ಮೇಘನಾ ರಾಜ್‌ ಕೈಯಲ್ಲಿ ಬಾಟಲಿಗಳು ಪೀಸ್‌ ಪೀಸ್‌, ಪಾತ್ರೆಗಳು ಪುಡಿಪುಡಿ: ಆಗಿದ್ದೇನು?

By Suvarna News  |  First Published May 22, 2023, 9:24 PM IST

ನಟಿ ಮೇಘನಾ ರಾಜ್‌ ಕೋಣೆಯಲ್ಲಿಟ್ಟ ಎಲ್ಲಾ ಪಾತ್ರೆಗಳನ್ನೂ ಪೀಸ್‌ ಪೀಸ್‌ ಮಾಡಿದ್ದಾರೆ. ಇದಕ್ಕೆ ನಿಜವಾದ ಕಾರಣವೇನು? 
 


ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯಾಗಿರುವ ನಟಿ. ಬಹುಭಾಷಾ ನಟಿಯಾಗಿರುವ ಇವರು ಕೆಲವು ಹಿಟ್‌ ಚಿತ್ರಗಳನ್ನು ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಇವರಿಗೆ ನಾಟಕದ ನಂಟು ಹತ್ತಿತ್ತು.  ತಂದೆಯೊಡನೆ ನಾಟಕದಲ್ಲಿ ಅಭಿನಯಿಸಿದ್ದ ಮೇಘನಾ `ಕೃಷ್ಣಲೀಲೈ' ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದವರು. ಆದರೆ ದುರದೃಷ್ಟವಶಾತ್‌ ಅದು ತೆರೆ ಕಾಣಲಿಲ್ಲ. ನಂತರ 2009 ರಲ್ಲಿ ತೆರಕಂಡ `ಬೆಂಡು ಅಪ್ಪಾರಾವ್ RMP' ಚಿತ್ರದಿಂದ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. 2010ರಲ್ಲಿ ಬಿಡುಗಡೆಗೊಂಡ ಯೋಗೇಶ್ ಚಿತ್ರ `ಪುಂಡ' ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಆದರೆ ಇವರಿಗೆ ಹೆಚ್ಚು ಕೀರ್ತಿ ತಂದುಕೊಟ್ಟದ್ದು, ಹಾಗೂ ಇವರ ಚಿತ್ರ ರಂಗಕ್ಕೆ  ಬ್ರೇಕ್ ನೀಡಿದ್ದು ಮಾಲಿವುಡ್‌.  ಹಲವು ಯಶಸ್ವಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ ಮೇಘನಾ 2013 ರಲ್ಲಿ ತೆರೆಕಂಡ `ರಾಜಾಹುಲಿ' ಚಿತ್ರದಿಂದ ಮತ್ತೆ ಕನ್ನಡಕ್ಕೆ ಬಂದರು. ನಂತರ `ಬಹುಪರಾಕ್',`ಆಟಗಾರ' ಮುಂತಾದ ಹಿಟ್ ಸಿನಿಮಾ ಕೊಟ್ಟಿದ್ದಾರೆ.

ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರೊಂದಿಗೆ ಮದುವೆಯಾಗಿ ಸುಖಿ ದಾಂಪತ್ಯ ನಡೆಸುತ್ತಿರುವಾಗಲೇ ಬರಸಿಡಿಲು ಬಡಿದಿತ್ತು. ಚಿರಂಜೀವಿ ಅವರು ನಿಧನರಾದ ಬಳಿಕ ಆ ಶಾಕ್‌ನಿಂದ ಹೊರಬರಲು ಮೇಘನಾ ಅವರಿಗೆ ವರ್ಷಗಳೇ ಹಿಡಿದವು. ನಂತರ  ಸಿನಿಮಾಗಳಿಂದ ದೂರವಾದರು. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆದರು. ವರ್ಷಗಳ ಬಳಿಕ  ತತ್ಸಮ ತದ್ಭವದ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ ಮೇಘನಾ ರಾಜ್‌. ಕೆಲ ದಿನಗಳ ಹಿಂದಷ್ಟೇ ಹೊಸ  ಹೇರ್ ಸ್ಟೈಲ್ ಮಾಡಿಸಿಕೊಂಡು ಸುದ್ದಿಯಾಗಿದ್ದರು. ಸಕತ್‌ ಸ್ಮಾರ್ಟ್‌ ಕಾಣಿಸುತ್ತಿದ್ದ ನಟಿಯರನ್ನು ಫ್ಯಾನ್ಸ್‌ ಹಾಡಿ ಹೊಗಳಿದರು.   

