ಡ್ರಗ್ಸ್ ಪರೀಕ್ಷೆ ವರದಿಯನ್ನು ಬಹಿರಂಗವಾಗಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಹಿಂದಿ ನಟಿ ಟಿಯಾ ಬಾಜಪೇಯಿ. ನೆಟ್ಟಿಗರು ಕೊಟ್ಟ ಪ್ರತಿಕ್ರಿಯೆ ತುಂಬಾನೇ ಡಿಫರೆಂಟ್.
ಇಷ್ಟು ದಿನಗಳ ಕಾಲ ಜನರು ಹಾಗೂ ಮಾಧ್ಯಮ ಮಿತ್ರರು ಕೊರೋನಾ ಬಗ್ಗೆ ಮಾತನಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಈಗ ಡ್ರಗ್ಸ್ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಕೊರೋನಾ ಸೋಂಕಿನಷ್ಟೇ ಪ್ರಾಣಾಪಾಯ ಮಾಡುವ ಡ್ರಗ್ಸ್ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುತ್ತಿದ್ದಾರೆ. ಡ್ರಗ್ಸ್ ವ್ಯಸನಿಗಳು ಎಲ್ಲಾ ಕ್ಷೇತ್ರಗಳಲ್ಲೂ ಇರುತ್ತಾರೆ ಎಂಬುದು ಸಾರ್ವಜನಿಕರ ಮಾತು. ಆದರೆ ಎಲ್ಲಾ ಕಡೆ ಎಂದು ಹೇಳಿ ಜರ್ನಲೈಸ್ ಮಾಡುವುದರಿಂದ ಅಮಾಯಕರ ಗೌರವಕ್ಕೆ ಧಕ್ಕೆ ಆಗಿದೆ. ಈ ಕಾರಣಕ್ಕೆ ಹಿಂದಿ ಬೆಳ್ಳಿತೆರೆ ಮತ್ತು ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿರುವ ಟಿಯಾ ಬಾಜಪೇಯಿ ಸ್ವಯಂ ಡ್ರಗ್ಸ್ ಟೆಸ್ಟ್ ಮಾಡಿಸಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ.
ಟಿಯಾ ಏನು ಹೇಳುತ್ತಾರೆ?
'ಎಲ್ಲರನ್ನೂ ಒಂದೇ ಗುಂಪಿಗೆ ಸೇರಿಸಬೇಡಿ. ಎಲ್ಲರೂ ಒಂದೇ ರೀತಿ ಅಲ್ಲ. ನನ್ನ ಸಹೋದ್ಯೋಗಿ ಕಲಾವಿದರಿಗೆ ಈ generalised ಕ್ಯಾಟಗರಿಗೆ ಸೇರಲು ಇಷ್ಟ ಇಲ್ಲ ಅಂದ್ರೆ ಮೊದಲು ನೀವಾಗಿಯೇ ನೀವೇ ಹೋಗಿ ಡ್ರಗ್ ಟೆಸ್ಟ್ ಮಾಡಿಸಿಕೊಳ್ಳಿ. #NotAllAreDruggies #GetATestDone #SayNoToDrugs' ಎಂದು ಬರೆದುಕೊಂಡಿದ್ದಾರೆ.
ಇಂಡಸ್ಟ್ರೀಯನ್ನೇ ದೂರುವುದು ಏಕೆ?
ಡ್ರಗ್ಸ್ ಪರೀಕ್ಷೆ ವಿಡಿಯೋ ಶೇರ್ ಮಾಡಿದ ನಂತರ ಮತ್ತೊಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ಟಿಯಾ. 'ಸದ್ಯಕ್ಕೆ Entertainment industryಯನ್ನು ಜನರು ದೂರುವುದಕ್ಕೆ ಕಾರಣ ಇಲ್ಲಿ ಕೆಲವರು ಡ್ರಗ್ಸ್ ಸೇವಿಸುತ್ತಾರೆ ಎಂದು. ಈ ಕಾರಣ ನಾನು ಇಂದು ಡ್ರಗ್ಸ್ ಪರೀಕ್ಷೆಯನ್ನು ಬಹಿರಂಗವಾಗಿ ಹಂಚಿಕೊಂಡಿರುವುದು. ವರದಿ ಪ್ರಕಾರ ನೆಗೆಟಿವ್ ಎಂದು ತಿಳಿದು ಬಂದಿದೆ. ದಯವಿಟ್ಟು ನಾವೆಲ್ಲರೂ ಒಂದೇ ಎಂಬ ರೀತಿಯಲ್ಲಿ ಮಾತನಾಡಬೇಡಿ. ಎಷ್ಟೋ ಮಂದಿ ಶ್ರಮದಿಂದ ಕೆಲಸ ಮಾಡಿ, ಜೀವನ ನಡೆಸುತ್ತಿದ್ದಾರೆ,' ಎಂದಿದ್ದಾರೆ.
