ಸೋನಾಕ್ಷಿ ತಮ್ಮ ಪ್ರೀತಿ (Love) ಹೇಗೆ ಶುರುವಾಯ್ತು ಎಂಬ ವಿಷಯವನ್ನು ಮೊದಲ ಬಾರಿಗೆ ಶೇರ್ ಮಾಡಿಕೊಂಡಿದ್ದಾರೆ. ಹಾಗೂ ಜೂನ್ 23ರಂದೇ ಮದುವೆ ಆಗಿದ್ದೇಕೆ ಎಂಬ ಅಂಶವನ್ನು ಪರೋಕ್ಷವಾಗಿ ಸೋನಾಕ್ಷಿ ಸಿನ್ಹಾ ತಿಳಿಸಿದ್ದಾರೆ.
ಮುಂಬೈ: ಬಾಲಿವುಡ್ ಲವ್ ಬರ್ಡ್ಸ್ ಆಗಿದ್ದ ನಟಿ ಸೋನಾಕ್ಷಿ ಸಿನ್ಹಾ (Bollywood Actress Sonakshi Sinha) ಮತ್ತು ನಟ ಜಹೀರ್ ಇಕ್ಬಾಲ್ (Actor Zaheer Iqbal) ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟಿದ್ದಾರೆ. ಮದುವೆ ಫೋಟೋಗಳನ್ನು (Marriage Photo) ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಸೋನಾಕ್ಷಿ ಸಿನ್ಹಾ, ರೊಮ್ಯಾಂಟಿಕ್ ಸಾಲುಗಳನ್ನು ಬರೆದುಕೊಂಡಿದ್ದಾರೆ. ಸೋನಾಕ್ಷಿ ತಮ್ಮ ಪ್ರೀತಿ (Love) ಹೇಗೆ ಶುರುವಾಯ್ತು ಎಂಬ ವಿಷಯವನ್ನು ಮೊದಲ ಬಾರಿಗೆ ಶೇರ್ ಮಾಡಿಕೊಂಡಿದ್ದಾರೆ. ಹಾಗೂ ಜೂನ್ 23ರಂದೇ ಮದುವೆ ಆಗಿದ್ದೇಕೆ ಎಂಬ ಅಂಶವನ್ನು ಪರೋಕ್ಷವಾಗಿ ಸೋನಾಕ್ಷಿ ಸಿನ್ಹಾ ತಿಳಿಸಿದ್ದಾರೆ.
ಮದುವೆ ಮತ್ತು ಪ್ರೀತಿ ಬಗ್ಗೆ ಸೋನಾಕ್ಷಿ ಸಿನ್ಹಾ ಮಾತು
ಬರೋಬ್ಬರಿ ಏಳು ವರ್ಷಗಳ ಹಿಂದೆ ಅಂದ್ರೆ 23 ಜೂನ್ 2017ರಂದು ನಮ್ಮಿಬ್ಬರ ಕಣ್ಣುಗಳಲ್ಲಿ ಪ್ರೀತಿಯ ಹೂ ಅರಳಿತ್ತು. ಆ ಪ್ರೀತಿಯನ್ನು ಹಿಡಿದಿಟ್ಟುಕೊಳ್ಳಲು ಇಬ್ಬರು ನಿರ್ಧಾರ ಮಾಡಿದೇವು. ಈ ಪ್ರೀತಿ ಸವಾಲುಗಳನ್ನು ಎದುರಿಸಿ ಹೇಗೆ ವಿಜಯಶಾಲಿ ಆಗಬೇಕು ಎಂಬುದನ್ನು ನಮಗೆ ತಿಳಿಸಿಕೊಟ್ಟಿದೆ. ಇಂದು ಆ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಮದುವೆ ಬಂಧನಕ್ಕೆ ಒಳಗಾಗಿದ್ದೇವೆ. ಎರಡು ಕುಟುಂಬಗಳ ಪ್ರೀತಿ ಮತ್ತು ದೇವರ ಆಶೀರ್ವಾದ ನಮ್ಮಿಬ್ಬರ ಮೇಲೆ ಇರುತ್ತದೆ ಎಂದು ನಾವು ನಂಬಿದ್ದೇವೆ. ಇಂದು ನಾವು ಅಧಿಕೃತವಾಗಿ ಗಂಡ ಮತ್ತು ಹೆಂಡತಿಯಾಗಿ ಪ್ರೀತಿಯ ಮತ್ತೊಂದು ಮಜಲು ತಲುಪಿದ್ದೇವೆ. ಮುಂದಿನ ದಿನಗಳು ಚೆನ್ನಾಗಿರುತ್ತೇವೆ ಎಂದು ಆಶಿಸುತ್ತೇನೆ. ಕೊನೆಯವರೆಗೂ ನಾವಿಬ್ಬರು ಜೊತೆಯಾಗಿ ಜೀವನ ನಡೆಸುತ್ತೇವೆ ಎಂದು ಸೋನಾಕ್ಷಿ ಸಿನ್ಹಾ ಹೇಳಿಕೊಂಡಿದ್ದಾರೆ.
