಗರ ಕೋಪ
  • ಕೋಟಾ ವ್ಯವಸ್ಥೆಯ ಬಗ್ಗೆ ಅವಹೇಳನಕಾರಿ ಕಮೆಂಟ್‌

ಮುಂಬೈ(ಜ.01): ರಣವೀರ್‌ ಸಿಂಗ್‌ ಅಭಿನಯದ ‘83’ ಚಲನಚಿತ್ರ ದೃಶ್ಯವೊಂದರಲ್ಲಿರುವ ಜಾತಿವಾದಿ ಸಂಭಾಷಣೆಯಿಂದಾಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕಪಿಲ್‌ ದೇವ್‌ ಪಾತ್ರ ನಿರ್ವಹಿಸಿದ ರಣವೀರ್‌ ಸಿಂಗ್‌ ಹಾಗೂ ಕೆ. ಶ್ರೀಕಾಂತ್‌ ಪಾತ್ರ ನಿರ್ವಹಿಸಿದ ಜೀವಾ ನಡುವಿನ ಸಂಭಾಷಣೆಯಲ್ಲಿ ಜೀವಾ, ‘ನಾವು ಸೆಮಿಫೈನಲ್‌ ಪಂದ್ಯದವರೆಗೂ ಕಠಿಣ ಪರಿಶ್ರಮದಿಂದ ಬಂದಿದ್ದೇವೆ. ಕೋಟಾ ವ್ಯವಸ್ಥೆಯನ್ನು ಬಳಸಿ ಬಂದಿಲ್ಲ’ ಎಂದಿದ್ದಾರೆ. ಇದು ಹೊಸ ವಿವಾದವನ್ನು ಹುಟ್ಟುಹಾಕಿದೆ.

‘ಜಾತಿಯಾಧಾರಿತ ಕೋಟಾ ವ್ಯವಸ್ಥೆಯಡಿಯಲ್ಲಿ ಮೀಸಲಾತಿ ಪಡೆಯುವುದು ಕೀಳು ಎಂಬಂತೆ ಇಲ್ಲಿ ಚಿತ್ರಿಸಲಾಗಿದೆ. ಕೋಟಾ ವ್ಯವಸ್ಥೆಯ ಬಗ್ಗೆ ಅವಹೇಳನಕಾರಿ ಕಮೆಂಟ್‌ ಮಾಡಲಾಗಿದೆ’ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

83 Movie: ರಣವೀರ್ ಸಿಂಗ್ ಸಿನಿಮಾದಲ್ಲಿ ವಿಕ್ರಾಂತ್ ರೋಣ ವಿಡಿಯೋ, ಏನಿದು ?

ಅಲ್ಲದೇ, ‘ಹೀಗೆ ಮುಂದುವರೆಯಿರಿ. ನಂತರ ಕ್ರೀಡೆ ಕೋಟಾದಲ್ಲೇ ಸರ್ಕಾರಿ ಉದ್ಯೋಗ ಪಡೆಯಿರಿ’ ಎಂದು ವ್ಯಂಗ್ಯವಾಡಿದ್ದಾರೆ. ಜೊತೆಗೆ ಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಿಗೆ ಕರೆನೀಡಿದ್ದಾರೆ. ಕೋವಿಡ್‌ ಭೀತಿಯ ಹಿನ್ನೆಲೆಯಲ್ಲಿ ಸಿನಿಮಾ ಮಂದಿರಗಳ ಮೇಲೆ ಸಾಕಷ್ಟುನಿರ್ಬಂಧಗಳನ್ನು ಹೇರಲಾಗಿದ್ದು, ಚಿತ್ರ ಗಳಿಕೆಯಲ್ಲಿ ಈಗಾಗಲೇ ಹಿಂದಿದೆ.