ಡ್ರಗ್ಸ್ ಘಾಟು; ದೀಪಿಕಾ, ಸಾರಾ, ಶ್ರದ್ಧಾ ಸೇರಿ ಮತ್ತೊಬ್ಬ ತಾರೆಗೆ NCB ಸಮನ್ಸ್!
ನೆಟ್ಟಿಗರ ರಿಯಾಕ್ಷನ್:
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಇರುವ ಟಿಯಾ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಆಕೆಯ ಹೆಸರು ಮುಂದಿನ ದಿನಗಳಲ್ಲಿ ಕೇಳಿ ಬರುವುದರಲ್ಲಿ ಅನುಮಾವೇ ಇಲ್ಲ ಎಂದು ಪರೀಕ್ಷೆ ಮಾಡಿಸಿಕೊಂಡು ಎಲ್ಲರಿಗೂ ಬಂದ ವರದಿ ಬಗ್ಗೆ ಹೇಳಿದ್ದಾರೆ. 'ಹೀಗೆ ಮಾಡುವುದರಿಂದ ಅಮಾಯಕರು ಬದುಕುತ್ತಾರೆ. ಇಲ್ಲವಾದರೆ ಅವರ ಮೇಲೆ ಸುಳ್ಳು ಅಪಾದನೆ ಹೊರಿಸಿ ಅವರ ಜೀವನ ಹಾಳು ಮಾಡುತ್ತಾರೆ,'ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು 'ನೀವು ಪ್ರಾಮಾಣಿಕವಾಗಿ ಮಾಡಿಸಿದ್ದೀರಾ ಓಕೆ. ಆದರೆ ವ್ಯಸನಿಗಳು ಫೇಕ್ ಟೆಸ್ಟ್ ಮಾಡಿಸಿದ್ದರೆ ಏನು ಮಾಡಬಹುದು?' ಎಂದೂ ಪ್ರಶ್ನಿಸಿದ್ದಾರೆ.
ಡ್ರಗ್ಸ್ ಮಾಫಿಯಾ: ನಶೆಯಲ್ಲೇ ಸಿಕ್ಕಿಬಿದ್ದ ಕಿಶೋರ್ ಗೆಳತಿ
ಒಟ್ಟಿನಲ್ಲಿ ಯಾವ ಕೆಟ್ಟ ಅಭ್ಯಾಸವನ್ನು ತಮ್ಮ ದೇಹ ಹೆಚ್ಚಿನ ದಿನಗಳ ಕಾಲ ತಡೆದುಕೊಳ್ಳುವುದಿಲ್ಲ. ಸೇವಿಸುವವರು ಪಶ್ಚಾತ್ತಾಪ ಪಡಲೇ ಬೇಕಾಗುತ್ತದೆ.
ಯಾರ ಮೇಲೆ ಆರೋಪ ಬಂದಿದೆಯೋ ಅವರು ತಾವು ತಪ್ಪು ಮಾಡಿಲ್ಲವೆಂದರೆ ಧೈರ್ಯವಾಗಿ ಡೋಪಿಂಗ್ ಟೆಸ್ಟ್‌ಗೆ ಒಪ್ಪಿಗೆ ನೀಡಬೇಕು. ಅದರಲ್ಲಿ ಭಯ ಪಡುವ ಅಗತ್ಯವೇ ಇಲ್ಲ. ಆದರೆ, ಈಗಾಗಲೇ ಡ್ರಗ್ ದಂಧೆ ನಡೆಸುತ್ತಿರುವ ಆರೋಪದಿಂದ ಜೈಲು ಸೇರಿರುವ ಸಂಜನಾ ಹಾಗೂ ರಾಗಿಣಿ ಈ ಟೆಸ್ಟ್‌ಗೆ ಕ್ಯಾತೆ ತೆಗೆದಿದ್ದರು. ಮೂತ್ರ, ರಕ್ತ ಹಾಗೂ ಕೂದಲ ಮಾದರಿ ನೀಡಲು ಸಂಜನಾ ನಿರಾಕರಿಸಿದ್ದರು. ರಾಗಣಿ, ಮೂತ್ರ ಕೊಡುವಾಗ ನೀರು ಬೆರೆಸಿಕೊಟ್ಟು ತಪ್ಪು ಮಾಡಿ ಬಿಟ್ಟರು. ಈ ಕಾರಣದಿಂದಲೇ ಅವರಿಗೆ ಜಾಮೀನು ಸಿಗದೇ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುವಂತಾಗಿದ್ದು. ತಪ್ಪು ಮಾಡಿಲ್ಲವೆಂದರೆ ಧೈರ್ಯವಾಗಿ ವಿಚಾರಣೆ ಎದುರಿಸಬೇಕು. ಹಾಗೂ ತನಿಖೆಗೆ ಸಹಕರಿಸಿದರೆ ಆಯಿತು.