Tap to resize

Latest Videos

ಊಟಿ: ಫ್ರೆಂಡ್ಸ್, ರಾಯನ್ ಜೊತೆ ಮೇಘನಾ ರಾಜ್ ಮಸ್ತಿ, ಫೋಟೋಸ್ ವೈರಲ್

ಇಂತಿಪ್ಪ ನಟಿ ಮೇಘನಾ ರಾಜ್‌ (Meghana Raj) ಅವರ ವಿಡಿಯೋ ಒಂದು ಬಹಳ ಸದ್ದು ಮಾಡುತ್ತಿದೆ. ಅದೇನೆಂದರೆ, ಕೋಣೆಯೊಂದರಲ್ಲಿ ಇಟ್ಟಿರೋ ಬಾಟಲಿಗಳೆಲ್ಲಾ ನಟಿ ಪೀಸ್‌ ಪೀಸ್‌ ಮಾಡಿದ್ದರೆ,  ಪಾತ್ರೆಗಳನ್ನು ಪುಡಿಪುಡಿ ಮಾಡಿದ್ದಾರೆ.  ಇಡೀ ರೂಮಿಮಲ್ಲಿ ಎಲ್ಲಾ ಒಡೆದುಹೋದ ಪಾತ್ರೆಗಳ ಚಿತ್ರಣ. ಕೈಯಲ್ಲಿ ಕೋಲಿನಿಂದ ಇದ್ದ ಎಲ್ಲಾ ಪಾತ್ರೆಗಳನ್ನೂ ಉಡೀಸ್‌ ಮಾಡ್ತಿದ್ದಾರೆ ಮೇಘನಾ ರಾಜ್‌! ಹಾಗೆಂದ ಮಾತ್ರಕ್ಕೆ ಇದೇನು ಯಾವುದೋ ಸಿನಿಮಾ ಕಥೆಯಲ್ಲ, ರಿಯಲ್‌ ಆಗಿಯೂ ಇದು ನಡೆದಿದೆ. ಹಾಗಿದ್ದರೆ ನಟಿ ಮೇಘನಾ ರಾಜ್‌ ಅವರಿಗೆ ಆಗಿದ್ದೇನು? ಅವರಿಗೆ ಇಷ್ಟು ಕೋಪ ಯಾಕೆ ಬಂತು ಅಂದುಕೊಂಡಿರಬೇಕಲ್ವಾ? 

