ಅಮಿತಾಭ್ ಪತ್ನಿ ಜಯಾ ಬಚ್ಚನ್​ಗೆ ಧರ್ಮೇಂದ್ರ ಮೇಲೆ ಕ್ರಷ್​ ಇತ್ತಂತೆ! ಗುಟ್ಟು ಈಗಾಯ್ತು ರಟ್ಟು

By Suvarna News  |  First Published Jul 6, 2023, 3:10 PM IST

 ಜಯಾ ಬಚ್ಚನ್ ಅವರಿಗೆ ತಮ್ಮ ಮೇಲೆ ಕ್ರಷ್​ ಆಗಿತ್ತು ಎನ್ನುವ ಅನುಭವವನ್ನು ನಟ ಧರ್ಮೇಂದ್ರ ಅವರು ರಿವೀಲ್ ಮಾಡಿದ್ದಾರೆ. ಅವರು ಹೇಳಿದ್ದೇನು?
 


ಹಿರಿಯ ನಟರಾದ ಧರ್ಮೇಂದ್ರ ಮತ್ತು ಜಯಾ ಬಚ್ಚನ್ ಸುದೀರ್ಘ ಸಮಯದ ನಂತರ ಕರಣ್ ಜೋಹರ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' (Rocky Aur Rani Kii Prem Kahani) ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ನಾಯಕ-ನಾಯಕಿಯಾಗಿದ್ದಾರೆ.  ಈಗ, ವಿಶೇಷವಾದ ಚಾಟ್‌ನಲ್ಲಿ, ಕರಣ್ ಜೊತೆಗಿನ ಚಿತ್ರೀಕರಣದ ಬಗ್ಗೆ ಮಾತನಾಡಿರುವ ಧರ್ಮೇಂದ್ರ,  ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ತಮ್ಮ ಮೇಲೆ  ಜಯಾ ಅವರಿಗೆ ಸಕತ್​   ಕ್ರಶ್​ ಇತ್ತು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಕರಣ್ ಮತ್ತು ತಂಡದೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಈ ವಿಷಯವನ್ನು ಧರ್ಮೇಂದ್ರ ಬಾಯಿ ಬಿಟ್ಟಿದ್ದಾರೆ. ಏನಾಗಬೇಕೋ ಅದೇ ಆಗುತ್ತದೆ, ಸರಿಯಾದ ಸಮಯಕ್ಕೂ ಆಗುತ್ತದೆ ಎನ್ನುವಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ಏನು ಆಗಿದೆಯೋ ಎಲ್ಲವೂ ಒಳ್ಳೆಯದ್ದಕ್ಕೇ ಆಗಿದೆ. ಆದರೆ ಆ ಸಮಯದಲ್ಲಿ ಮಾತ್ರ  ಜಯಾ ಅವರಿಗೆ ನನ್ನ ಮೇಲೆ  ಮೇಲೆ ಸಕತ್​ ಕ್ರಷ್​ ಇದದ್ದು ನಿಜ ಎಂದಿದ್ದಾರೆ.

ಅಷ್ಟಕ್ಕೂ ಈ ಕ್ರಷ್​ ಆಗಿರುವುದು ಇಂದು ನಿನ್ನೆಯ ವಿಷಯವಲ್ಲ. ಬದಲಿಗೆ ಆ ದಿನಗಳು ಅರ್ಥಾತ್​ 70ರ ದಶಕದಲ್ಲಿ! ಹೌದು. ಗುಡ್ಡಿ ಚಿತ್ರದ ಚಿತ್ರೀಕರಣದ ವೇಳೆ ನಡೆದ ಕ್ರಷ್​ (Crush) ವಿಷಯವನ್ನು ಧರ್ಮೇಂದ್ರ ಹೇಳಿಕೊಂಡಿದ್ದಾರೆ. 1971ರಲ್ಲಿ ಬಿಡುಗಡೆಗೊಂಡ ಗುಡ್ಡಿ ಚಿತ್ರವಿದು. ಇದರಲ್ಲಿ ಜಯಾ ಬಚ್ಚನ್​ ಮತ್ತು ಧರ್ಮೇಂದ್ರ ಒಟ್ಟಾಗಿ ನಟಿಸಿದ್ದರು. ಅಸಲಿಗೆ ಇದು ಜಯಾ ಅವರ ಚೊಚ್ಚಲ ಚಿತ್ರ ಕೂಡ. ಇದರಲ್ಲಿ ಜಯಾ ಬಚ್ಚನ್ ಶಾಲಾ ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ. ಆ ದಿನಗಳನ್ನು ನೆನಪಿಸಿಕೊಂಡಿರೋ ಧರ್ಮೇಂದ್ರ ಅವರು, ಗುಡ್ಡಿ ದಿನಗಳಲ್ಲಿ ಜಯಾ ಬಚ್ಚನ್ ಅವರ  ಕ್ರಶ್ ಕುರಿತು ಮಾತನಾಡಿದ್ದಾರೆ. 

