
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರ ಅಪ್ಪಟ ಅಭಿಮಾನಿ ಅಜಮ್ ಅನ್ಸಾರಿ ರೈಲ್ವೆ ಹಳಿ ಮೇಲೆ ರೀಲ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ನೋದ ರೈಲ್ವೆ ಬ್ರಿಡ್ಜ್ ಮೇಲೆ ರೀಲ್ ಮಾಡಿದ ಅಜಮ್ ವಿರುದ್ಧ ರೈಲ್ವೆ ರಕ್ಷಣಾ ಪಡೆ (RPF) ದೂರು ದಾಖಲಿಸಿದೆ. ಕಂಟೆಂಟ್ ಕ್ರಿಯೇಟರ್ ಮತ್ತು ಸೂಪರ್‌ಸ್ಟಾರ್ ಸಲ್ಮಾನ್ ಅವರ ಅಭಿಮಾನಿ ಆಗಿರುವ ಅಜಮ್ ಅನ್ಸಾರಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ಗಾಗಿ ಲಕ್ನೋದ ರೈಲ್ವೆ ಹಳಿಗಳಲ್ಲಿ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ವೀಡಿಯೊದಲ್ಲಿ, ಅಜಮ್, ದಲಿಗಂಜ್‌ನ ರೈಲ್ವೆ ಹಳಿಗಳ ಮೇಲೆ ಅರೆಬೆತ್ತಲೆಯಾಗಿ ನಡೆಯುವುದು ಮತ್ತು ಸಿಗರೇಟು ಸೇದುತ್ತಾ ಹಳಿಯ ಮೇಲೆ ಮಲಗಿರುವುದು ಗೊತ್ತಾಗುತ್ತಿದೆ. ಆದರೀಗ ಈ ವಿಡಿಯೋ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾಣುತ್ತಿಲ್ಲ.
ಅಜಮ್ ಅನ್ಸಾರಿ ತನ್ನ ರೀಲ್ ಮಾಡಲು ಸಲ್ಮಾನ್ ಖಾನ್ ನಟನೆಯ ತೇರೆ ನಾಮ್‌ನ ಟೈಟಲ್ ಟ್ರ್ಯಾಕ್ 'ತೇರೆ ನಾಮ್ ಹಮ್ನೆ ಕಿಯಾ ಹೈ.' ಹಿಟ್ ಹಾಡನ್ನು ಬಳಸಿಕೊಂಡಿದ್ದಾರೆ. ಅಜಮ್ ವಿರುದ್ಧ ಆರ್‌ಪಿಎಫ್ ಲಕ್ನೋ ಎಫ್‌ಐಆರ್ ದಾಖಲಿಸಿದೆ. ಲಕ್ನೋ ರೈಲ್ವೆ ರಕ್ಷಣಾ ಪಡೆ (RPF) ಟ್ವೀಟ್ ಮಾಡಿ ಬಹಿರಂಗ ಪಡಿಸಿದೆ.
ಆರೋಪಿಗಳ ವಿರುದ್ಧ ರೈಲ್ವೆ ಕಾಯ್ದೆ ಸೆಕ್ಷನ್ 147, 145 ಮತ್ತು 167 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಆರ್‌ಪಿಎಫ್ ಲಕ್ನೋದ ಇನ್‌ಸ್ಪೆಕ್ಟರ್ ಸುರೇಶ್ ಕುಮಾರ್ ಹೇಳಿದ್ದಾರೆ.
Salman Khan ಮಾನಸಿಕ ಅಸ್ವಸ್ಥ, ಅವನನ್ನು ಆರಾಧಿಸುವುದು ನಿಲ್ಲಿಸಿ : ಮಾಜಿ ಗರ್ಲ್‌ಫ್ರೆಂಡ್
ಅಂದಹಾಗೆ ಅಜಂ ವಿರುದ್ಧ ಪ್ರಕರಣ ದಾಖಲಾಗಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಘಂಟಾಘರ್‌ನಲ್ಲಿ ದೊಡ್ಡ ಗುಂಪಿನೊಂದಿಗೆ ರೀಲ್ ಮಾಡಿ ಶಾಂತಿ ಕದಡಿದ್ದಕ್ಕಾಗಿ ಠಾಕೂರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನೋಡಲು ಥೇಟ್ ಸಲ್ಮಾನ್ ಖಾನ್ ಹಾಗೆ ಇರುವ ಅಭಿಮಾನಿ ಅಜಮ್ ಲಕ್ನೋದಲ್ಲಿ ನಗರದಲ್ಲಿ ರೀಲ್ ಮಾಡುವಾಗ ಜನಸಾಗರವೇ ಬಂದಿತ್ತು. ಬಹುತೇಕರು ಸಲ್ಮಾನ್ ಖಾನ್ ಎಂದೆ ತಿಳಿದಿದ್ದರು. ಬಳಿಕ ಪೊಲೀಸರು ಬಂಧಿಸಿದ್ದರು. ಸೆಕ್ಷನ್ 151 ಅಡಿ ಶಾಂತಿ ಕದಡಿದ ಪ್ರಕರಣ ದಾಖಲಿಸಲಾಗಿತ್ತು.
ಸಲ್ಮಾನ್ ಖಾನ್ 'ಬಿಗ್ ಬಾಸ್' ಹೋಸ್ಟ್ ಮಾಡಲು ಎಷ್ಟು ಹಣ ಚಾರ್ಜ್ ಮಾಡ್ತಾದ್ದಾರೆ ಗೊತ್ತಾ?
ಲಕ್ನೋ ನಗರದ ವಿವಿಧ ಪ್ರಮುಖ ಲ್ಯಾಂಡ್ ಮಾರ್ಕ್ ಮತ್ತು ಬೀದಿಗಳಲ್ಲಿ ಅಜಮ್ ರೀಲ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿರುವ ಅನ್ಸಾರಿ 87,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.