ಹಿರಿಯ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ವಿಧಿವಶ/ ಕೊರೋನಾ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು/ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿಧನ/ ಗಾನ ಲೋಕ ತೊರೆದ ಗಂಧರ್ವ/ ಗಾನಗಂಧರ್ವನ ಸ್ಮರಿಸಿದ ಗಾಯಕರು, ನಟರು, ಶಿಷ್ಯರು/ SPBಗೆ ಸ್ಯಾಂಡಲ್‌ವುಡ್ ದಿಗ್ಗಜರಿಂದ ನುಡಿನಮನ/
ಬೆಂಗಳೂರು (ಸೆ.25): ಅಗಲಿದ ದಿಗ್ಗಜ ಗಾಯಕನ ಸ್ಯಾಂಡಲ್ ವುಡ್ ನಂಟನ್ನು ದಿಗ್ಗಜರು ಸ್ಮರಿಸಿಕೊಂಡಿದ್ದಾರೆ. ಕನ್ನಡದ ಹೆಸರಾಂತ ಗಾಯಕರು, ಸಂಗೀತ ನಿರ್ದೇಶಕ ಹಂಸಲೇಖ, ಗಾಯಕಿ ಅರ್ಚನಾ ಉಡುಪ , ನಟ ಶಶಿಕುಮಾರ್, ವಿನಯಾ ಪ್ರಸಾದ್ ಸೇರಿದಂತೆ ಅನೇಕರು ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ.
ಗಾನ ಲೋಕದ ದೊರೆ ಸಹಸ್ರಾರು ಅಭಿಮಾನಿಗಳನ್ನು, ತಮ್ಮ ಅದ್ಭುತ ಕಂಠಸಿರಿಯ ಸಾವಿರಾರು ಹಾಡುಗಳನ್ನು ಬಿಟ್ಟು ಅಗಲಿದ್ದಾರೆ. ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ (74) ಇನ್ನಿಲ್ಲ. ಕೊರೋನಾ ಕಾರಣಕ್ಕೆ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೋನಾ ಏನೋ ಹೆದರಿ ಅವರಿಂದ ದೂರವಾಗಿತ್ತು. ಆದರೆ, ಹದಗೆಟ್ಟ ಶ್ವಾಸಕೋಶದ ಆರೋಗ್ಯ ಚೇತರಿಸಿಕೊಳ್ಳಲೇ ಇಲ್ಲ. ಬಹು ಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದರು.
ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ 1946, ಜೂನ್ 4ರಂದು ನೆಲ್ಲೂರಿನಲ್ಲಿ ಜನಿಸಿದವರು. 1966ರಲ್ಲಿ ಹಿನ್ನೆಲೆ ಗಾಯಕರಾಗಿ ವೃತ್ತಿ ಆರಂಭಿಸಿದರು ಬಾಲು, ಮೊದಲ ಚಿತ್ರ ತೆಲುಗಿನ ‘ಮರ್ಯಾದಾ ರಾಮಣ್ಣ’. 1966ರಲ್ಲೇ ಕನ್ನಡದಲ್ಲೂ ಹಾಡಿದ ಬಾಲಸುಬ್ರಹ್ಮಣ್ಯಂ ‘ನಕ್ಕರೆ ಅದೇ ಸ್ವರ್ಗ’ ಚಿತ್ರಕ್ಕೆ ದನಿ ನೀಡಿದರು. ವಿವಿಧ ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಜನರ ಮನಸ್ಸಿಗೆ ತಲುಪಿಸಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು, ತಮಿಳು ಚಿತ್ರರಂಗದಲ್ಲಿ ಎಸ್‌ಪಿಬಿ ಮಹೋನ್ನತ ನಾಯಕರಿಗೆ ದನಿ ನೀಡಿದ್ದಾರೆ.