ನಟ ಅವಿನಾಶ್​ ಮೋಸ ಮಾಡ್ದ, ತಂದೆಗೆ ಹೃದಯಾಘಾತವಾಯ್ತು ಎಂದು ಕಣ್ಣೀರಿಟ್ಟ ಕಿರುತೆರೆ ನಟಿ

Tap to resize

Latest Videos

ಗುಡ್ಡಿಯ ಹೊರತಾಗಿ, ಧರ್ಮೇಂದ್ರ (Dharmendra) ಮತ್ತು ಜಯಾ ಇಬ್ಬರೂ ಚುಪ್ಕೆ ಚುಪ್ಕೆ (1975), ಶೋಲೆ (1975), ಮತ್ತು ಸಮಾಧಿ (1972) ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಜಯಾ ಅವರ ಮೊದಲ ಚಿತ್ರದಲ್ಲಿಯೇ ವ್ಯಾಮೋಹ ಹುಟ್ಟಿದ್ದನ್ನು ಹೇಳಿಕೊಂಡಿದ್ದಾರೆ.  ಜಯಾ ಅವರು ಶೂಟಿಂಗ್​ ಸೆಟ್​ನಲ್ಲಿ ನನ್ನನ್ನು ನೋಡಿದ ಕೂಡಲೇ ಸೋಫಾದ ಹಿಂದೆ ಅಡಗಿಕೊಂಡು ಬಿಡುತ್ತಿದ್ದರು. ಆ ದಿನಗಳನ್ನು ನೆನಪಿಸಿಕೊಂಡರೆ ಇಂದಿಗೂ ರೋಮಾಂಚನವಾಗುತ್ತದೆ ಎಂದಿದ್ದಾರೆ. ನಾನು ಜಯಾ ಮತ್ತು ಅಮಿತಾಭ್​ ಅವರನ್ನು ಬಹಳ ಸಮಯದಿಂದ ಬಲ್ಲೆ.  ಶೋಲೆ ಚಿತ್ರೀಕರಣದ ಸಮಯದಲ್ಲಿ ನಾವು ಅನುಭವಿಸಿದ ಮೋಜಿನ ಸಮಯಗಳನ್ನು ನೆನಪಿಸಿಕೊಳ್ಳುವುದೇ ಒಂದು ರೀತಿಯ ಖುಷಿ ಕೊಡುತ್ತದೆ.  ಅದು  ಸುವರ್ಣ ದಿನಗಳು ಎಂದರು ಧರ್ಮೇಂದ್ರ. 

ಇನ್ನು ಕರಣ್​ ಜೋಹರ್​ (Karan Johar) ಕುರಿತು ಮಾತನಾಡಿದ ನಟ ಧರ್ಮೇಂದ್ರ, ನಾನು ಈಗ ಕರಣ್ ಅವರೊಂದಿಗೆ ಕೆಲಸ ಮಾಡಲು ಉದ್ದೇಶಿಸಿದ್ದು, ಇದು ತುಂಬಾ ಖುಷಿ ಕೊಡುತ್ತಿದೆ. ಅವರು  ತುಂಬಾ ಕರುಣಾಳು ಮತ್ತು ಚಿಂತನಶೀಲ ಹುಡುಗ. ಅವರು  ನನ್ನನ್ನು  ಸ್ವಂತ ತಂದೆಯಂತೆ ನೋಡಿಕೊಂಡರು.  ಕರಣ್ ಜೊತೆ ಕೆಲಸ ಮಾಡುವುದು ತುಂಬಾ ಆರಾಮದಾಯಕವಾಗಿತ್ತು ಎಂದಿದ್ದಾರೆ. ಅದೇ ರೀತಿ ಗ್ಯಾಪ್​ ಬಳಿಕ ಚಿತ್ರ ಮಾಡಿರುವುದರ ಕುರಿತು ಅನುಭವ ಹಂಚಿಕೊಂಡ ಅವರು, ಇದು ಅದ್ಭುತ ಅನುಭವ. ನನ್ನ ನೆಚ್ಚಿನ ಇಬ್ಬರು ಸಹ-ನಟಿಯರಾದ ಜಯಾ  ಬಚ್ಚನ್ ಮತ್ತು ಶಬಾನಾ ಅಜ್ಮಿ ಮತ್ತು ಇಬ್ಬರು ಪ್ರಕಾಶಮಾನವಾದ ಯುವ ತಾರೆಗಳಾದ ಆಲಿಯಾ ಮತ್ತು ರಣವೀರ್ ಅವರೊಂದಿಗೆ ನಾನು ಕೆಲಸ ಮಾಡಿದ್ದು, ತುಂಬಾ  ಖುಷಿ ಕೊಟ್ಟಿದೆ ಎಂದಿದ್ದಾರೆ.

ಸಾಯುವ ಭಯದ ಮಾತನಾಡಿ ಅಮೆರಿಕಕ್ಕೆ ಹಾರಿದ ನಟಿ ನಿವೇದಿತಾ ಗೌಡ!
 

click me!