ಅಷ್ಟಕ್ಕೂ ಆಗಿದ್ದೇನೆಂದರೆ, ಇದನ್ನು ತಮ್ಮ ಯುಟ್ಯೂಟ್‌ ಚಾನೆಲ್‌ನಲ್ಲಿ (Youtube Channel) ಮೇಘನಾ ಶೇರ್‌ ಮಾಡಿಕೊಂಡಿದ್ದಾರೆ. ಕೋಣೆಯೊಂದರಲ್ಲಿ ಗ್ಲಾಸ್‌ ಬಾಟಲಿಗಳು ಸೇರಿದಂತೆ ಕೆಲವು ಪಾತ್ರೆಗಳನ್ನು ಇಟ್ಟಿರುವ ಅವರು, ಅದನ್ನು ಪುಡಿ ಪುಡಿ ಮಾಡುತ್ತಿರುವ ವಿಡಿಯೋ ಶೇರ್‌ ಮಾಡಿದ್ದಾರೆ. ಅಷ್ಟಕ್ಕೂ ಇದು ರೇಜ್‌ ರೂಮ್‌. ಇಂಥದ್ದೊಂದು ಕೋಣೆಯ ಪರಿಕಲ್ಪನೆ ಇದಾಗಲೇ ಕೆಲವು ಕಡೆಗಳಲ್ಲಿ ಇದೆ. ರೇಜ್‌ ರೂಮ್‌ ಅನ್ನು ಕನ್ನಡದಲ್ಲಿ ಹೇಳುವುದಾದರೆ ಕೋಪದ ಕೋಣೆ. ನಮ್ಮ ಮನಸ್ಸಿನಲ್ಲಿ ಯಾರ್‍ಯಾರದೋ ಮೇಲೆ ಕೋಪ ಇರುತ್ತದೆ. ಆದರೆ ಅದನ್ನು ಸುಲಭದಲ್ಲಿ ಅವರ ಮೇಲೆ ತೋರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಚೇರಿಯಲ್ಲಿ ಬಾಸ್‌ ಮೇಲೆ, ಸಹೊದ್ಯೋಗಿ ಮೇಲೆ, ಮನೆಯಲ್ಲಿ ಅತ್ತೆ-ಮಾವ, ಗಂಡ-ಹೆಂಡತಿ ಇಲ್ಲವೇ ಇನ್ನಾರದ್ದೋ ಮೇಲೆ ಸಿಟ್ಟು ಬಂದಾಗ ಏನೂ ಮಾಡದ ಸ್ಥಿತಿ ಇರುತ್ತದೆ. ಮನಸ್ಸಿನಲ್ಲಿಯೇ ಈ ಕೋಪವನ್ನು ಇಟ್ಟುಕೊಂಡರೆ ಅದು ಭಾರಿ ದುರಂತಕ್ಕೂ ಕಾರಣವಾಗುತ್ತದೆ. ಇದೇ ಕಾರಣಕ್ಕೆ ರೇಜ್‌ ರೂಮ್‌ ಪರಿಕಲ್ಪನೆ ಬಂದಿದೆ. ಈ ಕೋಣೆಯಲ್ಲಿ ನಮ್ಮೆಲ್ಲಾ ಆಕ್ರೋಶವನ್ನು ಹೊರಹಾಕಬಹುದಾಗಿದೆ. ಅಲ್ಲಿ ವಿವಿಧ ರೀತಿಯ ವಸ್ತುಗಳನ್ನು ಇಡಲಾಗುವುದು. ಕೋಲಿನ ಸಹಾಯದಿಂದ ನಮ್ಮಲ್ಲಿರುವ ಸಿಟ್ಟನ್ನೆಲ್ಲಾ (ಯಾರ ಮೇಲೆ ಸಿಟ್ಟು ಇರುತ್ತದೆಯೋ ಅವರ ಕಲ್ಪನೆ ಮಾಡಿಕೊಂಡು) ಆ ಪಾತ್ರೆಗಳು, ಬಾಟಲಿಗಳನ್ನು ಹೊಡೆದು, ಜಪ್ಪಿ, ಪೀಸ್‌ ಪೀಸ್‌ ಮಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳುವ ಥೆರಪಿ ಇದಾಗಿದೆ. ಇದನ್ನೇ ಮೇಘನಾ ರಾಜ್‌ ತಮ್ಮ ವಿಡಿಯೋ ಮೂಲಕ ತೋರಿಸಿದ್ದಾರೆ. ಹೀಗೆ ನೀವೂ Rage Room ಮಾಡಿಕೊಂಡು ಮನಸ್ಸನ್ನು ನಿರಾಳ ಮಾಡಿಕೊಳ್ಳಿ ಎಂದು ನಟಿ ಸಂದೇಶ ನೀಡಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿ ಪತಿಯನ್ನು ಮಿಸ್ ಮಾಡಿಕೊಂಡ ಮೇಘನಾ; ಚಿರು ಫೋಟೋ ಹಂಚಿಕೊಂಡ ನಟಿ

click me!