ಲವ್ ಜಿಹಾದ್ ಟ್ರೋಲ್ ಬಗ್ಗೆ ಮೌನಮುರಿದ ಸೋನಾಕ್ಷಿ ಸಿನ್ಹಾ : ಮಗಳ ಮದುವೆಗೆ ಒಪ್ಪಿಗೆ ನೀಡಿಲ್ವಾ ಕುಟುಂಬಸ್ಥರು?
ಈ ಪೋಸ್ಟ್ ಮೂಲಕ ಜಹೀರ್ ಜೊತೆಗೆ ತಮ್ಮ ಪ್ರೀತಿ ಆರಂಭವಾದ ಏಳು ವರ್ಷಕ್ಕೆ ಸರಿಯಾಗಿ ಅದೇ ದಿನ ತಾವಿಬ್ಬರು ಮದುವೆಯಾಗಿರುವ ವಿಷಯವನ್ನು ಸೋನಾಕ್ಷಿ ಹೇಳಿಕೊಂಡಿದ್ದಾರೆ. ಮದುವೆಯಲ್ಲಿ ಸೋನಾಕ್ಷಿ ಸಿನ್ಹಾ ಡಿಸೈನ್ಡ್ ಸೀರೆಗೆ ಸಿಂಪಲ್ ಆಗಿ ಒಂದೇ ಒಂದು ನೆಕ್ಲೇಸ್ ಧರಿಸಿ ಕಂಗೊಳಿಸುತ್ತಿದ್ದಾರೆ. ಸೀರೆ ಮ್ಯಾಚಿಂಗ್ ತಕ್ಕಂತೆ ತಲೆ ತುಂಬಾ ಹೂ ಮುಡಿದುಕೊಂಡು, ಕೈ ತುಂಬಾ ಬಳೆಯನ್ನು ಧರಿಸಿದ್ದಾರೆ. ಇತ್ತ ಜಹೀರ್ ಇಕ್ಬಾಲ್ ಕಸೂತಿ ಕುರ್ತಾ ಧರಿಸಿದ್ದಾರೆ.
ಈ ಮೊದಲೇ ಹೇಳಿಕೊಂಡಂತೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ರಿಜಿಸ್ಟರ್ ಮದುವೆಯಾಗಿದ್ದಾರೆ. ದಾಖಲೆಗಳಿಗೆ ಸಹಿ ಮಾಡುತ್ತಿರುವ ಫೋಟೋವನ್ನು ಸೋನಾಕ್ಷಿ ಸಿನ್ಹಾ ಹಂಚಿಕೊಂಡಿದ್ದಾರೆ.
ಮುಸ್ಲಿಂ ನಟನೊಂದಿಗೆ ಸೋನಾಕ್ಷಿ ಸಿನ್ಹಾ ಮದುವೆ, ಅಪ್ಪ ಒಪ್ಪಿದ್ರೂ, ಅವಳಿ ಸಹೋದರರು ಒಪ್ಪಿಲ್ಲವೇ?
ಸೋನಾಕ್ಷಿ ಸಿನ್ಮಾ ಮತಾಂತರ ಆಗಲ್ಲ
ಸೋನಾಕ್ಷಿ ಸಿನ್ಮಾ ಇಸ್ಲಾಂಗೆ ಮತಾಂತರ ಆಗ್ತಾರಾ? ಇದು ಮದುವೆನಾ (Hindu Rituals) ಅಥವಾ ನಿಖಾನಾ (Nikha) ಎಂಬ ಪ್ರಶ್ನೆಗೆ ವರ ಜಹೀರ್ ತಂದೆ ಇಕ್ಬಾಲ್ ರತನ್ಸಿ (Zaheer Iqbal Father) ಸ್ಪಷ್ಟನೆ ನೀಡಿದ್ದಾರೆ. ಸೋನಾಕ್ಷಿ ಸಿನ್ಹಾ ಮತಾಂತರ ಆಗಲ್ಲ ಅನ್ನೋದು ಸ್ಪಷ್ಟ. ಎರಡು ಹೃದಯಗಳ ಪ್ರೀತಿಗೆ ಧರ್ಮ ಅಡ್ಡಿಯಾಗಲ್ಲ. ನಾನು ಮಾನವೀಯತೆಯನ್ನು ನಂಬುತ್ತೇನೆ. ಹಿಂದೂಗಳು ದೇವರನ್ನು ಭಗವಾನ್, ಮುಸ್ಲಿಮರು ಅಲ್ಲಾಹ ಅಂತ ಕರೆಯುತ್ತಾರೆ. ಕೊನೆಗೆ ನಾವೆಲ್ಲರೂ ಮನುಷ್ಯರು ಅಲ್ಲವೇ. ಜಹೀರ್ ಮತ್ತು ಸೋನಾಕ್ಷಿಗೆ ನನ್ನ ಆಶೀರ್ವಾದ ಇರುತ್ತೆ ಎಂದು ಇಕ್ಬಾಲ್ ರತನ್ಸಿ ಹಾರೈಸಿದರು.