ಲಾರಿ ಡಿಕ್ಕಿ: ಕಿರುತೆರೆ ಖ್ಯಾತ ನಟಿ ಸುಚಂದ್ರ ದಾಸ್‌ಗುಪ್ತ ನಿಧನ

Published : May 22, 2023, 05:24 PM IST
ಲಾರಿ ಡಿಕ್ಕಿ: ಕಿರುತೆರೆ ಖ್ಯಾತ ನಟಿ ಸುಚಂದ್ರ ದಾಸ್‌ಗುಪ್ತ ನಿಧನ

ಸಾರಾಂಶ

ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಿರುತೆರೆ ಖ್ಯಾತ ನಟಿ ಸುಚಂದ್ರ ದಾಸ್‌ಗುಪ್ತ ನಿಧನ ಹೊಂದಿದ್ದಾರೆ. 

ಬಂಗಾಳಿ ಕಿರುತೆರೆ ಲೋಕ ದುಃಖದಲ್ಲಿದೆ. ಖ್ಯಾತ ನಟಿ ಸುಚಂದ್ರ ದಾಸ್‌ಗುಪ್ತ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಧಾರಾವಾಹಿ ಚಿತ್ರೀಕರಣ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಾಸ್ ಆಗುತ್ತಿದ್ದಾಗ ಅಪಘಾತ ಸಂಭವಿಸಿದ್ದು ನಟಿ ಸುಚಂದ್ರ ದಾಸ್‌ಗುಪ್ತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕೋಲ್ಕತ್ತಾದ ಹೊರವಲಯದ ಬಾರಾನಗರದಲ್ಲಿ ಈ ದುರ್ಘಟನೆ ನಡೆದಿದೆ. ಬಾಡಿಗೆ ಬೈಕ್ ಬುಕ್ ಮಾಡಿಕೊಂಡು ಮನೆಗೆ ವಾಪಾಸ್ ಆಗುತ್ತಿದ್ದರು ಎನ್ನಲಾಗಿದೆ. 

ಬೈಕ್‌ನಲ್ಲಿ ತೆರಳುತ್ತಿರುವಾಗ ಮುಂದೆಯಿಂದ ಬೈಸಿಕಲ್ ಬಂದ ಕಾರಣ ತಪ್ಪಿಸಿಕೊಳ್ಳಲು ಬೈಕ್ ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾರೆ. ಪರಿಣಾಮ ಸುಚಂದ್ರ ಬೈಕ್ ನಿಂದ ಹಾರಿ ರಸ್ತೆಗೆ ಬಿದ್ದಿದ್ದಾರೆ. ಎದುರಿನಿಂದ ಬರುತ್ತಿದ್ದ ಲಾರಿ  ಡಿಕ್ಕಿ ಹೋಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಹಿಂದೆ ಕುಳಿತಿದ್ದ ಸುಚಂದ್ರ ಧರಿಸಿದ್ದ ಹೆಲ್ಮೆಟ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳದಲ್ಲೇ ಸುಚಂದ್ರ ಸಾವನ್ನಪ್ಪಿದ್ದಾರೆ ಎಂದು ವರಿಯಾಗಿದೆ. 

Sarath Babu Death: ಫಲಿಸದ ಪ್ರಾರ್ಥನೆ, 'ಅಮೃತವರ್ಷಿಣಿ' ನಟ ಶರತ್ ಬಾಬು ಇನ್ನಿಲ್ಲ

29 ವರ್ಷದ ನಟಿ ಸುಚಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು ಆದರೂ ಏನು ಪ್ರಯೋಜನವಾಗಿಲ್ಲ. ವೈದ್ಯರು ಸುಚಂದ್ರ ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು. ಸದ್ಯ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬೈಕ್ ಚಾಲಕ ಕೆಳಗೆ ಬಿದ್ದಿದ್ದು  ಸಣ್ಣಪುಟ್ಟ ಗಾಯಗಳಾಗಿವೆ. ದುರಂತದ ನಂತರ ಸ್ಥಳಿಯರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ರಸ್ತೆ ಮತ್ತು ಹೆದ್ದಾರಿಗಳಲ್ಲಿ ಸಂಚಾರಿ ಪೊಲೀಸ್ ವ್ಯವಸ್ಥೆ ಉತ್ತಮ ಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿ ಪ್ರತಿಭಟನೆ ಮಾಡಿದರು. 

ನಟ ಆಯುಷ್ಮಾನ್ ಖುರಾನಾ ತಂದೆ, ಖ್ಯಾತ ಜ್ಯೋತಿಷಿ ಪಿ ಖುರಾನಾ ನಿಧನ

ನಟಿ ಸುಚಂದ್ರ ದಾಸ್‌ಗುಪ್ತ ಜನಪ್ರಿಯ ಧಾರಾವಾಹಿ ಗೌರಿ ಎಲೋ ಮೂಲಕ ಖ್ಯಾತಿಗಳಿಸಿದ್ದರು. ಸುಚಂದ್ರ ಅವರ ಪತಿ ದೇಬ್ಜ್ಯೋತಿ ಸೇನ್‌ಗುಪ್ತಾ ಅವರ ಪ್ರಕಾರ, ಅವರು ನಟನೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು ಮತ್ತು ಅನೇಕ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಬಾಲ್ಯದಿಂದಲೂ ನಟಿಯಾಗುವ ಕನಸು ಕಂಡಿದ್ದರು ಎಂದು ಹೇಳಿದರು ಎಂದು ಹೇಳಿದ್ದಾರೆ. 'ಅವಳು ಕೆಲಸಕ್ಕಾಗಿ ಪ್ರಯಾಣಿಸಬೇಕಾಗಿತ್ತು. ಚಿತ್ರೀಕರಣದ ಸ್ಥಳದಿಂದ ಬೈಕ್‌ನಲ್ಲಿ ಹಿಂತಿರುಗುವಾಗ ಹೀಗಾಗಿದೆ' ಎಂದು ಹೇಳಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!