
ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಲಯಾಳಂ ನಟ ವಿಜಯ್ ಬಾಬು(Vijay Babu)ಅವರ ಪಾಸ್‌ಪೋರ್ಟ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮುಟ್ಟುಗೋಲು ಹಾಕಿದೆ( passport seized). ಪಾಸ್‌ಪೋರ್ಟ್ ಜಪ್ತಿ ಆಗಿರುವುದರಿಂದ ವಿಜಯ್ ಬಾಬು ಅವರ ವೀಸಾ ಕೂಡ ರದ್ದಾಗಲಿದೆ ಎಂದು ಕೊಚ್ಚಿ ನಗರದ ಪೊಲೀಸ್ ಆಯುಕ್ತ ಸಿ.ಎಚ್ ನಾಗರಾಜು ತಿಳಿಸಿದ್ದಾರೆ. ಕೊಚ್ಚಿ ನಗರದ ಪೊಲೀಸ್ ಆಯುಕ್ತರ ಮನವಿ ಸಲ್ಲಿಸಿದ ಬಳಿಕ ಮೇ 19ರಂದು ವಿಜಯ್ ಬಾಬ್ ಪಾಸ್ ಪೋರ್ಟ್ ಸೀಜ್ ಮಾಡಲಾಗಿದೆ.
ಜನ ವಿಜಯ್ ಬಾಬು ಪರಾರಿಯಾಗುವ ಶಂಕೆ ವ್ಯಕ್ತವಾದ ಹಿನ್ನಲೆ ಪಾಸ್ ಪೋರ್ಟ್ ಸೀಜ್ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ಪೊಲೀಸ್ ಆಯುಕ್ತರು, 'ನಟ ವಿಜಯ್ ಬಾಬು ಅವರ ಪಾಸ್ ಪೋರ್ಟ್ ಜಪ್ತಿ ಮಾಡಲಾಗಿದೆ. ಅವರು ಪಾಸ್ ಪೋರ್ಟ್ ನಲ್ಲಿ ನೀಡಲಾದ ಎಲ್ಲಾ ವೀಸಗಳು ಈಗ ಅಮಾನ್ಯವಾಗಿದೆ. ಬೇರೆ ದೇಶಕ್ಕೆ ಪರಾರಿಯಾಗುವ ಸೂಚನೆ ಇದೆ. ಆತನ ವಿರುದ್ಧ ಕೋರ್ಟ್ ವಾರೆಂಟ್ ಇದೆ ನಮ್ಮ ಬಳಿ' ಎಂದು ಹೇಳಿದ್ದಾರೆ.
ನಟ ವಿಜಯ್ ಬಾಬು ದುಬೈಗೆ ಹಾರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಮೇ 24ರ ಒಳಗೆ ಪಾಸ್ ಪೋರ್ಟ್ ಅನ್ನು ಸಂಬಂಧ ಪಟ್ಟ ಅಧಿಕಾರಿಗಳ ಮುಂದೆ ಹಾಜರುಪಡಿಸದಿದ್ದರೆ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಅತ್ಯಾಚಾರ, ಖ್ಯಾತ ನಟ ವಿಜಯ್ ಬಾಬು ವಿರುದ್ಧ ರೇಪ್ ಕೆಸ್!
ಪ್ರಕರಣದ ಹಿನ್ನಲೆ
ಮಲಯಾಳಂ ನಟ ಹಾಗೂ ನಿರ್ದೇಶಕ ವಿಜಯ್ ಬಾಬು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಸಿನಿಮಾಗಳಲ್ಲಿ ನಟಿಸುವ ಅವಕಾಶ ನೀಡುವುದಾಗಿ ಭರವಸೆ ನೀಡಿ ಎರನಾಕುಲಂ ಫ್ಲ್ಯಾಟ್ ಒಂದರಲ್ಲಿ ಹಲವು ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದು ಯುವತಿ ಒಬ್ಬರು ದೂರು ದಾಖಲಾಗಿದೆ. ಕೋಯಿಕ್ಕೋಡ್ ನಿವಾಸಿಯಾಗಿರುವ ಸಂತ್ರಸ್ತ ಯುವತಿ ಎರ್ನಾಕುಲಂ ಸೌತ್ ಪೊಲೀಸರ್ ಸ್ಟೇಷನ್ ನಲ್ಲಿ ಏಪ್ರಿಲ್ 22ರಂದು ದೂರು ನೀಡಿದ್ದರು.
ಬಲವಂತವಾಗಿ ತುಟಿಗೆ ಕಿಸ್ ಮಾಡಲು ಯತ್ನಿಸಿದ; ನಟ ವಿಜಯ್ ವಿರುದ್ಧ ಮತ್ತೊಬ್ಬ ಮಹಿಳೆ ದೂರು
ವಿಜಯ್ ಬಾಬು ವಿರುದ್ಧ ಯುವತಿ ಅತ್ಯಾಚಾರ ಹಾಗೂ ದೈಹಿಕ ಹಲ್ಲೆ ದೂರು ನೀಡಿದ್ದಾರೆ. ಅತ್ಯಂತ ಗಂಭೀರ ಪ್ರಕರಣವಾಗಿದ್ದರೂ ನಟನನ್ನು ಪೊಲೀಸರು ಪ್ರಶ್ನೆ ಮಾಡದಿರುವುದು ಜನರ ಆಕ್ರೋಶಕ್ಕೆ ಕಾರವಾಗಿತ್ತು. ಈ ವಿಚಾರ ದೊಡ್ಡದಾಗುತ್ತಿದ್ದಂತೆ ಎಚ್ಚಿತ್ತುಕೊಂಡ ಪೊಲೀಸರು ಇದೀಗ ವಿಜಯ್ ಬಾಬು ಹುಡುಕಾಟದಲ್ಲಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ವಿಜಯ್ ಬಾಬು ತಲೆಮರೆಸಿಕೊಂಡಿದ್ದಾರೆ. ಅತ್ಯಾಚಾರ ಪ್ರಕರಣ ಬಳಿಕ ಮತ್ತೋರ್ವ ಮಹಿಳೆ ನಟ ವಿಜಯ್ ಬಾಬು ವಿರುದ್ಧ ಲೈಂಗಿಕ ಪ್ರಕರಣ ದೂರು ದಾಖಲಿಸಿದ್ದಾರೆ.
ಫ್ರೈಡೇ ಫಿಲ್ಮ್ ಹೌಸ್ ಸಿನಿಮಾ ನಿರ್ಮಾಣ ಸಂಸ್ಥೆ ಸ್ಥಾಪಕರಾಗಿರುವ ವಿಜಯ್ ಬಾಬು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. 1983ರಲ್ಲಿ ಬಾಲನಟನಾಗಿ ಮಲೆಯಾಳಂ ಸಿನಿಮಾಗೆ ಎಂಟ್ರಿಕೊಟ್ಟ ವಿಜಯ್ ಬಾಬು ಸದ್ಯ ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.