ಭಾರತದ ಕ್ರಿಕೆಟ್‌ಗೆ (Indian Cricket) ಜನಪ್ರಿಯತೆಯ ಹೊಸ ರೂಪ ಕೊಟ್ಟ, ಭಾರತೀಯ ಕ್ರಿಕೆಟ್‌ನ ಅತಿದೊಡ್ಡ ಆರಂಭಿಕ ಮೈಲುಗಲ್ಲಾದ 1983 ಏಕದಿನ ಕ್ರಿಕೆಟ್‌ ವಿಶ್ವಕಪ್‌ (1983 World Cup) ಗೆದ್ದ ರೋಚಕ ಕಥೆಯನ್ನು ಆಧರಿಸಿದ ಸಿನಿಮಾ ‘83’ ಡಿ.24ರಂದು ದೇಶಾದ್ಯಂತ ಬಿಡುಗಡೆ ಮಾಡಲಾಗಿದೆ. ಸಲ್ಮಾನ್‌ ಅಭಿನಯದ ಭಜರಂಗಿ ಭಾಯಿಜಾನ್‌ ಖ್ಯಾತಿಯ ಕಬೀರ್‌ ಖಾನ್‌ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ರಣವೀರ್‌ಸಿಂಗ್‌ (Ranveer Singh), ತಂಡದ ನಾಯಕ ಕಪಿಲ್‌ದೇವ್‌ (Kapil Dev) ಪಾತ್ರ ನಿರ್ವಹಿಸಿದ್ದಾರೆ. ಇನ್ನು ಕಪಿಲ್‌ ಪತ್ನಿ ರೋಮಿ ಪಾತ್ರವನ್ನು ಸ್ವತಃ ರಣವೀರ್‌ ಪತ್ನಿ ದೀಪಿಕಾ ಪಡುಕೋಣೆ ನಿರ್ವಹಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆದ 1983ರ ಏಕದಿನ ವಿಶ್ವಕಪ್‌ ಭಾರತದ ಪಾಲಿಗೆ ಅತ್ಯಂತ ಸಂಭ್ರಮ ಮತ್ತು ರೋಚಕ ಕ್ಷಣವಾಗಿತ್ತು. ಯಾವುದೇ ನಿರೀಕ್ಷೆ ಇಲ್ಲದೇ ಚಾಂಪಿಯನ್‌ಶಿಪ್‌ಗೆ ತೆರಳಿದ್ದ ಕಪಿಲ್‌ ನೇತೃತ್ವದ ಪಡೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಮೊದಲ ಪಂದ್ಯದಲ್ಲೇ, ಎರಡು ಬಾರಿ ವಿಶ್ವ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ (West Indies) ಸೋಲಿಸಿ ಇಡೀ ವಿಶ್ವಕ್ಕೆ ನೀಡಿದ್ದ ಭಾರತ ನಂತರ ಟೂರ್ನಿಯುದ್ದಕ್ಕೂ ಸಂಘಟಿತ ಹೋರಾಟದ ಮೂಲಕ ವಿಶ್ವಕಪ್‌ ಗೆದ್ದುಕೊಂಡಿತ್ತು. ಅದರಲ್ಲೂ ಲೀಗ್‌ ಹಂತದಲ್ಲಿ ಅತ್ಯಂತ ದುರ್ಬಲ ತಂಡ ಎನ್ನಿಸಿಕೊಂಡಿದ್ದ ಜಿಂಬಾಬ್ವೆ (Zimbabwe) ವಿರುದ್ಧ 9 ರನ್‌ಗೆ ತಂಡ 4 ವಿಕೆಟ್‌ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿದಾಗ ಕ್ರೀಸ್‌ಗೆ ಆಗಮಿಸಿದ್ದ ನಾಯಕ ಕಪಿಲ್‌ದೇವ್‌ ಕೇವಲ 138 ಬಾಲ್‌ಗಳಲ್ಲಿ ಅಜೇಯ 175ರನ್‌ ಗಳಿಸುವ ಮೂಲಕ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಸ್ಮರಣೀಯ ಗೆಲುವಿಗೆ ಸಾಕ್ಷಿಯಾಗಿದ್ದರು.

6 ತಿಂಗಳುಗಳ ಕಾಲ ಪರಿಶ್ರಮ ಪಟ್ಟಿರುವ ರಣವೀರ್‌!

ಹೀಗೆ ನಿರೀಕ್ಷೆ ಇಲ್ಲದೆ ಟೂರ್ನಿ ಪ್ರವೇಶಿಸಿ ವಿಶ್ವಕಪ್‌ ಗೆಲ್ಲುವ ಮೂಲಕ, ಕಪಿಲ್‌ ನೇತೃತ್ವದ ತಂಡ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಮತ್ತೊಮ್ಮೆ ನಿರೂಪಿಸಿತ್ತು. ನಂತರದ ದಿನಗಳಲ್ಲಿ ಭಾರತದಲ್ಲಿ ಕ್ರಿಕೆಟ್‌ ರೂಪವೇ ಬದಲಾಗಿತ್ತು. ಇಂಥ ರೋಚಕ ಘಟನೆಯ ಚಿತ್ರಣಗಳನ್ನು ಒಳಗೊಂಡ ಕಥೆ ಆಧರಿಸಿ ‘83’ ಸಿನಿಮಾ ತಯಾರು ಮಾಡಲಾಗಿದೆ. ವಿಶ್ವಕಪ್‌ ತಂಡದ ನಾಯಕನಾಗಿದ್ದ ಕಪಿಲ್‌ ದೇವ್‌ ಅವರ ಪಾತ್ರವನ್ನು ರಣವೀರ್‌ ಸಿಂಗ್‌ ನಿರ್ವಹಿಸಿದ್ದಾರೆ. ಇದಕ್ಕಾಗಿ ಸುಮಾರು 6 ತಿಂಗಳುಗಳ ಕಾಲ ಪರಿಶ್ರಮ ಪಟ್ಟಿರುವ ರಣವೀರ್‌ ನಟನೆ ಈಗಾಗಲೇ ಜನರ ಮನಸ್ಸು ಗೆದ್ದಿದೆ.

ಈ ಟ್ರೈಲರ್‌ ಬಿಡುಗಡೆಯಾದಗಿಂದಲೂ (Trailer Release) ಜನ ಈ ಸಿನಿಮಾಗಾಗಿ ಕಾರತರಾಗಿದ್ದರು. ಈ ಸಿನಿಮಾಗಾಗಿ ಡಿ.19ರಿಂದಲೇ ಮುಂಗಡ ಕಾಯ್ದಿರಿಸುವಿಕೆಯನ್ನು ಆರಂಭಿಸಲಾಗಿತ್ತು. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಭಾರತದಲ್ಲಿ ಸುಮಾರು 3,500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ (Screens) ಈ ಸಿನಿಮಾ ಬಿಡುಗಡೆಯಾಗಲಿದೆ.

click me!